ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ರೆನಾಲ್ಟ್ ತನ್ನ ಜನಪ್ರಿಯ ಕಾರು ಆವೃತ್ತಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಡಸ್ಟರ್ ಎಸ್‌ಯುವಿ ಮೇಲೆ ಗರಿಷ್ಠ ಮಟ್ಟದ ಆಫರ್‌ಗಳನ್ನು ನೀಡುತ್ತಿದೆ. ರೆನಾಲ್ಟ್ ಸದ್ಯ ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದರೂ ಸಹ ಹಳೆಯ ಆವೃತ್ತಿಯ ಮೇಲೆ ಭರ್ಜರಿ ಆಫರ್‌ಗಳನ್ನು ನೀಡುತ್ತಿದೆ.

ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ಫೇಸ್‌ಲಿಫ್ಟ್ ಆವೃತ್ತಿಗಳ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲು ಮುಂದಾಗಿರುವ ರೆನಾಲ್ಟ್ ಸಂಸ್ಥೆಯು ಈಗಾಗಲೇ ಡಸ್ಟರ್ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಇದೀಗ ಕ್ವಿಡ್ ಮತ್ತು ಕ್ಯಾಚ್ಟರ್ ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆಯ ಯೋಜನೆಯಲ್ಲಿದೆ. ಇದರಿಂದಾಗಿಯೇ ಹಳೆಯ ಸ್ಟಾಕ್ ಮೇಲೆ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದ್ದು, ಯಾವ ಕಾರಿನ ಮೇಲೆ ಎಷ್ಟು ಪ್ರಮಾಣದ ಡಿಸ್ಕೌಂಟ್ ಲಭ್ಯವಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ಡಸ್ಟರ್ ಕಂಪ್ಯಾಕ್ಟ್ ಎಸ್‌ಯುವಿ

ರೆನಾಲ್ಟ್ ಸಂಸ್ಥೆಯು ಹಳೆಯ ಡಸ್ಟರ್ ಆವೃತ್ತಿ ಮೇಲೆ ಗರಿಷ್ಠ ರೂ.1.10 ಲಕ್ಷದ ತನಕ ಗರಿಷ್ಠ ಡಿಸ್ಕೌಂಟ್ ನೀಡಲಾಗಿದ್ದು, ಪ್ರತಿ ಡೀಸೆಲ್ ವೆರಿಯೆಂಟ್ ಮೇಲೂ ಈ ಡಿಸ್ಕೌಂಟ್ ಲಭ್ಯವಿದೆ. ಹಾಗೆಯೇ ಡಸ್ಟರ್ ಪೆಟ್ರೋಲ್ ಆವೃತ್ತಿಗಳ ಮೇಲೆ ರೂ.30 ಸಾವಿರ ಡಿಸ್ಕೌಂಟ್ ಲಭ್ಯವಿರಲಿದೆ.

ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ಕ್ಯಾಪ್ಚರ್ ಕ್ರಾಸ್ಓವರ್

ಎಸ್‌ಯುವಿ ಮಾದರಿಯಾದ ಕ್ಯಾಚ್ಚರ್ ಕಾರು ಖರೀದಿ ಮೇಲೆ ರೂ.1.10 ಲಕ್ಷದ ತನಕ ಗರಿಷ್ಠ ಮಟ್ಟದ ಡಿಸ್ಕೌಂಟ್ ನೀಡಲಾಗಿದ್ದು, ಕ್ಯಾಪ್ಚರ್ ಆವೃತ್ತಿಯು ಮುಂದಿನ ಕೆಲವೇ ದಿನಗಳಲ್ಲಿ ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಬಿಡುಗಡೆಯಾಗುತ್ತಿವೆ.

ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ಕ್ವಿಡ್ ಹ್ಯಾಚ್‌ಬ್ಯಾಕ್

ಎಂಟ್ರಿ ಲೆವಲ್ ಕಾರುಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ಕ್ವಿಡ್ ಕಾರು ಆಕರ್ಷಕ ಬೆಲೆ ಮತ್ತು ಹೆಚ್ಚಿನ ಮಟ್ಟದ ಮೈಲೇಜ್‌ನೊಂದಿಗೆ ಹ್ಯಾಚ್‌ಬ್ಯಾಕ್ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಕಾರಿನ ಮೇಲೆ ರೆನಾಲ್ಟ್ ಸಂಸ್ಥೆಯು ರೂ.50 ಸಾವಿರ ಡಿಸ್ಕೌಂಟ್ ಜೊತೆಗೆ ಸೀಮಿತ ಅವಧಿಯಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ 4 ವರ್ಷಗಳ ಕಾಲ ಉಚಿತ ಸರ್ವಿಸ್ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ. ಹೀಗಾಗಿ ಇದು ಬಜೆಟ್ ಬೆಲೆಗಳಲ್ಲಿ ೃ ಎಂಟ್ರಿ ಲೆವಲ್ ಕಾರು ಖರೀದಿದಾರರಿಗೆ ಉತ್ತಮ ಅವಕಾಶ ಎನ್ನಬಹುದು.

ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ಪೇಟಿಎಂನಲ್ಲಿ ಬುಕ್ ಮಾಡಿದ್ರೆ ಹೆಚ್ಚು ಲಾಭ..!

ಹೌದು, ರೆನಾಲ್ಟ್ ಸಂಸ್ಥೆಯ ಕಾರುಗಳ ಮೇಲೆ ಇನ್ನು ಹೆಚ್ಚಿನ ಡಿಸ್ಕೌಂಟ್ ಬಯಸುವ ಗ್ರಾಹಕರಿಗೆ ಸುವರ್ಣವಕಾಶ ನೀಡಲಾಗಿದ್ದು, ಪೇಟಿಎಂ ಮೂಲಕ ಬುಕ್ ಮಾಡಿದ್ದಲ್ಲಿ ಹೆಚ್ಚುವರಿ ರೂ.5 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಸಹ ನೀಡಲಾಗಿದೆ.

ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ಈ ಮೇಲಿನ ಆಫರ್‌ಗಳು ಸೀಮಿತ ಅವಧಿಗೆ ಮಾತ್ರವೇ ಲಭ್ಯವಿರಲಿದ್ದು, ಡೀಲರ್ಸ್ ಮಟ್ಟದಲ್ಲಿ ಇನ್ನು ಕೆಲವು ಹೆಚ್ಚುವರಿ ಆಫರ್‌ಗಳು ದೊರೆಯುವ ಸಾಧ್ಯತೆಗಳಿವೆ. ಹೀಗಾಗಿ ಕಾರು ಖರೀದಿಗೂ ಮುನ್ನ ಆಫರ್ ಬೆಲೆಗಳ ಮೇಲೆ ಕೂಲಂಕುಶವಾಗಿ ವಿಚಾರಿಸಿದ ನಂತರವೇ ಮುಂದಿನ ವ್ಯವಹಾರ ಕೈಗೊಳ್ಳಿ.

MOST READ: ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ಇನ್ನು ರೆನಾಲ್ಟ್ ಇಂಡಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಕಳೆದ ತಿಂಗಳ ಹಿಂದೆಯೇ ಬಿಡುಗಡೆ ಮಾಡಿದ್ದು, ಈ ಹಿಂದಿನ ಆವೃತ್ತಿಗಿಂತ ವಿನ್ಯಾಸದಲ್ಲಿ ತುಸು ಬದಲಾವಣೆಗಳನ್ನು ಪಡೆದುಕೊಳ್ಳುವ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮತ್ತಷ್ಟು ಸದ್ದು ಮಾಡುತ್ತಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯು ಈ ಹಿಂದಿನಂತೆಯೇ ಒಟ್ಟು ಒಂಬತ್ತು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಕಾರಿನಲ್ಲಿ ನೀಡಲಾಗಿರುವ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.99 ಲಕ್ಷಕ್ಕೆ ಮತ್ತು ಅತ್ಯುತ್ತಮ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಗೆ ರೂ.12.50 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

MOST READ: ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ಹೊಸದಾಗಿ ತ್ರಿ ಸ್ಲಾಟ್ ಕ್ರೋಮ್ ಗ್ರಿಲ್ ಡಿಸೈನ್ ಪಡೆದುಕೊಂಡಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಡ್ಯುಯಲ್ ಟೋನ್ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ಸ್ ಮತ್ತು ಕ್ರೋಮ್ ಸ್ಟ್ರಿಪ್, ಏರ್ ಡ್ಯಾಮ್ ಮತ್ತು ಸ್ಕೀಡ್ ಪ್ಲೇಟ್ ಪಡೆದುಕೊಂಡಿದೆ.

ರೆನಾಲ್ಟ್ ಕಾರುಗಳ ಖರೀದಿ ಮೇಲೆ ಪಡೆಯಿರಿ ಭರ್ಜರಿ ಡಿಸ್ಕೌಂಟ್

ಫೇಸ್‌ಲಿಫ್ಟ್ ಡಸ್ಟರ್ ಮಾದರಿಯು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಈ ಹಿಂದಿಗಿಂತಲೂ ಹೊಸ ಕಾರಿನ ಎಂಜಿನ್ ಮಾದರಿಯು ಹೆಚ್ಚು ಇಂಧನ ದಕ್ಷತೆಯ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ತುಸು ಸುಧಾರಣೆ ಕಂಡಿದೆ.

Article Published On: Wednesday, September 18, 2019, 8:50 [IST]
English summary
Renault Offering Massive discounts. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+