ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಕೇಂದ್ರ ಸರ್ಕಾರವು ಶೀಘ್ರದಲ್ಲೇ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳಿಗೆ ಸ್ಕ್ರಾಪಿಂಗ್ ನೀತಿ ಜಾರಿಗೆ ತರಲು ಸಿದ್ದತೆ ನಡೆಸಿದ್ದು, ಸ್ಕ್ರ್ಯಾಪಿಂಗ್ ನೀತಿಯಡಿ ಗುಜರಿ ಸೇರುವ ವಾಹನಗಳಿಂದ ಬರುವ ಬಿಡಿಭಾಗಗಳ ಮೇಲೆ ಕಣ್ಣಿಟ್ಟಿರುವ ಮಾರುತಿ ಮತ್ತು ಟೊಯೊಟಾ ಸಂಸ್ಥೆಗಳು ಹೊಸ ಉದ್ಯಮ ಸ್ಥಾಪನೆಗೆ ಮುಂದಾಗಿವೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಹೊಸ ವಾಹನಗಳ ಮಾರಾಟದಲ್ಲಿ ಸತತ ಕುಸಿತದಿಂದಾಗಿ ಕಂಗೆಟ್ಟಿರುವ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಡ್ಡಾಯ ಸ್ಕ್ರ್ಯಾಪಿಂಗ್ ನೀತಿಯು ಸಾಕಷ್ಟು ಹೊಸ ಅವಕಾಶಗಳನ್ನು ತೆರೆಯಲಿದ್ದು, ಮಾಲಿನ್ಯ ಉತ್ಪಾದನೆಯನ್ನು ತಡೆಯುವುದಲ್ಲದೇ ಹೊಸ ವಾಹನಗಳ ಉತ್ಪಾದನೆಯೂ ಮತ್ತಷ್ಟು ಚುರುಕುಗೊಳ್ಳಲಿದೆ. ಹೀಗಾಗಿ ಸ್ಕ್ರ್ಯಾಪಿಂಗ್ ನೀತಿಯಡಿ ಸಂಗ್ರಹವಾಗುವ ಕಾರುಗಳಿಂದ ಭಾರೀ ಪ್ರಮಾಣದ ಬೀಡಿಭಾಗಗಳು ಸಂಗ್ರಹವಾಗಲಿದ್ದು, ಇದಕ್ಕಾಗಿಯೇ ಮಾರುತಿ ಸುಜುಕಿ ಮತ್ತು ಟೊಯೊಟಾ ಸುಶೋ ಸಂಸ್ಥೆಗಳ ಜೊತೆಗೂಡಿ ಸ್ಕ್ರ್ಯಾಪಿಂಗ್ ಘಟಕ ತೆರಯಲು ಯೋಜನೆ ರೂಪಿಸಿವೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಟೊಯೊಟಾ ಸುಶೋ ಸಂಸ್ಥೆಯು ಟೊಯೊಟಾ ಮೋಟಾರ್ಸ್ ಸಂಸ್ಥೆಯ ಅಂಗಸಂಸ್ಥೆಯಾಗಿದ್ದು, ಸ್ಟಿಲ್ ಉತ್ಪನ್ನಗಳ ಉತ್ಪಾದನೆಯಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿದೆ. ಇದೇ ಸಂಸ್ಥೆ ಇದೀಗ ಮಾರುತಿ ಸುಜುಕಿ ಜೊತೆಗೆ ಸ್ಕ್ರ್ಯಾಪಿಂಗ್ ಘಟಕ ನಿರ್ಮಾಣಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 20ರ ನಂತರ ಈ ಕುರಿತು ಅಂತಿಮ ತಿರ್ಮಾನ ಪ್ರಕಟವಾಗಲಿದೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಸೆಪ್ಟೆಂಬರ್ 20ಕ್ಕೆ ಹೆದ್ದಾರಿ ಮತ್ತು ಸಾರಿಗೆ ಇಲಾಖೆ, ಹಣಕಾಸು ಸಚಿವಾಲಯ ಮತ್ತು ಜಿಎಸ್‌ಟಿ ಕೌನ್ಸಿಲ್ ನೇತೃತ್ವದಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಕುರಿತು ಅಂತಿಮ ತೀರ್ಮಾನ ಪ್ರಕಟವಾಗಲಿದ್ದು, ಹೊಸ ನೀತಿ ಜಾರಿಗೆ ಆಟೋ ಉತ್ಪಾದನಾ ಸಂಸ್ಥೆಗಳು ಒತ್ತಡ ಹೇರುತ್ತಿವೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಹೊಸ ನೀತಿಯಿಂದಾಗಿ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ 10 ಸಾವಿರ ಕೋಟಿಯಷ್ಟು ಆದಾಯ ಹರಿದುಬರಲಿದ್ದು, ಇದು ಆಟೋ ಉತ್ಪಾದನಾ ಸಂಸ್ಥೆಗಳಿಗೂ ವರದಾನವಾಗಲಿದೆ. ಹಾಗೆಯೇ ಸ್ಕ್ರ್ಯಾಪಿಂಗ್ ನೀತಿ ಅಡಿಯಲ್ಲಿ ಸಂಗ್ರಹವಾಗುವ ಬಿಡಿಭಾಗಗಳ ಮರುಬಳಕೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದು ಹೊಸ ವಾಹನಗಳ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವುದಲ್ಲದೇ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ತಗ್ಗಲು ಸಹಕಾರಿಯಾಗಲಿದೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಇನ್ನು 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಮಾಲೀಕರಿಗೆ ತೆರಿಗೆ ವಿನಾಯ್ತಿ ಸಹ ನೀಡುವ ಪ್ರಸ್ತಾವ ಸಲ್ಲಿಸಲಾಗಿದ್ದು, ಒಂದು ವೇಳೆ ಅವಧಿ ಮುಗಿದ ಹಳೆಯ ವಾಹನಗಳನ್ನು ಮುಂದುವರಿಸುವ ಇಚ್ಚೆಯಿದ್ದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ವಾಹನದ ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆಯುವುದನ್ನು ಕಡ್ಡಾಯಲಾಗಲಿದೆ.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಹೀಗಾಗಿ ಹಳೆಯ ವಾಹನಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಫಿಟ್‌ನೆಸ್ ಪ್ರಮಾಣ ಪತ್ರವನ್ನು ಪಡೆಯಲು ರೂ.2 ಸಾವಿರದಂತೆ ಶುಲ್ಕಪಾವತಿಸಬೇಕಿದ್ದು, ಇದು ವಾಹನಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಹೆಚ್ಚಳ ಮಾಡಲಿದೆ.

MOST READ:ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ವಾಹನ ವಿಮೆ, ಮಾಸಿಕ ನಿರ್ವಹಣೆ, ಎಮಿಷನ್ ಟೆಸ್ಟಿಂಗ್ ಜೊತೆಗೆ ಫಿಟ್‌ನೆಸ್ ಪ್ರಮಾಣ ಪತ್ರವು ವಾಹನ ಮಾಲೀಕರಿಗೆ ಸಾಕಷ್ಟು ಆರ್ಥಿಕವಾಗಿ ಹೊರೆಯಾಗಲಿದ್ದು, ದುಬಾರಿ ವೆಚ್ಚ ನಿರ್ವಹಣೆ ಮಾಡಬೇಕು ಇಲ್ಲವೇ ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡಬೇಕೆಂಬುವುದೇ ಈ ಹೊಸ ನೀತಿ ಮೂಲ ಉದ್ದೇಶವಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಇದರಿಂದ ಹೊಸ ನೀತಿಯಡಿ ಸುಮಾರು 3 ಕೋಟಿಗೂ ಅಧಿಕ ವಾಹನಗಳು ಗುಜುರಿ ಸೇರಲು ಸಿದ್ದವಾಗಿದ್ದು, ಕಾರು ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಗುಜುರಿ ಹಾಕಿ ಹೊಸ ವಾಹನ ಖರೀದಿ ಮೇಲೆ ಶೇ.10ರಷ್ಟು ಜಿಎಸ್‌ಟಿ ವಿನಾಯ್ತಿ ಪಡೆಯಬಹುದಾಗಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಒಟ್ಟಿನಲ್ಲಿ ಸ್ಕ್ರ್ಯಾಪಿಂಗ್ ನೀತಿಯು ಆಟೋ ಉದ್ಯಮಕ್ಕೆ ಭಾರೀ ಪ್ರಮಾಣದ ಆದಾಯ ತಂದುಕೊಡುವ ನೀರಿಕ್ಷೆಯಿದ್ದು, ಹೊಸ ನೀತಿಯಡಿ ಸ್ಕ್ರ್ಯಾಪಿಂಗ್ ಮಾಡಿಸದ ವಾಹನ ಮಾಲೀಕರಿಗೆ ವಾಹನ ನಿರ್ವಹಣಾ ವೆಚ್ಚವು ಮತ್ತಷ್ಟು ಅಧಿಕಗೊಳ್ಳಲಿದೆ ಎನ್ನಬಹುದು.

ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಇದೇ ಕಾರಣಕ್ಕೆ ಸ್ಕ್ರ್ಯಾಪಿಂಗ್ ಉದ್ಯಮ ಸ್ಥಾಪನೆಗೆ ಮಾರುತಿ ಸುಜುಕಿ ಮತ್ತು ಟೊಯೊಟಾ ಸೇರಿದಂತೆ ಮಹೀಂದ್ರಾ ಕೂಡಾ ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಸ್ಕ್ರ್ಯಾಪಿಂಗ್ ಉದ್ಯಮದಲ್ಲೂ ಭಾರೀ ಪ್ರಮಾಣದ ಉದ್ಯೋಗ ಸೃಷ್ಠಿಗೆ ಇದು ಸಹಕಾರಿಯಾಗಲಿದೆ.

Article Published On: Saturday, September 14, 2019, 19:00 [IST]
English summary
Maruti Suzuki And Toyota Setting Up Scrap Plant In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+