ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

ಮಾರುತಿ ಸುಜುಕಿ ಕಂಪನಿಯ ಡಿಜೈರ್ ಕಾರು ಅಗ್ರಸ್ಥಾನದಲ್ಲಿರುವ ಸಬ್ ಕಾಂಪ್ಯಾಕ್ಟ್ ಸೆಡಾನ್ ಸೆಗ್‍‍ಮೆಂಟಿನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಲು ರೆನಾಲ್ಟ್ ಯೋಜಿಸಿದೆ. ರೆನಾಲ್ಟ್ ಕಂಪನಿಯು, ದೇಶಿಯ ಮಾರುಕಟ್ಟೆಗಾಗಿ ಮತ್ತೊಂದು ಕಾರ್ ಅನ್ನು ಸಬ್ ಕಾಂಪ್ಯಾಕ್ಟ್ ಸೆಡಾನ್ ರೂಪದಲ್ಲಿ ಅಭಿವೃದ್ಧಿಪಡಿಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

ಮಾರುತಿ ಸುಜುಕಿ ಕಂಪನಿಯ ಡಿಜೈರ್ ವಾಹನವು ಹಲವಾರು ವರ್ಷಗಳಿಂದ ಈ ಸಬ್ 4 ಮೀಟರ್ ಸೆಗ್‍‍ಮೆಂಟಿನಲ್ಲಿರುವ ಜನಪ್ರಿಯ ವಾಹನವಾಗಿದೆ. ರೆನಾಲ್ಟ್ ಕಂಪನಿಯು ಭಾರತಕ್ಕೆ ನಿರ್ದಿಷ್ಟವಾದ ಹಾಗೂ ಇತರ ಪ್ರದೇಶಗಳಿಗೆ ರಫ್ತು ಮಾಡಬಹುದಾದ ಕಾರನ್ನು ಅಭಿವೃದ್ಧಿಪಡಿಸಲು ಬಯಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

ಭಾರತದಲ್ಲಿ ತಯಾರಾಗುವ ಸಬ್ ಕಾಂಪ್ಯಾಕ್ಟ್ ಸೆಡಾನ್‌ ಕಾರುಗಳು ಲ್ಯಾಟಿನ್ ಅಮೆರಿಕ, ಆಗ್ನೇಯ ಏಷ್ಯಾ ಹಾಗೂ ಮುಖ್ಯವಾಗಿ ಆಫ್ರಿಕಾದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿವೆ. ಅದರಲ್ಲೂ ಆಫ್ರಿಕಾದಲ್ಲಿ ಸಬ್ ಕಾಂಪ್ಯಾಕ್ಟ್ ಮಾದರಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ.

ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

ಹಲವಾರು ವರ್ಷಗಳ ಬಳಿಕ, ರೆನಾಲ್ಟ್ ಸಬ್ 4 ಮೀಟರ್ ಸೆಡಾನ್ ಸೆಗ್‍‍ಮೆಂಟನ್ನು ಪ್ರವೇಶಿಸಲು ಉತ್ಸುಕವಾಗಿದೆ. ಪ್ಯಾರಿಸ್‌ನಲ್ಲಿರುವ ರೆನಾಲ್ಟ್ ಕೇಂದ್ರ ಕಚೇರಿಯ ಮೂಲಗಳು ಹಾಗೂ ಭಾರತದಲ್ಲಿರುವ ಕಾರ್ಯಾಚರಣೆಗಳು ರೆನಾಲ್ಟ್ ಕಂಪನಿಯು ಸೆಡಾನ್ ಕಾರುಗಳನ್ನು ಅಭಿವೃದ್ಧಿ ಪಡಿಸುವುದನ್ನು ದೃಢಪಡಿಸಿವೆ.

ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

ಸಬ್ ಕಾಂಪ್ಯಾಕ್ಟ್ ಸೆಡಾನ್ ಸೆಗ್‍‍ಮೆಂಟಿನಲ್ಲಿ 2019ರ ಹಣಕಾಸು ವರ್ಷದಲ್ಲಿ 12%ನಷ್ಟು ಏರಿಕೆಯಾಗಿ 4.6 ಲಕ್ಷ ಯೂನಿಟ್‌ಗಳ ಮಾರಾಟವಾಗಿದೆ. ಇದೇ ಪ್ರಮಾಣವು ಮುಂದಿನ ಹಣಕಾಸು ವರ್ಷದಲ್ಲಿಯೂ ಸಹ ಮುಂದುವರಿಯುವ ನಿರೀಕ್ಷೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

ಕಾಂಪ್ಯಾಕ್ಟ್ / ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್‍‍ಮೆಂಟ್ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದರೂ, ಸೆಡಾನ್ ಸೆಗ್‍‍ಮೆಂಟಿನಲ್ಲಿರುವ ಕಾರುಗಳು ಹೆಚ್ಚು ಮಾರಾಟವಾಗುತ್ತಿವೆ. ಎಕ್ಸ್‌ಪೆರಿಯಲ್‌ನ ಪಾಲುದಾರರಾದ ಅವಿಕ್ ಚಟ್ಟೋಪಾಧ್ಯಾಯರವರು ಮಾತನಾಡಿ, ಸಬ್ 4 ಸೆಡಾನ್ ಸೆಗ್‍‍ಮೆಂಟ್ ಹಂಚಿಕೆ ಹಾಗೂ ಪಬ್ಲಿಕ್ ಮೊಬಿಲಿಟಿಯ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

2019ರಲ್ಲಿನ ಬೆಳವಣಿಗೆಯು ಇತರರ ಬೆಳವಣಿಗೆಗೆ ಸಂಬಂಧಿಸಿದೆ. ಇಲ್ಲದಿದ್ದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು ಎಂದು ಹೇಳಿದರು. ಈ ಹಿಂದೆ ಭಾರತದಲ್ಲಿ ರೆನಾಲ್ಟ್ ಕಂಪನಿಯ ಡೇಸಿಯಾ ಲೋಗನ್ ಸೆಡಾನ್ ಕಾರ್ ಅನ್ನು ತಯಾರಿಸಲಾಗಿತ್ತು.

MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

ಈ ಕಾರ್ ಅನ್ನು ಬಿ0/ಎಂ0 ಪ್ಲಾಟ್‌ಫಾರಂನಲ್ಲಿ ತಯಾರಿಸಲಾಗಿತ್ತು. ಆದರೆ ಈಗ ಅಭಿವೃದ್ದಿಪಡಿಸಲಿರುವ ಕಾರು ವಿಭಿನ್ನವಾಗಿರಲಿದೆ. 4 ಮೀಟರ್‌ಗಿಂತ ಕಡಿಮೆಯಿರುವ ಸೆಡಾನ್ ಕಾರನ್ನು, ಸಿ‍ಎಂ‍ಎಫ್ -ಎ ಪ್ಲಸ್ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗುವುದು.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

ಇದೇ ಪ್ಲಾಟ್‍‍ಫಾರಂನಲ್ಲಿ ರೆನಾಲ್ಟ್ ಟ್ರೈಬರ್ ಅನ್ನು ತಯಾರಿಸಲಾಗಿದೆ. ಇದೇ ಪ್ಲಾಟ್‍‍ಫಾರಂನಲ್ಲಿ ರೆನಾಲ್ಟ್ ಹೆಚ್‌ಬಿಸಿ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಹಾಗೂ ದಟ್ಸನ್ / ನಿಸ್ಸಾನ್ ಕಾರುಗಳನ್ನು ತಯಾರಿಸಲಾಗುವುದು. ಈ ಪ್ಲಾಟ್‍‍ಫಾರಂ ಸಿಎಂಎಫ್-ಎ ಪ್ಲಾಟ್‌ಫಾರಂನ ವಿಸ್ತರಿತ ಆವೃತ್ತಿಯಾಗಿದ್ದು, ಇದನ್ನು ರೆನಾಲ್ಟ್ ಕ್ವಿಡ್ ಮತ್ತು ದಟ್ಸನ್ ರೆಡಿ ಗೊ ಕಾರುಗಳಲ್ಲಿಯೂ ಕೂಡ ಬಳಸಲಾಗಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

ಈ ಸೆಗ್‍‍ಮೆಂಟಿನ ಕಾರುಗಳನ್ನು ಕುಟುಂಬ ಖರೀದಿದಾರರು ಮಾತ್ರವಲ್ಲದೇ, ಓಲಾ ಮತ್ತು ಉಬರ್‌ನಂತಹ ಟ್ಯಾಕ್ಸಿ ಸೇವೆಯನ್ನು ನೀಡುವ ಕಂಪನಿಗಳೂ ಸಹ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತವೆ. ಇತ್ತೀಚಿನ ಸೆಡಾನ್‌ ಕಾರುಗಳನ್ನು ಕನೆಕ್ಟಿವಿ ಫೀಚರ್‍‍ಗಳ ಜೊತೆಗೆ ಉತ್ತಮ ನಿರ್ಮಾಣ ಗುಣಮಟ್ಟದೊಂದಿಗೆ ಮಾರಾಟ ಮಾಡಲಾಗುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರ್ ಬಿಡುಗಡೆಗೊಳಿಸಲಿದೆ ರೆನಾಲ್ಟ್

ಸಬ್ ಕಾಂಪ್ಯಾಕ್ಟ್ ಸೆಡಾನ್‌ಗಳ ಬೆಲೆಗಳು ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ರೂ.1 ಲಕ್ಷ ಕಡಿಮೆ ಇರುತ್ತವೆ. ದೇಶಿಯ ಮಾರುಕಟ್ಟೆಯಲ್ಲಿ ಎಸ್‍‍ಯುವಿಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ರೆನಾಲ್ಟ್‌ ಸೆಡಾನ್ ಕಾರುಗಳಿಗೆ ಹಾದಿಯು ಅಷ್ಟು ಸುಲಭವಾಗಿಲ್ಲ.

Source: NDTV Auto

Most Read Articles

Kannada
English summary
Renault developing a subcompact sedan for India - Read in Kannada
Story first published: Tuesday, October 29, 2019, 16:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X