ಬೆಲೆ ಬದಲಾವಣೆಯಿಲ್ಲದೆಯೇ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ರೆನಾಲ್ಟ್ ಇಂಡಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಈ ಹಿಂದಿನ ಬೆಲೆಗಳಲ್ಲೇ ಹೊಸ ಫೇಸ್‌ಲಿಫ್ಟ್ ಡಸ್ಟರ್ ಆವೃತ್ತಿಯು ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಹಿಂದಿನ ಆವೃತ್ತಿಗಿಂತ ವಿನ್ಯಾಸದಲ್ಲಿ ತುಸು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲೇ ಮತ್ತೊಮ್ಮೆ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೆಲೆ ಬದಲಾವಣೆಯಿಲ್ಲದೆಯೇ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯು ಈ ಹಿಂದಿನಂತೆಯೇ ಒಟ್ಟು ಒಂಬತ್ತು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಕಾರಿನಲ್ಲಿ ನೀಡಲಾಗಿರುವ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.99 ಲಕ್ಷಕ್ಕೆ ಮತ್ತು ಅತ್ಯುತ್ತಮ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಗೆ ರೂ.12.50 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಹೊಸ ಬೆಲೆಯು ಹಳೆಯ ಬೆಲೆಗಳಿಂತಲೂ ಕಡಿಮೆಯಾಗಿದ್ದು, ಫೇಸ್‌ಲಿಫ್ಟ್‌ನಲ್ಲಿ ಮಾಡಲಾಗಿರುವ ತಾಂತ್ರಿಕ ಬದಲಾವಣೆಗಳು ಈ ಬಾರಿ ಡಸ್ಟರ್ ಮಾರಾಟ ಪ್ರಮಾಣವು ಮತ್ತಷ್ಟು ಹೆಚ್ಚಳವಾಗಲಿದೆ.

ಬೆಲೆ ಬದಲಾವಣೆಯಿಲ್ಲದೆಯೇ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ರೆನಾಲ್ಟ್ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಫೇಸ್‌ಲಿಫ್ಟ್ ಆವೃತ್ತಿಗಳು ಸೇರಿದಂತೆ ಒಟ್ಟು ಐದು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಇದೀಗ ಡಸ್ಟರ್ ಫೇಸ್‌ಲಿಫ್ಟ್ ಬಿಡುಗಡೆಗೊಂಡಿದ್ದು, ವಿನೂತನ ಸೌಲಭ್ಯ ಹೊತ್ತು ಬಂದಿರುವ ಫೇಸ್‌ಲಿಫ್ಟ್ ಮಾದರಿಯು ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

ಬೆಲೆ ಬದಲಾವಣೆಯಿಲ್ಲದೆಯೇ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಫೇಸ್‌ಲಿಫ್ಟ್ ಡಸ್ಟರ್ ಕಾರು ಈ ಬಾರಿ ಹೊಸದಾಗಿ ತ್ರಿ ಸ್ಲಾಟ್ ಕ್ರೋಮ್ ಗ್ರಿಲ್ ಡಿಸೈನ್ ಪಡೆದುಕೊಂಡಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಡ್ಯುಯಲ್ ಟೋನ್ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ಸ್ ಮತ್ತು ಕ್ರೋಮ್ ಸ್ಟ್ರಿಪ್, ಏರ್ ಡ್ಯಾಮ್ ಮತ್ತು ಸ್ಕೀಡ್ ಪ್ಲೇಟ್ ಪಡೆದುಕೊಂಡಿದೆ.

ಬೆಲೆ ಬದಲಾವಣೆಯಿಲ್ಲದೆಯೇ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಹಾಗೆಯೇ ಹಿಂಭಾಗದ ವಿನ್ಯಾಸದಲ್ಲೂ ತುಸು ಬದಲಾವಣೆಗಳನ್ನು ಕಂಡಿರುವ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಟೈಲ್‌ಗೇಟ್ ಮೇಲೆ ಪ್ಲಾಸ್ಟಿಕ್ ಕ್ಲ್ಯಾಡಿಂಗ್, ಡ್ಯಯುಲ್ ಟೋನ್ ರಿಯರ್ ಬಂಪರ್, ರೂಫ್ ರೈಲ್ಸ್ ಮತ್ತು ಹೊಸ ಮಾದರಿಯ ಡ್ಯುಯಲ್ ಟೋನ್ ಅಲಾಯ್ ಚಕ್ರಗಳನ್ನು ಪಡೆದುಕೊಂಡಿರುವುದು ಎಸ್‌ಯುವಿ ಪ್ರಿಯರನ್ನು ಸೆಳೆಯಲು ಸಿದ್ದವಾಗಿದೆ. ಡಸ್ಟರ್ ಕಾರು ಒಟ್ಟು 3 ಪೆಟ್ರೋಲ್ ಆವೃತ್ತಿಗಳಲ್ಲಿ ಮತ್ತು 6 ಡೀಸೆಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಫೇಸ್‌ಲಿಫ್ಟ್ ಮಾದರಿಯು ಈ ಹಿಂದಿನಂತೆಯೇ ಎಂಜಿನ್ ಆಯ್ಕೆ ಪಡೆದಿದೆ.

ಬೆಲೆ ಬದಲಾವಣೆಯಿಲ್ಲದೆಯೇ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಡಸ್ಟರ್ ಫೇಸ್‌ಲಿಫ್ಟ್ ವೆರಿಯೆಂಟ್‌ಗಳು ಮತ್ತು ಬೆಲೆ(ಎಕ್ಸ್‌ಶೋರೂಂ)

ಆರ್‌ಎಕ್ಸ್ಇ ಪೆಟ್ರೋಲ್ - ರೂ. 7.99 ಲಕ್ಷ

ಆರ್‌ಎಕ್ಸ್ಎಸ್ ಪೆಟ್ರೋಲ್ - ರೂ. 9.20 ಲಕ್ಷ

ಆರ್‌ಎಕ್ಸ್ಎಸ್ (ಒ) ಪೆಟ್ರೋಲ್ ಸಿವಿಟಿ - ರೂ. 9.99 ಲಕ್ಷ

85ಬಿಎಚ್‌ಪಿ ಆರ್‌ಎಕ್ಸ್ಇ ಡಿಸೇಲ್- ರೂ.9.30 ಲಕ್ಷ

85ಬಿಎಚ್‌ಪಿ ಆರ್‌ಎಕ್ಸ್ಎಸ್ ಡಿಸೇಲ್- ರೂ.9.99 ಲಕ್ಷ

110ಬಿಎಚ್‌ಪಿ ಡೀಸೆಲ್ ಆರ್‌ಎಕ್ಸ್ಎಸ್ - ರೂ. 11.20 ಲಕ್ಷ

110ಬಿಎಚ್‌ಪಿ ಡೀಸೆಲ್ ಆರ್‌ಎಕ್ಸ್‌ಜೆಡ್ - ರೂ. 12.10 ಲಕ್ಷ

110ಬಿಎಚ್‌ಪಿ ಡೀಸೆಲ್ ಆರ್‌ಎಕ್ಸ್‌ಜೆಡ್ ಎಎಂಟಿ - ರೂ. 12.50 ಲಕ್ಷ

110ಬಿಎಚ್‌ಪಿ ಡೀಸೆಲ್ ಆರ್‌ಎಕ್ಸ್‌ಎಸ್ ಎಡಬ್ಲ್ಯುಡಿ - ರೂ. 12.50 ಲಕ್ಷ

ಬೆಲೆ ಬದಲಾವಣೆಯಿಲ್ಲದೆಯೇ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಈ ಹಿಂದಿನಂತೆಯೇ ಫೇಸ್‌ಲಿಫ್ಟ್ ಡಸ್ಟರ್ ಮಾದರಿಯು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಈ ಹಿಂದಿಗಿಂತಲೂ ಹೊಸ ಕಾರಿನ ಎಂಜಿನ್ ಮಾದರಿಯು ಹೆಚ್ಚು ಇಂಧನ ದಕ್ಷತೆಯ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ತುಸು ಸುಧಾರಣೆ ಕಂಡಿದೆ.

ಬೆಲೆ ಬದಲಾವಣೆಯಿಲ್ಲದೆಯೇ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಹಾಗೆಯೇ ಈ ಬಾರಿ ಟಾಪ್ ಎಂಡ್ ಡೀಸೆಲ್ ಮಾದರಿಯಲ್ಲೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವರ್ ಗೇರ್‌ಬಾಕ್ಸ್‌ನೊಂದಿಗೆ ಆಫ್ ರೋಡ್ ಕೌಶಲ್ಯವನ್ನು ಬಯಸುವ ಗ್ರಾಹಕರು ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಪ್ರೇರಿತ ಟಾಪ್ ಎಂಡ್ ಆರ್‌ಎಕ್ಸ್‌ಎಸ್ ಡೀಸೆಲ್ ವೆರಿಯೆಂಟ್ ಖರೀದಿ ಮಾಡಬಹುದಾಗಿದೆ.

ಬೆಲೆ ಬದಲಾವಣೆಯಿಲ್ಲದೆಯೇ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಇನ್ನು ಹೊಸ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಆದ್ಯತೆ ಮೇರೆಗೆ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಎಸಿ ವೆಂಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಟ್ರಿಮ್, ಸೆಂಟ್ರಲ್ ಕನ್ಸೊಲ್‌ಗಳನ್ನು ಉನ್ನತಿಕರಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‌‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್ ಮತ್ತು ಟಾಪ್ ಎಂಡ್ ಮಾದರಿಯಲ್ಲಿ ಇಸಿಎಸ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

ಬೆಲೆ ಬದಲಾವಣೆಯಿಲ್ಲದೆಯೇ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಈ ಮೂಲಕ ಹೊಸ ಡಸ್ಟರ್‌ನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಆದ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಕಾರು ಮಾದರಿಯು ಹ್ಯುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ಮಾರುತಿ ಸುಜುಕಿ ಎಸ್ ಕ್ರಾಸ್, ಎಂಜಿ ಹೆಕ್ಟರ್ ಮತ್ತು ಬಿಡುಗಡೆಯಾಗಲಿರುವ ಕಿಯಾ ಸೆಲ್ಟೊಸ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Renault India has launched the facelifted version of the Duster SUV in India at Rs 7.99 lakh, ex-showroom.
Story first published: Monday, July 8, 2019, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X