ಏಪ್ರಿಲ್ 16ರಂದು ಅನಾವರಣಗೊಳ್ಳಲಿದೆ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರ್

ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತು ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಪರ್ಯಾಯ ಇಂಧನ ಬಳಕೆಯ ವಾಹನಗಳತ್ತ ಮುಖಮಾಡುತ್ತಿದ್ದು, ಭವಿಷ್ಯದ ವಾಹನ ಮಾದರಿಗಳಾದ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆಯಲ್ಲಿ ಇದೀಗ ಹೊಸದೊಂದು ಕ್ರಾಂತಿ ಶುರುವಾಗಿದೆ.

ಏಪ್ರಿಲ್ 16ರಂದು ಅನಾವರಣಗೊಳ್ಳಲಿದೆ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರ್

2030ರ ಹೊತ್ತಿಗೆ ವಿಶ್ವಾದ್ಯಂತ ಶೇ.100ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಉದ್ದೇಶದೊಂದಿಗೆ ಜಗತ್ತಿನ ಎಲ್ಲಾ ಆಟೋ ಉತ್ಪಾದನಾ ಸಂಸ್ಥೆಗಳು ಬೃಹತ್ ಯೋಜನೆಯೊಂದಿಗೆ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ರೆನಾಲ್ಟ್ ಸಂಸ್ಥೆಯು ಸಹ ತನ್ನ ಕನಸಿನ ಕೂಸಾದ ಕೆ-ಜೆಡ್ಇ ಕಾನ್ಸೆಪ್ಟ್ ಅನಾವರಣಗೊಳಿಸಿರುವುದಲ್ಲದೇ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಏಪ್ರಿಲ್ 16ರಂದು ಅನಾವರಣಗೊಳ್ಳಲಿದೆ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರ್

ಕ್ವಿಡ್ ವಿನ್ಯಾಸವನ್ನೇ ಆಧಾರಿಸಿರುವ ಹೊಸ ಎಲೆಕ್ಟ್ರಿಕ್ ಕಾರು ಕೆಲವು ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿ ಬಹುತೇಕ ಸಾಮಾನ್ಯ ಮಾದರಿಯಲ್ಲೇ ಸಿದ್ದಗೊಂಡಿದ್ದು, ಹೊಸ ಕಾರು ಮೊದಲ ಬಾರಿಗೆ ಶಾಂಘೈನಲ್ಲಿ ಇದೇ ತಿಂಗಳು 16ರಂದು ನಡೆಯಲಿರುವ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗುತ್ತಿದೆ.

ಏಪ್ರಿಲ್ 16ರಂದು ಅನಾವರಣಗೊಳ್ಳಲಿದೆ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರ್

ಇನ್ನೊಂದು ವಿಶೇಷ ಅಂದ್ರೆ, ಹೊಸ ಕಾರಿನ ಡಿಸೈನ್‌ಗಳನ್ನು ಚೆನ್ನೈನಲ್ಲಿರುವ ರೆನಾಲ್ಟ್ ಕಾರು ಉತ್ಪಾದನಾ ಕೇಂದ್ರದಲ್ಲಿ ಸಿದ್ದಪಡಿಸಲಾಗಿದ್ದು, ಮೊದಲ ಹಂತವಾಗಿ ಹೊಸ ಕಾರು ಚೀನಾದಲ್ಲಿ ಹಾಗೂ ತದನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಇದೆ.

ಸಾಮಾನ್ಯ ಮಾದರಿಯ ಕ್ವಿಡ್ ಹ್ಯಾಚ್‌ಬ್ಯಾಕ್ ಕಾರಿನ ಹೋಲಿಕೆ ಇರುವ ಕೆ-ಜೆಡ್ಇ ಕಾನ್ಸೆಪ್ಟ್ ಕಾರು ಸ್ಲಿಕ್ ಹೆಡ್‌ಲ್ಯಾಂಪ್ಸ್, ಮರು ವಿನ್ಯಾಸಗೊಳಿಸಲಾದ ಗ್ರೀಲ್, ಸ್ಪೋರ್ಟಿ ಬಂಪರ್ ಮತ್ತು ಕಾರಿನ ಬಹುತೇಕ ಕಡೆ ಇರಿಸಲಾಗಿರುವ ಬ್ಲ್ಯೂ ಅಸೆಸ್ಟ್ಸ್ ಕಾರಿನ ಲುಕ್ ಹೆಚ್ಚಿಸಿದೆ.

ಏಪ್ರಿಲ್ 16ರಂದು ಅನಾವರಣಗೊಳ್ಳಲಿದೆ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರ್

ಇದರ ಹೊರತಾಗಿ ಕಾರಿನ ಎಂಜಿನ್ ತಾಂತ್ರಿಕ ಅಂಶಗಳ ಬಗೆಗೆ ಅಷ್ಟಾಗಿ ಮಾಹಿತಿ ಬಿಟ್ಟುಕೊಡದ ರೆನಾಲ್ಟ್ ಸಂಸ್ಥೆಯು ಶಾಂಘೈ ಮೋಟಾರ್ ಮೇಳದಲ್ಲಿ ಹೊಸ ಕಾರಿನ ಕುರಿತಾದ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಿದ್ದು, ಭಾರತದಲ್ಲಿ ಈ ಕಾರು ಹೊಸ ಸಂಚಲನಕ್ಕೆ ಕಾರಣವಾಗಲಿದೆ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಏಪ್ರಿಲ್ 16ರಂದು ಅನಾವರಣಗೊಳ್ಳಲಿದೆ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರ್

ಕಾರಿನ ಮೈಲೇಜ್ ಕೆ-ಜೆಡ್ಇ ಕಾರಿನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ವೈಶಿಷ್ಟ್ಯತೆಗಳ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಪ್ರತಿ ಚಾರ್ಜ್‌ಗೆ ಬರೋಬ್ಬರಿ 250ಕಿ.ಮಿ ಮೈಲೇಜ್ ರೇಂಜ್ ಹೊಂದಿರುವ ಈ ಎಲೆಕ್ಟ್ರಿಕ್ ಕಾರನ್ನು ನಿಸ್ಸಾನ್ ಜೊತೆಗೂಡಿ ಅಭಿವೃದ್ಧಿ ಮಾಡಲಾಗುತ್ತಿದೆ.

ಏಪ್ರಿಲ್ 16ರಂದು ಅನಾವರಣಗೊಳ್ಳಲಿದೆ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರ್

ಭಾರತದಲ್ಲಿ ಬಿಡುಗಡೆ ಯಾವಾಗ?

ಮೇಲೆ ಹೇಳಿದ ಹಾಗೆ ಮೊದಲು ಚೀನಾದಲ್ಲಿ ಬಿಡುಗಡೆಗೊಳಿಸಿದ ನಂತರವಷ್ಟೇ ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಿರುವ ರೆನಾಲ್ಟ್ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳಿಗೆ ಬೇಕಿರುವ ಅಗತ್ಯ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಮಾಡುವ ಯೋಜನೆಯಲ್ಲಿದ್ದು, ಕೇಂದ್ರ ಸರ್ಕಾರವು ಸಹ ಇವಿ ಕಾರುಗಳು ಪೂರಕವಾಗುವಂತೆ 2019ರ ಸೆಪ್ಟೆಂಬರ್ ಹೊತ್ತಿಗೆ ಪ್ರತಿ 3 ಕಿ.ಮಿ ಗೆ ಒಂದು ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.

MOST READ: ಈ ವರ್ಷವಾದ್ರು ಟೈಗರ್ ಕ್ಯಾಬ್ ಬರುತ್ತಾ ಅಂತಾ?

ಏಪ್ರಿಲ್ 16ರಂದು ಅನಾವರಣಗೊಳ್ಳಲಿದೆ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರ್

ಹೀಗಾಗಿ 2019ರ ಕೊನೆಯಲ್ಲಿ ಮತ್ತು 2020ರ ಆರಂಭದಲ್ಲಿ ದೇಶದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವುದು ಖಚಿತವಾಗಿದ್ದು, ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಬ್ಯಾಟರಿ ತಯಾರಿಕೆಗಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎದುರು ನೋಡುತ್ತಿವೆ.

More from DriveSpark

Article Published On: Tuesday, April 9, 2019, 19:43 [IST]
English summary
Renault Kwid EV To Be Unveiled On 2019 Shangai Motor show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+