ಹೆಚ್‍ಡಿಕೆ ಕನಸಿನ ಟೈಗರ್ ಕ್ಯಾಬ್ಸ್ ಲಾಂಚ್ ಆಗೋದು ಯಾವಾಗ.?

ಅದು ಏಪ್ರಿಲ್ 2017, ಆಗಿನ ಕಾಲದಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು ಆಪ್ ಆಧಾರಿತ ಓಲಾ ಮತ್ತು ಓಬರ್ ತ್ಯಾಕ್ಸಿ ಸೇವೆಗಳಿಗೆ ಪೈಪೋಟಿಯಾಗಿ ಸುಮಾರು 36 ಕೋಟಿ ವೆಚ್ಚದಲ್ಲಿ ಹೆಚ್‍ಡಿಕೆ ಕ್ಯಾಬ್ ಎಂಬ ಹೊಸ ಟ್ಯಾಕ್ಸಿ ಸೆವೆಯನ್ನು ಪ್ರಾರಂಭಿಸುವುದಾಗಿ ಹೇಳಿಕೆಯನ್ನು ನೀಡಿದ್ದರು.

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಅದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಹೆಚ್‍ಡಿಕೆ ಕ್ಯಾಬ್ ಅನ್ನು ಬಿಡುಗಡೆ ಮಾಡಲಿಲ್ಲವಾದರೂ 'ನಮ್ಮ ಟೈಗರ್' ಎಂಬ ಹೆಸರಿನಲ್ಲಿ ಮೊಬೈಲ್ ಆಪ್ ಅನ್ನು ಸಹ ಬಿಡುಗಡೆ ಮಾದುವುದಾಗಿ ಹೇಳಿಕೊಂಡಿದ್ದರು ನಮ್ಮ ಹೆಚ್‍.ಡಿ ಕುಮಾರಸ್ವಾಮಿ. ಈ ಮಾಹಿತಿಯು ಹಲವಾರು ಸ್ಥಳೀಯ ಟ್ಯಾಕ್ಸಿ ಚಾಲಕರು ತಮ್ಮ ಜೀವನದಲ್ಲಿ ಒಂದು ಹೊಸ ಬೇಳಕನ್ನು ಕಾಣುವ ತವಕದಲ್ಲಿದ್ದರು.

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಆದ್ರೆ ಮಾಹಿತಿ ದೊರೆತು ಸುಮಾರು 2 ವರ್ಷಗಳಾದರು ಹೆಚ್‍ಡಿಕೆ ಕ್ಯಾಬ್ ಅಥವಾ ನಮ್ಮ ಟೈಗರ್ ಆಪ್ ಮಾತ್ರ ಬಿಡುಗಡೆ ಮಾಡಲಾಗಿತ್ತು. ನವೆಂಬರ್ 30, 2017 ರಂದು 'ನಮ್ಮ ಟೈಗರ್' ಲೋಕಾರ್ಪಣೆ ಮಾಡುವುದಾಗಿ ಸ್ವತಃ ಕುಮಾರಸ್ವಾಮಿಯವರೇ ಹೆಳಿಕೊಂಡಿದ್ದೂ, ಈ ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರೂ ಸಹ ಭಾಗಿಯಾಗಲಿದ್ದಾರೆ ಎಂಬ ಪೋಸ್ಟರ್‍‍ಗಳನ್ನು ಸಹ ಪ್ರಿಂಟ್ ಮಾಡಲಾಗಿತ್ತು.

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಸಧ್ಯಕ್ಕೆ ಟ್ಯಾಕ್ಸಿ ಚಾಲಕರು ಹೆಚ್‍ಡಿಕೆ ಕ್ಯಾಬ್ಸ್ ಬಿಡುಗಡೆಯಾಗುವುದರ ಬಗ್ಗೆ ಮರೆತಿರಬಹುದೇನೊ, ಅಥವಾ ಹೆಚ್‍ಡಿ ಕುಮಾರಸ್ವಾಮಿಯವರು ಸುಳ್ಳು ಪ್ರಚಾರವನ್ನು ಮಾಡಿರುವುದಾಗಿ ಅವರು ಅಂದುಕೊಂಡಿರಬಹುದೆನೊ.? ಹಾಗಾದರೆ 2017ರಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದ ಹೆಚ್‍‍ಡಿಕೆ ಕ್ಯಾಬ್ಸ್ ಬಗೆಗಿನ ಕ್ವಿಕ್ ಲುಕ್ ಇಲ್ಲಿದೆ ನೋಡಿ..

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಹೆಚ್‌ಡಿಕೆ ಮುಖಂಡತ್ವದಲ್ಲಿ ಹೊಸ ಯೋಜನೆ

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಹೊಸ ಯೋಜನೆಯೊಂದನ್ನು ಜಾರಿಗೆ ತರಬೇಕಾಗಿದ್ದು, ಇದಕ್ಕಾಗಿ ರೂ.36 ಕೋಟಿ ವೆಚ್ಚದಲ್ಲಿ ಬೃಹತ್ ಯೋಜನೆಯನ್ನು ರೂಪಿಸಿದ್ದರು.

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಸೇವೆಗೆ ಹೊಸ ಆ್ಯಪ್

ಸಿದ್ಧ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯೊಂದು ಈಗಾಗಲೇ ಹೊಸ ಆ್ಯಪ್‌ನ್ನು ಸಿದ್ಧಗೊಳಿಸಿದೆ ಎಂಬ ಮಾಹಿತಿಯು ಕೂಡಾ ಲಭ್ಯವಾಗಿತ್ತು. ವಿಶ್ವದರ್ಜೆಯ ಮುಖಪುಟ ವಿನ್ಯಾಸವನ್ನು ಹೊಂದಿದ್ದು, ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲ ತಂತ್ರಾಂಶ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಕೂಡಾ ಮಾಹಿತಿ ಲಭ್ಯವಾಗಿತ್ತು.

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಯಾವುದಕ್ಕೆ ಎಷ್ಟು ಖರ್ಚು?

ಒಟ್ಟು ರೂ.36 ಕೋಟಿ ವೆಚ್ಚದಲ್ಲಿ ಸಿದ್ಧಗೊಂಡಿರುವ ಯೋಜನೆಯಲ್ಲಿ ಈಗಾಗಲೇ ರೂ.5 ಕೋಟಿಯಷ್ಟು ಕಚೇರಿ ಸ್ಥಾಪನೆಗಾಗಿ ಮೀಸಲು ಇಡಲಾಗಿದೆ. ಜೊತೆಗೆ ರೂ.3 ಕೋಟಿ ವೆಚ್ಚದಲ್ಲಿ ಹೊಸ ಆ್ಯಪ್ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ. ಇನ್ನು ರೂ.4 ಕೋಟಿಯಷ್ಟು ಆಡಳಿತ ವಿಭಾಗದ ನಿರ್ವಹಣೆಗಾಗಿ ಮತ್ತು ರೂ.6 ಕೋಟಿ ಜಾಹೀರಾತಿಗಾಗಿ ವೆಚ್ಚಮಾಡಲಾಗುತ್ತಿದ್ದು, ಉಬರ್ ಮತ್ತು ಓಲಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡಲು ಬೃಹತ್ ಯೋಜನೆ ಸಿದ್ಧಗೊಳಿಸಲಾಗುತ್ತಿದೆ ಎಂದು ಹೇಳಿದ್ದರು.

MOST READ: ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಮೊದಲ ಹಂತದಲ್ಲಿ 10 ಸಾವಿರ ಟ್ಯಾಕ್ಸಿಗಳಿಂದ ಸೇವೆ

ಹೊಸ ಯೋಜನೆ ಆರಂಭವಾಗುತ್ತಿದ್ದಂತೆ ಮೊದಲ ಹಂತದಲ್ಲಿ 10 ಸಾವಿರ ಟ್ಯಾಕ್ಸಿಗಳಿಂದ ಬೆಂಗಳೂರು ನಗರದಲ್ಲಿ ಸೇವೆ ಆರಂಭಗೊಳಿಸಲಾಗುತ್ತಿದೆ. ಜೊತೆಗೆ ನೂತನ ಕಂಪನಿಗೆ ಆರಂಭದಲ್ಲಿ ಯಾವುದೇ ಆರ್ಥಿಕ ಸಂಕಷ್ಟ ಎದುರಾಗದಂತೆ ಯೋಜನೆ ಕೈಗೊಳ್ಳಲಾಗುತ್ತದೆ ಎಂದು ಕೂಡಾ ಬಹಿರಂಗ ಪಡೆಸಿದರು.

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಹೆಚ್‍ಡಿಕೆ ಕ್ಯಾಬ್ಸ್ ಬಂದರೆ ಸ್ಥಳೀಯ ಟ್ಯಾಕ್ಸಿ ಚಾಲಕರುಗಳಿಗೆ ಹೆಚ್ಚಿನ ಆಧಾಯವನ್ನು ಪಡೆಯಬಹುದಾಗಿತ್ತು. ಈ ಯೋಜನೆಯನ್ನೆ ನಂಬಿಕೊಂಡು ಹಲವಾರು ಟ್ಯಾಕ್ಸಿ ಚಾಲಕರು ಮತ್ತು ಉದ್ಯಮಿಗಳು ಬಂಡವಾಳ ಹಾಕಲು ಸಹ ಮುಂದಾಗಿದ್ದರು. ಆದರೆ ಯಾರಿಂದ ಬಂಡವಾಳ ಪಡೆಯಬೇಕು ಎಂಬ ನಿರ್ಧರಿಸಲಾಗಲಿಲ್ಲ.

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಪ್ರತಿ ಕಿ.ಮಿ ದರ ನಿಗದಿ..!

ಮಿನಿ ಕ್ಯಾಬಿಗೆ ಕಿಲೋಮೀಟರ್ ಗೆ 10 ರೂ. ಹಾಗೂ ಪ್ರೈಮ್ ಕ್ಯಾಬಿಗೆ ಕಿಲೋಮೀಟರ್ ಗೆ 12 ರೂ. ದರ ನಿಗದಿ ಪಡಿಸಲಾಗಿದೆ. ಮೊದಲ 4 ಕಿಲೋಮೀಟರಿಗೆ ಇಂತಿಷ್ಟು ಎಂಬ ಯಾವುದೇ ಕಂಡೀಷನ್ ಗಳು ಇಲ್ಲಿರುವುದಿಲ್ಲ ಎಂದು ಹೇಳಲಾಗಿತ್ತು.

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ

ಹೆಚ್‌ಡಿಕೆ ಆ್ಯಪ್‌ನಲ್ಲಿ ಕಂಪನಿಗೆ ಕೇವಲ 5ರಷ್ಟು ಕಮೀಷನ್ ಪಾವತಿಸಲು ನಿರ್ಧರಿಸಲಾಗಿದ್ದು, ಇದರಿಂದ ಪ್ರಯಾಣದ ವೆಚ್ಚ ತಗ್ಗಲಿದೆ. ಹೀಗಾಗಿ ಇದೇ ಲಾಭದಲ್ಲಿ ಪ್ರಯಾಣಿರಿಗೆ ಮಿನರಲ್ ವಾಟರ್, ಚಾಕೊಲೇಟ್ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸುವ ಭರವಸೆ ನೀಡಿತ್ತು.

MOST READ: ಭಾರತದಲ್ಲಿ 20 ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಹೆಚ್‍ಡಿಕೆ ಕ್ಯಾಬ್ಸ್ 'ಟೈಗರ್ ಕ್ಯಾಬ್' ಲಾಂಚ್ ಆಗುತ್ತಾ ಇಲ್ವಾ.?

ಇಷ್ಟೆಲ್ಲಾ ಸೌಕರ್ಯಗಳನ್ನು ಹೊತ್ತು ಬಿಡುಗಡೆಯಾಗಬೇಕಿದ್ದ ಹೆಚ್‍ಡಿಕೆ ಕ್ಯಾಬ್ಸ್ ಹೇಳಿಕೆಯನ್ನು ನೀಡಿ ಎರಡೂ ವರ್ಶಗಳಾದರೂ ಸಹ ಇನ್ನು ಬಿಡುಗಡೆಯಾಗಲಿಲ್ಲ. ಇದಕ್ಕೆ ಸರಿಯಾದ ಕಾರಣಗಳೂ ಸಹ ಇನ್ನು ದೊರೆತಿಲ್ಲ. ಆಷ್ಟೆ ಅಲ್ಲದೆಯೆ ಬಿಡುಗಡೆ ಮಾಡಲಾಗಿದ್ದ 'ನಮ್ಮ ಟೈಗರ್' ಆಪ್ ಸಹ ಕಣ್ಮರೆಯಾಗಿದೆ. ಹಾಗಾದರೆ ಟ್ಯಾಕ್ಸಿ ಚಾಲಕರು ಮತ್ತು ರಾಜ್ಯದ ಪ್ರಜೆಗಳ ಜೀವನದಲ್ಲಿ ಒಂದು ಹೊಸ ಬೇಳಕಿನಂತೆ ಬರಬೇಕಾದ ಹೆಚ್‍ಡಿಕೆ ಕ್ಯಾಬ್ ಅನ್ನು ಜನರು ಮರೆಯಬೇಕೆ..?

Most Read Articles

Kannada
English summary
HD Kumaraswamy Cab Service Bangalore Hdk Cabs Not Runnig Since 2017 Details. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more