ಮಾರುತಿ ಸುಜುಕಿಗೆ ಪ್ರತಿಸ್ಫರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಸೆಡಾನ್..!

ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ಭಾರತದಲ್ಲಿ ಭಾರೀ ಜನಪ್ರಿಯತೆ ಅಲ್ಲದ್ದಿದ್ದರೂ ಕಾರು ಮಾರಾಟದಲ್ಲಿ ಒಂದು ಹಂತದ ಯಶಸ್ವಿ ಸಾಧಿಸಿದೆ ಎನ್ನಬಹುದು. ಆದರೂ ಕೂಡಾ ಇತರೆ ಕಾರು ಉತ್ಪಾದನಾ ಸಂಸ್ಥೆಯೊಂದಿಗೆ ಹೋಲಿಕೆ ಮಾಡಿದಾಗ ಕಾರು ಮಾರಾಟದಲ್ಲಿ ಹಿಂದೆ ಬಿದ್ದಿರುವ ರೆನಾಲ್ಟ್ ಸಂಸ್ಥೆಗೆ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಕೆಲವು ಹೊಸ ನಮೂನೆಯ ಕಾರುಗಳು ಮತ್ತಷ್ಟು ಜನಪ್ರಿಯತೆ ತಂದುಕೊಡುವ ನೀರಿಕ್ಷೆಯಲ್ಲಿವೆ.

ಮಾರುತಿ ಸುಜುಕಿಗೆ ಪ್ರತಿಸ್ಫರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಸೆಡಾನ್..!

ಹೌದು, ರೆನಾಲ್ಟ್ ಇಂಡಿಯಾ ಸಂಸ್ಥೆಯು ಕಾರು ಮಾರಾಟ ವಿಭಾಗದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಐದು ವಿನೂತನ ವಿನ್ಯಾಸದ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದೆ. ಈ ಕುರಿತು ಮಾಧ್ಯಮ ಸಂಸ್ಥೆಗಳೊಂದಿಗೆ ಭವಿಷ್ಯ ಯೋಜನೆಗಳ ಬಗೆಗೆ ಮಾಹಿತಿ ಹಂಚಿಕೊಂಡಿರುವ ರೆನಾಲ್ಟ್ ಇಂಡಿಯಾ ಹಿರಿಯ ಅಧಿಕಾರಿಯೊಬ್ಬರು, ಭಾರತದಲ್ಲಿ ಬಿಡುಗಡೆಯಾಗುವ ಹೊಸ ಕಾರುಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಮಾರುತಿ ಸುಜುಕಿಗೆ ಪ್ರತಿಸ್ಫರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಸೆಡಾನ್..!

ರೆನಾಲ್ಟ್ ಇಂಡಿಯಾ ಸಂಸ್ಥೆಯು ಸದ್ಯ ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಡ್, ಡಸ್ಟರ್, ಕ್ಯಾಪ್ಚರ್ ಮತ್ತು ಲೊಡ್ಜಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಕ್ವಿಡ್ ಮತ್ತು ಡಸ್ಟರ್ ಆವೃತ್ತಿಗಳನ್ನು ಹೊರತುಪಡಿಸಿ ಕ್ಯಾಪ್ಚರ್ ಮತ್ತು ಲೊಡ್ಜಿ ಕಾರುಗಳಿಗೆ ಅಷ್ಟಾಗಿ ಬೇಡಿಕೆಯಿಲ್ಲ.

ಮಾರುತಿ ಸುಜುಕಿಗೆ ಪ್ರತಿಸ್ಫರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಸೆಡಾನ್..!

ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಕಂಪ್ಯಾಕ್ಟ್ ಎಸ್‌ಯುವಿ, ಕಂಪ್ಯಾಕ್ಟ್ ಸೆಡಾನ್ ಕಾರುಗಳ ವಿಭಾಗದ ಮೇಲೆ ಹೆಚ್ಚಿನ ಗಮನ ಹರಿಸಿರುತ್ತಿರುವ ರೆನಾಲ್ಟ್ ಸಂಸ್ಥೆಯು, ಮುಂದಿನ 2 ವರ್ಷಗಳ ಅವಧಿಯಲ್ಲಿ ಒಟ್ಟು 5 ವಿವಿಧ ಮಾದರಿಯ ಹೊಸ ಕಾರು ಆವೃತ್ತಿಗಳನ್ನು ಹೊರತರುವ ಯೋಜನೆಯಲ್ಲಿದೆ.

ಮಾರುತಿ ಸುಜುಕಿಗೆ ಪ್ರತಿಸ್ಫರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಸೆಡಾನ್..!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಧ್ಯಮ ಗಾತ್ರದ ಕಂಪ್ಯಾಕ್ಟ್ ಎಸ್‌ಯುವಿ, ಕಂಪ್ಯಾಕ್ಟ್ ಸಡಾನ್ ಮತ್ತು ಎಂಪಿವಿ ಕಾರುಗಳಿಂತಲೂ ಕಡಿಮೆ ಬೆಲೆಯಲ್ಲಿ ಹೊಸ ಕಾರುಗಳು ಬಿಡುಗಡೆಯಾಗುವ ಸುಳಿವು ನೀಡಿದ್ದು, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಎರ್ಟಿಗಾ, ಡಿಜೈರ್, ಮಹೀಂದ್ರಾ ಎಕ್ಸ್‌ಯುವಿ300, ಮರಾಜೊ, ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿಯಾಗಿ ರೆನಾಲ್ಟ್ ಹೊಸ ಕಾರುಗಳನ್ನು ಪರಿಚಯಿಸುತ್ತಿದೆ.

ಮಾರುತಿ ಸುಜುಕಿಗೆ ಪ್ರತಿಸ್ಫರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಸೆಡಾನ್..!

ಇನ್ನು ರೆನಾಲ್ಟ್ ಸಂಸ್ಥೆಯು ಎಂಪಿವಿ ವಿಭಾಗದಲ್ಲಿ ಬಿಡುಗಡೆ ಮಾಡಲಾಗುತ್ತಿರುವ ಟ್ರೈಬರ್ ಕಾರಿನ ಬಗೆಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆ ಮಾಡುತ್ತಿರುವುದು ಟೂರಿಸ್ಟ್ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

MOST READ: ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಬಿಎಸ್-6 ಮಾರುತಿ ಆಲ್ಟೋ 800 ಫೇಸ್‌ಲಿಫ್ಟ್

ಮಾರುತಿ ಸುಜುಕಿಗೆ ಪ್ರತಿಸ್ಫರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಸೆಡಾನ್..!

ಹೊಸ ಟ್ರೈಬರ್ ಕಾರು 1.2-ಲೀಟರ್ ಪೆಟ್ರೋಲ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದ್ದು, 2019ರ ಜುಲೈ ಹೊತ್ತಿಗೆ ಬಿಡುಗಡೆಯಾಗಲಿರುವ ಹೊಸ ಕಾರಿನ ಬೆಲೆಯು ರೂ. 7 ಲಕ್ಷದಿಂದ ರೂ. 9.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಮಾರುತಿ ಸುಜುಕಿಗೆ ಪ್ರತಿಸ್ಫರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಸೆಡಾನ್..!

ಇನ್ನುಳಿದಂತೆ ಬಿಡುಗಡೆಯಾಗುವ ಹೊಸ ಕಾರುಗಳ ಅಧಿಕೃತ ಹೆಸರನ್ನು ಬಹಿರಂಗಪಡಿಸದ ರೆನಾಲ್ಟ್ ಸಂಸ್ಥೆಯು ಕೋಡ್‌ನೆಮ್ ಆಧಾರದ ಮೇಲೆ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸುತ್ತಿದ್ದು, ಕ್ವಿಡ್ ಫೇಸ್‍‌ಲಿಫ್ಟ್, ಡಸ್ಟರ್ ಫೇಸ್‌ಲಿಫ್ಟ್, ಹೆಚ್‌ಬಿಸಿ(ಕಂಪ್ಯಾಕ್ಟ್ ಎಸ್‌ಯುವಿ) ಮತ್ತು ಎಲ್‌ಬಿಎ (ಕಂಪ್ಯಾಕ್ಟ್ ಸೆಡಾನ್) ಆವೃತ್ತಿಗಳನ್ನು ಬಿಡುಗಡೆಗೊಳಿಸುತ್ತಿದೆ.

MOST READ: ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಮಾರುತಿ ಸುಜುಕಿಗೆ ಪ್ರತಿಸ್ಫರ್ಧಿಯಾಗಿ ರೆನಾಲ್ಟ್‌ನಿಂದ ಹೊಸ ಕಂಪ್ಯಾಕ್ಟ್ ಸೆಡಾನ್..!

ಒಟ್ಟಿನಲ್ಲಿ ಹೊಸ ಕಾರುಗಳ ಮೂಲಕ ತನ್ನ ಕಾರು ಉತ್ಪನ್ನಗಳ ಮಾರಾಟ ಸರಣಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಡುತ್ತಿರುವ ರೆನಾಲ್ಟ್ ಸಂಸ್ಥೆಯು ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ದೇಶಿಯವಾಗಿ ಕಾರು ಮಾರಾಟ ಪ್ರಮಾಣದಲ್ಲಿ ಹೆಚ್ಚಿನ ಪಾಲು ತನ್ನದಾಗಿಸಿಕೊಳ್ಳುವತ್ತ ಗಮನಹರಿಸುತ್ತಿದೆ.

Source:Auto Car India

Article Published On: Wednesday, April 24, 2019, 11:13 [IST]
English summary
Renault Launching Compact Sedan In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+