ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

2019ರ ಆಗಸ್ಟ್ ತಿಂಗಳಿನಲ್ಲಿ ಬಹುತೇಕ ವಾಹನ ತಯಾರಕ ಸಂಸ್ಥೆಗಳು ತಮ್ಮ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲಿದೆ. ಆ ಸಾಲಿನಲ್ಲಿ ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಎಕ್ಸ್ಎಲ್6, ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಮತ್ತು 2019 ಬಿಎಂಡಬ್ಲ್ಯೂ 3 ಸಿರೀಸ್ ಸೇರಿದಂತೆ ಇನ್ನು ಹಲವಾರು ಬಹುನಿರೀಕ್ಷಿತ ವಾಹನಗಳು ಬಿಡುಗಡೆಯಾಗಲಿದ್ದು, ರೆನಾಲ್ಟ್ ಸಂಸ್ಥೆಯು ಟ್ರೈಬರ್ ಎಂಬ ಎಂಪಿವಿ ಕಾರನ್ನು ಸಹ ಬಿಡುಗಡೆ ಮಾಡಲಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

ಬಿಡುಗಡೆಯ ದಿನಾಂಕ ಮತ್ತು ಬುಕ್ಕಿಂಗ್

ರೆನಾಲ್ಟ್ ಸಂಸ್ಥೆಯು ಇದೇ ತಿಂಗಳ 28ರಂದು ತಮ್ಮ ಟ್ರೈಬರ್ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದ್ದು, ಇದೀಗ ಕಾರಿನ ಉತ್ಪಾದನೆಯನ್ನು ಕೂಡಾ ಪ್ರಾರಂಭಿಸಲಾಗಿದೆ. ಇವುಗಳ ಜೊತೆಗೆ ಸಂಸ್ಥೆಯು ಹೊಸ ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆಗಸ್ಟ್ 17ರಿಂದ ಪ್ರಾರಂಭಿಸಲಿದ್ದು, ಆಗಸ್ಟ್ 17ರಿಂದ ಆಸಕ್ತ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ರೆನಾಲ್ಟ್ ಡೀಲರ್‍‍ನ ಬಳಿ ರೂ. 11,000 ನೀಡಿ ಪ್ರೀ-ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಬುಕ್ಕಿಂಗ್ ಮಾಡಿಕೊಳ್ಳುವುದಕ್ಕು ಮುನ್ನ ರೆನಾಲ್ಟ್ ಟ್ರೈಬರ್ ಬಗೆಗಿನ ಟಾಪ್ ಸಂಗತಿಗಳನ್ನು ಈ ಲೇಖನದಲ್ಲಿ ಪಡೆಯಿರಿ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

ಲುಕ್

ರೆನಾಲ್ಟ್ ಟ್ರೈಬರ್ ಕಾರು ಅನಾವರಣಗೊಂಡಾಗ ಆರೆಂಜ್ ಮತ್ತು ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಕಾಣಿಸಿಕೊಂಡಿತ್ತು. ರೆನಾಲ್ಟ್ ಟ್ರೈಬರ್ ಕಾರಿನ ವಿನ್ಯಾಸಕ್ಕೆ ಬಂದಲ್ಲಿ ಸಂಸ್ಥೆಯ ಲಾಡ್ಜಿ, ಕ್ವಿಡ್ ಮತ್ತು ಡಸ್ಟರ್ ಕಾರುಗಳ ಮಿಶ್ರಣ ಹೊಂದಿರುವ ಹಾಗಿದೆ. ಈ ಕಾರು 182ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರು ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್ ಮತ್ತು ಎಲ್ಇಡಿ ಡಿಆರ್‍ಎಲ್ ಮತ್ತು ರೂಫ್ ರೈಲ್ಸ್ ಅನ್ನು ಪಡೆದುಕೊಂಡು ಸ್ಪೋರ್ಟಿ ಲುಕ್ ಅನ್ನು ಪಡ್ಕೊಂಡಿದೆ ಅಂತಾನೇ ಹೆಳ್ಬೋದು. ಇಷ್ಟೆ ಅಲ್ಲದೆಯೆ ಈ ಕಾರು ಬಾಡಿ ಕ್ಲೇಡಿಂಗ್ ಮತ್ತು ಸ್ಕಿಡ್ ಪ್ಲೆಟ್ ಅನ್ನು ಪಡೆದು ಮತ್ತಶ್ಟು ಸ್ಪೋಟಿ ಲುಕ್ ಅನ್ನು ಹೊಂದಿದೆ. ಕಾರಿನಲ್ಲಿ 5 ಸ್ಪೋಕ್ ಡಿಸನ್‍‍ನೊಂದಿಗೆ ಡ್ಯುಯೆಲ್ ಟೋನ್ ಶೇಡ್ ಅನ್ನು ಹೊಂದಿರಲಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

ಆಧೂನಿಕ ಕ್ಯಾಬಿನ್

ರೆನಾಲ್ಟ್ ಟ್ರೈಬರ್ ಕಾರಿನ ಹೈಲೈಟ್ ಎಂದರೆ ಅದು ಆಧೂನಿಕ ಕ್ಯಾಬಿನ್. ಹಾಗು ಇದರಲ್ಲಿ ನೀಡಲಾದ ಕ್ಯಾಬಿನ್ ಅನ್ನು ಸುಮಾರು 100 ಬಗೆಯಲ್ಲಿ ಹೊಂದಿಸಬಹುದು. ಮತ್ತು ಈ ಕಾರಿನಲ್ಲಿ ಮೂರನೆಯ ಸಾಲಿನಲ್ಲಿರುವ ಸೀಟ್‍‍ಗಳನ್ನು ಸಂಪೂರ್ಣವಾಗಿ ತೆಗೆದುಕೊಳ್ಳುವ ಅವಕಾಶವಿದ್ದು, ಹೀಗೆ ಮಾಡಿದ್ದಲ್ಲು 625 ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ಪಡೆಯಬಹುದಾಗಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

ಹಾಗೆಯೆ ಈ ಕಾರಿನಲ್ಲಿರುವ ಎರಡನೆಯ ಸಾಲಿನಲ್ಲಿನ ಆಸನಗಳನ್ನು ಸಹ ಒರಗಿಸಬಹಾಗಿದೆ. ಕ್ಯಾಬಿನ್‍ನ ಡಿಸೈನ್ ಮತ್ತು ಫೀಚರ್‍‍ಗಳ ಬಗ್ಗೆ ಹೇಳುವುದಾದರೆ ಈ ಕಾರು ಡ್ಯುಯೆಲ್ ಟೋನ್ ಡ್ಯಾಶ್‍ಬೋರ್ಡ್, ಪವರ್ ಸ್ಟೀರಿಂಗ್ ಮತ್ತು ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಸಹಕರಿಸುವ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ. ಇವುಗಳಲ್ಲದೆಯೆ ಕೂಲ್ಡ್ ಕಪ್ ಹೋಲ್ಡರ್ಸ್, ವಸ್ತುಗಳನ್ನು ಇರಿಸಿಕೊಳ್ಳಲು ಜಾಗ ಮತ್ತು ಒಟ್ಟಾರೆಯಾಗಿ 4 ಏರ್‍‍ಬ್ಯಾಗ್‍‍ಗಳನ್ನು ಪಡೆದಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

ಕಾರಿನ ಉದ್ದಳತೆ

ಅಗ್ಗದ ಬೆಲೆಯಲ್ಲಿ ಮಾರಾಟವಾಗಲು ದೇಶಿಯ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ರೆನಾಲ್ಟ್ ಟ್ರೈಬರ್ ಎಂಪಿವಿ ಕಾರು 3990ಎಂಎಂ ಉದ್ದ, 1739ಎಂಎಂ ಅಗಲ, 1643ಎಂಎಂ ಎತ್ತರ, 2636ಎಂಎಂ ವ್ಹೀಲ್ ಬೇಸ್ ಮತ್ತು 40 ಲೀಟರ್‍‍ನ ಫ್ಯುಯೆಲ್ ಟ್ಯಾಂಕ್ ಅನ್ನು ಹೊಂದಿರಲಿದ್ದು, 947 ಕಿಲೋಗ್ರಾಂನ ತೂಕವನ್ನು ಪಡೆದಿರಲಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

ಸೇಫ್ಟಿ ಫೀಚರ್ಸ್

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನಲ್ಲಿ ಮೇಲೆ ಹೇಳಿರುವ ಹಾಗೆ 4 ಏರ್‍‍ಬಾಗ್ಸ್, ಆಟೋಮ್ಯಾತಿಕ್ ಡೋರ್ ಅನ್‍‍ಲಾಕ್ಸ್, ಸೈಡ್ ಇಂಪ್ಯಾಕ್ಟ್ ಬೀಮ್ಸ್, ಕ್ರಂಪಲ್ ಜೋನ್ಸ್ ಮತ್ತು ಕೊಲಾಪ್ಸಿಬಲ್ ಸ್ಟೀರಿಂಗ್ ಕಾಲಮ್ನ್ ಅನ್ನು ಹೊಂದಿರಲಿದೆ. ಇಷ್ಟೆ ಅಲ್ಲದೆಯೆ ಸೈಡ್-ಇಂಪ್ಯಾಕ್ಟ್ ಮತ್ತು ಫ್ರಂಟ್ ಆಫ್‌ಸೆಟ್ ಇಂಪ್ಯಾಕ್ಟ್ ಕ್ರ್ಯಾಶ್ ಪರೀಕ್ಷೆಗಳಿಗೆ ಈ ಕಾರು ಅರ್ಹತೆ ಪಡೆದಿದೆ. ಎಬಿಎಸ್, ಟ್ವಿನ್ ಏರ್‍‍ಬ್ಯಾಗ್ಸ್, ಸ್ಪೀಡ್ ಅಲರ್ಟ್ಸ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಎಂಬ ಫೀಚರ್‍‍ಗಳನ್ನು ಕಾರಿನ ಎಲ್ಲಾ ವೇರಿಯೆಂಟ್‍‍ಗಳಲ್ಲಿ ನೀಡಲಾಗಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

ಎಂಜಿನ್

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರು 1.0 ಲೀಟರ್ 3 ಸಿಲೆಂಡರ್ ನ್ಯಾಚುರೆಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಸಹಾಯದಿಂದ 72 ಬಿಹೆಚ್‍ಪಿ ಮತ್ತು 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ರೆನಾಲ್ಟ್ ಸಂಸ್ಥೆಯು ಈ ಮೊದಲೇ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವುದಿಲ್ಲವೆಂದ ಕಾರಣ ಈ ಕಾರು ಡೀಸೆಲ್ ಮಾದರಿಯಲ್ಲಿ ದೊರೆಯುವುದಿಲ್ಲ.

MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

ಬೆಲೆ

ಸಬ್-4 ಮೀಟರ್ ಎಂಪಿವಿ ಕಾರಾದ ಕಾರಣ ರೆನಾಲ್ಟ್ ಟ್ರೈಬರ್ ಅಗ್ಗದ ಬೆಲೆಯಲ್ಲಿ ಮಾರಾಟವಾಗಲಿದ್ದು, ಮಾಹಿತಿಗಳ ಪ್ರಕಾರ ಎಕ್ಸ್ ಶೋರುಂ ಪ್ರಕಾರ ರೂ. 4.5 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಳ್ಳಲಿದೆ. ಈ ಕಾರು ಕ್ವಿಡ್ ಕಾರಿನಲ್ಲಿ ಬಳಸಲಾದ ಕಡಿಮೆ ವೆಚ್ಚ ಸಿಎಂಎಫ್-ಎ ಪ್ಲಾಟ್‍‍ಫಾರ್ಮ ಅನ್ನು ನೀಡಲಾಗುತ್ತಿದ್ದು, ರೆನಾಲ್ಟ್ ಮತ್ತು ನಿಸ್ಸಾನ್ ಸಂಸ್ಥೆಯಲ್ಲಿನ ಉತ್ಪಾದನ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಉತ್ಪಾದನೆ ಶುರು - ಆಗಸ್ಟ್ 17ರಿಂದ ಬುಕ್ಕಿಂಗ್ ಪ್ರಾರಂಭ

ಎದುರಾಳಿಗಳು

ರೆನಾಲ್ಟ್ ಟ್ರೈಬರ್ ಎಮ್ಪಿವಿ ಕಾರು ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಕಾರಣ ಅದೇ ಬೆಲೆಯನ್ನು ಹೊಂದಿರುವ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ಕಾರುಗಳಿಗೆ ಪೈಪೋಟಿ ನೀಡಲಿದ್ದು, ಎಂಪಿವಿ ಕಾರುಗಳ ಬಗ್ಗೆ ಹೇಳುವುದಾದ್ರೆ ದಟ್ಸನ್ ಗೋ+ ಕಾರಿಗೂ ಸಹ ಪೈಪೋಟಿ ನೀಡಲಿದೆ.

Most Read Articles

Kannada
English summary
Renault Triber Bookings Launch Date Confirmed-All Details Explained. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X