ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಕಷ್ಟ ಪಟ್ಟು ಕೆಲಸ ಮಾಡಿ ಹಣ ಸಂಪಾದನೆ ಮಾಡುವವರು ಒಂದು ಕಡೆಯಾದರೆ ಸಾಹಸಿಮಯ ವಿಡಿಯೋಗಳನ್ನು ಮಾಡಿ ಅದರಿಂದ ಬರುವ ವೀಕ್ಷಣೆಯಿಂದ ಹಣ ಸಂಪಾದನೆ ಮಾಡುವವರು ಮತ್ತೊಂದು ಕಡೆ. ತಾವು ಮಾಡಿದ ವಿಡಿಯೋಗಳಿಗೆ ಹೆಚ್ಚು ವೀಕ್ಷಣೆ ಬರಲಿ ಮತ್ತು ಅದರಿಂದ ಭಾರೀ ಮೊತ್ತದ ಹಣಗಳಿಸುವ ಉದ್ದೇಶದಿಂದ ಎಂತಹ ದುಸ್ಸಾಹಸವನ್ನಾದರೂ ಮಾಡಲು ಮುಂದಾಗುವ ಮಂದಿ ನಮ್ಮಲ್ಲಿದ್ದಾರೆ. ಇಂದು ನಾವು ಹೇಳಲು ಹೊರಟಿರುವ ಸುದ್ದಿ ಕೂಡಾ ಅಂತದ್ದೆ. ಈತ ಮಾಡಿದ ಈ ಹುಚ್ಚಾಟಕ್ಕೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ರೈಲ್ವೇ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಕೆಲವೊಮ್ಮೆ ತಾವು ಮಾಡಿದ ವಿಡಿಯೋಗಳಿಗೆ ಹೆಚ್ಚು ಲೈಕ್ಸ್ ಮತ್ತು ವ್ಯೂಸ್ ಬರಲಿ ಎಂದು ಹುಚ್ಚಾಟಗಳನ್ನು ಮಾಡಿ ಪ್ರಾಣ ಕಳೆದುಕೊಂಡವರ ಬಗ್ಗೆ ನಾವೀಗಾಗಲೇ ಹಲವಾರು ಬಾರಿ ಕೇಳಿದ್ದೆವೆ. ಆಂದ್ರಪ್ರದೇಶದ ಚಿತ್ತೂರಿನ ಸಮೀಪದಲ್ಲಿರುವ ಚೆಲ್ಲೂರು ಎಂಬ ಗ್ರಾಮದ ಬಿ.ಟೆಕ್ ವಿದ್ಯಾರ್ಥಿ ಕೊಂಗಾರಾ ರಾಮಿರೆಡ್ಡಿ ಮಾಡಿದ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಕ್ಷಣ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ರೈಲ್ವೇ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಯೂಟ್ಯೂಬ್‌ನಲ್ಲಿ ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲು ರಾಮಿರೆಡ್ದಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ತರಕಾರಿಗಳು, ಹಣ್ಣುಗಳು, ಕೋಳಿ ತುಂಡುಗಳು, ಆಟಿಕೆಗಳು, ಪಟಾಕಿ, ಸೈಕಲ್ ಚೈನ್ ಮತ್ತು ಇನ್ನಿತರೆ ವಸ್ತುಗಳೊಂದಿಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದ.

ರೈಲ್ವೇ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಹೊಸ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಅವರು ಇತ್ತೀಚೆಗೆ ತಮ್ಮ ಮೋಟಾರ್ಸೈಕಲ್ ಮತ್ತು ಎಲ್‍ಪಿಜಿ ಸಿಲಿಂಡರ್ ಅನ್ನು ರೈಲ್ವೆ ಟ್ರ್ಯಾಕ್‌ನಲ್ಲಿ ಇರಿಸಿದರು. ವೀಡಿಯೊಗಳು ವೈರಲ್ ಆದ ನಂತರ, ರೈಲ್ವೆ ಟ್ರ್ಯಾಕ್‌ನಲ್ಲಿ ಅವರು ಬಳಸಿದ ಬೈಕ್‌ನ ನೋಂದಣಿ ಸಂಖ್ಯೆಯ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ರೈಲ್ವೇ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ರೈಲ್ವೆ ಕಾಯ್ದೆ 1989 ರ ಸೆಕ್ಷನ್ 153 (ಉದ್ದೇಶಪೂರ್ವಕ ಕಾಯ್ದೆ ಅಥವಾ ಲೋಪದಿಂದ ರೈಲ್ವೆ ಮೂಲಕ ಪ್ರಯಾಣಿಸುವವರ ಸುರಕ್ಷತೆಗೆ ಅಪಾಯ ಉಂಟು ಮಾಡುವ) ಮತ್ತು 143 (ರೈಲ್ವೆಯ ಅತಿಕ್ರಮಣ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಿ ಟೆಕ್ ವಿದ್ಯಾರ್ಥಿ ಇತರರಿಂದ ಸ್ಫೂರ್ತಿ ಪಡೆದು ಒಂದು ವಿಡಿಯೋ ಮಾಡಿ ಪ್ರಚಾರ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ರೈಲ್ವೇ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಈತ ಅಪ್ಲೋಡ್ ಮಾಡಿದ ವೀಡಿಯೊಗಳು ವೈರಲ್ ಆದ ನಂತರ ಪೊಲೀಸರು ಈ ಘಟನೆಯ ಬಗ್ಗೆ ತಿಳಿದುಕೊಂಡರು ಮತ್ತು ಯುವಕನನ್ನು ಹುಡುಕಲು ಪ್ರಾರಂಭಿಸಿದರು. ಇದೇ ರೀತಿಯ ಘಟನೆಗಳ ಬಗ್ಗೆ ಪೊಲೀಸರು ಈ ಹಿಂದೆ ಲೋಕೋಮೋಟಿವ್ ಚಾಲಕರಿಂದ ದೂರುಗಳನ್ನು ಸ್ವೀಕರಿಸಿದ್ದರು ಆದರೆ ಅವರಿಗೆ ಯಾವುದೇ ಪುರಾವೆಗಳು ಸಿಗಲಿಲ್ಲ. ಆದಾಗ್ಯೂ, ವೀಡಿಯೊಗಳು ವೈರಲ್ ಆದ ನಂತರ, ಅವರು ಯುವಕರನ್ನು ಪತ್ತೆಹಚ್ಚಲು ಸಾಧ್ಯವಾಯಿತು.

ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲು ಆರೋಪಿಯು ರೈಲು ಹಳಿಗಳಲ್ಲಿ ಮೋಟಾರ್‍‍ಸೈಕಲ್ ಬಳಸಿದ್ದಾನೆ. ಆದಾಗ್ಯೂ, ಈತ ಅಪ್ಲೋಡ್ ಮಾಡಲಾಗಿದ್ದ ವೀಡಿಯೊಗಳನ್ನು ಚಾನಲ್‌ನಿಂದ ತೆಗೆದುಹಾಕಲಾಗಿದೆ. ಅಲ್ಲದೆ, ರೈಲು ಸ್ಥಳಕ್ಕೆ ಬರುವ ಮುನ್ನ ಬೈಕ್‌ ತೆಗೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಮೋಟಾರ್ ಸೈಕಲ್‌ನ ನೋಂದಣಿ ವಿವರಗಳು ಆತನನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದವು.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ರೈಲ್ವೇ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ರೈಲ್ವೆ ಹಳಿಯ ಮೇಲೆ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್ ಅನ್ನು ರೈಲೊಂದು ಗುದ್ದಿದ ದೃಶ್ಯ ಮತ್ತು ಅದು ಹಾರಿಹೋಗುವ ವೀಡಿಯೊ ತುಣುಕುಗಳನ್ನು ಹಲವಾರು ಇತರ ಚಾನೆಲ್‌ಗಳಲ್ಲಿ ಕಾಣಬಹುದಾಗಿದೆ. ರೈಲಿಗೆ ಡಿಕ್ಕಿ ಹೊಡೆದ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆಯೇ ಎಂಬುದು ತಿಳಿದಿಲ್ಲ. ಅದೃಷ್ಟವಶಾತ್, ಆ ಎಲ್‍‍ಪಿಜಿ ಸಿಲಿಂಡರ್ ಸ್ಪೋಟಗೊಳ್ಳಲಿಲ್ಲ, ಆ ಸಿಲಿಂಡರ್ ಸ್ಪೋಟಗೊಂಡಿದ್ದೇ ಆದಲ್ಲಿ ಪರಿಣಾಮವು ಭೀಕರವಾಗಿರುತ್ತಿತ್ತು.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ರೈಲ್ವೇ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಭಾರತದಲ್ಲಿ ರೈಲ್ವೆ ಹಳಿ ಸುರಕ್ಷತೆಯು ಅಷ್ಟು ಕಟ್ಟುನಿಟ್ಟಾಗಿಲ್ಲ ಎಂದು ಹೇಳಲಾಗುತ್ತಿದ್ದು, ಇದರಿಂದಾಗಿ ನಿರಂತರವಾಗಿ ಹಲವಾರು ಬಾರಿ ವಾಹನಗಳು ರೈಲ್ವೇ ಹಳಿಯ ಮೇಲೆ ಸಿಲುಕಿಕೊಳ್ಳುತ್ತವೆ ಮತ್ತು ಕೇವಲ ಇಂಚುಗಳಷ್ಟು ನಡುವೆ ಉಳಿತಾಯಗೊಳ್ಳುವ ಅನೇಕ ಕ್ರಾಸಿಂಗ್‌ಗಳಿವೆ. ಸಮಯ ಉಳಿತಾಯ ಮಾಡುವ ಸಲುವಾಗಿ ಜನರು ರೈಲ್ವೆ ಹಳಿ ದಾಟಲು ಧಾವಿಸುವಾಗ ಉಂಟಾದ ಅಪಘಾತಗಳು ಸಾಕಷ್ಟು ಇವೆ.

MOST READ: ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ರೈಲ್ವೇ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ರೈಲ್ವೆ ಹಳಿಗಳಲ್ಲಿ ಇಂತಹ ಕೃತ್ಯಗಳನ್ನು ಮಾಡುವುದು ಮತ್ತು ವಸ್ತುಗಳನ್ನು ರೈಲಿನ ಮುಂದೆ ಇಡುವುದು ಹೆಚ್ಚು ಅಪಾಯಕಾರಿ. ರೈಲಿಗೆ ಸಿಲುಕುವ ವಸ್ತುಗಳು ಹೆಚ್ಚಿನ ವೇಗದಲ್ಲಿ ಹಾರಬಲ್ಲವು ಮತ್ತು ಸುತ್ತಮುತ್ತಲಿನ ಜನರಿಗೆ ಹಾನಿಯನ್ನುಂಟುಮಾಡಬಲ್ಲದು. ಹೆಚ್ಚಿನ ವೇಗದಿಂದ ಬರುವ ರೈಲುಗಳನ್ನು ಕ್ರಾಸ್ ಮಾಡದಿರಿ ಮತ್ತು ಇಂತ ಹುಚ್ಚಾಟಗಳನ್ನು ಮಾಡಲು ಪ್ರಯತ್ನಿಸದಿರಿ.

More from DriveSpark

Article Published On: Monday, August 12, 2019, 14:52 [IST]
English summary
Youth Puts Bike And Gas Cylinder On Rail Track For Youtube Views Gets Arrested. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+