ಡ್ರೈವರ್‍‍ಲೆಸ್ ಪಾರ್ಕಿಂಗ್ ಕಾರಿನೊಂದಿಗೆ ಕಾಣಿಸಿಕೊಂಡ ಕ್ರಿಕೆಟ್ ದೇವರು

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕ್ರಿಕೆಟ್‍‍ನಿಂದ ನಿವೃತ್ತಿಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಹತ್ತು ಹಲವು ವಿಷಯಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಲೇ ಇದ್ದಾರೆ. ಇನ್ನೂ ಸಚಿನ್‍‍ರವರು ಕಾರುಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ.

ಡ್ರೈವರ್‍‍ಲೆಸ್ ಪಾರ್ಕಿಂಗ್ ಕಾರಿನೊಂದಿಗೆ ಕಾಣಿಸಿಕೊಂಡ ಕ್ರಿಕೆಟ್ ದೇವರು

ಮಾರುತಿ 800 ಕಾರಿನಿಂದ ಹಿಡಿದು, ಬಿ‍ಎಂ‍‍ಡಬ್ಲ್ಯು ಐ8, ಬಿ‍ಎಂ‍‍ಡಬ್ಲ್ಯು 750 ಎಲ್‍‍ಐ ಎಂ ಸ್ಪೋರ್ಟ್ ಹಾಗೂ ಬಿಎಂ‍‍‍ಡಬ್ಲ್ಯು ಎಂ5ಗಳವರೆಗೆ ಹಲವು ಕಾರುಗಳನ್ನು ಹೊಂದಿದ್ದಾರೆ. ದಿಗ್ಗಜ ಕ್ರಿಕೆಟಿಗ ಸಚಿನ್ ಟ್ವೀಟರ್‍‍ನಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಆ ವೀಡಿಯೊದಲ್ಲಿ ತಮ್ಮ ಬಳಿಯಿರುವ ಮೊದಲ ಡ್ರೈವರ್‍‍ಲೆಸ್ ಕಾರಿನ ಬಗ್ಗೆ ಹೇಳಿದ್ದಾರೆ.

ಡ್ರೈವರ್‍‍ಲೆಸ್ ಪಾರ್ಕಿಂಗ್ ಕಾರಿನೊಂದಿಗೆ ಕಾಣಿಸಿಕೊಂಡ ಕ್ರಿಕೆಟ್ ದೇವರು

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿನ್ ನನ್ನ ಕಾರ್ ಪಾರ್ಕ್ ಅನ್ನು ನನ್ನ ಗ್ಯಾರೇಜ್‍‍ನಲ್ಲಿ ವೀಕ್ಷಿಸಲು ರೋಮಾಂಚಕ ಅನುಭವವಾಗಿದೆ. ಮಿಸ್ಟರ್ ಇಂಡಿಯಾ ಅನಿಲ್ ಕಪೂರ್ ಹಿಡಿತ ಸಾಧಿಸಿದಂತೆ ಭಾಸವಾಯಿತು. ವಾರಾಂತ್ಯದ ಉಳಿದ ಭಾಗವು ನನ್ನ ಸ್ನೇಹಿತರೊಂದಿಗೆ ರೋಮಾಂಚನಕಾರಿಯಾಗಿರಲಿರುವ ಭರವಸೆಯಿದೆ ಎಂದು ಹೇಳಿದ್ದಾರೆ.

ಡ್ರೈವರ್‍‍ಲೆಸ್ ವಾಹನದ ಪಕ್ಕದಲ್ಲಿ ಕೆಂಪು ಬಣ್ಣದ ಬಿಎಂಡಬ್ಲ್ಯು ನಿಂತಿರುವುದನ್ನು ಕಾಣಬಹುದು. ಆದರೆ ಸಚಿನ್‍‍ರವರು ಯಾವ ಕಾರಿನಲ್ಲಿ ಕುಳಿತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ವೀಡಿಯೊದಲ್ಲಿ ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತಿರುವ ಸಚಿನ್‍‍ರವರನ್ನು ಕಾಣಬಹುದು.

ಡ್ರೈವರ್‍‍ಲೆಸ್ ಪಾರ್ಕಿಂಗ್ ಕಾರಿನೊಂದಿಗೆ ಕಾಣಿಸಿಕೊಂಡ ಕ್ರಿಕೆಟ್ ದೇವರು

ಡ್ರೈವರ್ ಇಲ್ಲದಿದ್ದರೂ ಕಾರು ಚಲಿಸುತ್ತಿದೆ ಎಂದು ಹೇಳುವ ಸಚಿನ್, ನಾನು ಮಿಸ್ಟರ್ ಇಂಡಿಯಾ ಪಕ್ಕದಲ್ಲಿ ಕುಳಿತಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಕಾರನ್ನು ಇಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

ಡ್ರೈವರ್‍‍ಲೆಸ್ ಪಾರ್ಕಿಂಗ್ ಕಾರಿನೊಂದಿಗೆ ಕಾಣಿಸಿಕೊಂಡ ಕ್ರಿಕೆಟ್ ದೇವರು

ಇದು ತಮ್ಮ ಬಳಿಯಿರುವ ಮೊದಲ ಡ್ರೈವರ್‍‍ಲೆಸ್ ಪಾರ್ಕಿಂಗ್ ಕಾರು ಎಂದು ಹೇಳುವ ಸಚಿನ್ ತನ್ನ ಗ್ಯಾರೇಜ್‌ನೊಳಗೆ ಕಾರು ನಿಲುಗಡೆ ಮಾಡುತ್ತಿರುವುದು ಅದ್ಭುತವಾದ ಅನುಭವವಾಗಿದೆ ಎಂದು ಹೇಳಿದ್ದಾರೆ.

ಡ್ರೈವರ್‍‍ಲೆಸ್ ಪಾರ್ಕಿಂಗ್ ಕಾರಿನೊಂದಿಗೆ ಕಾಣಿಸಿಕೊಂಡ ಕ್ರಿಕೆಟ್ ದೇವರು

41 ಸೆಕೆಂಡುಗಳ ಕ್ಲಿಪ್ ಹೊಂದಿರುವ ಈ ವೀಡಿಯೊಗೆ ನಲವತ್ತೆಂಟು ಸಾವಿರಕ್ಕೂ ವೀಕ್ಷಣೆಗಳು ಹಾಗೂ ಒಂಬತ್ತು ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಗಮನಿಸಬೇಕಾದ ಸಂಗತಿಯೆಂದರೆ, ಬಾಷ್ ಹಾಗೂ ಡೈಮ್ಲರ್ ಕಂಪೆನಿಗಳ ಸಹಭಾಗಿತ್ವದಲ್ಲಿ ಜರ್ಮನ್ ಎಂಜಿನಿಯರ್‌ಗಳು ವಿಶ್ವದ ಮೊಟ್ಟಮೊದಲ ಪೂರ್ಣ ಪ್ರಮಾಣದ ಆಟೋಮ್ಯಾಟಿಕ್ ಡ್ರೈವರ್‌ಲೆಸ್ ಪಾರ್ಕಿಂಗ್ ಅಭಿವೃದ್ದಿಪಡಿಸಿದ್ದಾರೆ ಎಂದು ಬಹಿರಂಗವಾದ ಕೆಲವೇ ದಿನಗಳಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಡ್ರೈವರ್‍‍ಲೆಸ್ ಪಾರ್ಕಿಂಗ್ ಕಾರಿನೊಂದಿಗೆ ಕಾಣಿಸಿಕೊಂಡ ಕ್ರಿಕೆಟ್ ದೇವರು

ಡ್ರೈವರ್‍‍ಲೆಸ್ ಸಿಸ್ಟಂ, ಕಾರುಗಳನ್ನು ಕಷ್ಟಕರವಾದ ಪಾರ್ಕಿಂಗ್ ಸ್ಥಳಗಳಲ್ಲಿ ಸುರಕ್ಷಿತವಾಗಿ ಪಾರ್ಕಿಂಗ್ ಮಾಡುತ್ತದೆ. ಸದ್ಯಕ್ಕೆ ಕಂಪನಿಗಳು ಸ್ಟಟ್‌ಗಾರ್ಟ್‌ನಲ್ಲಿರುವ ಮರ್ಸಿಡಿಸ್ ಬೆಂಜ್ ಮ್ಯೂಸಿಯಂ ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ಪ್ರಯೋಗಗಳನ್ನು ನಡೆಸುತ್ತಿವೆ, ಅಲ್ಲಿ ಸ್ಮಾರ್ಟ್‌ಫೋನ್ ಆ್ಯಪ್ ಮೂಲಕ ಸರ್ವಿಸ್‍‍ಗಳನ್ನು ನೀಡಲಾಗುತ್ತಿದೆ.

Most Read Articles

Kannada
English summary
Sachin Tendulkar with His First Driverless Parking Car - Read in kannada
Story first published: Saturday, August 3, 2019, 13:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X