ಅಧಿಕ ಸಾಮರ್ಥ್ಯ ಇರುವ ಬಿಎಸ್-6 ಡೀಸೆಲ್ ಎಂಜಿನ್ ಹೊತ್ತು ಬರಲಿದೆ ಟಾಟಾ ಕ್ಯಾಸಿನಿ (ಬಝರ್ಡ್)
ಮಾರ್ಚ್‍ನಲ್ಲಿ ನಡೆದ 2019ರ ಜೆನೆವಾ ಮೋಟಾರ್ ಶೋನಲ್ಲಿ ಟಾಟಾ ಮೋಟಾರ್ ಸಂಸ್ಥೆಯು ಮಾರಕ್ಟ್ಟೆಯಲ್ಲಿ ತಮ್ಮ 21ವರ್ಷದ ಸಂಪೂರ್ಣಗೊಳಿಸಿದ ಕಾರಣ ಹ್ಯಾರಿಯರ್ ಆಧಾರಿತ 7 ಸೀಟರ್ ಬಝರ್ಡ್ (ಕ್ಯಾಸಿನಿ), ಆಲ್‍ಟ್ರೋಜ್ ಪ್ರೀಮಿಯಂ ಹ್ಯಾಚ್‍ಬ್ಯಾಕ್, ಆಲ್‍ಟ್ರೋಜ್ ಇವಿ ಮತ್ತು ಹೆಚ್2ಎಕ್ಸ್ ಎಂಬ ಮೈಕ್ರೋ ಎಸ್‍ಯುವಿ ಕಾರುಗಳನ್ನು ಪ್ರದರ್ಶಿಸಲಾಯಿತು.

ಪ್ರದರ್ಶಿಸಿದ ಈ ನಾಲ್ಕು ಕಾರುಗಳಲ್ಲಿ ಆಲ್‍ಟ್ರೋಜ್ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಕಾರು ಇನ್ನೇನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಇನ್ನುಳಿದ ಕಾರುಗಳ ಬಿಡಿಗಡೆಯ ಅವಧಿಯ ಮಾಹಿತಿಗಾಗಿ ಕಾಯ್ದುನೋಡಬೇಕಿದೆ. ಅಂದ ಹಾಗೆ ಟಾಟಾ ಮೋಟಾರ್ಸ್ ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆ ಮಾಡಲಿರುವ ಬಝಾರ್ಡ್ ಕಾರಿಗೆ ಕೆಲವು ದಿನಗಳ ಹಿಂದಷ್ಟೆ ಕ್ಯಾಸಿನ್ನಿ ಎಂಬ ಹೆಸರನ್ನಿಡಲಿದ್ದು, ಇದೀಗ ಈ ಕಾರಿನ ಕುರಿತಾದ ಮತ್ತೊಂದು ಮಾಹಿತಿಯು ಬಹಿರಂಗಗೊಂಡಿದೆ.

ಎಂಜಿನ್ ಸಾಮರ್ಥ್ಯ
ಗಾಡಿವಾಡಿ ವರದಿ ಪ್ರಕಾರ ಟಾಟಾ ಬಝರ್ಡ್ ಕಾರುಗಳಲ್ಲಿ ಬಿಎಸ್6 ಆಧಾರಿತ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯ ಪಡೆದುಕೊಳ್ಳಲಿದೆ.

ಇದೀಗ ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಎಕ್ಸ್‌ಯುವಿ 500, ಜೀಪ್ ಕಂಪಾಸ್ ಮತ್ತು ಬಿಡುಗಡೆಗೊಳ್ಳಲಿರುವ ಎಂಜಿ ಹೆಕ್ಟರ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜುಗೊಳ್ಳುತ್ತಿರುವ ಟಾಟಾ ಕ್ಯಾಸಿನ್ನಿ ಕಾರು, ತನ್ನ ಎದುರಾಳಿಗಳಿಗಿಂತಲೂ ಗಾತ್ರದಲ್ಲಿ ಅಧಿಕವಾಗಿರಲಿದೆಯಂತೆ. ಅದು ಹೇಗೆ ಎಂದು ತಿಳಿಯಲು ಮತ್ತು ಎಷ್ಟು ವ್ಯತ್ಯಾಸ ಇರಲಿದೆ ಎಂದು ಕೆಳಗಿನ ಪಟ್ಟಿಯಲ್ಲಿ ತಿಳಿಯಿರಿ...

| Tata Buzzard | MG Hector | Mahindra XUV500 | |
| Length
| 4,661 mm | 4,655 mm | 4,585 mm |
| Width
| 1,894 mm | 1,835 mm | 1,890 mm |
| Height
| 1,786 mm | 1,760 mm | 1,785 mm |
| Wheelbase
| 2,741 mm | 2,750 mm | 2,700 mm |

ಸದ್ಯ ಮಾರುಕಟ್ಟೆಯಲ್ಲಿರುವ ಹೆಕ್ಸಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಬಝರ್ಡ್ ಕಾರು, 2,741-ಎಂಎಂ ನಷ್ಟು ವೀಲ್ಹ್ ಬೆಸ್ ಸೌಲಭ್ಯದೊಂದಿಗೆ ಹ್ಯಾರಿಯರ್ ಕಾರಿಗಿಂತ 62-ಎಂಎಂ ಉದ್ದವಾಗಿದೆ ಎನ್ನಲಾಗಿದೆ. ಇದು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಹಕಾರಿಯಾಗಲಿದ್ದು, ಎಸ್‌ಯುವಿ ಕಾರುಗಳ ಪ್ರಮುಖ ಆಕರ್ಷಣೆಯಾದ ಫುಟ್ ಬೋರ್ಡ್, ರೂಫ್ ರೈಲ್ಸ್ ಮತ್ತು 18-ಇಂಚಿನ ಅಲಾಯ್ ಚಕ್ರಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
MOST READ: ಹೊಸ ಮೋಟಾರ್ ವೆಹಿಕಲ್ ಕಾಯ್ದೆಗೆ ಸಿಕ್ತು ಗ್ರೀನ್ ಸಿಗ್ನಲ್ - ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ.?

ಮತ್ತೊಂದು ವಿಚಾರ ಅಂದ್ರೆ, ಹೊಸ ಕಾರು ಇಂಪ್ಯಾಕ್ಟ್ 2.0 ಡಿಸೈನ್ ಅಡಿ ನಿರ್ಮಾಣವಾಗಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍ಗಳಿಂದ ಸಜ್ಜುಗೊಂಡಿದೆ.
MOST READ: ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?

ಕಾರಿನ ವಿನ್ಯಾಸ
ಬಝರ್ಡ್ ಎಸ್‍ಯುವಿ ಕಾರು ಐಷಾರಾಮಿ ಒಳವಿನ್ಯಾಸದೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗೂ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ. ಜೊತೆಗೆ ಹೊಸ ಕಾರು ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಇದೇ ತಂತ್ರವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಇದನ್ನು ನಾವು ಕಾಣಬಹುದಾಗಿದೆ.
MOST READ: 2030ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟ ಸಂಪೂರ್ಣ ಬಂದ್.

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)
ಟಾಟಾ ಸಂಸ್ಥೆಯು ಸದ್ಯ ನಾಲ್ಕು ವಿವಿಧ ಮಾದರಿಯ ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸಿದ್ದು, ಇದರಲ್ಲಿ ಮೊದಲಿಗೆ ಆಲ್‌ಟ್ರೊಜ್ ಕಾರು ಬಿಡುಗಡೆಯಾದ ನಂತರ ಈ ವರ್ಷದ ಹಬ್ಬದ ಋತುವಿನಲ್ಲಿ ಬಝರ್ಡ್ ಕಾರು ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

ಮೂಲಗಳ ಪ್ರಕಾರ, ಬಝರ್ಡ್ ಕಾರು 2019ರ ಅಂತ್ಯದಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಎಸ್‌ಯುವಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.18 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.21 ಲಕ್ಷ ಬೆಲೆ ಹೊಂದಿರಬಹುದು ಎಂದು ನೀರಿಕ್ಷಿಸಲಾಗಿದೆ.


Click it and Unblock the Notifications








