ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕಲು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಎಲೆಕ್ಟ್ರಿಕ್ ವಾಹನ ಮೇಲಿನ ಜಿಎಸ್‌ಟಿ ತಗ್ಗಿಸಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಿರುವುದು ಹೊಸ ವಾಹನಗಳ ಮಾರಾಟದ ಮೇಲೆ ಪ್ರತಿಕೂಲಕರ ಪರಿಣಾಮ ಬೀರಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

ಆಟೋ ಉದ್ಯಮದಲ್ಲಿನ ಭಾರೀ ಬದಲಾವಣೆಯಿಂದಾಗಿ ಹೊಸ ವಾಹನಗಳ ಮಾರಾಟ ಪ್ರಮಾಣವು ಮಂದಗತಿಯಲ್ಲಿ ಸಾಗಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹಿನ್ನಡೆ ಅನುಭವಿಸಿವೆ. ಕಳೆದ ಒಂದು ದಶಕದ ಅವಧಿಯಲ್ಲೇ ಮೊದಲ ಬಾರಿಗೆ ಆಟೋ ಉತ್ಪಾದನಾ ವಲಯವು ಭಾರೀ ನಷ್ಟದ ಸುಳಿಯಲ್ಲಿ ಸಿಲುಕಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಯನ್ನೇ ತಾತ್ಕಲಿಕವಾಗಿ ಬಂದ್ ಮಾಡುತ್ತಿವೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

ಆಟೋ ಉತ್ಪಾದನಾ ನಿಯಮಾವಳಿಗಳಲ್ಲಿ ನಿರಂತರ ಬದಲಾವಣೆ ಮತ್ತು ಇಂಧನ ಆಧರಿತ ವಾಹನಗಳ ನೋಂದಣಿಯ ಮೇಲೆ ಗರಿಷ್ಠ ಪ್ರಮಾಣದ ಜಿಎಸ್‌ಟಿ ಶುಲ್ಕ ವಿಧಿಸುತ್ತಿರುವುದು ದೇಶಿಯ ಆಟೋ ಮಾರುಕಟ್ಟೆಯಲ್ಲಿ ಪ್ರತಿಕೂಲಕರ ವಾತಾವರಣ ಸೃಷ್ಠಿಯಾಗಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

ಕೇಂದ್ರ ಸರ್ಕಾರವು ಕಳೆದ ತಿಂಗಳ ಹಿಂದಷ್ಟೇ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಮೇಲೆ ಶೇ.18ರಷ್ಟಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇ.28ಕ್ಕೆ ಏರಿಕೆ ಮಾಡಲಾಗಿದ್ದು, ಹೊಸ ವಾಹನಗಳ ಬೆಲೆಯು ಸತತ ಏರಿಕೆಯಿಂದಾಗಿ ಮಾರಾಟ ಪ್ರಮಾಣವು ಸತತವಾಗಿ ಕುಸಿತ ಕಾಣುತ್ತಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

ಆದ್ರೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಿದ್ದರೂ ಸಹ ಬಹುತೇಕ ವಾಹನ ಖರೀದಿದಾರರು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲೆಯೇ ಹೆಚ್ಚುಅವಲಂಬಿತರಾಗಿರುವುದೇ ಹೊಸ ವಾಹನ ಮಾರಾಟದಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ. ಇದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವ SIAM(ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಚ್ಚರ್) ಸಂಸ್ಥೆಯು ಸಾಂಪ್ರಾದಾಯಿಕ ವಾಹನಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಈ ಹಿಂದಿನ ರೀತಿಯಲ್ಲೇ ಮುಂದುವರಿಸುವಂತೆ ಮನವಿ ಮಾಡಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

ಜೊತೆಗೆ ಸಾಂಪ್ರಾದಾಯಿಕ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಳದಿಂದ ಹೊಸ ವಾಹನ ಮಾರಾಟದ ಮೇಲೆ ಅಷ್ಟೇ ಅಲ್ಲದೇ ಆಟೋ ಉದ್ಯಮವನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಸಣ್ಣ ಉದ್ಯಮಗಳ ಮೇಲೂ ಇದು ಪರಿಣಾಮ ಬೀರುತ್ತಿರುವ ಬಗ್ಗೆ SIAM ಆತಂಕ ವ್ಯಕ್ತಪಡಿಸಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

ಇನ್ನು ಹೊಸ ವಾಹನಗಳ ಮಾರಾಟ ಪ್ರಮಾಣವು ಕಳೆದ ಕೆಲ ತಿಂಗಳಿನಿಂದ ದಾಖಲೆ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಕನಿಷ್ಠ ಪ್ರಮಾಣದ ವಾಹನಗಳನ್ನು ಮಾರಾಟ ಮಾಡಲು ಸಹ ಪರದಾಡುವಂತಾಗಿದೆ. ಈ ಹಿನ್ನೆಲೆ ಹೊಸ ವಾಹನಗಳ ಉತ್ಪಾದನೆಯು ಕುಂಟುತ್ತಾ ಸಾಗಿದ್ದು, ಆಟೋ ಉದ್ಯಮವನ್ನೇ ನೆಚ್ಚಿಕೊಂಡಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ.

MOST READ: 15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸದ್ಯ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಹರಸಾಹಸ ಪಡುತ್ತಿದ್ದು, ತಾತ್ಕಾಲಿಕವಾಗಿ ಹೊಸ ವಾಹನಗಳ ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತಿವೆ.

MOST READ: ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

ಮಾಹಿತಿಗಳ ಪ್ರಕಾರ, ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ಕಾರುಗಳು ಮತ್ತು 15 ಸಾವಿರ ಕೋಟಿ ಮೌಲ್ಯದ ಹೊಸ ಬೈಕ್‌ಗಳ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

MOST READ: ಜಿಟಿಎಸ್ ದರದಲ್ಲಿ ಇಳಿಕೆ- ಹ್ಯುಂಡೈ ಕೋನಾ ಬೆಲೆಯಲ್ಲಿ ಭಾರೀ ಕಡಿತ

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

2018ರ ಮೇ ಅವಧಿಯಲ್ಲಿ ದೇಶಾದ್ಯಂತ 3,01,238 ಹೊಸ ಪ್ಯಾಸೆಂಜರ್ ವಾಹನಗಳು ಮಾರಾಟವಾಗಿದ್ದರೆ ಅದೇ 2019ರ ಮೇ ಅವಧಿಯಲ್ಲಿ 2,39,347 ಹೊಸ ಪ್ಯಾಸೆಂಜರ್ ವಾಹನಗಳು ಮಾತ್ರವೇ ಮಾರಾಟವಾಗುವ ಮೂಲಕ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

ಇದಲ್ಲದೇ ಜೂನ್ ಮತ್ತು ಜುಲೈ ಅವಧಿಯಲ್ಲೂ ಕೂಡಾ ಶೇ.20 ರಷ್ಟು ಹೊಸ ಕಾರು ಮಾರಾಟದಲ್ಲಿ ಇಳಿಕೆ ಕಂಡುಬಂದಿದ್ದು, ಹೊಸ ವಾಹನ ಮಾರಾಟವಿಲ್ಲದೇ ಬಹುತೇಕ ಕಾರು ಮಾರಾಟಗಾರರು ತಮ್ಮ ಅಧಿಕೃತ ಮಾರಾಟ ಮಳಿಗೆಗಳ ಕದಮುಚ್ಚುತ್ತಿದ್ದಾರೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ

2017ರಿಂದ ಭಾರತೀಯ ಆಟೋ ಉತ್ಪಾದನಾ ವಲಯದಲ್ಲಿ ನಿರಂತರವಾಗಿ ಸಾಕಷ್ಟು ಬದಲಾವಣೆಗಳು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದ್ದು, ಇದು ಕೆಲವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

Most Read Articles

Kannada
English summary
SIAM and several automakers have been asking for a reduction in GST rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X