Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್
ಸ್ಕೋಡಾ ಕಂಪನಿಯ ಎಸ್‍ಯುವಿ, ಕೊಡಿಯಾಕ್ ಸ್ಕೌಟ್ ವಾಹನವನ್ನು 2017ರ ಆರಂಭದಲ್ಲಿ ಆಫ್ ರೋಡ್ ಅಪ್ ಗ್ರೇಡ್ ಮಾಡಲಾಗಿತ್ತು. ಅನಾವರಣಗೊಂಡ ಸುಮಾರು 2 ವರ್ಷಗಳ ನಂತರ ಕೊಡಿಯಾಕ್ ಸ್ಕೌಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಕಾರ್ ದೇಖೊ ಸುದ್ದಿಸಂಸ್ಥೆಯ ಪ್ರಕಾರ, ಕೊಡಿಯಾಕ್ ಸ್ಕೌಟ್ ಸ್ಟೈಲ್ ಮತ್ತು ಎಲ್ ಅಂಡ್ ಕೆ ಮಾದರಿಗಳಿಗಿಂತ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಸ್ಟೈಲ್ ಮತ್ತು ಎಲ್ ಅಂಡ್ ಕೆ ಮಾದರಿಗಳು 188 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದರೆ, ಸ್ಕೌಟ್ ಮಾದರಿಯು 194 ಎಂಎಂ ಕ್ಲಿಯರೆನ್ಸ್ ಹೊಂದಿದೆ. 6 ಎಂಎಂ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಕಾರಣದಿಂದಾಗಿ ಸ್ಕೌಟ್ ಉತ್ತಮವಾದ ಡಿಪಾರ್ಚರ್ ಆಂಗಲ್ ಗಳನ್ನು ಹೊಂದಲಿದ್ದು, ಆಫ್ ರೋಡ್ ನಲ್ಲಿ ಉತ್ತಮ ಪರ್ಫಾರ್ಮರ್ ಎನಿಸಲಿದೆ.

ಸ್ಟೈಲ್ ಮತ್ತು ಎಲ್ ಅಂಡ್ ಕೆ ಮಾದರಿಗಳಂತೆ ಕೊಡಿಯಾಕ್ ಸ್ಕೌಟ್ ಸಹ - ಇಕೋ, ಕಂಫರ್ಟ್, ನಾರ್ಮಲ್, ಸ್ಪೋರ್ಟ್, ಇಂಡುವಿಷುಯಲ್ ಮತ್ತು ಸ್ನೋ - ಎಂಬ ಆರು ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ. ಸ್ಕೌಟ್ ವಾಹನದಲ್ಲಿ ಹೆಚ್ಚುವರಿಯಾಗಿ ಆಫ್ ರೋಡ್ ಎಂಬ ಸ್ವಿಚ್ ಅಳವಡಿಸಲಾಗಿದೆ.

ಈ ಸ್ವಿಚ್ ನಿಂದಾಗಿ ಥ್ರಾಟಲ್ ರೆಸ್ಪಾನ್ಸ್ ಕಡಿಮೆ ಮಾಡಿ ಸಸ್ಪೆಂಷನ್ ಸೆಟ್ಟಿಂಗ್ ಗಳನ್ನು ಬದಲಿಸಬಹುದು. ಗುಡ್ಡಗಾಡು, ಬೆಟ್ಟಗಳಲ್ಲಿ ಚಲಾಯಿಸಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ವೆಹಿಕಲ್ ಹೋಲ್ಡ್ ಗಳನ್ನು ನೀಡಲಾಗಿದ್ದು, ಇದು ಸ್ಪೀಡ್ ಅಡ್ಜಸ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಸ್ಕೌಟ್ ಮತ್ತು ಬೇರೆ ಕೊಡಿಯಾಕ್ ಮಾದರಿಗಳಿಗೆ ಇರುವ ಮುಖ್ಯ ವ್ಯತ್ಯಾಸವೆಂದರೆ ಅದು ಕಾಸ್ಮೆಟಿಕ್. ಹೊಸ ಸ್ಕೌಟ್ ನಲ್ಲಿ 19 ಇಂಚಿನ ಅಲಾಯ್ ವ್ಹೀಲ್, ಮುಂಭಾಗದ ಗ್ರಿಲ್ ನಲ್ಲಿಸಿಲ್ವರ್‍ನಿಂದ ಬರೆಯಲಾಗಿರುವ ವಿವರಗಳು, ರೂಫ್ ರೇಲ್, ಒಆರ್‍ವಿಎಂ ಹೌಸಿಂಗ್, ಪಕ್ಕದಲ್ಲಿರುವ ವಿಂಡೋ ಟ್ರಿಮ್ ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ಅಂಡರ್ ಬಾಡಿ ಪ್ರೊಟೆಕ್ಷನ್ ಗಳಿವೆ. ಒಳ ವಿನ್ಯಾಸದಲ್ಲಿ ಕೊಡಿಯಾಕ್ ಸ್ಕೌಟ್ ಬ್ಲಾಕ್ ಫಿನಿಷ್ ಹೊಂದಿದ್ದು, ಸೀಟುಗಳ ಮೇಲೆ ಮತ್ತು ಗ್ಲವ್ ಬಾಕ್ಸ್ ಗಳ ಮೇಲೆ ಸ್ಕೌಟ್ ಎಂಬ ಬ್ಯಾಡ್ಜ್ ಗಳನ್ನು ನೀಡಲಾಗಿದೆ.

ಸ್ಟೈಲ್ ಮಾದರಿಯಲ್ಲಿರುವಂತಹ ಎಕ್ವಿಪ್ ಮೆಂಟ್ ಗಳನ್ನೇ ಸ್ಕೌಟ್ ನಲ್ಲೂ ನೀಡಲಾಗಿದೆ. ಎಲ್ಇಡಿ ಹೆಡ್ ಲ್ಯಾಂಪ್ಸ್, ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕರ್ಟನ್ ಹೊಂದಿರುವ ಏರ್ ಬ್ಯಾಗ್ ಗಳು, ಕೀ ರಹಿತ ಎಂಟ್ರಿ, ಸ್ಟಾರ್ಟ್, ಎಕ್ಸಿಟ್ ಸಿಸ್ಟಂ ಮತ್ತು ಇವುಗಳ ಜೊತೆಗೆ ಎಂಜಿನ್ ಸ್ಟಾರ್ಟ್ ಮಾಡುವ ಮತ್ತು ಸ್ಟಾಪ್ ಮಾಡುವ ಬಟನ್ ಗಳನ್ನು ನೀಡಲಾಗಿದೆ. ಡ್ರೈವರ್ ಮತ್ತು ಮುಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗಾಗಿ ಪವರ್ ಅಡ್ಜಸ್ಟೇಬಲ್ ಸೀಟುಗಳನ್ನು ನೀಡಲಾಗಿದೆ.

ಸ್ಕೋಡಾ ಸ್ಕೌಟ್ 2.0 ಲೀಟರಿನ ಡೀಸೆಲ್ ಎಂಜಿನ್ ಹೊಂದಿದ್ದು, 7 ಸ್ಪೀಡಿನ ಡೈರೆಕ್ಟ್ ಶಿಫ್ಟ್ ಗೇರ್ ಬಾಕ್ಸ್ ಹೊಂದಿದೆ. ಈ ಎಂಜಿನ್ 148 ಬಿಹೆಚ್‍ಪಿ ಪವರ್ ಅನ್ನು 3,500 ಆರ್‍ಪಿಎಂ ನಲ್ಲಿ ಮತ್ತು 340 ಎನ್ಎಂ ಟಾರ್ಕ್ ಅನ್ನು 1,750 ಆರ್‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನನ್ನೇ ಕೊಡಿಯಾಕ್ ನ ಸ್ಟೈಲ್ ಮತ್ತು ಎಲ್ ಅಂಡ್ ಕೆ ಮಾದರಿಗಳಲ್ಲೂ ಅಳವಡಿಸಲಾಗಿದೆ.
MOST READ: ವಿತರಣೆ ಶುರು ಮಾಡಿದ ಬಜಾಜ್ ಅವೆಂಜರ್ 160 ಎಬಿಎಸ್

ಸ್ಕೋಡಾ ಕೊಡಿಯಾಕ್ ಸ್ಟೈಲ್ ನ ದರವು ಭಾರತದ ಎಕ್ಸ್ ಶೋರೂಂ ದರದಂತೆ ರೂ. 35.36 ಲಕ್ಷಗಳಾಗಿದೆ. ಕೊಡಿಯಾಕ್ ಎಲ್ & ಕೆ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 36.78 ಲಕ್ಷಗಳಾಗಿದೆ. ಸ್ಕೌಟ್ ನ ಬೆಲೆಯು ಸಹ ಇದೇ ಶ್ರೇಣಿಯಲ್ಲಿರಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಸ್ಕೋಡಾ ಕಂಪನಿಯು, ಸ್ಕೌಟ್ ಮಾದರಿಯಲ್ಲಿ ಗಮನಾರ್ಹ ಬದಲಾವಣೆ ಮಾಡಿದೆ. ಉಳಿದ ಮಾದರಿಗಳಿಗಿಂತ 6 ಎಂಎಂ ನಷ್ಟು ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಹುತೇಕ ವಾಹನಗಳು ಆಫ್ ರೋಡ್ ಆದ ಕಾರಣ, ಈ ವಾಹನವನ್ನು ಚಲಾಯಿಸಿದ ನಂತರ ಈ ಕಾರು ಆಫ್ ರೋಡ್ ಗೆ ಎಷ್ಟು ಸಹಕಾರಿಯಾಗಲಿದೆ ಎಂಬುದರ ಬಗ್ಗೆ ತಿಳಿಯಲಿದೆ.