ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ಟಾಟಾ ಸಂಸ್ಥೆಯು ಸದ್ಯ ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಸಂಸ್ಥೆಯ ಜೊತೆಗೂಡಿ ಹೊಸ ಕಾರುಗಳ ನಿರ್ಮಾಣದಲ್ಲಿ ಭಾರೀ ಬದಲಾವಣೆ ತರುತ್ತಿದೆ. ಹ್ಯಾರಿಯರ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ನಂತರ ಮತ್ತೆ ನಾಲ್ಕು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿರುವ ಟಾಟಾ ಇದೀಗ ಬಹುನೀರಿಕ್ಷಿತ 45ಎಕ್ಸ್ ಕಾರಿನ ಕುರಿತಾದ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ.

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಹ್ಯಾರಿಯರ್ ಬಿಡುಗಡೆಗೊಳಿಸಿದ ನಂತರ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿರುವ ಟಾಟಾ ಸಂಸ್ಥೆಯು ಮುಂದಿನ ತಿಂಗಳು ಮಾರ್ಚ್‌ನಲ್ಲಿ ಆರಂಭವಾಗುವ ಜೀನೆವಾ ಆಟೋ ಮೇಳ ದಲ್ಲಿ ಮತ್ತೆ ನಾಲ್ಕು ಹೊಸ ಕಾರು ಮಾದರಿಗಳ ಉತ್ಪಾದನಾ ಆವೃತ್ತಿಗಳನ್ನು ಪ್ರದರ್ಶನ ಮಾಡುತ್ತಿದೆ. ಹೀಗಾಗಿ ಬಿಡುಗಡೆಯ ನೀರಿಕ್ಷೆಯಲ್ಲಿರುವ ಪ್ರೀಮಿಯಂ 45ಎಕ್ಸ್ ಕಾರಿನ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ಕಾರಿನ ಅಧಿಕೃತ ಹೆಸರಿನ ಸುಳಿವು ನೀಡಿರುವ ಟಾಟಾ ಸಂಸ್ಥೆಯು ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಭಾರೀ ಪೈಪೋಟಿ ನೀಡುವ ತವಕದಲ್ಲಿದೆ.

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ಪ್ರೀಮಿಯಂ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳನ್ನು ಹೊಂದಿರುವ 45ಎಕ್ಸ್ ಕಾರಿನ ಅಧಿಕೃತ ಹೆಸರಿನ ಮೊದಲ ಅಕ್ಷರವು A ನಿಂದ ಆರಂಭವಾಗುವ ಬಗ್ಗೆ ಸುಳಿವು ನೀಡಿರುವ ಟಾಟಾ, ಒಟ್ಟು ಆರು ಇಂಗ್ಲಿಷ್ ವರ್ಣಮಾಲೆಯ ಹೆಸರನ್ನು ಬಳಸುವುದು ಟೀಸರ್‌ನಲ್ಲಿ ಖಚಿತವಾಗಿದೆ.

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ಇನ್ನು 45ಎಕ್ಸ್ ಪ್ರೀಮಿಯಂ ಕಾನ್ಸೆಪ್ಟ್ ಮಾದರಿಯನ್ನು ಈಗಾಗಲೇ 2018ರಲ್ಲೇ ಪ್ರದರ್ಶನ ಮಾಡಿ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿರುವ ಟಾಟಾ ಸಂಸ್ಥೆಯು ಹೊಸ ಕಾರಿನ ವಿನ್ಯಾಸಗಳನ್ನು ಇಂಪ್ಯಾಕ್ಟ್ ಡಿಸೈನ್ 2.0 ಡಿಸೈನ್ ಆಧರಿತ ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ನಿರ್ಮಾಣ ಮಾಡಿದೆ.

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ನೆಕ್ಸಾನ್ ಎಸ್‌ಯುವಿ ಮಾದರಿಗಳಿಂತಲೂ ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಂಡಿರುವ 45ಎಕ್ಸ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ಶಾರ್ಪ್ ಎಡ್ಜ್‌ ಮತ್ತು ಸ್ಪೋರ್ಟಿ ಲುಕ್ ಸೌಲಭ್ಯವು ಕಾರಿನ ಅಂದ ಹೆಚ್ಚಿಸಿವೆ.

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು, ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳ ಬಗೆಗೆ ಸಂದರ್ಶನವೊಂದರಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ವಿವಿಧ ಮಾದರಿಯ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ವರದಿಗಳ ಪ್ರಕಾರ, 45ಎಕ್ಸ್ ಕಾರು ಮಾದರಿಯಲ್ಲಿ ಪೆಟ್ರೋಲ್ ಎಂಜಿನ್‌ನೊಂದಿಗೆ 48ಕೆವಿ ಮೈಲ್ಡ್ ಹೈಬ್ರಿಡ್(ಎಲೆಕ್ಟ್ರಿಕ್ ಮೋಟಾರ್) ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಇದು ಕಾರಿನ ಇಂಧನ ದಕ್ಷತೆಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ಅನುಕೂಲಕರವಾಗಲಿದೆ.

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ಹೀಗಾಗಿ ಜೋಡಣೆ ಮಾಡಲು ಉದ್ದೇಶಿಸಿರುವ 1.2-ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಅಳವಡಿಕೆ ಮಾಡಿದ್ದಲ್ಲಿ ಕಾರಿನ ಮೈಲೇಜ್ ಹೆಚ್ಚಳದ ಜೊತೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಸಹ ತಗ್ಗಿಸಲು ನೆರವಾಗಲಿದೆ.

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಈ ಹೊಸ ಸೌಲಭ್ಯವಿದಲ್ಲಿ ಕಾರು ಸ್ಟಾರ್ಟ್ ಆಗುವ ಸಂದರ್ಭ ಮತ್ತು ನಿಗದಿತ ಪ್ರಮಾಣದ ದೂರದ ತನಕ ಪೆಟ್ರೋಲ್ ಎಂಜಿನ್‌ಗೆ ಬದಲಾಗಿ ಎಲೆಕ್ಟ್ರಿಕ್ ಮೋಟಾರ್ ಸಹಾಯದೊಂದಿಗೆ ಚಲಿಸುತ್ತೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ತದನಂತರ ಆಟೋ ಮೂಡ್ ಮೂಲಕ ತನ್ನಷ್ಟೇ ತಾನೇ ಎಲೆಕ್ಟ್ರಿಕ್ ಮೋಟಾರ್‌ನಿಂದ ಪೆಟ್ರೋಲ್ ಎಂಜಿನ್‌ಗೆ ವರ್ಗಾವಣೆಗೊಳ್ಳುವ ಕಾರಿನ ಎಂಜಿನ್ ಅನವಶ್ಯಕವಾಗಿ ಇಂಧನ ವ್ಯರ್ಥವಾಗುವುದನ್ನು ತಪ್ಪಿಸುತ್ತೆ. ಈ ಮೂಲಕ ಕಾರಿನ ಮೈಲೇಜ್ ಪ್ರಮಾಣವು ಹೆಚ್ಚಾಗುವುದಲ್ಲದೇ ಮಾಲಿನ್ಯ ಪ್ರಮಾಣ ಕೂಡಾ ತಗ್ಗುವುದು.

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ಜೊತೆಗೆ ಹೊಸ ಕಾರಿನ ಬ್ಯಾನೆಟ್ ಹಾಗೂ ಹಿಂಭಾಗದ ವಿಂಡೋಗಳು ಕೂಡಾ ವಿಭಿನ್ನ ರಚನೆ ಹೊಂದಿದ್ದು, ಕಟರ್ ಫ್ರೀ ಡಿಸೈನ್‌ನೊಂದಿಗೆ ಸ್ಲಿಕ್ ಹೆಡ್‌ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಸೇರಿದಂತೆ ಎಲ್ಇಡಿ ಟೈಲ್ ಲೈಟ್ಸ್, ಫಾಗ್ ಲ್ಯಾಂಪ್ ಮತ್ತು ವಿನೂತನ ಗ್ರೀಲ್‌ಗಳು ಈ ಕಾರಿಗೆ ಮತ್ತಷ್ಟು ಮೆರಗು ತಂದಿವೆ.

MOST READ: ಟ್ರಾಫಿಕ್ ಭರಿತ ಬೆಂಗಳೂರು ರಸ್ತೆಗಳಲ್ಲಿ ಕೆಟಿಎಂ ಡ್ಯೂಕ್ 125 ಮೈಲೇಜ್ ಎಷ್ಟು ಗೊತ್ತಾ?

ಟಾಟಾ ಮೋಟಾರ್ಸ್ ಹೊಸ ಕಾರಿನ ಹೆಸರು 'A'ನಿಂದ ಸ್ಟಾರ್ಟ್ ಆಗುತಂತೆ..!

ಹಾಗೆಯೇ 45ಎಕ್ಸ್ ಕಾನ್ಸೆಪ್ಟ್ ಮಾದರಿಯಲ್ಲಿ ಎಲೆಕ್ಟ್ರಿಕ್ ವರ್ಷನ್ ಮಾದರಿಯನ್ನು ಸಹ ಹೊರತರಲು ನಿರ್ಧರಿಸಿರುವ ಟಾಟಾ ಸಂಸ್ಥೆಯು ಇದುವರೆಗೂ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಜಿನೇವಾ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳಲಿರುವ ಹೊಸ ಕಾರು ಹೇಗಿರಲಿದೆ ಎನ್ನುವುದು ಸ್ಪಷ್ಟವಾಗಲಿದೆ.

Article Published On: Saturday, February 23, 2019, 11:18 [IST]
English summary
Tata 45X Hatchback Official Name Teased Ahead Of World Debut — To Start With Letter ‘A’. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+