ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಟಾಟಾ ಸಂಸ್ಥೆಯು ಮುಂಬರುವ ಕೆಲವೇ ದಿನಗಳಲ್ಲಿ ತನ್ನ ಬಹುನೀರಿಕ್ಷಿತ ಆಲ್‌ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು, ಮಾಹಿತಿಗಳ ಪ್ರಕಾರ ಆಲ್‌ಟ್ರೋಜ್ ಮಾದರಿಯು ಮೊದಲ ಹಂತವಾಗಿ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗುವುದು ಖಚಿತವಾಗಿದೆ.

ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಹೌದು, ಟಾಟಾ ಆಲ್‌ಟ್ರೋಜ್ ಮಾದರಿಯು ಮೊದಲ ಹಂತವಾಗಿ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದ್ದು, ತದನಂತರವಷ್ಟೇ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳು ಖರೀದಿಗೆ ಲಭ್ಯವಾಗಲಿವೆಯೆಂತೆ. ಈ ಕುರಿತು ಅಧಿಕೃತ ಮಾಹಿತಿ ಇಲ್ಲವಾದರೂ ಡೀಲರ್ಸ್ ಮಟ್ಟದಲ್ಲಿ ಕಾರು ಖರೀದಿಗಾಗಿ ಎದರು ನೋಡುತ್ತಿರುವ ಗ್ರಾಹಕರು ವಿಚಾರಣೆ ಮಾಡಿದಾಗ ಮೊದಲ ಡೀಸೆಲ್ ಆವೃತ್ತಿಯು ಬಿಡುಗಡೆಯಾಗುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ.

ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಇನ್ನು ಟಾಟಾ ಮೋಟಾರ್ಸ್ ವಿನೂತನ ವಿನ್ಯಾಸದ ಆಲ್‌ಟ್ರೋಜ್ ಕಾರು ಸದ್ಯ ಭಾರತೀಯ ಆಟೋ ಉದ್ಯಮದ ಪ್ರಮುಖ ಆಕರ್ಷಣೆಯಾಗಿದ್ದು, ಬಿಡುಗಡೆಯ ಉದ್ದೇಶದಿಂದ ದೇಶದ ವಿವಿಧಡೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಹ್ಯಾರಿಯರ್ ಬಿಡುಗಡೆಯ ಯಶಸ್ವಿ ನಂತರ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆಯಿಸುತ್ತಿರುವ ಟಾಟಾ ಸಂಸ್ಥೆಯು ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ ತರುತ್ತಿದೆ.

ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಇದಕ್ಕೆ ಕಾರಣ, ಆಲ್‌ಟ್ರೊಜ್ ಕಾರಿನ ಎಂಜಿನ್ ಪರ್ಫಾಮೆನ್ಸ್ ಗುಣಲಕ್ಷಣಗಳು ಇತರೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಂತಲೂ ಉತ್ತಮವಾಗಿರುವುದಲ್ಲದೇ ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತುಬರುತ್ತಿರುವುದು ಸ್ಪಾಟ್ ಟೆಸ್ಟಿಂಗ್ ವೇಳೆ ಖಚಿತವಾಗಿದೆ.

ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಆಲ್‌ಟ್ರೊಜ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಎರಡು ಎಂಜಿನ್ ಆಯ್ಕೆಗಳು ಇರಲಿದ್ದು, ಡೀಸೆಲ್‌ ಆವೃತ್ತಿಯಲ್ಲಿ ಒಂದು ಆಯ್ಕೆ ಮಾತ್ರ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ಮತ್ತು 1.5-ಲೀಟರ್ ಎಂಜಿನ್ ಮಾದರಿಗಳು ಅಭಿವೃದ್ಧಿಯಾಗುತ್ತಿದ್ದು, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಲಭ್ಯವಾಗಲಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಪೆಟ್ರೋಲ್ ಆವೃತ್ತಿಗಾಗಿ ಆಯ್ಕೆ ಮಾಡಲಾಗಿರುವ 1.2-ಲೀಟರ್ ಎಂಜಿನ್ ಮಾದರಿಯನ್ನು ಟಿಯಾಗೋದಿಂದ ಎರವಲು ಪಡೆದಿದ್ದಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳನ್ನು ನೆಕ್ಸಾನ್ ಎಸ್‌ಯುವಿಯಿಂದ ಎರವಲು ಪಡೆದಿರುವ ಟಾಟಾ ಸಂಸ್ಥೆಯು ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಕೆಲವು ಗಮನಸೆಳೆಯಬಹುದಾದ ಬದಲಾವಣೆಗಳನ್ನು ಮಾಡಿದೆ.

ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಪ್ರಮುಖ ವಿಚಾರ ಅಂದ್ರೆ, ಟಾಟಾ ಸಂಸ್ಥೆಯು ಸದ್ಯ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಕಾರು ನಿರ್ಮಾಣದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಹ್ಯಾರಿಯರ್ ಕಾರು ಮಾದರಿಯಲ್ಲೇ ಹೊಸ ಆಲ್‌ಟ್ರೊಜ್ ಕಾರನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸಿದೆ.

MOST READ: ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಇದು ಕಾರಿನ ತೂಕವನ್ನು ಕಡಿತಗೊಳಿಸುವಲ್ಲಿ ಸಾಕಷ್ಟು ನೆರವಾಗಿದ್ದು, ಇದು ನೇರವಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಪರಿಣಾಮ ಬೀರುವುದಲ್ಲದೇ ಮೈಲೇಜ್ ಪ್ರಮಾಣದಲ್ಲೂ ಕೂಡಾ ಹೆಚ್ಚಳವಾಗಲಿದೆ.

ಟಾಟಾ ಆಲ್‌ಟ್ರೋಜ್‌ನಲ್ಲಿ ಮೊದಲು ಬಿಡುಗಡೆಯಾಗುವುದೇ ಡೀಸೆಲ್ ವರ್ಷನ್

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ವರ್ಷ ಜೂನ್ ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5 ಲಕ್ಷದಿಂದ ರೂ.7 ಲಕ್ಷ ಮತ್ತು ಆಲ್‌ಟ್ರೊಜ್ ಕಾರಿನ ಬೆಲೆಯು ರೂ.10 ಲಕ್ಷದೊಳಗೆ ಬೆಲೆ ನಿಗದಿಯಾಗಬಹುದು ಎಂದಿದೆ.

Article Published On: Thursday, May 9, 2019, 19:00 [IST]
English summary
According to reports, The engine that the Altroz may feature is a de-tuned version of the 1.5-litre Revotorq turbocharged four-cylinder engine that currently sits in the Tata Nexon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+