ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಟಾಟಾ ಸಂಸ್ಥೆಯು ನೆಕ್ಸಾನ್ ಮತ್ತು ಹ್ಯಾರಿಯರ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ನಂತರ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆಯ ಯೋಜನೆಯಲ್ಲಿದ್ದು, ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರುತ್ತಿರುವ ಆಲ್‌ಟ್ರೊಜ್ ಕಾರು ಟಾಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಸದ್ಯ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಕಾರು ನಿರ್ಮಾಣದಲ್ಲಿ ಭಾರೀ ಬದಲಾವಣೆ ತರುತ್ತಿರುವ ಟಾಟಾ ಸಂಸ್ಥೆಯು ಇಂದಿನಿಂದ ಆರಂಭವಾಗಲಿರುವ ಜೀನೆವಾ ಆಟೋ ಮೇಳದಲ್ಲಿ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ನಾಲ್ಕು ಹೊಸ ಕಾರು ಮಾದರಿಗಳ ಉತ್ಪಾದನಾ ಆವೃತ್ತಿಗಳನ್ನು ಪ್ರದರ್ಶನ ಮಾಡುತ್ತಿದ್ದು, ಇದರಲ್ಲಿ ಸದ್ಯ ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಮತ್ತು ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರು ಐಷಾರಾಮಿ ಕಾರು ಮಾದರಿಯಲ್ಲಿ ನಿರ್ಮಾಣವಾಗಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಇಂದಿನಿಂದ ಆರಂಭವಾಗಲಿರುವ ಜೀನೆವಾ ಆಟೋ ಮೇಳದಲ್ಲಿ ವಿಶ್ವದ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಭವಿಷ್ಯ ವಾಹನ ಮಾದರಿಗಳನ್ನು ಪ್ರದರ್ಶನ ಮಾಡುತ್ತಿದ್ದು, ಇದರಲ್ಲಿ ಟಾಟಾ ಕೂಡಾ ಆಲ್‌ಟ್ರೊಜ್ ಸೇರಿದಂತೆ ವಿವಿಧ ನಮೂನೆಯ ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನ ಮಾಡಲಿದೆ.

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಚಾಣಕ್ಷತೆಯ ಆಧಾರದ ಮೇಲೆ ಹೊಸ ಕಾರಿನ ಹೆಸರನ್ನು ಆಲ್‌ಟ್ರೊಜ್ ಎಂದು ಕರೆದಿರುವ ಟಾಟಾ ಸಂಸ್ಥೆಯು, ಬಲಿಷ್ಠತೆ, ಪರ್ಫಾಮೆನ್ಸ್ ಮತ್ತು ದಕ್ಷತೆಯಲ್ಲಿ ಇತರೆ ಅರ್ಬನ್ ಕಾರುಗಳಿಂತಲೂ ಆಲ್‌ಟ್ರೊಜ್ ಉತ್ತಮವಾಗಿರಲಿವೆ ಎಂದಿದೆ.

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಈಗಾಗಲೇ 2018ರಲ್ಲೇ ಆಲ್‌ಟ್ರೊಜ್ ಕಾರನ್ನು ಪ್ರದರ್ಶನ ಮಾಡಿ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿರುವ ಟಾಟಾ ಸಂಸ್ಥೆಯು ಹೊಸ ಕಾರಿನ ವಿನ್ಯಾಸಗಳನ್ನು ಇಂಪ್ಯಾಕ್ಟ್ ಡಿಸೈನ್ 2.0 ಡಿಸೈನ್ ಆಧರಿತ ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ನಿರ್ಮಾಣ ಮಾಡಿದೆ.

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ನೆಕ್ಸಾನ್ ಎಸ್‌ಯುವಿ ಮಾದರಿಗಳಿಂತಲೂ ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಂಡಿರುವ ಆಲ್‌ಟ್ರೊಜ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ಶಾರ್ಪ್ ಎಡ್ಜ್‌ ಮತ್ತು ಸ್ಪೋರ್ಟಿ ಲುಕ್ ಸೌಲಭ್ಯವು ಕಾರಿನ ಅಂದ ಹೆಚ್ಚಿಸಿವೆ.

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು, ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳ ಬಗೆಗೆ ಸಂದರ್ಶನವೊಂದರಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ವಿವಿಧ ಮಾದರಿಯ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ವರದಿಗಳ ಪ್ರಕಾರ, ಆಲ್‌ಟ್ರೊಜ್ ಕಾರು ಮಾದರಿಯು ಪೆಟ್ರೋಲ್ ಎಂಜಿನ್‌ನೊಂದಿಗೆ 48ಕೆವಿ ಮೈಲ್ಡ್ ಹೈಬ್ರಿಡ್(ಎಲೆಕ್ಟ್ರಿಕ್ ಮೋಟಾರ್) ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಇದು ಕಾರಿನ ಇಂಧನ ದಕ್ಷತೆಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ಅನುಕೂಲಕರವಾಗಲಿದೆ.

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಹೀಗಾಗಿ ಜೋಡಣೆ ಮಾಡಲು ಉದ್ದೇಶಿಸಿರುವ 1.2-ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಅಳವಡಿಕೆ ಮಾಡಿದ್ದಲ್ಲಿ ಕಾರಿನ ಮೈಲೇಜ್ ಹೆಚ್ಚಳದ ಜೊತೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಸಹ ತಗ್ಗಿಸಲು ನೆರವಾಗಲಿದೆ.

MOST READ: 15 ಸಾವಿರ ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ರಸ್ತೆಗಿಳಿದ ವಿಶ್ವದ ಅತಿದೊಡ್ಡ ಮಾಡಿಫೈ ಎಸ್‌ಯುವಿ ಕಾರು

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಈ ಹೊಸ ಸೌಲಭ್ಯವಿದಲ್ಲಿ ಕಾರು ಸ್ಟಾರ್ಟ್ ಆಗುವ ಸಂದರ್ಭ ಮತ್ತು ನಿಗದಿತ ಪ್ರಮಾಣದ ದೂರದ ತನಕ ಪೆಟ್ರೋಲ್ ಎಂಜಿನ್‌ಗೆ ಬದಲಾಗಿ ಎಲೆಕ್ಟ್ರಿಕ್ ಮೋಟಾರ್ ಸಹಾಯದೊಂದಿಗೆ ಚಲಿಸುತ್ತೆ.

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಜೊತೆಗೆ ಹೊಸ ಕಾರಿನ ಬ್ಯಾನೆಟ್ ಹಾಗೂ ಹಿಂಭಾಗದ ವಿಂಡೋಗಳು ಕೂಡಾ ವಿಭಿನ್ನ ರಚನೆ ಹೊಂದಿದ್ದು, ಕಟರ್ ಫ್ರೀ ಡಿಸೈನ್‌ನೊಂದಿಗೆ ಸ್ಲಿಕ್ ಹೆಡ್‌ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಸೇರಿದಂತೆ ಎಲ್ಇಡಿ ಟೈಲ್ ಲೈಟ್ಸ್, ಫಾಗ್ ಲ್ಯಾಂಪ್ ಮತ್ತು ವಿನೂತನ ಗ್ರೀಲ್‌ಗಳು ಈ ಕಾರಿಗೆ ಮತ್ತಷ್ಟು ಮೆರಗು ತಂದಿವೆ.

MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

ಬಿಡುಗಡೆಯಾಗಲಿರುವ ಟಾಟಾ ಬಹುನೀರಿಕ್ಷಿತ 'ಆಲ್‌ಟ್ರೊಜ್' ಇವಿ ಹೀಗಿರಲಿದೆ ನೋಡಿ..!

ಹಾಗೆಯೇ ಆಲ್‌ಟ್ರೊಜ್ ಮಾದರಿಯಲ್ಲಿ ಎಲೆಕ್ಟ್ರಿಕ್ ವರ್ಷನ್ ಮಾದರಿಯನ್ನು ಸಹ ಹೊರತರಲು ನಿರ್ಧರಿಸಿರುವ ಟಾಟಾ ಸಂಸ್ಥೆಯು ಇದುವರೆಗೂ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಇಂದಿನಿಂದ ಆರಂಭವಾಗಿರುವ ಜಿನೇವಾ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳಲಿರುವ ಹೊಸ ಆಲ್‌ಟ್ರೊಜ್ ಕಾರಿನ ಬಗೆಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

Source: MotorBeam

Article Published On: Tuesday, March 5, 2019, 11:03 [IST]
English summary
Tata Altroz EV Concept Images Leaked Ahead Of Official Unveil At Geneva Motor Show. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+