ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಟಾಟಾ ಮೋಟಾರ್ಸ್ ತನ್ನ ಬಹುನೀರಿಕ್ಷಿತ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಆವೃತ್ತಿಯನ್ನು ಮುಂದಿನ ವರ್ಷದ ಜನವರಿ 22ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಟಾಟಾ ಕಂಪನಿಯು ಹೊಸ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಅನ್ನು ಆರಂಭಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಆಲ್‌ಟ್ರೊಜ್ ಹೊಸ ಕಾರು ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ. ಹಲವಾರು ಹೊಸ ವಿಶೇಷತೆ ಫೀಚರ್ಸ್‍ಗಳನ್ನು ಹೊಂದಿರುವುದರಿಂದ ಈ ಹ್ಯಾಚ್‌ಬ್ಯಾಕ್ ಮಾದರಿಯು ಹೆಚ್ಚಿನ ಕಾರು ಪ್ರಿಯರನ್ನು ಸೆಳಯಬಹುದು. ಈಗಾಗಲೇ ಹೊಸ ಆಲ್‌ಟ್ರೊಜ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಟಾಟಾ ಸಂಸ್ಥೆಯು ಡೀಲರ್ಸ್‌ಗಳ ಬಳಿ ಹೊಸ ಕಾರು ಖರೀದಿಗೆ ಗ್ರಾಹಕರು ರೂ.21 ಸಾವಿರ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ. ಇನ್ನು ಟಾಟಾ ಸಂಸ್ಥೆಯು ಆಲ್‌ಟ್ರೊಜ್ ಕಾರು ಬಿಡುಗಡೆಗಾಗಿ ಭರ್ಜರಿ ತಯಾರಿ ನಡೆಸಿದ್ದು, ಪೂರ್ಣ ಪ್ರಮಾಣದಲ್ಲಿ ರೋಡ್ ಟೆಸ್ಟಿಂಗ್ ಪೂರ್ಣಗೊಳಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಆಲ್‌ಟ್ರೊಜ್ ಹೊಸ ಕಾರು ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ. ಹಲವಾರು ಹೊಸ ವಿಶೇಷತೆ ಫೀಚರ್ಸ್‍ಗಳನ್ನು ಹೊಂದಿರುವುದರಿಂದ ಈ ಹ್ಯಾಚ್‌ಬ್ಯಾಕ್ ಮಾದರಿಯು ಹೆಚ್ಚಿನ ಸಂಖ್ಯೆಯಲ್ಲಿ ಕಾರು ಪ್ರಿಯರನ್ನು ಸೆಳೆಯಬಹುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಆಲ್‌ಟ್ರೊಜ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಲಾಗಿದೆ. ಟಾಟಾ ಆಲ್‌ಟ್ರೊಜ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಆಲ್‌ಟ್ರೊಜ್‌ನಲ್ಲಿ ಗ್ರೇ ಮತ್ತು ಬ್ಲ್ಯಾಕ್ ಬಣ್ಣದ ಕ್ಯಾಬಿನ್, ಡ್ಯಾಶ್‌ಬೋರ್ಡ್ ಸುತ್ತಲು ಸಿಲ್ವರ್ ಆಕ್ಸೆಂಟ್, ಹೈ ಎಂಡ್ ಆವೃತ್ತಿಯಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೋಡಿಸಲಾಗಿದೆ. ಸ್ಟ್ಯಾಂಡರ್ಡ್ ಆಗಿ ಹೊಸ ಕಾರಿನಲ್ಲಿ ಟಚ್ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಇದರ ಜೊತೆಗೆ ಡಿಸ್‌‌ಪ್ಲೇ, ಎಡ್ಜಂಜಸ್ಟ್ ಬಲ್ ಡ್ರೈವರ್ ಸೀಟ್, ಎರಡು ಬದಿಯಲ್ಲೂ ಸೆಂಟರ್ ಆರ್ಮ್ ರೆಸ್ಟ್, 12 ವೊಲ್ಟ್ ಚಾರ್ಜಿಂಗ್ ಪೋರ್ಟ್ಸ್, ಬಾಟಲ್ ಹೋಲ್ಡರ್ಸ್, ಹಿಂಬದಿಯ ಸವಾರರಿಗೂ ಎಸಿ ವೆಂಟ್ಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಆಲ್‌ಟ್ರೊಜ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಎರಡು ಎಂಜಿನ್ ಆಯ್ಕೆಗಳು ಮತ್ತು ಡೀಸೆಲ್‌ ಆವೃತ್ತಿಯಲ್ಲಿ ಒಂದೇ ಆಯ್ಕೆಯಲ್ಲಿ ಲಭ್ಯವಾಗಲಿದೆ. ಟಿಯಾಗೋ ಜೆಟಿಪಿ ಕಾರಿನಲ್ಲಿ ಬಳಕೆ ಮಾಡಿರುವ 1.2-ಲೀಟರ್ ಪೆಟ್ರೋಲ್ ಟರ್ಬೋ ಮತ್ತು 1.5-ಲೀಟರ್ ಡೀಸೆಲ್ ಟರ್ಬೋ ಎಂಜಿನ್ ಮಾದರಿಯಲ್ಲಿ ಇರಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಈ ಮೊದಲು ಬಿಎಸ್-4 ಎಂಜಿನ್ ಅನ್ನು ಅಳವಡಿಸಿ ಟೆಸ್ಟ್ ನಡೆಸಿದ್ದ ಟಾಟಾ ಸಂಸ್ಥೆಯು ಕೊನೆಯ ಹಂತದಲ್ಲಿ ನಿರ್ಧಾರವನ್ನು ಬದಲಿಸಿತ್ತು. 2020ರ ಏಪ್ರಿಲ್ 1ರಿಂದ ಜಾರಿಯಾಗಲಿರುವ ಬಿಎಸ್-6 ನಿಯಮ ಅನುಸಾರವಾಗಿ ಹೊಸ ಕಾರ್ ಅನ್ನು ಬಿಡುಗಡೆಗೊಳಿಸುತ್ತಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಹೊಸ ಕಾರಿನ ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಆಲ್‌ಟ್ರೊಜ್ ಕಾರು ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸವನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಕಾರು

ಹೊಸ ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.50 ಲಕ್ಷದಿಂದ, ಟಾಪ್ ಎಂಡ್ ಮಾದರಿಯ ಬೆಲೆಯು ರೂ. 8.50 ಲಕ್ಷಗಳಾಗಿರಬಹುದು. ಹೊಸ ಆಲ್‌ಟ್ರೊಜ್ ಕಾರಿನಲ್ಲಿ ಹೆಚ್ಚಿನ ಸುರಕ್ಷತಾ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
Tata Altroz launch date is 22nd Jan 2020 - Read in Kannada
Story first published: Wednesday, December 11, 2019, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X