ಡಿಸೆಂಬರ್ 4ರಿಂದಲೇ ಆರಂಭವಾಗಲಿದೆ ಟಾಟಾ ಆಲ್‌ಟ್ರೊಜ್ ಬುಕ್ಕಿಂಗ್ ಪ್ರಕ್ರಿಯೆ

ಟಾಟಾ ಮೋಟಾರ್ಸ್ ಸಂಸ್ಥೆಯು ಮುಂದಿನ ತಿಂಗಳು ಡಿಸೆಂಬರ್ 3ರಂದು ಬಹುನೀರಿಕ್ಷಿತ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಆವೃತ್ತಿಯನ್ನು ಅನಾವರಣಗೊಳಿಸಲಿದ್ದು, ಮರುದಿನ 4ರಂದೇ ಹೊಸ ಕಾರು ಖರೀದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಮಾಹಿತಿ ಹಂಚಿಕೊಂಡಿದೆ.

ಡಿಸೆಂಬರ್ 4ರಿಂದಲೇ ಆರಂಭವಾಗಲಿದೆ ಟಾಟಾ ಆಲ್‌ಟ್ರೊಜ್ ಬುಕ್ಕಿಂಗ್ ಪ್ರಕ್ರಿಯೆ

ಡಿಸೆಂಬರ್ 4ರಿಂದ ಹೊಸ ಆಲ್‌ಟ್ರೊಜ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸುವ ಬಗ್ಗೆ ಟಾಟಾ ಸಂಸ್ಥೆಯು ಡೀಲರ್ಸ್‌ಗಳಿಗೆ ಮಾಹಿತಿ ರವಾನಿಸಿದ್ದು, ಹೊಸ ಕಾರು ಖರೀದಿಗೆ ಆಸಕ್ತವುಳ್ಳ ಗ್ರಾಹಕರು ರೂ.21 ಸಾವಿರ ಮುಂಗಡ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ. ಇನ್ನು ಟಾಟಾ ಸಂಸ್ಥೆಯು ಆಲ್‌ಟ್ರೊಜ್ ಕಾರು ಬಿಡುಗಡೆಗಾಗಿ ಭರ್ಜರಿ ತಯಾರಿ ನಡೆಸಿದ್ದು, ಪೂರ್ಣ ಪ್ರಮಾಣದಲ್ಲಿ ರೋಡ್ ಟೆಸ್ಟಿಂಗ್ ಪೂರ್ಣಗೊಳಿಸಲಾದ ಮೊದಲ ಉತ್ಪಾದನಾ ಆವೃತ್ತಿಯನ್ನು ನಿನ್ನೆಯಷ್ಟೇ ಪುಣೆ ಕಾರು ಉತ್ಪಾದನಾ ಘಟಕದಲ್ಲಿ ಅನಾವರಣಗೊಳಿಸಲಾಗಿದೆ.

ಡಿಸೆಂಬರ್ 4ರಿಂದಲೇ ಆರಂಭವಾಗಲಿದೆ ಟಾಟಾ ಆಲ್‌ಟ್ರೊಜ್ ಬುಕ್ಕಿಂಗ್ ಪ್ರಕ್ರಿಯೆ

ಆಲ್‌ಟ್ರೊಜ್ ಹೊಸ ಕಾರು ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹಲವು ವಿಶೇಷತೆಗಳನ್ನು ಹೊತ್ತುಬಂದಿರುವ ಹಾಟ್ ಹ್ಯಾಚ್‌ಬ್ಯಾಕ್ ಮಾದರಿಯು ಕಾರು ಪ್ರಿಯರ ನೆಚ್ಚಿನ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಡಿಸೆಂಬರ್ 4ರಿಂದಲೇ ಆರಂಭವಾಗಲಿದೆ ಟಾಟಾ ಆಲ್‌ಟ್ರೊಜ್ ಬುಕ್ಕಿಂಗ್ ಪ್ರಕ್ರಿಯೆ

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಡಿಸೆಂಬರ್ 4ರಿಂದಲೇ ಆರಂಭವಾಗಲಿದೆ ಟಾಟಾ ಆಲ್‌ಟ್ರೊಜ್ ಬುಕ್ಕಿಂಗ್ ಪ್ರಕ್ರಿಯೆ

ಇದಕ್ಕೆ ಕಾರಣ, ಹ್ಯಾಚ್‌ಬ್ಯಾಕ್ ಸೆಗ್ಮೆಂಟ್ ಕಾರುಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಆಲ್‌ಟ್ರೊಜ್‌ನಲ್ಲಿ ಗ್ರೆ ಮತ್ತು ಬ್ಲ್ಯಾಕ್ ಬಣ್ಣದ ಕ್ಯಾಬಿನ್, ಡ್ಯಾಶ್‌ಬೋರ್ಡ್ ಸುತ್ತಲು ಸಿಲ್ವರ್ ಆಕ್ಸೆಂಟ್, ಹೈ ಎಂಡ್ ಆವೃತ್ತಿಯಲ್ಲಿ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೋಡಿಸಲಾಗಿದೆ.

ಹಾಗೆಯೇ ಸ್ಟ್ಯಾಂಡರ್ಡ್ ಆಗಿ ಹೊಸ ಕಾರಿನಲ್ಲಿ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಡಿಕೆ ಮಾಡಬಹುದಾದ ಡಿಸ್‌‌ಪ್ಲೇ, ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ, ಎರಡು ಬದಿಯಲ್ಲೂ ಸೆಂಟರ್ ಆರ್ಮ್ ರೆಸ್ಟ್, 12 ವೊಲ್ಟ್ ಚಾರ್ಜಿಂಗ್ ಪೋರ್ಟ್ಸ್, ಬಾಗಿಲುಗಳಲ್ಲಿ ಬಾಟಲ್ ಹೋಲ್ಡರ್ಸ್, ಹಿಂಬದಿಯ ಸವಾರರಿಗೂ ಎಸಿ ವೆಂಟ್ಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳು ಆಲ್‌ಟ್ರೊಜ್ ಕಾರಿನಲ್ಲಿವೆ.

ಡಿಸೆಂಬರ್ 4ರಿಂದಲೇ ಆರಂಭವಾಗಲಿದೆ ಟಾಟಾ ಆಲ್‌ಟ್ರೊಜ್ ಬುಕ್ಕಿಂಗ್ ಪ್ರಕ್ರಿಯೆ

ಆಲ್‌ಟ್ರೊಜ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಎರಡು ಎಂಜಿನ್ ಆಯ್ಕೆಗಳು ಮತ್ತು ಡೀಸೆಲ್‌ ಆವೃತ್ತಿಯಲ್ಲಿ ಮಾತ್ರ ಒಂದೇ ಆಯ್ಕೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಟಿಯಾಗೋ ಜೆಟಿಪಿ ಕಾರಿನಲ್ಲಿ ಬಳಕೆ ಮಾಡಿರುವ 1.2-ಲೀಟರ್ ಪೆಟ್ರೋಲ್ ಟರ್ಬೋ ಮತ್ತು 1.5-ಲೀಟರ್ ಡೀಸೆಲ್ ಟರ್ಬೋ ಎಂಜಿನ್ ಮಾದರಿಗಳೇ ಆಲ್‌ಟ್ರೊಜ್‌ನಲ್ಲೂ ಜೋಡಣೆ ಸಾಧ್ಯತೆಗಳಿದ್ದು, ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಉನ್ನತೀಕರಿಸಲಾಗಿದೆ.

ಡಿಸೆಂಬರ್ 4ರಿಂದಲೇ ಆರಂಭವಾಗಲಿದೆ ಟಾಟಾ ಆಲ್‌ಟ್ರೊಜ್ ಬುಕ್ಕಿಂಗ್ ಪ್ರಕ್ರಿಯೆ

ಈ ಮೊದಲು ಬಿಎಸ್-4 ಎಂಜಿನ್ ಅನ್ನೇ ಜೋಡಣೆ ಮಾಡಿ ರೋಡ್ ಟೆಸ್ಟಿಂಗ್ ನಡೆಸಿದ್ದ ಟಾಟಾ ಸಂಸ್ಥೆಯು ಕೊನೆಯ ಹಂತದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದ್ದು, 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಲಿರುವ ಬಿಎಸ್-6 ನಿಯಮ ಅನುಸಾರವೇ ಹೊಸ ಕಾರನ್ನು ಅನಾವರಣಗೊಳಿಸಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಡಿಸೆಂಬರ್ 4ರಿಂದಲೇ ಆರಂಭವಾಗಲಿದೆ ಟಾಟಾ ಆಲ್‌ಟ್ರೊಜ್ ಬುಕ್ಕಿಂಗ್ ಪ್ರಕ್ರಿಯೆ

ಟಾಟಾ ಸಂಸ್ಥೆಯು ಹೊಸ ಕಾರಿನ ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಕೆಲವು ಗಮನಸೆಳೆಯಬಹುದಾದ ಬದಲಾವಣೆಗಳನ್ನು ಮಾಡಿದ್ದು, ಪ್ರಮುಖ ವಿಚಾರ ಅಂದ್ರೆ ಹೊಸ ಆಲ್‌ಟ್ರೊಜ್ ಕಾರನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

MOST READ: ಕಲ್ಯಾಣ್ ಜ್ಯುವೆಲ್ಲರ್ಸ್ ಮಾಲೀಕನ ಬಳಿಯಿರುವ ಐಷಾರಾಮಿ ಕಾರು ಕಲೆಕ್ಷನ್ ಹೇಗಿದೆ ಗೊತ್ತಾ?

ಡಿಸೆಂಬರ್ 4ರಿಂದಲೇ ಆರಂಭವಾಗಲಿದೆ ಟಾಟಾ ಆಲ್‌ಟ್ರೊಜ್ ಬುಕ್ಕಿಂಗ್ ಪ್ರಕ್ರಿಯೆ

ಕಾರು ಬಿಡುಗಡೆಯ ಅವಧಿ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಡಿಸೆಂಬರ್ 3ರಂದು ಅನಾವರಣಗೊಳ್ಳಲಿರುವ ಆಲ್‌ಟ್ರೊಜ್ ಕಾರು 2020ರ ಜನವರಿ ಅಂತ್ಯಕ್ಕೆ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.50 ಲಕ್ಷಕ್ಕೆ ನಿಗದಿಯಾಗಬಹುದು ಎಂದು ಅಂದಾಜಿಸಲಾಗಿದೆ.

MOST READ: ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಡಿಸೆಂಬರ್ 4ರಿಂದಲೇ ಆರಂಭವಾಗಲಿದೆ ಟಾಟಾ ಆಲ್‌ಟ್ರೊಜ್ ಬುಕ್ಕಿಂಗ್ ಪ್ರಕ್ರಿಯೆ

ಇದರೊಂದಿಗೆ ಟಾಟಾ ಸಂಸ್ಥೆಯು ಹೊಸ ಆಲ್‌ಟ್ರೊಜ್ ಕಾರಿಲ್ಲೂ ಈ ಹಿಂದಿನ ನೆಕ್ಸಾನ್ ಮತ್ತು ಹ್ಯಾರಿಯರ್ ಮಾದರಿಯಲ್ಲೇ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಒದಗಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಇದರಿಂದ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಹೊಸ ಆಲ್‌ಟ್ರೊಜ್ ಕಾರು ಹ್ಯುಂಡೈ ಐ20, ಮಾರುತಿ ಬಲೆನೊ ಮತ್ತು ಟೊಯೊಟಾ ಗ್ಲಾಂಝಾ ಕಾರುಗಳಿಗೆ ಟಕ್ಕರ್ ನೀಡಲಿದೆ.

Article Published On: Friday, November 29, 2019, 13:19 [IST]
English summary
Tata Motors will commence official bookings for all new Altroz premium hatchback on the 4rd of December, 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+