ಆಯ್ದ ಕಾರುಗಳ ಮೇಲೆ ಭಾರೀ ರಿಯಾಯ್ತಿ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ತನ್ನ ಹೊಸ 'ಫೆಸ್ಟಿವಲ್ ಆಫ್ ಕಾರ್ಸ್' ಅಭಿಯಾನವನ್ನು ದೇಶಿಯ ಮಾರುಕಟ್ಟೆಯಲ್ಲಿ ಘೋಷಿಸಿದೆ. ಈ ಅಭಿಯಾನದ ಭಾಗವಾಗಿ ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ರೂ. 1.50 ಲಕ್ಷ ಗಳವರೆಗೆ ವಿಶೇಷ ರಿಯಾಯಿತಿ ಮತ್ತು ಇತರ ಕೊಡುಗೆಗಳನ್ನು ನೀಡಲಿದೆ.

ಆಯ್ದ ಕಾರುಗಳ ಮೇಲೆ ಭಾರೀ ರಿಯಾಯ್ತಿ ಘೋಷಿಸಿದ ಟಾಟಾ ಮೋಟಾರ್ಸ್

ಆಟೋಮೊಬೈಲ್ ಕ್ಷೇತ್ರದಲ್ಲಿ ತೀವ್ರ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಉತ್ಪಾದಿತ ವಾಹನಗಳ ಮಾರಾಟ ಮಾರಟ ಮಂದಗತಿಯಲ್ಲಿ ಸಾಗುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಹಲವು ವಾಹನ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಭರ್ಜರಿ ರಿಯಾಯಿತಿ ದರವನ್ನು ಘೋಷಣೆ ಮಾಡಿತ್ತಿದೆ. ಇದೀಗ ಟಾಟಾ ಮೋಟಾರ್ಸ್ ಮುಂದಿನ ದಸಾರ ಮತ್ತು ದೀಪಾವಳಿ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಭಾರೀ ರಿಯಾಯಿತಿ ಘೋಷಣೆ ಮಾಡಿದೆ.

ಆಯ್ದ ಕಾರುಗಳ ಮೇಲೆ ಭಾರೀ ರಿಯಾಯ್ತಿ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್‍‍ನ ಪ್ರಮುಖ ಆಯ್ದ ಮಾದರಿಗಳಲ್ಲಿ ಮಾತ್ರ ರಿಯಾಯಿತಿ ಮತ್ತು ಇತರ ಕೊಡುಗೆಗಳು ಲಭ್ಯವಿರುತ್ತದೆ. ಇದರಲ್ಲಿ ಟಾಟಾ ಹೆಕ್ಸಾ, ಟಾಟಾ ಟಿಯಾಗೋ, ಟಾಟಾ ಟೈಗೊರ್, ಟಾಟಾ ಟಿಯಾಗು ಎನ್‍ಆರ್‍‍ಜಿ, ಟಾಟಾ ನೆಕ್ಸನ್ ಮತ್ತು ಹ್ಯಾರಿಯರ್ ಕಾರಿಗೆ ಈ ಕೊಡುಗೆಗಳು ಲಭ್ಯವಿರುತ್ತದೆ. ಟಾಟಾ ಮೋಟಾರ್ಸ್ ಕಾರುಗಳ ಮಾದರಿ ಮತ್ತು ಮಾರಾಟವಾಗುವ ಪ್ರದೇಶವನ್ನು ಆಧಾರಿಸಿ ರೂ. 50,000 ಸಾವಿರದಿಂದ ರೂ.1.50 ಲಕ್ಷದವರೆಗೆ ರಿಯಾಯಿತಿಯನ್ನು ನೀಡಲಾಗುವುದು.

ಟಾಟಾ ಟೈಗೊರ್

Model Benefits Up To
ಟಾಟಾ ಹೆಕ್ಸಾ Rs 1,50,000
ಟಾಟಾ ನೆಕ್ಸನ್ Rs 85,000
ಟಾಟಾ ಟಿಯಾಗೋ Rs 70,000
ಟಾಟಾ ಟಿಯಾಗೋ ಎನ್‍ಆರ್‍‍ಜಿ Rs 70,000
ಟಾಟಾ ಟೈಗೊರ್ Rs 1,15,000
ಟಾಟಾ ಹ್ಯಾರಿಯರ್ Rs 50,000
ಆಯ್ದ ಕಾರುಗಳ ಮೇಲೆ ಭಾರೀ ರಿಯಾಯ್ತಿ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ತನ್ನ ಶೇಣ್ರಿಯ ಆಯ್ದ ಕಾರುಗಳಲ್ಲಿನ ರಿಯಾಯಿತಿ ಮತ್ತು ಕೊಡುಗೆಗಳು ಪ್ರತಿ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ನೀಡಲಿದೆ. ನಗದು ಬಹುಮಾನ ಹೊರತಾಗಿ ಟಾಟಾ ಮೋಟಾರ್ಸ್ ಇತರ ವಿನಿಮಯ ಕೊಡುಗೆಗಳು, ಕಾರ್ಪೊರೇಟ್ ಪ್ರಯೋಜನಗಳು ಮತ್ತು ಸರ್ಕಾರಿ ನೌಕರರಿಗೆ ನಿರ್ದಿಷ್ಟ ಯೋಜನೆಗಳನ್ನು ಸಹ ನೀಡಲಾಗುವುದು ಎಂದು ಕಂಪನಿ ಘೋಷಿಸಿದೆ.

ಆಯ್ದ ಕಾರುಗಳ ಮೇಲೆ ಭಾರೀ ರಿಯಾಯ್ತಿ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋರ್ಟಾಸ್ ಅನ್-ರೋಡ್ ಬೆಲೆಯ ಜೊತೆಗೆ ಕಡಿಮೆ ಇ‍ಎಂಐ ಪ್ಯಾಕೇಜ್‍‍ಗಳನ್ನು ನೀಡಲು ಕಂಪನಿಯು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ತಿಳಿಸಿದೆ.

ಆಯ್ದ ಕಾರುಗಳ ಮೇಲೆ ಭಾರೀ ರಿಯಾಯ್ತಿ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಮಾರ್ಕೆಟಿಂಗ್ ಮತ್ತು ಕಸ್ಟಮರ್ ಸರ್ಪೋರ್ಟ್, ಸೆಲ್ಸ್ ವಿಭಾಗ ಉಪಾಧ್ಯಕ್ಷ ಎಸ್.ಎನ್ ಬಾರ್ಮನ್ ಮಾತನಾಡಿ, ಹಬ್ಬಗಳ ಕಾಲ ನಮಗೆ ಉತ್ತಮ ಸಮಯವಾಗಿದೆ. ಏಕೆಂದರೆ ನಾವು ನೀಡುವ ಕೊಡುಗೆಯೊಂದಿಗೆ ನಮ್ಮ ಗ್ರಾಹಕರ ಹಬ್ಬದಲ್ಲಿ ಆಚರಣೆಯಲ್ಲಿ ನಾವು ಕೂಡ ಭಾಗವಾಗುತ್ತೇವೆ. ಗ್ರಾಹಕರಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡುತ್ತಿದ್ದೇವೆ. ಈ ವರ್ಷ ನಮ್ಮ ಕೊಡುಗೆಗಳು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ ಮತ್ತು ಉತ್ತಮವಾಗಿದೆ.

ಆಯ್ದ ಕಾರುಗಳ ಮೇಲೆ ಭಾರೀ ರಿಯಾಯ್ತಿ ಘೋಷಿಸಿದ ಟಾಟಾ ಮೋಟಾರ್ಸ್

ಓಣಂ ಮತ್ತು ಗಣೇಶ ಚತುರ್ಥಿ ಹಬ್ಬದ ಗ್ರಾಹಕರಿಂದ ನಮಗೆ ಭಾರೀ ಉತ್ತಮ ಪ್ರತಿಕ್ರಿಯೆ ದೊರತಿದೆ. ಹಬ್ಬದ ಕಾಲದಲ್ಲಿ ಇಡೀ ದೇಶಕ್ಕೆ 'ಫೆಸ್ಟಿವಲ್ ಆಫ್ ಕಾರ್ಸ್' ಅಭಿಯಾನದ ಮೂಲಕ ನಮ್ಮ ಗ್ರಾಹಕರಿಗೆ ಹಬ್ಬಕ್ಕೆ ವಿಶೇಷ ಕೊಡುಗೆ ನೀಡುವ ಮೂಲಕ ಹಬ್ಬಕೆ ಬೇಕಾದ ಮೆರಗನ್ನು ನೀಡುವಲ್ಲಿ ಸಹಕಾರಿಯಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಆಯ್ದ ಕಾರುಗಳ ಮೇಲೆ ಭಾರೀ ರಿಯಾಯ್ತಿ ಘೋಷಿಸಿದ ಟಾಟಾ ಮೋಟಾರ್ಸ್

ಈ ವರ್ಷ ಹಬ್ಬದ ವಿಶೇಷವಾದ ಕೊಡುಗೆಗಳು ಖರೀದಿದಾರರಿಗೆ ಭಾರಿ ಉತ್ತೇಜನವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ, ಇದರಿಂದಾಗಿ ಅವರಿಗೆ ನಮ್ಮ ಬ್ರಾಂಡ್‌ನೊಂದಿಗೆ ಉತ್ತಮ ಒಡನಾಟವನ್ನು ಬೆಳೆಸಿಕೊಳ್ಳುತ್ತೇವೆ. ನಮ್ಮ ಎಲ್ಲ ಗ್ರಾಹಕರು ಮತ್ತು ಪಾಲುದಾರರಿಗೆ ಹಬ್ಬದ ಶುಭಾಶಯಗಳನ್ನು ಕೋರುತ್ತೇವೆ ಎಂದು ಹೇಳಿದರು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಆಯ್ದ ಕಾರುಗಳ ಮೇಲೆ ಭಾರೀ ರಿಯಾಯ್ತಿ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ತನ್ನ ಶ್ರೇಣಿಯಲ್ಲಿ ಆಯ್ದ ಕಾರುಗಳಿಗೆ ವಿಶೇಷ ಕೊಡುಗೆಗಳನ್ನು ರಿಯಾಯಿತಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಆರ್ಥಿಕ ಹಿಂಜರಿತದ ಸಮಯದಲ್ಲಿ ಟಾಟಾ ಮೋಟಾರ್ಸ್ ಈ ವರ್ಷದ ಹಬ್ಬದ ಕಾಲದಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಯತ್ನಿಸುತ್ತಿದೆ.

Article Published On: Monday, September 16, 2019, 11:52 [IST]
English summary
Tata Motors Announces Discounts & Benefits Of Up To Rs 1.50 Lakh On Select Models - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+