ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಮೋಟಾರ್ಸ್ ಕಂಪನಿಯು ಡಿಸೆಂಬರ್ ತಿಂಗಳಿನಲ್ಲಿ ತನ್ನ ಸರಣಿಯ ಪ್ರಮುಖ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ವರ್ಷದ ಅಂತ್ಯದಲ್ಲಿ ಟಾಟಾ ಕಂಪನಿಯು ಬರೊಬ್ಬರಿ ರೂ.1 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಟಿಯಾಗೋ

ಟಾಟಾ ಟಿಯಾಗೋ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಿಗೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದೆ. ಟಿಯಾಗೋ ಪೆಟ್ರೋಲ್ ರೂಪಾಂತರಕ್ಕೆ ರೂ.25,000 ನಗದು ರಿಯಾಯಿತಿ, ರೂ.15,000 ವಿನಿಮಯ ರಿಯಾಯಿತಿ ಮತ್ತು ರೂ.75,000 ಕಾರ್ಪೊರೇಟ್ ರಿಯಾಯಿತಿಯನ್ನು ಘೋಷಿಸಿದೆ. ಡೀಸೆಲ್ ರೂಪಾಂತರಕ್ಕೆ ರೂ.30,000 ನಗದು ರಿಯಾಯಿತಿ, ರೂ.22,500 ವಿನಿಮಯ ರಿಯಾಯಿತಿ ಮತ್ತು ರೂ.7,500 ಕಾರ್ಪೊರೇಟ್ ರಿಯಾಯಿತಿಯನ್ನು ಘೋಷಿಸಿದೆ.

ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಿಯಾಗೋ ಹ್ಯಾಚ್‍‍ಬ್ಯಾಕ್‍‍ನಲ್ಲಿ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. 1.2 ಪೆಟ್ರೋಲ್ ಎಂಜಿನ್ 85 ಬಿ‍ಹೆಚ್‍‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನೂ 1.5 ಡೀಸೆಲ್ ಎಂಜಿನ್ 70 ಬಿ‍‍ಹೆಚ್‍ಪಿ ಪವರ್ ಮತ್ತು 140 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಮೋಟಾರ್ಸ್ ತನ್ನ ಟಿಯಾಗೋ ಫೇಸ್‍‍ಲಿಫ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಕೆಲವು ದಿನಗಳ ಹಿಂದೆ ಟಾಟಾ ಮೋಟಾರ್ಸ್ ಹೊಸ ಟಿಯಾಗೋ ಸ್ಪಾಟ್ ಟೆಸ್ಟ್ ಮಾಡಿದೆ. ಹೊಸ ಟಾಟಾ ಟಿಯಾಗೋ ಕಾರ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಎಕ್ಸ್‌ಟಿ ರೂಪಾಂತರಕ್ಕೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ನೆಕ್ಸಾನ್ ಎಕ್ಸ್‌ಟಿ ರೂಪಾಂತರಕ್ಕೆ ರೂ.50,000 ನಗದು ರಿಯಾಯಿತಿ, ರೂ.20,000 ವಿನಿಮಯ ಬೋನಸ್ ಮತ್ತು ರೂ.7,500 ಕಾರ್ಪೋರೇಟ್ ರಿಯಾಯಿತಿಯನ್ನು ಘೋಷಿಸಿದೆ.

ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ನೆಕ್ಸಾನ್ ಇವಿ ಕಾರು ಬಿಡುಗಡೆಯಾಗಲು ಸಜ್ಜಾಗಿದೆ. ಈ ಕಾರ್ ಅನ್ನು ಹಲವು ಬಾರಿ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಹೊಸ ಟಾಟಾ ನೆಕ್ಸಾನ್ ಇವಿ ಕಾರು ಹೊಸ ಜಿಪ್ಟ್ರಾನ್ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಕಾರು 300 ಕಿ.ಮೀ ವ್ಯಾಪಿಯನ್ನು ಹೊಂದಿದ್ದು, ಫಾಸ್ಟ್ ಚಾರ್ಜ್‍ರ್ ಮತ್ತು ಸ್ಟ್ಯಾಂಡರ್ಡ್ ಹೋಮ್ ಚಾರ್ಜರ್ ಮೂಲಕ ಚಾರ್ಜಿಂಗ್ ಮಾಡಬಹುದು.

ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಟೀಗೊರ್

ಟಾಟಾ ಟೀಗೊರ್ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಟಾಟಾ ಟೀಗೊರ್ ಪೆಟ್ರೋಲ್ ಆವೃತ್ತಿಗೆ ರೂ.30,00 ನಗದು ರಿಯಾಯಿತಿ ಮತ್ತು ರೂ.25,000 ವಿನಿಮಯ ರಿಯಾಯಿತಿಯನ್ನು ಘೋಷಿಸಿದೆ. ಇನ್ನೂ ಡೀಸೆಲ್ ಆವೃತ್ತಿಯ ಮೇಲೆ ರೂ.35,000 ನಗದು ರಿಯಾಯಿತಿ ಮತ್ತು ರೂ.30,000 ವಿನಿಮಯ ರಿಯಾಯಿತಿಯನ್ನು ಘೋಷಿಸಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಕಂಪನಿಯ ದುಬಾರಿ ಎಸ್‍‍ಯುವಿಯಾಗಿದೆ. ಈ ಎಸ್‍‍ಯುವಿಗೆ ಬರೊಬ್ಬರಿ ರೂ.1 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರೊಂದಿಗೆ ಡೀಲರ್‍‍ಗಳು ಇತರ ಕಾಪೋರೇಟ್ ರಿಯಾಯಿತಿ ಘೋಷಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಹ್ಯಾರಿಯರ್ ಎಸ್‌ಯುವಿನಲ್ಲಿ 2 ಲೀಟರ್ 4 ಸಿಲಿಂಡರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 140 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
Tata Harrier discounts increased to Rs 1 lakh - Read in Kannada
Story first published: Sunday, December 8, 2019, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X