ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿ

ಟಾಟಾ ಮೋಟಾರ್ಸ್ ತನ್ನ ಗ್ರಾವಿಟಾಸ್ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಟಾಟಾ ಕಂಪನಿಯು ಭಾರತದಲ್ಲಿ 7 ಸೀಟುಗಳ ಗ್ರಾವಿಟಾಸ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಲಿದೆ. 7 ಸೀಟುಗಳ ಎಸ್‍‍ಯುವಿಯು 2020ರ ಫೆಬ್ರವರಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿ

ಟಾಟಾ ಗ್ರಾವಿಟಾಸ್ ಎಸ್‍‍ಯುವಿಯು ಬಿಡುಗಡೆಗೊಳಿಸುವ ಮೊದಲು ಭಾರತದಲ್ಲಿ ಸ್ಪಾಟ್ ಟೆಸ್ಟ್ ಮಾಡಿದೆ. ಟಾಟಾ ಗ್ರಾವಿಟಾಸ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಕಾರ್ ದೇಕೊ ಬಹಿರಂಗಪಡಿಸಿದೆ. 2020ರ ಏಪ್ರಿಲ್ ತಿಂಗಳಲ್ಲಿ ಜಾರಿಯಾಗಲಿರುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಹೊಸ ಎಸ್‍‍ಯುವಿಯಲ್ಲಿ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಿದೆ. ಹೊಸ ಎಸ್‍‍ಯುವಿಯು ಬಿಎಸ್-6 ಎಂಜಿನ್‍‍ನೊಂದಿಗೆ ಟೆಸ್ಟ್ ಮಾಡಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿ

ಟಾಟಾ ಗ್ರಾವಿಟಾಸ್ ಎಸ್‍‍ಯುವಿನಲ್ಲಿ ತನ್ನ ಕಂಪನಿಯ ಹ್ಯಾರಿಯರ್‍ ಎಸ್‍‍ಯುವಿನಲ್ಲಿ ಇರುವ ಹಾಗೇ 2.0 ಲೀಟರ್ ಕ್ರಯೋಟೆಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. 7 ಸೀಟಿನ ಎಸ್‍‍ಯುವಿಯು ಹೈ ಸ್ಟೇಟ್ ಟ್ಯೂನ್ ಅನ್ನು ಪಡೆಯಲಿದೆ. ಗ್ರಾವಿಟಾಸ್‍ ಎಸ್‍‍ಯುವಿನ ಎಂಜಿನ್‍‍ನಲ್ಲಿ 173 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಟಾಟಾ ಹ್ಯಾರಿಯರ್ ಎಂಜಿನ್‍‍ಗೆ ಹೋಲಿಸಿದರೆ ಹೊಸ ಎಸ್‍‍ಯುವಿಯ ಎಂಜಿನ್ 30 ಬಿ‍ಹೆಚ್‍‍ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿ

ಟಾಟಾ ಹ್ಯಾರಿಯರ್ ಎಸ್‍‍ಯುವಿಯ ರೀತಿಯಲ್ಲೇ 6 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗುವುದು. ಟಾಟಾ ಗ್ರಾವಿಟಾಸ್ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸುವ ಸಾಧ್ಯತೆಗಳಿದೆ. ಆದರೆ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಬಿಡುಗಡೆಯಾದ ನಂತರದ ಹಂತದಲ್ಲಿ ಅಳವಡಿಸಬಹುದು. ಟಾಟಾ ಗ್ರಾವಿಟಾಸ್ ಎಸ್‍‍ಯುವಿ ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ. ಇದರೊಂದಿಗೆ ಹ್ಯಾರಿಯರ್ ಎಸ್‍‍ಯುವಿಯಲ್ಲಿ ಕೂಡ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿರುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿ

ಟಾಟಾ ಗ್ರಾವಿಟಾಸ್ 5 ಸೀಟುಗಳ ಹ್ಯಾರಿಯರ್ ಎಸ್‍‍ಯುವಿಯನ್ನು ಆಧರಿಸಿದೆ. ಹ್ಯಾರಿಯರ್ ಎಸ್‍‍ಯುವಿಯನ್ನು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. 2019ರ ಜಿನೀವಾ ಮೋಟಾರ್ ಶೋದಲ್ಲಿ ಬಜಾರ್ಡ್ ಹೆಸರಿನೊಂದಿಗೆ ಗ್ರಾವಿಟಾಸ್ ಎಸ್‍‍ಯುವಿಯನ್ನು ಅನಾವರಗೊಳಿಸಿತ್ತು. ಹೊಸ 7 ಸೀಟಿನ ಎಸ್‍ಯುವಿ ಹ್ಯಾರಿಯರ್‍‍ಗಿಂತ 62 ಎಂಎಂ ಉದ್ದವನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿ

ಗ್ರಾವಿಟಾಸ್ ಟೇಲ್ ಅನ್ನು ಸಹ ನವೀಕರಿಸಲಾಗಿದೆ ಮತ್ತು ಹ್ಯಾರಿಯರ್‍‍ಗೆ ಹೋಲಿಸಿದರೆ ಬೂಟ್ ಲಿಡ್ ಹೊಂದಿದೆ. ಸಣ್ಣ ಬದಲಾವಣೆಗಳನ್ನು ಹೊರತುಪಡಿಸಿದರೆ ಗ್ರಾವಿಟಾಸ್ ಎಸ್‍‍ಯುವಿಯು ಹೆಚ್ಚಾಗಿ ಹ್ಯಾರಿಯರ್ ಎಸ್‍‍ಯುವಿಗೆ ಹೋಲುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿ

ಟಾಟಾ ಗ್ರಾವಿಟಾಸ್ ಎಸ್‍‍ಯುವಿಯು ಹ್ಯಾರಿಯರ್ ಎಸ್‍‍ಯುವಿಯ ನಂತರ ಬ್ರ್ಯಾಂಡ್‍ನ ಹೊಸ ಒಮೆಗಾ ಆರ್ಕಿಟ್ಕೆಚರ್ ಆಧರಿಸಿದ ಎರಡನೇ ಆವೃತ್ತಿಯಾಗಿದೆ. ಈ ಎಸ್‍‍ಯುವಿ ಟಾಟಾದ ಇತ್ತೀಚಿನ ಇಂಪ್ಯಾಕ್ಟ್ 2.0 ವಿನ್ಯಾಸವನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿ

ಈ ಹೊಸ ವಿನ್ಯಾಸ ಹೊಸ ತಲೆಮಾರಿನ ಟಾಟಾ ನೆಕ್ಸಾನ್, ಟಿಯಾಗೊ ಮತ್ತು ಟೀಗೊರ್ ಆವೃತ್ತಿಗಳೊಂದಿಗೆ ಅಲ್ಟ್ರೋಜ್ ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍‍ನಲ್ಲಿ ಕೂಡ ಇದೆ ವಿನ್ಯಾಸ ಹೊಂದಿರಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿ

ಟಾಟಾ ಗ್ರಾವಿಟಾಸ್ ಎಸ್‍ಯುವಿ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15 ಲಕ್ಷಗಳಾಗಿದೆ. ಟಾಟಾ ಗ್ರಾವಿಟಾಸ್ ಎಸ್‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ತುರಾಸ್ ಜಿ 4 ಮತ್ತು ಟೊಯೋಟಾ ಫಾರ್ಚೂನರ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡಲಿದೆ.

Source: Cardekho

Article Published On: Friday, November 29, 2019, 18:41 [IST]
English summary
Tata Gravitas Spied Undergoing BS6 Emission Testing Ahead Of Launch: Spy Pics & Details - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+