ತಮ್ಮ ಹಾರ್ನ್‍ಬಿಲ್ ಕಾರಿನ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಝಾರ್ಡ್ (ಕಾಸಿನ್ನಿ), ಆಲ್‍ಟ್ರೋಜ್, ಆಲ್‍ಟ್ರೋಜ್ ಇವಿ ಕಾರು ಮತ್ತು ಹೆಚ್2ಎಕ್ಸ್ ಎಂಬ ಮಿನಿ ಎಸ್‍ಯುವಿ ಕಾರನ್ನು ಪ್ರದರ್ಶಿಸಲಾಗಿತ್ತು.

ತಮ್ಮ ಹಾರ್ನ್‍ಬಿಲ್ ಕಾರಿನ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಈಗಾಗಲೇ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಆಲ್‍ಟ್ರೋಜ್ ಮತ್ತು ಬಝಾರ್ಡ್ (ಕಾಸಿನ್ನಿ) ಕಾರುಗಳ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಇದೀಗ ಮತ್ತೊಂದು ಮಿನಿ ಎಸ್‍ಯುವಿ ಕಾರಾಗಿ ಬಿಡಗಡೆಯಾಗಲಿರುವ ಹೆಚ್‍2ಎಕ್ಸ್ ಎಂದು ಕೋಡ್ ನೇಮ್ ಹೊಂದಿರುವ ಹಾರ್ನ್‍ಬಿಲ್ ಅನ್ನು ಪರಿಚಯಿಸಲಿದೆ. ಮಾಹಿತಿಗಳ ಪ್ರಕಾರ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಹಾರ್ನ್‍ಬಿಲ್ ಕಾರನ್ನು ಮಾರುಕಟ್ಟೆಯಲ್ಲಿ ಬಝಾರ್ಡ್ ಮತ್ತು ಆಲ್‍ಟ್ರೋಜ್ ಕಾರು ಬಿಡುಗಡೆಯ ನಂತರವಷ್ಟೆ ಬಿಡುಗಡೆ ಮಾಡುವಯೋಜನೆಯಿದ್ದು, ಮುಂದಿನ ವರ್ಷ ನಡೆಯಲಿರುವ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆ ಮಾಡಲಿದೆ.

ತಮ್ಮ ಹಾರ್ನ್‍ಬಿಲ್ ಕಾರಿನ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಹಾರ್ನ್‌ಬಿಲ್ ಕಾರು ಮಾದರಿಯನ್ನು ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ಗ್ರಾಹಕರ ಬೇಡಿಕೆಯ ಅನುಸಾರವಾಗಿ ನಿರ್ಮಾಣ ಮಾಡಲಾಗಿದ್ದು, ನೆಕ್ಸಾನ್ ಕಾರು ಮಾದರಿಯಿಂದ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆಯಲಾಗಿದೆ.

ಮತ್ತೊಂದು ವಿಚಾರ ಅಂದ್ರೆ, ಹ್ಯಾರಿಯರ್ ಮಾದರಿಯಲ್ಲೇ ಹೊಸ ಹಾರ್ನ್‌ಬಿಲ್ ಕೂಡಾ ಇಂಪ್ಯಾಕ್ಟ್ 2.0 ಡಿಸೈನ್ ಲಾಂಗ್ವೆಜ್ ಅಡಿ ನಿರ್ಮಾಣವಾಗಿದ್ದು, ಟಾಟಾ ಮುಂಬರುವ ಬಹುತೇಕ ಕಾರುಗಳು ಇದೇ ಪ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳ್ಳುತ್ತಿರುವುದು ಕಾರಿನ ವಿನ್ಯಾಸಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗುತ್ತಿವೆ.

ತಮ್ಮ ಹಾರ್ನ್‍ಬಿಲ್ ಕಾರಿನ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಬಿಡುಗಡೆಯಾಗಲಿರುವ ಟಾಟಾ ಹಾರ್ನ್‍ಬಿಲ್ ಮಿನಿ ಎಸ್‍ಯುವಿ ಕಾರು ಟಾಟಾ ಹ್ಯಾರಿಯರ್ ಕಾರಿನಲ್ಲಿ ನೀಡಲದ ಗ್ರಿಲ್ ವಿನ್ಯಾಸ ಮತ್ತು ಸ್ಪ್ಲಿಟ್ ಹೆಡ್‍ಲ್ಯಾಂಪ್ಸ್ ಅನ್ನು ಹೊಂದಿರಲಿದೆ. ಇವುಗಳ ಜೊತೆಗೆ ಆಕ್ರಮಣಕಾರಿ ಫ್ರಂಟ್ ಬಂಪರ್, ಆಕರ್ಷಕಾವದ ವ್ಹೀಲ್ ಆರ್ಚೆಸ್, ಬಾಡಿ ಕ್ಲಾಡಿಂಗ್ ಮತ್ತು ಕಾರಿನ ಅಂದವನ್ನು ಹೆಚ್ಚಿಸಲು ಅಲ್ಲಲ್ಲಿ ಗೆರೆಗಳನ್ನು ನೀಡಲಾಗಿದೆ.

ತಮ್ಮ ಹಾರ್ನ್‍ಬಿಲ್ ಕಾರಿನ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಟಾಟಾ ಹಾರ್ನ್‍ಬಿಲ್ (ಹೆಚ್‍2ಎಕ್ಸ್) 2.5 ಮೀಟರ್ ವ್ಹೀಲ್ ಬೇಸ್, 1.8 ಮೀಟರ್ ಅಗಲ ಮತ್ತು 1.6 ಮೀಟರ್‍‍ನ ಎತ್ತರವನ್ನು ಹೊಂದಿರಲಿದೆ ಎಂಬ ಮಾಹಿತಿಯು ಸಹ ಲಭ್ಯವಾಗಿದೆ. ಆಲ್‍ಟ್ರೋಜ್ ಕಾರಿನ ಹಾಗೆಯೆ ಹಾರ್ನ್‍ಬಿಲ್ ಕೂಡಾ ಇದು ಇನ್-ಹೌಸ್ ಮೂಲಕ ಅಭಿವೃದ್ಧಿ ಹೊಂದಿದ ಸುಧಾರಿತ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಎಎಮ್‌ಪಿ) ಅನ್ನು ಆಧರಿಸಿದೆ.

ತಮ್ಮ ಹಾರ್ನ್‍ಬಿಲ್ ಕಾರಿನ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹೀಗಾಗಿ ಹಾರ್ನ್‌ಬಿಲ್ ಕಾರು ಟಾಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವ ಸಾಧ್ಯತೆಗಳಿದೆ. ಈ ಕಾರು 1.2 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ 3 ಸಿಲೆಂಡರ್ ಪೆಟೋಲ್ ಎಂಜಿನ್ ಅನ್ನು ಹೊಂದಿರಲಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ತಮ್ಮ ಹಾರ್ನ್‍ಬಿಲ್ ಕಾರಿನ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಹಾಗೆಯೆ ಆಧೂನಿಕ ಪ್ಲಾಟ್‍‍ಪಾರ್ಮ್‍ನ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಹಾರ್ನ್‍ಬಿಲ್ ಮೈಕ್ರೋ ಎಸ್‍ಯುವಿ ಐಸಿಇ ಮತ್ತು ಎಲೆಕ್ಟ್ರಿಕ್ ಪವರ್‍‍ಟ್ರೈನ್ ಅನ್ನು ಪಡೆದುಕೊಳ್ಳಲಿದೆ. ಈ ಆಯ್ಕೆಗಳನ್ನು ನೀವು ಟಾಟಾ ಮೋಟಾರ್ಸ್ ನಿರ್ಮಾಣ ಮಾಡುತ್ತಿರುವ ಹೊಸ ಆಲ್‍ಟ್ರೋಜ್ ಕಾರಿನಲ್ಲಿಯು ಸಹ ಕಾಣಬಹುದಾಗಿದೆ.

ತಮ್ಮ ಹಾರ್ನ್‍ಬಿಲ್ ಕಾರಿನ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಎಲೆಕ್ಟ್ರಿಕ್ ಮಾದರಿಯ ಟಾಟಾ ಹಾರ್ನ್‍ಬಿಲ್ ಕಾರುಗಳು ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ, ಇನ್ನಿತರೆ ಫೀಚರ್‍‍ಗಳಾದ ಎಸಿ, ಪವರ್ ವಿಂಡೋಸ್ ಮತ್ತು ಲೈಟ್ಸ್ ಹಾಗು ಸ್ಮಾರ್ಟ್‍‍ಫೋನ್ ಅಪ್ಲಿಕೆಷನ್‍ಗಳನ್ನು ಪಡೆದಿರುವುದಲ್ಲದೆಯೆ ಇನ್ನಿತರೆ ಆಧೂನಿಕ ಕಾರುಗಳಲ್ಲಿ ನೀಡಲಾಗುತ್ತಿರುವ ಇಂಟರ್‍‍‍ನೆಟ್ ಕನೆಕ್ಟಿವಿಟಿಯನ್ನು ಸಹ ಪಡೆದುಕೊಳ್ಳಲಿದೆ.

ತಮ್ಮ ಹಾರ್ನ್‍ಬಿಲ್ ಕಾರಿನ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯು ಹಾರ್ನ್‍ಬಿಲ್ ಮತ್ತು ಆಲ್‍ಟೋಜ್ ಕಾರುಗಳ ಎಲೆಕ್ಟ್ರಿಕ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಆಲ್‍ಟ್ರೋಜ್ ಎಲೆಕ್ಟ್ರಿಕ್ ಮಾದರಿಯ ಬಗ್ಗೆ ನಾವೀಗಾಗಲೇ ತಿಳಿದಿದ್ದು, ಇನ್ನು ಬಿಡುಗಡೆಯಾಗಲಿರುವ ಹಾರ್ನ್‍ಬಿಲ್ ಮಿನಿ ಎಸ್‍ಯುವಿಯ ಎಲೆಕ್ಟ್ರಿಕ್ ಮಾದರಿಯು ಸುಮಾರು 230 ಕಿಲೋಮೀಟರ್ ರೇಂಜ್ ನೀಡುವ ಹಾಗೆ ವಿನ್ಯಾಸ ಮಾಡಲಾಗಿದೆ ಎನ್ನಲಾಗಿದೆ.

ತಮ್ಮ ಹಾರ್ನ್‍ಬಿಲ್ ಕಾರಿನ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

ಈ ಮೂಲಕ ಮಹೀಂದ್ರಾ ಸಂಸ್ಥೆಯ ಕೆಯುವಿ100 ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿರುವ ಹಾರ್ನ್‌ಬಿಲ್ ಕಾರು ಮಾದರಿಯು ರೂ. 4 ಲಕ್ಷದಿಂದ ರೂ.6 ಲಕ್ಷ ಬೆಲೆಗಳೊಂದಿಗೆ ರಸ್ತೆಗಿಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

More from DriveSpark

Article Published On: Wednesday, July 24, 2019, 13:02 [IST]
English summary
Tata H2X (Hornbill) Launching Soon — Next SUV After The Tata Buzzard. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+