ಎಲೆಕ್ಟ್ರಿಕ್ ವರ್ಷನ್‌ನಲ್ಲಿ ಬಿಡುಗಡೆಯಾಗಲಿದೆಯೆಂತೆ ಟಾಟಾ ಹೆಚ್2ಎಕ್ಸ್ ಮಿನಿ ಎಸ್‌ಯುವಿ
ಟಾಟಾ ಸಂಸ್ಥೆಯು ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಮಹತ್ವದ ಯೋಜನೆ ರೂಪಿಸಿ ಕಾರು ಉತ್ಪಾದನೆಗೂ ಚಾಲನೆ ನೀಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರು ಆವೃತ್ತಿಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ. ಇದರಲ್ಲಿ ಮೊನ್ನೆಯಷ್ಟೇ ಅನಾವರಣಗೊಳಿಸಲಾದ ಹೆಚ್2ಎಕ್ಸ್ ಎನ್ನುವ ಮಿನಿ ಎಸ್‌ಯುವಿ ಆವೃತ್ತಿ ಕೂಡಾ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆಯಾಗುವ ಸುಳಿವು ಸಿಕ್ಕಿದೆ.

ಹೌದು, ಟಾಟಾ ಮೋಟಾರ್ಸ್ ಸಂಸ್ಥೆಯು ಕಳೆದ ತಿಂಗಳು ಜಿನೆವಾ ಆಟೋ ಮೇಳದಲ್ಲಿ ಪ್ರದರ್ಶನ ಮಾಡಿದ್ದ ಒಟ್ಟು ನಾಲ್ಕು ಹೊಸ ಕಾರುಗಳಲ್ಲಿ 2 ಕಾರುಗಳು ಎಲೆಕ್ಟ್ರಿಕ್ ವರ್ಷನ್‌ನಲ್ಲಿ ಬಿಡುಗಡೆಯಾಗುವುದು ಖಚಿತವಾಗಿದ್ದು, ಅಲ್‌ಟ್ರೋಜ್ ಎಲೆಕ್ಟ್ರಿಕ್ ಕಾರಿನ ಜೊತೆಗೆ ಹೆಚ್2ಎಕ್ಸ್ ಕಾರು ಕೂಡಾ ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆಯಾಗಲಿದೆಯೆಂತೆ.

ಸದ್ಯ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿರುವ ಟಾಟಾ ಸಂಸ್ಥೆಯು ಹೊಸ ಕಾರುಗಳ ನಿರ್ಮಾಣದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಜಿನೆವಾ ಆಟೋ ಮೇಳದಲ್ಲಿ ಪ್ರದರ್ಶನ ಮಾಡಲಾದ ಆಲ್‌ಟ್ರೊಜ್, ಆಲ್‌ಟ್ರೊಜ್ ಎಲೆಕ್ಟ್ರಿಕ್, ಬಝಾರ್ಡ್ ಮತ್ತು ಮೈಕ್ರೊ ಎಸ್‌ಯುವಿ ಮಾದರಿಯಾದ ಹಾರ್ನ್‌ಬಿಲ್(ಹೆಚ್‌ಎಕ್ಸ್2) ಮಾದರಿಗಳು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿವೆ.

ಇದರಲ್ಲಿ ಹೆಚ್2ಎಕ್ಸ್ ಹಾರ್ನ್‌ಬಿಲ್ ಕಾರು ಮಾದರಿಯನ್ನು ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ಗ್ರಾಹಕರ ಬೇಡಿಕೆಯ ಅನುಸಾರವಾಗಿ ನಿರ್ಮಾಣ ಮಾಡಲಾಗಿದ್ದು, ನೆಕ್ಸಾನ್ ಕಾರು ಮಾದರಿಯಿಂದ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದು ಈ ಹೊಸ ಕಾರನ್ನು ನಿರ್ಮಾಣ ಮಾಡಲಾಗಿದೆ.

ಮತ್ತೊಂದು ವಿಚಾರ ಅಂದ್ರೆ, ಹ್ಯಾರಿಯರ್ ಮಾದರಿಯಲ್ಲೇ ಹೊಸ ಹಾರ್ನ್‌ಬಿಲ್ ಕೂಡಾ ಇಂಪ್ಯಾಕ್ಟ್ 2.0 ಡಿಸೈನ್ ಲಾಂಗ್ವೆಜ್ ಅಡಿ ನಿರ್ಮಾಣವಾಗಿದ್ದು, ಟಾಟಾ ಮುಂಬರುವ ಬಹುತೇಕ ಕಾರುಗಳು ಇದೇ ಪ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳ್ಳುತ್ತಿರುವುದು ಕಾರಿನ ವಿನ್ಯಾಸಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗುತ್ತಿವೆ.

ಒಟ್ಟಿನಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ಹೊಸ ಹೊಸ ಪ್ರಯೋಗಗಳನ್ನು ಕೈಗೊಳ್ಳುತ್ತಿರುವ ಟಾಟಾ ಸಂಸ್ಥೆಯು ಎಸ್‌ಯುವಿ ಮತ್ತು ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಮತ್ತಷ್ಟು ಹೊಸ ಆಯ್ಕೆ ನೀಡುವ ತವಕದಲ್ಲಿದೆ.
MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಹೀಗಾಗಿ ಹಾರ್ನ್‌ಬಿಲ್ ಕಾರು ಟಾಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವ ಸಾಧ್ಯತೆಗಳಿದ್ದು, ನೆಕ್ಸಾನ್ ಕಾರಿನಲ್ಲಿ ಬಳಕೆ ಮಾಡಲಾಗಿರುವ 1.2-ಲೀಟರ್ ರೆವೆಟ್ರೊನ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ವರ್ಷನ್‌ನಲ್ಲಿ ಹಾರ್ನ್‌ಬಿಲ್ ಕಾರನ್ನು ಬಿಡುಗಡೆಗೊಳಿಸುವ ಬಗ್ಗೆ ಟಾಟಾ ಸುಳಿವು ನೀಡಿದೆ.

ಆದರೂ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಟಾಟಾ, ಮುಂಬರುವ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲೂ ಹೊಸ ಹಾರ್ನ್‌ಬಿಲ್ ಪ್ರದರ್ಶನ ಮಾಡಿದ ನಂತರವಷ್ಟೇ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.
MOST READ: ಹೋಂಡಾ ಆಕ್ಟೀವಾ ಸ್ಕೂಟರ್‌ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!

ಈ ಮೂಲಕ ಮಹೀಂದ್ರಾ ಸಂಸ್ಥೆಯ ಕೆಯುವಿ100 ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿರುವ ಹಾರ್ನ್‌ಬಿಲ್ ಕಾರು ಮಾದರಿಯು ರೂ. 4 ಲಕ್ಷದಿಂದ ರೂ.6 ಲಕ್ಷ ಬೆಲೆಗಳೊಂದಿಗೆ ರಸ್ತೆಗಿಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications