ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಟಾಟಾ ಸಂಸ್ಥೆಯು ಕಾರು ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಹ್ಯಾರಿಯರ್ ಬಿಡುಗಡೆ ನಂತರ ಮತ್ತಷ್ಟು ಹೊಸ ಕಾರುಗಳನ್ನು ಹೊರ ತರುವ ಯೋಜನೆಯಲ್ಲಿದೆ. ಹೀಗಾಗಿ ತನ್ನ ಮುಂಬರುವ ಹೊಸ ಕಾರು ಮಾದರಿಗಳನ್ನು ಜಿನೆವಾ ಆಟೋ ಮೇಳದಲ್ಲಿ ಪ್ರದರ್ಶನ ಮಾಡಿದ್ದು, ಇದರಲ್ಲಿ ಮೈಕ್ರೊ ಎಸ್‌ಯುವಿ ಮಾದರಿಯಾದ ಹಾರ್ನ್‌ಬಿಲ್ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಸದ್ಯ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿರುವ ಟಾಟಾ ಸಂಸ್ಥೆಯು ಹೊಸ ಕಾರುಗಳ ನಿರ್ಮಾಣದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಜಿನೆವಾ ಆಟೋ ಮೇಳದಲ್ಲಿ ಪ್ರದರ್ಶನ ಮಾಡಲಾದ ಆಲ್‌ಟ್ರೊಜ್, ಆಲ್‌ಟ್ರೊಜ್ ಎಲೆಕ್ಟ್ರಿಕ್, ಬಝಾರ್ಡ್ ಮತ್ತು ಮೈಕ್ರೊ ಎಸ್‌ಯುವಿ ಮಾದರಿಯಾದ ಹಾರ್ನ್‌ಬಿಲ್(ಹೆಚ್‌ಎಕ್ಸ್2) ಮಾದರಿಗಳು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿವೆ.

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಹಾರ್ನ್‌ಬಿಲ್ ಕಾರು ಮಾದರಿಯನ್ನು ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ಗ್ರಾಹಕರ ಬೇಡಿಕೆಯ ಅನುಸಾರವಾಗಿ ನಿರ್ಮಾಣ ಮಾಡಲಾಗಿದ್ದು, ನೆಕ್ಸಾನ್ ಕಾರು ಮಾದರಿಯಿಂದ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆಯಲಾಗಿದೆ.

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಮತ್ತೊಂದು ವಿಚಾರ ಅಂದ್ರೆ, ಹ್ಯಾರಿಯರ್ ಮಾದರಿಯಲ್ಲೇ ಹೊಸ ಹಾರ್ನ್‌ಬಿಲ್ ಕೂಡಾ ಇಂಪ್ಯಾಕ್ಟ್ 2.0 ಡಿಸೈನ್ ಲಾಂಗ್ವೆಜ್ ಅಡಿ ನಿರ್ಮಾಣವಾಗಿದ್ದು, ಟಾಟಾ ಮುಂಬರುವ ಬಹುತೇಕ ಕಾರುಗಳು ಇದೇ ಪ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳ್ಳುತ್ತಿರುವುದು ಕಾರಿನ ವಿನ್ಯಾಸಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗುತ್ತಿವೆ.

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಒಟ್ಟಿನಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ಹೊಸ ಹೊಸ ಪ್ರಯೋಗಗಳನ್ನು ಕೈಗೊಳ್ಳುತ್ತಿರುವ ಟಾಟಾ ಸಂಸ್ಥೆಯು ಎಸ್‌ಯುವಿ ಮತ್ತು ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಮತ್ತಷ್ಟು ಹೊಸ ಆಯ್ಕೆ ನೀಡುವ ತವಕದಲ್ಲಿದೆ.

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಹೀಗಾಗಿ ಹಾರ್ನ್‌ಬಿಲ್ ಕಾರು ಟಾಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವ ಸಾಧ್ಯತೆಗಳಿದ್ದು, ನೆಕ್ಸಾನ್ ಕಾರಿನಲ್ಲಿ ಬಳಕೆ ಮಾಡಲಾಗಿರುವ 1.2-ಲೀಟರ್ ರೆವೆಟ್ರೊನ್ ಪೆಟ್ರೋಲ್ ಎಂಜಿನ್ ಮತ್ತು 1.05-ಲೀಟರ್ ರಿವೊಟ್ರೊಕ್ ಡೀಸೆಲ್ ಎಂಜಿನ್ ಅನ್ನು ಹಾರ್ನ್‌ಬಿಲ್‌ನಲ್ಲೂ ಜೋಡಿಸುವ ಬಗ್ಗೆ ಟಾಟಾ ಸುಳಿವು ನೀಡಿದೆ.

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಆದರೂ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಟಾಟಾ, ಮುಂಬರುವ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲೂ ಹೊಸ ಹಾರ್ನ್‌ಬಿಲ್ ಪ್ರದರ್ಶನ ಮಾಡಿದ ನಂತರವಷ್ಟೇ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಈ ಮೂಲಕ ಮಹೀಂದ್ರಾ ಸಂಸ್ಥೆಯ ಕೆಯುವಿ100 ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿರುವ ಹಾರ್ನ್‌ಬಿಲ್ ಕಾರು ಮಾದರಿಯು ರೂ. 4 ಲಕ್ಷದಿಂದ ರೂ.6 ಲಕ್ಷ ಬೆಲೆಗಳೊಂದಿಗೆ ರಸ್ತೆಗಿಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಇದರೊಂದಿಗೆ ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಚಾಣಕ್ಷತೆಯ ಆಧಾರದ ಮೇಲೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು, ಬಲಿಷ್ಠತೆ, ಪರ್ಫಾಮೆನ್ಸ್ ಮತ್ತು ದಕ್ಷತೆಯಲ್ಲಿ ಇತರೆ ಅರ್ಬನ್ ಕಾರುಗಳಿಂತಲೂ ಆಲ್‌ಟ್ರೊಜ್ ಉತ್ತಮವಾಗಿರಲಿವೆ ಎಂದಿದೆ.

MOST READ: ಹೋಂಡಾ ಆಕ್ಟೀವಾ ಸ್ಕೂಟರ್‌ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ನೆಕ್ಸಾನ್ ಎಸ್‌ಯುವಿ ಮಾದರಿಗಳಿಂತಲೂ ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಂಡಿರುವ ಆಲ್‌ಟ್ರೊಜ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ಶಾರ್ಪ್ ಎಡ್ಜ್‌ ಮತ್ತು ಸ್ಪೋರ್ಟಿ ಲುಕ್‌ನೊಂದಿಗೆ ಬಲೆನೊ ಹಾಗೂ ಐ20 ಕಾರುಗಳಿಗೆ ಪೈಪೋಟಿ ನೀಡಲಿದೆ.

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಹಾಗೆಯೇ ಬಝರ್ಡ್ ಕಾರು ಕೂಡಾ 7 ಸೀಟರ್‌ ಸೌಲಭ್ಯದೊಂದಿಗೆ 2019ರ ಅಂತ್ಯದಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು,ಕಾರಿನ ಬೆಲೆಯು ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಎಸ್‌ಯುವಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ದೊರೆಯಲಿದೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಮೂಲಗಳ ಪ್ರಕಾರ, ಬಝರ್ಡ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.21 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.25 ಲಕ್ಷ ಬೆಲೆ ಹೊಂದಿರಬಹುದು ಎಂದು ನೀರಿಕ್ಷಿಸಲಾಗಿದ್ದು, ಎಂಡೀವರ್, ಫಾರ್ಚೂನರ್ ಮತ್ತು ಅಲ್ಟುರಾಸ್ ಜಿ4 ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಜಿನೆವಾ ಆಟೋ ಮೇಳದಲ್ಲಿ ಗಮನಸೆಳೆದ ಟಾಟಾ ಹಾರ್ನ್‌ಬಿಲ್

ಒಟ್ಟಿನಲ್ಲಿ ಜೆಎಲ್ಆರ್(ಜಾಗ್ವಾರ್,ಲ್ಯಾಂಡ್ ರೋವರ್, ರೇಂಜ್ ರೋವರ್) ಸಂಸ್ಥೆಯೊಂದಿಗೆ ಜೊತೆಗೂಡಿ ಭಾರತೀಯ ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆ ತರುತ್ತಿರುವ ಟಾಟಾ ಸಂಸ್ಥೆಯು ಅಲ್‌ಟ್ರೊಜ್, ಆಲ್‌ಟ್ರೊಜ್ ಎಲೆಕ್ಟ್ರಿಕ್, ಹೆಚ್‌ಎಕ್ಸ್2 ಮೈಕ್ರೋ ಎಸ್‌ಯುವಿ ಮತ್ತು ಬಝರ್ಡ್ ಮೂಲಕ ಹೊಸ ಬದಲಾವಣೆಗೆ ಕಾರಣವಾಗಲಿದೆ.

Article Published On: Thursday, March 7, 2019, 18:57 [IST]
English summary
2019 Geneva Motor Show: Tata H2X (Hornbill) Micro-SUV Concept Unveiled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+