ಮೇ ತಿಂಗಳ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಹ್ಯಾರಿಯರ್

ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಟಾಟಾ ಹ್ಯಾರಿಯರ್ ಮಾದರಿಯು ಕಳೆದ ಜನವರಿಯಲ್ಲಿ ಬಿಡುಗಡೆಗೊಂಡ ತಿಂಗಳಿನಿಂದಲೂ ಮಾರಾಟದಲ್ಲಿ ಉತ್ತಮ ಬೇಡಿಕೆಯನ್ನು ಕಾಯ್ದುಕೊಂಡು ಬಂದಿದ್ದು, ಮೇ ಅವಧಿಯಲ್ಲೂ ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಿ ಮೂಲಕ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ಮೇ ತಿಂಗಳ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಹ್ಯಾರಿಯರ್

ಮೇ ಅವಧಿಯಲ್ಲಿ ಟಾಟಾ ಹ್ಯಾರಿಯರ್ ಕಾರು 1,779 ಯುನಿಟ್‌ಗಳು ಮಾರಾಟವಾದರೆ, ಮಹೀಂದ್ರಾ ಎಕ್ಸ್‌ಯುವಿ 500 ಮಾದರಿಯು 1,195 ಯುನಿಟ್ ಹಾಗೂ ಜೀಪ್ ಕಂಪಾಸ್ ಮಾದರಿಯು 977 ಯುನಿಟ್ ಮಾರಾಟವಾಗಿದ್ದು, ಅತ್ಯುತ್ತಮ ಡಿಸೈನ್ ಮತ್ತು ಕೈಗೆಟುಕುವ ಬೆಲೆಗಳು ಹ್ಯಾರಿಯರ್ ಕಾರು ಮಾರಾಟದಲ್ಲಿ ಮುನ್ನಡೆ ಸಾಧಿಸಲು ಪ್ರಮುಖ ಕಾರಣವಾಗಿವೆ.

ಮೇ ತಿಂಗಳ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಹ್ಯಾರಿಯರ್

ಕಳೆದ ತಿಂಗಳ ಹಿಂದಷ್ಟೇ ಆ್ಯಪಲ್ ಕಾರ್ ಪ್ಲೇ ಸೌಲಭ್ಯವನ್ನು ಹೊಸ ಹ್ಯಾರಿಯಲ್‌ನಲ್ಲೂ ಇದೀಗ ಉನ್ನತಿಕರಿಸಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯಿಡ್ ಆಟೋ ಸೌಲಭ್ಯವನ್ನು ನೀಡಲಾಗಿದೆ. ಇದು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಸ್ಮಾರ್ಟ್‌ಫೋನ್ ಕನೆಕ್ವಿಟಿ ಮೂಲಕ ಇನ್ಪೋಟೈನ್‌ಮೆಂಟ್ ಸೌಲಭ್ಯವನ್ನು ನಿಯಂತ್ರಣ ಮಾಡಬಹುದಾಗಿದೆ.

ಮೇ ತಿಂಗಳ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಹ್ಯಾರಿಯರ್

ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಮೇ ತಿಂಗಳ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಹ್ಯಾರಿಯರ್

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ಎಸ್‌ಯುವಿ ಮಾದರಿಯ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿರುವುದು ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

ಮೇ ತಿಂಗಳ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಹ್ಯಾರಿಯರ್

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ಮೇ ತಿಂಗಳ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಹ್ಯಾರಿಯರ್

ಸದ್ಯ ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.12.69 ಲಕ್ಷ ಮತ್ತು ಹೈ ಎಂಡ್ ಮಾದರಿಯ ಬೆಲೆಯನ್ನು ರೂ.16.25 ಲಕ್ಷ ಬೆಲೆ ಹೊಂದಿದೆ.

ಮೇ ತಿಂಗಳ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಹ್ಯಾರಿಯರ್

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ಮೇ ತಿಂಗಳ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಹ್ಯಾರಿಯರ್

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಮೇ ತಿಂಗಳ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಹ್ಯಾರಿಯರ್

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

Most Read Articles

Kannada
English summary
Tata Harrier Beats Mahindra XUV500 & Jeep Compass Sales. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X