ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದ ಟಾಟಾ ಹ್ಯಾರಿಯರ್ ಕಾರುಗಳು ಕಳೆದ ವಾರವಷ್ಟೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಬಿಡುಗಡೆಯಾದ ಮೊದಲ ವಾರವೇ ನೀರಿಕ್ಷೆಗಿಂತಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಟಾಟಾ ಸಂಸ್ಥೆಯು ಹೊಸ ಕಾರಿನಲ್ಲಿ ಗ್ರಾಹಕರಿಗೆ ವಿಶೇಷ ಆಯ್ಕೆಯನ್ನು ಒದಗಿಸುತ್ತಿದೆ.

ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಹೌದು, ಇಷ್ಟು ದಿನಗಳ ಕಾಲ ಐಷಾರಾಮಿ ಕಾರುಗಳ ಆಯ್ಕೆಯಲ್ಲಿ ಮಾತ್ರ ಲಭ್ಯವಿರುವ ಆನ್‌ಲೈನ್ ಮೂಲಕ ಕಾರಿನಲ್ಲಿರಬೇಕಾದ ತಾಂತ್ರಿಕ ಸೌಲಭ್ಯಗಳ ಆಯ್ಕೆ ಮಾದರಿಯನ್ನು ಟಾಟಾ ಸಂಸ್ಥೆಯು ಸಹ ಹ್ಯಾರಿಯರ್ ಕಾರುಗಳ ಆಯ್ಕೆಯಲ್ಲೂ ನೀಡಿದ್ದು, ಆನ್‌ಲೈನ್ ಮೂಲಕವೇ ಹೊಸ ಕಾರನ್ನು ನಿಮ್ಮ ಇಷ್ಟದಂತೆ ಸಿದ್ದಪಡಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಅಂದ್ರೆ, ಹೊಸ ಕಾರು ಖರೀದಿಗೂ ಮುನ್ನ ಕಾರಿನಲ್ಲಿ ಕೆಲವು ಕಡ್ಡಾಯ ಸೌಲಭ್ಯಗಳನ್ನು ಹೊರತುಪಡಿಸಿ ಕಾರಿನ ಅಂದವನ್ನು ಹೆಚ್ಚಿಸಲು ಹೆಚ್ಚುವರಿ ಸೌಲಭ್ಯಗಳನ್ನ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವುದಲ್ಲದೇ ಕಾರಿನ ಬಣ್ಣ, ಗ್ರಾಫಿಕ್ಸ್, ಇಂಟಿರಿಯರ್ ವಿಭಾಗದಲ್ಲಿ ನಿಮ್ಮ ಬೇಡಿಕೆ ತಕ್ಕಂತೆ ಸಿದ್ದಪಡಿಸಿಕೊಳ್ಳಬಹುದು.

ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಹೊಸ ಸೌಲಭ್ಯದಿಂದ ಗ್ರಾಹಕರಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ಕಾರಿನ ಸೌಲಭ್ಯಗಳನ್ನ ನಿಗದಿಪಡಿಸಿಕೊಳ್ಳಬಹುದಾಗಿದ್ದು, ಗ್ರಾಹಕರು ಆಯ್ಕೆ ಮಾಡುವ ಸೌಲಭ್ಯಗಳ ಮೇಲೆ ಕಾರಿನ ಬೆಲೆ ನಿಗದಿಯಾಗುತ್ತೆ. ಜೊತೆಗೆ ಅನಾವಶ್ಯಕ ಸೌಲಭ್ಯಗಳ ಕೈಬಿಡುವುದರಿಂದ ಆರ್ಥಿಕವಾಗಿಯೂ ಗ್ರಾಹಕರಿಗೆ ಸಹಕಾರಿಯಾಗುತ್ತೆ ಎನ್ನಬಹುದು.

ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿದೆ.

ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಹ್ಯಾರಿಯರ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿರಲಿದ್ದು, ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.12.69 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು ರೂ.16.25 ಲಕ್ಷಕ್ಕೆ ಖರೀದಿಸಬಹುದು.

ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಇದರಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

ಟಾಟಾ ಹ್ಯಾರಿಯರ್ ಕಾರುನ್ನು ನಿಮ್ಮಇಷ್ಟದಂತೆ ಆನ್‌ಲೈನ್‌ನಲ್ಲೇ ಖರೀದಿಸಿ..!

ಒಟ್ಟಿನಲ್ಲಿ ಪ್ರೀಮಿಯಂ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಟಾಟಾ ಹ್ಯಾರಿಯರ್ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಜೀಪ್ ಕಂಪಾಸ್, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಸಾಕಷ್ಟು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Get Your Tata Harrier Modified Using The Brand’s Online Customisation Platform — The Imaginator. Read in Kannada.
Story first published: Friday, February 1, 2019, 19:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X