ಆಫ್ ರೋಡ್‌ನಲ್ಲಿ ಟಾಟಾ ಹ್ಯಾರಿಯರ್ ಪರ್ಫಾಮೆನ್ಸ್ ಹೇಗಿತ್ತು ಗೊತ್ತಾ?

ಸದ್ಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಭಾರೀ ಪೈಪೋಟಿ ನೀಡುವ ಮೂಲಕ ಎಸ್‌ಯುವಿ ಮಾರಾಟ ಮೂಂಚೂಣಿ ಸಾಧಿಸುತ್ತಿರುವ ಟಾಟಾ ಹ್ಯಾರಿಯರ್ ಕಾರುಗಳು ಆನ್‌ರೋಡ್‌ನಲ್ಲಿ ಅಷ್ಟೇ ಅಲ್ಲದೇ ಆಫ್ ರೋಡ್‌ ಕೌಶಲ್ಯ ಪ್ರದರ್ಶನದಲ್ಲೂ ಸದ್ದು ಮಾಡುತ್ತಿರುವುದು ಎಸ್‌ಯುವಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಆಫ್ ರೋಡ್‌ನಲ್ಲಿ ಟಾಟಾ ಹ್ಯಾರಿಯರ್ ಪರ್ಫಾಮೆನ್ಸ್ ಹೇಗಿತ್ತು ಗೊತ್ತಾ?

ಟಾಟಾ ಸಂಸ್ಥೆಯು ಸದ್ಯ ಜೆಎಲ್ಆರ್ ಜೊತೆಗೂಡಿ ಕಾರುಗಳ ನಿರ್ಮಾಣದಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಗ್ರಾಹಕರ ನೀರಿಕ್ಷೆಗೂ ಮೀರಿ ವರ್ಷದ ಆರಂಭದಲ್ಲಿ ಹ್ಯಾರಿಯರ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಹೊಸ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ತನ್ನ ಪ್ರತಿಸ್ಪರ್ಧಿ ಎಸ್‌ಯುವಿಗಳನ್ನು ಹಿಂದಿಕ್ಕಿ ಕಾರು ಮಾರಾಟದಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದು, ಈ ಹಿನ್ನೆಲೆ ಕಳೆದ ವಾರವಷ್ಟೇ ಟಾಟಾ ಸಂಸ್ಥೆಯು ತನ್ನ ಎಸ್‌ಯುವಿ ಕಾರು ಮಾಲೀಕರಿಗಾಗಿ ವಿಶೇಷ ಡ್ರೈವ್ ಕಲ್ಪಿಸಿತ್ತು.

ಆಫ್ ರೋಡ್‌ನಲ್ಲಿ ಟಾಟಾ ಹ್ಯಾರಿಯರ್ ಪರ್ಫಾಮೆನ್ಸ್ ಹೇಗಿತ್ತು ಗೊತ್ತಾ?

ಭಾರತ ಮತ್ತು ಭೂತಾನ್ ಗಡಿಯಲ್ಲಿ ನಡೆದ ವಿಶೇಷ ಡ್ರೈವ್‌ನಲ್ಲಿ ಹೆಕ್ಸಾ ಕಾರುಗಳ ಜೊತೆಯಲ್ಲಿ ಈ ಬಾರಿ ಹ್ಯಾರಿಯರ್ ಕೂಡಾ ಭಾಗಿಯಾಗುವ ಮೂಲಕ #DRIVEWITHSOUL ಅಭಿಯಾನಕ್ಕೆ ಮತ್ತಷ್ಟು ಮೆರಗು ತಂದಿದ್ದಲ್ಲದೇ ಆಫ್ ರೋಡ್ ಕೌಶಲ್ಯ ಪ್ರದರ್ಶನದಲ್ಲಿ ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಯ್ತು.

ಆಫ್ ರೋಡ್‌ನಲ್ಲಿ ಟಾಟಾ ಹ್ಯಾರಿಯರ್ ಪರ್ಫಾಮೆನ್ಸ್ ಹೇಗಿತ್ತು ಗೊತ್ತಾ?

ಹಿಮಾಲಯ ಪರ್ವತದ ಪಾದ ಬೆಟ್ಟಗಳಲ್ಲಿ ಹರಿಯರುವ ನದಿಗಳನ್ನು ದಾಟುವಲ್ಲಿ ಯಶಸ್ವಿಯಾದ ಹ್ಯಾರಿಯರ್ ಕಾರುಗಳು ಕಠಿಣ ಪ್ರದೇಶಗಳಲ್ಲೂ ಸಲೀಸಾಗಿ ನುಗ್ಗಿ ಬರುವ ಮೂಲಕ ಆನ್ ರೋಡ್‌ನಲ್ಲಿ ಅಷ್ಟೇ ಅಲ್ಲ ಆಫ್ ರೋಡ್‌ನಲ್ಲೂ ಉತ್ತಮ ಪರ್ಫಾಮೆನ್ಸ್ ನೀಡಬಲ್ಲದು ಎನ್ನುವುದನ್ನು ತೊರಿಸಿಕೊಟ್ಟಿತು.

ಆಫ್ ರೋಡ್‌ನಲ್ಲಿ ಟಾಟಾ ಹ್ಯಾರಿಯರ್ ಪರ್ಫಾಮೆನ್ಸ್ ಹೇಗಿತ್ತು ಗೊತ್ತಾ?

ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ. ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಹ್ಯಾರಿಯರ್ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ಸದ್ಯ ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.12.69 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯ ಬೆಲೆಯನ್ನು ರೂ.16.25 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಆಫ್ ರೋಡ್‌ನಲ್ಲಿ ಟಾಟಾ ಹ್ಯಾರಿಯರ್ ಪರ್ಫಾಮೆನ್ಸ್ ಹೇಗಿತ್ತು ಗೊತ್ತಾ?

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಆಫ್ ರೋಡ್‌ನಲ್ಲಿ ಟಾಟಾ ಹ್ಯಾರಿಯರ್ ಪರ್ಫಾಮೆನ್ಸ್ ಹೇಗಿತ್ತು ಗೊತ್ತಾ?

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

ಆಫ್ ರೋಡ್‌ನಲ್ಲಿ ಟಾಟಾ ಹ್ಯಾರಿಯರ್ ಪರ್ಫಾಮೆನ್ಸ್ ಹೇಗಿತ್ತು ಗೊತ್ತಾ?

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಆಫ್ ರೋಡ್‌ನಲ್ಲಿ ಟಾಟಾ ಹ್ಯಾರಿಯರ್ ಪರ್ಫಾಮೆನ್ಸ್ ಹೇಗಿತ್ತು ಗೊತ್ತಾ?

ಒಟ್ಟಿನಲ್ಲಿ ಪ್ರೀಮಿಯಂ ಕಂಪ್ಯಾಕ್ಟ್ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಟಾಟಾ ಹ್ಯಾರಿಯರ್ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ನೀರಿಕ್ಷೆಯಲ್ಲಿರುವ ಪೆಟ್ರೋಲ್ ವರ್ಷನ್ ಒಂದು ಬಂದಲ್ಲಿ ಮತ್ತಷ್ಟು ಬೇಡಿಕೆಯೊಂದಿಗೆ ಜೀಪ್ ಕಂಪಾಸ್, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೂ ಸಾಕಷ್ಟು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Tata Harrier Off-Roading. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X