10 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾದ ಟಾಟಾ ಹ್ಯಾರಿಯರ್

ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳಲ್ಲಿ ಹೆಚ್ಚಿನ ಜನಪ್ರೀಯತೆಯನ್ನು ಪಡೆಯಲು ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ವರ್ಷದ ಪ್ರಾರಂಭದಲ್ಲಿ ತಮ್ಮ ಹ್ಯಾರಿಯರ್ ಕಾರನ್ನು ಬಿಡುಗಡೆ ಮಾಡಲಾಗುತ್ತು. ಈ ಕಾರು ಬಿಡುಗಡೆಗೊಂಡಾಗ ಈ ಕಾರಿನ ವಿನ್ಯಾಸ ಮತ್ತು ಇದರ ಉತ್ಪಾದನಾ ಗುಣಮಟ್ಟದ ವಿಚಾರಗಳಿಗಾಗಿ ಹೆಚ್ಚಾಗಿಯೆ ಸದ್ದು ಮಾಡಿತ್ತು.

10 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾದ ಟಾಟಾ ಹ್ಯಾರಿಯರ್

ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್ ಕಾಲಿಟ್ಟು ಸುಮಾರು 6 ತಿಂಗಳಿನಲ್ಲಿ ಬರೊಬ್ಬರಿ 10,000 ಯೂನಿಟ್ ಮಾರಾಟವಾಗಿದೆ. ಈ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು ಹ್ಯಾರಿಯರ್ ಕಾರನ್ನು ಖರೀದಿ ಮಾಡಿದ ಹ್ಯಾಪಿ ಕಸ್ಟಮರ್ಸ್‍ನ ಅಭಿಪ್ರಾಯವನ್ನು ಸೆರೆಹಾಕಿ ಒಂದು ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಟಾಟಾ ಮೋಟಾರ್ಸ್ ಸಂಸ್ಥೆಯು ಮೊನ್ನೆಯಷ್ಟೆ ಈ ಹ್ಯಾರಿಯರ್ ಕಾರಿನ ಡ್ಯುಯಲ್ ಟೋನ್ ಮಾದರಿಯನ್ನು ಸಹ ಬಿಡುಗಡೆ ಮಾಡಲಾಗಿದ್ದು, ಇನ್ನೇನು ಬಿಎಸ್-6 ಎಂಜಿನ್ ಆಧಾರಿತ ಹ್ಯಾರಿಯರ್ ಕಾರನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಸಧ್ಯ ದೇಶಿಯ ಮಾರುಕಟ್ಟೆಯಲ್ಲಿ ಕಾಲಿಟ್ಟ ಎಂಜಿ ಮೋಟಾರ್ಸ್‍ನ ಹೆಕ್ಟರ್ ಕಾರಿಗೆ ಡಿಮ್ಯಾಂಡ್ ಅಧಿಕವಾಗುತ್ತಿದ್ದು, ಈ ಕಾರು ಬಂದ ನಂತರ್ ಹ್ಯಾರಿಯರ್ ಕಾರಿಗೆ ಬೇಡಿಕೆ ಕಡಿಮೆಯಾಗಿದೆ ಅಂತಾನೇ ಹೇಳ್ಬೋದು. ಏಕೆಂದರೆ ಎಂಜಿ ಹೆಕ್ಟರ್ ಬಿಡುಗಡೆಯಾಗುವುದಕ್ಕು ಮುನ್ನ ಹ್ಯಾರಿಯರ್ ಕಾರು ಬೆಲೆಯಲ್ಲಿ ಏರಿಕೆಯನ್ನು ಕಂಡಿದೆ.

10 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾದ ಟಾಟಾ ಹ್ಯಾರಿಯರ್

ಎಂಜಿ ಹೆಕ್ಟರ್ ಕಾರು ಪ್ರಾರಂಭಿಕವಾಗಿ ಎಕ್ಸ್ ಶೋರುಂ ಪ್ರಕಾರ ರೂ. 12.18 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಸುಮಾರು 21,000 ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಇನ್ನು ಬೆಲೆಯಲ್ಲಿ ಏರಿಕೆಯನ್ನು ಕಂಡ ಟಾಟಾ ಹ್ಯಾರಿಯರ್ ಸಧ್ಯ ಎಕ್ಸ್ ಶೋರುಂ ಪ್ರಕಾರ ರೂ. 13 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

10 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾದ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ವಿನ್ಯಾಸ

ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

10 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾದ ಟಾಟಾ ಹ್ಯಾರಿಯರ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ಎಸ್‌ಯುವಿ ಮಾದರಿಯ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿರುವುದು ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

10 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾದ ಟಾಟಾ ಹ್ಯಾರಿಯರ್

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

10 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾದ ಟಾಟಾ ಹ್ಯಾರಿಯರ್

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

10 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾದ ಟಾಟಾ ಹ್ಯಾರಿಯರ್

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

More from DriveSpark

Article Published On: Monday, July 22, 2019, 9:30 [IST]
English summary
Tata Harrier SUV Crosses 10000 Sales. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+