ಸರ್ಕಾರಿ ವಲಯದಲ್ಲಿ ಟಾಟಾ ಮೋಟಾರ್ಸ್ ಉತ್ಪಾದನೆ ಮಾಡಿರುವ ವಾಹನಗಳಿಗೆ ಭಾರೀ ಬೇಡಿಕೆ...!

ಸೇಫ್ಟಿ ಪರವಾಗಿ ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಉತ್ತಮವಾದ ವಾಹನಗಳನ್ನು ಉತ್ಪಾದನೆ ಮಾಡುತ್ತಿದೆ. ಈ ಸಂಸ್ಥೆಯ ವಾಹನಗಳು ಪ್ರತೀ ತಿಂಗಳ ಟಾಪ್ 10 ಮಾರಾಟವಾದ ಕಾರುಗಳಲ್ಲಿ ಸ್ಥಾನ ಪಡೆಯದಿದ್ದರೂ ಸಹ ಇದೇ ಬೆಸ್ಟ್ ಎಂದು ಕೇವಲ ಗ್ರಾಹಕರು ಮಾತ್ರವಲ್ಲದೇ ಸರ್ಕಾರವು ಕೂಡಾ ನಂಬಿದೆ. ಈ ನಿಟ್ಟಿನಲ್ಲಿ ದೇಶದಲ್ಲಿನ ಕೆಲ ರಾಜ್ಯದ ಸರ್ಕಾರವು 2000ಕ್ಕು ಅಧಿಕವಾದ ವಾಣಿಜ್ಯ ಪ್ರಯಾಣಿಕ ಸಾರಿಗೆ ವಾಹನಗಳನ್ನು ನೀಡಲು ಆರ್ಡರ್ ಮಾಡಿಕೊಂಡಿದೆ.

ಸರ್ಕಾರದಲ್ಲಿ ಟಾಟಾ ಮೋಟಾರ್ಸ್ ಉತ್ಪಾದನೆ ಮಾಡಿರುವ ವಾಹನಗಳಿಗೆ ಭಾರೀ ಬೇಡಿಕೆ...!

ಹೌದು, ದೇಶದ ಹಲವಾರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ 2500ಕ್ಕು ಹೆಚ್ಚು ವಾಣಿಜ್ಯ ಪ್ರಯಾಣಿಕ ಸಾರಿಗೆ ವಾಹನಗಳನ್ನು ಸರಬರಾಜು ಮಾಡಲು ಟಾಟಾ ಮೋಟಾರ್ಸ್ ಆದೇಶಗಳನ್ನು ಪಡೆದಿದೆ. ಗುಜರಾತ್ ಸ್ಟೇಟ್ ರೋಡ್‍ವೇಸ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ ನಿಂದ 1045 ಬಸ್‍ಗಳನ್ನು ಉತ್ಪಾದನೆ ಮಾಡಬೇಕೆಂಬ ಆದೇಶವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಸರ್ಕಾರದಲ್ಲಿ ಟಾಟಾ ಮೋಟಾರ್ಸ್ ಉತ್ಪಾದನೆ ಮಾಡಿರುವ ವಾಹನಗಳಿಗೆ ಭಾರೀ ಬೇಡಿಕೆ...!

ಅವುಗಳಲ್ಲಿ 695 ಸಂಪೂರ್ಣ-ನಿರ್ಮಿತ ಮಿಡಿ-ಬಸ್ಸುಗಳು ಮತ್ತು 350 12m ಚಾಸಿಸ್ ಒಳಗೊಂಡಿರಲಿದೆ. ಇದರ ಜೊತೆಗೆ, ಉತ್ತರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಹರಿಯಾಣದಲ್ಲಿ ರಾಷ್ಟ್ರೀಯ ಆರೋಗ್ಯ ಆಯೋಗಕ್ಕೆ 1000 ವಿಂಗರ್ ಆಂಬ್ಯುಲೆನ್ಸ್ ಗಳನ್ನು ತಯಾರಿಸುವ ಆರ್ಡರ್ ಅನ್ನು ಸಹ ಪಡೆದುಕೊಂಡಿದೆ. ಹೊಸ ಆದೇಶವು ಉತ್ತರ ಪ್ರದೇಶದ ಕೊನೆಯ ತ್ರೈಮಾಸಿಕದಲ್ಲಿ ಪಡೆದ 812 ಆಂಬ್ಯುಲೆನ್ಸ್ಗಳಿಗಾಗಿ ಕ್ರಮಕ್ಕೆ ಹೆಚ್ಚುವರಿಯಾಗಿರುತ್ತದೆ.

MOST READ: ಸೇಫ್ಟಿ ಪರವಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ವಾಹನಗಳನ್ನೆ ನೀಡುತ್ತೇವೆ - ಟಾಟಾ ಮೋಟಾರ್ಸ್

ಸರ್ಕಾರದಲ್ಲಿ ಟಾಟಾ ಮೋಟಾರ್ಸ್ ಉತ್ಪಾದನೆ ಮಾಡಿರುವ ವಾಹನಗಳಿಗೆ ಭಾರೀ ಬೇಡಿಕೆ...!

ಹೊಸ ಆದೇಶಗಳ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಅಧ್ಯಕ್ಷ ಸಿ.ವಿ.ಬಿ.ಯು. ಗಿರೀಶ್ ವಾಘ್, "ಸಾರ್ವಜನಿಕರಿಗೆ ಸಾರಿಗೆಯ ಬೇಡಿಕೆಯು ತ್ವರಿತವಾಗಿ ಹೆಚ್ಚುತ್ತಿದೆ, ನಾಗರಿಕರಿಗೆ ಸ್ಮಾರ್ಟ್, ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸುವ ಕಡೆಗೆ ಸರಕಾರದ ಒತ್ತಡ ಹೆಚ್ಚುತ್ತಿದೆ. ಪ್ರಯಾಣಿಕರಿಗೆ ಸಮಕಾಲೀನ ಬಸ್ಸುಗಳನ್ನು ಒದಗಿಸುವುದಕ್ಕಾಗಿ ವಿವಿಧ ಮತ್ತು ಬಸ್ ತಯಾರಕ ಸಂಸ್ಥೆಗಳ ಜೊತೆಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಸರ್ಕಾರದಲ್ಲಿ ಟಾಟಾ ಮೋಟಾರ್ಸ್ ಉತ್ಪಾದನೆ ಮಾಡಿರುವ ವಾಹನಗಳಿಗೆ ಭಾರೀ ಬೇಡಿಕೆ...!

ಇವುಗಳ ಜೊತೆಗೆ ಭಾರತೀಯ ಸೇನೆಯಲ್ಲಿ ಈಗಾಗಲೇ ಹತ್ತಾರು ಬಗೆಯ ಸಾವಿರಾರು ಯುದ್ದ ವಾಹನಗಳು ಸೇವೆಯಲ್ಲಿದ್ದು, ಇದೀಗ ಟಾಟಾ ಮೋಟಾರ್ಸ್ ನಿರ್ಮಾಣದ ಹೊಚ್ಚ ಹೊಸ ಮಾದರಿಯ 4x4 ಮೈನ್ ಪ್ರೊಟೆಕ್ಟೆಡ್ ವೆಹಿಕಲ್(ಎಂಪಿವಿ),ಮರ್ಲಿನ್ ಎಲ್ಎಸ್‌ವಿ ಮತ್ತು ವ್ಯಾಪ್ 8x8 ಇನ್ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್ (ಐಸಿವಿ) ವಾಹನಗಳು ಸೇನೆಗೆ ಮತ್ತಷ್ಟು ಬಲ ತುಂಬಲಿವೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಸರ್ಕಾರದಲ್ಲಿ ಟಾಟಾ ಮೋಟಾರ್ಸ್ ಉತ್ಪಾದನೆ ಮಾಡಿರುವ ವಾಹನಗಳಿಗೆ ಭಾರೀ ಬೇಡಿಕೆ...!

ಟಾಟಾ ಮೋಟಾರ್ಸ್ ಸಂಸ್ಥೆಯು ಕಳೆದ ವರ್ಷ ಸೆಪ್ಟೆಂಬರ್ 15 ರಂದು ಪುಣೆನಲ್ಲಿ ನಡೆದ ಎರಡು ದಿನಗಳ ಬಿಮ್ಸ್ಟೆಕ್ ಆರ್ಮಿ ಮುಖ್ಯಸ್ಥರ ಸಮಾವೇಶದಲ್ಲಿ ಸ್ವತಂತ್ರವಾಗಿ ನಿರ್ಮಿಸಲ್ಪಟ್ಟ ಹೊಸ ರಕ್ಷಣಾ ವಾಹನಗಳನ್ನು ಪ್ರದರ್ಶನ ಮಾಡಿದ್ದು, ಇದೀಗ ಹೊಸ ವಾಹನಗಳನ್ನು ಸೇನೆಗೆ ಹಸ್ತಾಂತರಕ್ಕೆ ಸಿದ್ದಗೊಳ್ಳುತ್ತಿವೆ.

Source: Auto NDTV

Most Read Articles

Kannada
English summary
Tata Motors Bags Orders To Supply For 2500 Commercial Passenger Transport Vehicles From Public Sector Institutions. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X