ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

ನಮಗೆ ಗೊತ್ತಿರುವ ಹಾಗೆ ಟಾಟಾ ಸಂಸ್ಥೆಯು ನೆಕ್ಸಾನ್ ಮತ್ತು ಹ್ಯಾರಿಯರ್ ಬಿಡುಗಡೆಯ ನಂತರ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಹೊಸ ಬದಲಾವಣೆಗಳನ್ನು ತರುತ್ತಿದ್ದು, ಅಗ್ಗದ ಬೆಲೆ ಕಾರುಗಳಿಂತ ಪ್ರಯಾಣಿಕ ರಕ್ಷಣೆಗಾಗಿ ಗುಣಮಟ್ಟದ ಕಾರು ಅಭಿವೃದ್ಧಿಗಾಗಿ ಮಹತ್ವದ ಹೆಜ್ಜೆಯಿಟ್ಟಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

ಟಾಟಾ ಸಂಸ್ಥೆಯು ಈ ಹಿಂದೆ 2009ರಲ್ಲಿ ಅಗ್ಗದ ಬೆಲೆಯ ನ್ಯಾನೋ ಕಾರು ಆವೃತ್ತಿಯನ್ನು ಬಿಡುಗಡೆಗೊಳಿಸುವ ಮೂಲಕ ಲಕ್ಷಾಂತರ ಮಧ್ಯಮ ವರ್ಗದವರ ಕಾರು ಖರೀದಿಯ ಕನಸನ್ನು ನನಸು ಮಾಡಿತ್ತು. ಆದ್ರೆ ಭಾರತೀಯ ಆಟೋ ಉದ್ಯಮದಲ್ಲಿ ಆಗುತ್ತಿರುವ ತೀವ್ರಗತಿಯ ಬೆಳವಣಿಗೆಯಿಂದಾಗಿ ನ್ಯಾನೋ ಕಾರು ಮಾರಾಟವು ಮುಂದಿನ ಕೆಲವೇ ದಿನಗಳಲ್ಲಿ ಸ್ಥಗಿತಗೊಳ್ಳಲಿದ್ದು, ನ್ಯಾನೋ ಕಾರಿಗೆ ಪರ್ಯಾಯವಾಗಿ ಮತ್ತೊಂದು ವಿನೂತನ ಸಣ್ಣ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

ಹೌದು, ಟಾಟಾ ಸಂಸ್ಥೆಯು ಸದ್ಯ ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್) ಜೊತೆಗೂಡಿ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದ್ದು, ಮುಂದಿನ 2 ವರ್ಷಗಳ ಅವಧಿಯಲ್ಲಿ ಐದಕ್ಕೂ ಹೆಚ್ಚು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಆಲ್‌ಟ್ರೊಜ್, ಬಝರ್ಡ್ ಮತ್ತು ಹಾರ್ನ್‌ಬಿಲ್ ಸ್ಮಾಲ್ ಎಸ್‌ಯುವಿ ಕಾರುಗಳನ್ನು ಈಗಾಗಲೇ ಜಿನೆವಾ ಆಟೋ ಮೇಳದಲ್ಲಿ ಪ್ರದರ್ಶನ ಮಾಡಿರುವ ಟಾಟಾ ಸಂಸ್ಥೆಯು ಇದೀಗ ಮೊದಲ ಬಾರಿಗೆ ಸಿ ಕ್ಯೂಬ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ.

ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

ಸದ್ಯ ಮಾರುಕಟ್ಟೆಯಲ್ಲಿರುವ ಟಿಯಾಗೋ ಹ್ಯಾಚ್‌ಬ್ಯಾಕ್ ಕಾರಿಗಿಂತ ಚಿಕ್ಕದಾಗಿರುವ ಸಿ ಕ್ಯೂಬ್ ಕಾನ್ಸೆಪ್ಟ್ ಕಾರು ಸಣ್ಣ ಕಾರು ಮಾರಾಟ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಎಂಟ್ರಿ ಲೆವಲ್‌ ಹ್ಯಾಚ್‌ಬ್ಯಾಕ್ ಕಾರುಗಳ ವಿಭಾಗದಲ್ಲಿ ಜನಪ್ರಿಯತೆ ಸಾಧಿಸಿರುವ ಆಲ್ಟೋ, ಸ್ಯಾಂಟ್ರೋ ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಇದು ಪ್ರಬಲ ಪೈಪೋಟಿಯಾಗಲಿದೆ.

ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

ಇತ್ತೀಚೆಗೆ ಆಟೋ ಮಾರುಕಟ್ಟೆಯಲ್ಲಿ ಆಗುತ್ತಿರುವ ಕೆಲವು ಬೆಳವಣಿಗಳಿಂದಾಗಿ ನ್ಯಾನೋ ಕಾರಿನ ಬೇಡಿಕೆಯು ಸಂಪೂರ್ಣವಾಗಿ ನೆಲಕಚ್ಚಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸೌಲಭ್ಯಗಳು ಇಲ್ಲದಿರುವ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ 1ರಿಂದ ಜಾರಿಗೆ ಬರುತ್ತಿರುವ ಹೊಸ ನಿಯಮಗಳಿಗೆ ಅನುಗುಣವಾಗಿ ನ್ಯಾನೋ ಕಾರನ್ನು ಸ್ಥಗಿತಗೊಳಿಸಲಾಗುತ್ತಿದೆ.

ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

#SAFERCARSFORINDIA ಅಭಿಯಾನದಡಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೊಸ ಕಾರುಗಳ ಸುರಕ್ಷೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್‌ಗಳನ್ನು ಹಮ್ಮಿಕೊಂಡಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಜನಪ್ರಿಯ ಸಂಸ್ಥೆಯ ಪ್ರಮುಖ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿದೆ.

ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

ಇದರಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿರುವ ಹೊಸ ಕಾರುಗಳಿಗೆ ಮಾತ್ರವೇ ಮಾರಾಟಕ್ಕೆ ಅವಕಾಶ ನೀಡುವ ಹೊಸ ನಿಯಮ ಜಾರಿಗೆ ತರಲಾಗುತ್ತಿದ್ದು, ಮುಂಬರುವ ಅಕ್ಟೋಬರ್ 1ರಿಂದಲೇ ನ್ಯಾನೋ ಸೇರಿದಂತೆ ಹಲವು ಕಾರು ಮಾದರಿಗಳು ಮಾರುಕಟ್ಟೆಗೆ ಗುಡ್ ಬೈ ಹೇಳಲಿವೆ.

MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

ಇದೇ ಕಾರಣಕ್ಕೆ ಟಾಟಾ ಸಂಸ್ಥೆಯು ನ್ಯಾನೋ ಕಾರಿನ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಿದ್ದು, ನ್ಯಾನೋ ಕಾರಿಗೆ ಪರ್ಯಾಯವಾಗಿ ಸಿ ಕ್ಯೂಬ್ ಕಾನ್ಸೆಪ್ಟ್ ಕಾರನ್ನು ಅಭಿವೃದ್ಧಿಗೊಳಿಸಿ ಪ್ರದರ್ಶನ ಮಾಡಿದೆ.

ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

ಜೊತೆಗೆ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಕಾರುಗಳ ಅಭಿವೃದ್ಧಿಯಲ್ಲಿ ಹೊಸ ಬದಲಾವಣೆಗೆ ನಾಂದಿಹಾಡಿರುವ ಟಾಟಾ ಸಂಸ್ಥೆಯು ಕಾರುಗಳ ಉತ್ಪಾದನೆಗಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಅಲ್ಫಾ ಮತ್ತು ಒಮೆಗಾ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡುತ್ತಿದ್ದು, ಸಿ ಕ್ಯೂಬ್ ಕಾನ್ಸೆಪ್ಟ್ ಕಾರು ಕೂಡಾ ಇದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಉತ್ಪಾದನೆಗೊಳ್ಳಲಿದೆ.

MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ನ್ಯಾನೋ ನಂತರ ಮೊತ್ತೊಂದು ಸಣ್ಣ ಕಾರು ಬಿಡುಗಡೆಗೊಳಿಸಲಿದೆ ಟಾಟಾ..!

ಹೀಗಾಗಿ ಟಾಟಾ ಸಣ್ಣ ಕಾರಿನ ಬೆಲೆಯು ರೂ.2 ಲಕ್ಷದಿಂದ ರೂ.2.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಾಗಲಿವೆ. ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಹೊಸದಾಗಿ ಉತ್ಪಾದನೆಗೊಳ್ಳುತ್ತಿರುವ ಪ್ರತಿಯೊಂದು ಟಾಟಾ ಹೊಸ ಕಾರಿನಲ್ಲೂ ಗರಿಷ್ಠ ಸುರಕ್ಷತೆಯ 5 ಸ್ಟಾರ್ ರೇಟಿಂಗ್ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗುತ್ತಿದ್ದು, ಸಿ ಕ್ಯೂಬ್ ಕಾನ್ಸೆಪ್ಟ್ ಕಾರು ಕೂಡಾ 5 ಸ್ಟಾರ್ ರೇಟಿಂಗ್‌ನೊಂದಿಗೆ 2020ರ ಆರಂಭದಲ್ಲಿ ರಸ್ತೆಗಿಳಿಯಲಿವೆ.

Most Read Articles

Kannada
English summary
Tata Motors Plans To Launch New Affordable Hatchback- Will Rival Maruti Alto, Renault Kwid. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X