ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ಕಾರು ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಪರಿಚಯಿಸಿದ್ದು, ಪ್ರೊ ಎಡಿಷನ್‌ಗಳಲ್ಲಿ ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆಯಬಹುದಾಗಿದೆ.

ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ಟಾಟಾ ಸಂಸ್ಥೆಯ ಹ್ಯಾರಿಯರ್ ಎಸ್‌ಯುವಿ, ಹೆಕ್ಸಾ ಎಸ್‌ಯುವಿ, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ, ಟಿಗೋರ್ ಕಂಪ್ಯಾಕ್ಟ್ ಸೆಡಾನ್, ಟಿಯಾಗೋ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ ಮಾತ್ರವಲ್ಲದೇ ಈಗಾಗಲೇ ಖರೀದಿ ಮಾಡಲಾಗಿರುವ ಕಾರುಗಳಲ್ಲೂ ಸಹ ಹೊಸ ಪ್ರೊ ಎಡಿಷನ್ ಪ್ಯಾಕೇಜ್ ಮೂಲಕ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಅಪ್‌ಗ್ರೆಡ್ ಮಾಡಿಕೊಳ್ಳಬಹುದಾಗಿದೆ.

ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ಪ್ರೊ ಎಡಿಷನ್ ಪ್ಯಾಕೇಜ್ ರೂ.29,999 ರಿಂದ ಆರಂಭವಾಗಿ ಹೈ ಎಂಡ್ ಮಾದರಿಗೆ ರೂ. 1,09,999 ದರ ನಿಗದಿ ಮಾಡಲಾಗಿದ್ದು, ದರಗಳಿಗೆ ಅನುಗುಣವಾಗಿ ವಿವಿಧ ಮಾದರಿಯ ಪ್ರೀಮಿಯಂ ಫೀಚರ್ಸ್ ಪ್ಯಾಕೇಜ್ ನೀಡಲಾಗಿದೆ.

ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ಪ್ರೋ ಎಡಿಷನ್ ಪ್ಯಾಕೇಜ್ ದರಗಳು

ಹ್ಯಾರಿಯರ್ ಎಸ್‌ಯುವಿ- 1,09,999

ಹೆಕ್ಸಾ ಎಸ್‌ಯುವಿ- 99,999

ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ- 37,999

ಟಿಗೋರ್ ಕಂಪ್ಯಾಕ್ಟ್ ಸೆಡಾನ್- 29,999

ಟಿಯಾಗೋ ಹ್ಯಾಚ್‌ಬ್ಯಾಕ್- 29,999

ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ಪ್ರೊ ಎಡಿಷನ್ ಪ್ಯಾಕೇಜ್‌ನಲ್ಲಿ ಘೋಷಣೆ ಮಾಡಿರುವಂತೆ ವಿವಿಧ ಮಾದರಿಗಳ ಮೇಲೆ ದರಗಳಿಗೆ ಅನುಗುಣವಾಗಿ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಆಸಕ್ತ ಗ್ರಾಹಕರಿಗಾಗಿ ಈ ಹೊಸ ಅಪ್‌ಗ್ರೆಡ್ ಆಯ್ಕೆಯನ್ನು ನೀಡುತ್ತಿದೆ. ಪ್ರೋ ಎಡಿಷನ್‌ನಲ್ಲಿ ಪ್ರತ್ಯೇಕವಾದ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗುತ್ತಿದ್ದು, ಪ್ಯಾಕೇಜ್‌ನಲ್ಲಿರುವ ಸೌಲಭ್ಯಗಳನ್ನು ಹೊರತುಪಡಿಸಿ ಹೆಚ್ಚುವರಿ ಸೌಲಭ್ಯಗಳು ಬೇಕಿದ್ದಲ್ಲಿ ಹೆಚ್ಚುವರಿ ದರ ಪಾವತಿ ಮಾಡಬೇಕಾಗುತ್ತೆ. ಹಾಗಾದ್ರೆ ಪ್ರೊ ಎಡಿಷನ್ ಪ್ಯಾಕೇಜ್ ಯಾವೆಲ್ಲಾ ಸೌಲಭ್ಯಗಳಿವೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ಹ್ಯಾರಿಯರ್ ಎಸ್‌ಯುವಿ

ಗ್ರಾಹಕರ ಬೇಡಿಕೆಯೆಂತೆ ಟಾಟಾ ಸಂಸ್ಥೆಯು ಹ್ಯಾರಿಯರ್ ಎಸ್‌ಯುವಿ ಮಾದರಿಯಲ್ಲಿ ಈಗಾಗಲೇ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಇದೀಗ ಪ್ರೊ ಎಡಿಷನ್ ಪ್ಯಾಕೇಜ್ ಮೂಲಕ ಆಟೋಮ್ಯಾಟಿಕ್ ಸನ್‌ರೂಫ್, ಸನ್‌ಶೈಡ್ಸ್, ಫ್ರಂಟ್ ಪಾರ್ಕಿಂಗ್ ಕ್ಯಾಮೆರಾ, ವೈರ್‌ಲೆಸ್ ಮೊಬೈಲ್ ಹೋಲ್ಡರ್, ಆ್ಯಪ್ ಬೇಸ್ಡ್ ಟಿಪಿಎಂಎಸ್, ಆ್ಯಂಬಿಯೆಂಟ್ ಮೂಡ್ ಲೈಟಿಂಗ್, ಬ್ಯಾನೆಟ್ ಮಸ್ಕಾಟ್, ಹ್ಯುಮಾನಿಟಿ ಲೈನ್ ಕ್ರೋಮ್ ಮತ್ತು ಎಕ್ಸಾಸ್ಟ್ ಕ್ರೋಮ್ ಪಡೆದುಕೊಂಡಿದೆ.

ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ಇನ್ನುಳಿದಂತೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುವ ಫೀಚರ್ಸ್‌ಗಳು ಸಹ ಹ್ಯಾರಿಯರ್ ಖರೀದಿಯಲ್ಲಿ ಸಾಮಾನ್ಯವಾಗಿದ್ದು, ವೆರಿಯೆಂಟ್‍ಗಳಿಗೆ ಅನುಗುಣವಾಗಿ ಹ್ಯಾರಿಯರ್ ಕಾರು ರೂ.13 ಲಕ್ಷದಿಂದ ಹೈ ಎಂಡ್ ಮಾದರಿಯು 16.75 ಲಕ್ಷ ಬೆಲೆ ಹೊಂದಿದೆ. ಪ್ರೊ ಎಡಿಷನ್‌ ಪ್ಯಾಕೇಜ್‌ಗೆ ಹೆಚ್ಚುವರಿಯಾಗಿ ರೂ. 1,09,999 ಪಾವತಿಸಬೇಕು.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ಹೆಕ್ಸಾ ಎಸ್‌ಯುವಿ

ಹೆಕ್ಸಾ ಎಸ್‌ಯುವಿ ಮೇಲೆ ಘೋಷಣೆ ಮಾಡಲಾಗಿರುವ ಪ್ರೊ ಎಡಿಷನ್ ಪ್ಯಾಕೇಜ್ ರೂ. 99,999 ಬೆಲೆ ಹೊಂದಿದ್ದು, ಪ್ರೀಮಿಯಂ ಫೀಚರ್ಸ್‌ಗಳಾದ ಆಟೋಮ್ಯಾಟಿಕ್ ಸನ್‌ರೂಫ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಮೊಬೈಲ್ ಹೊಲ್ಡರ್, ಆ್ಯಪ್ ಬೇಸ್ಡ್ ಟಿಪಿಎಂಎಸ್ ಮತ್ತು ಆ್ಯಂಬಿಯೆಂಟ್ ಮೂಡ್ ಲೈಟಿಂಗ್ ಸೌಲಭ್ಯವನ್ನು ಹೊಂದಿದೆ.

MOST READ: ದೋಷಪೂರಿತ ಸ್ಕೂಟರ್ ಮಾರಾಟ ಮಾಡಿದ ಡೀಲರ್‌ಗೆ ಬಿತ್ತು ದಂಡ..!

ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ

ಜನಪ್ರಿಯ ಕಾರು ಮಾದರಿಯಾದ ನೆಕ್ಸಾನ್ ಕಾರಿಗೆ ಪ್ರೊ ಎಡಿಷನ್ ಪ್ಯಾಕೇಜ್ ಅಳವಡಿಸಿಕೊಳ್ಳಲು ರೂ.37,999 ನಿಗದಿ ಮಾಡಲಾಗಿದ್ದು, ಹೊಸ ಪ್ರೀಮಿಯಂ ಫೀಚರ್ಸ್ ಪ್ಯಾಕೇಜ್‌ನಲ್ಲಿ ಸನ್‌ರೂಫ್ ಪಾಪ್ ಅಪ್, ಆ್ಯಂಬಿಯೆಂಟ್ ಮೂಡ್ ಲೈಟಿಂಗ್, ಸನ್‌ಶೈಡ್ಸ್ ಮ್ಯಾಗ್ನೆಟಿಕ್, ಆ್ಯಪ್ ಬೇಸ್ಡ್ ಟಿಪಿಎಂಎಸ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಮತ್ತು ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ ನೀಡಲಾಗಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ಟಿಗೋರ್ ಕಂಪ್ಯಾಕ್ಟ್ ಸೆಡಾನ್

ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯಲ್ಲಿ ಮುಂಚೂಣಿಯಲ್ಲಿರುವ ಟಿಗೋರ್ ಕಾರಿನಲ್ಲಿ ಹೆಚ್ಚುವರಿ ಪ್ರೀಮಿಯಂ ಫೀಚರ್ಸ್‌ಗಾಗಿ ರೂ.29,999 ಪಾವತಿಸಿ ಪ್ರೊ ಎಡಿಷನ್ ಖರೀದಿಸಬಹುದಾಗಿದ್ದು, ಹೊಸ ಪ್ಯಾಕೇಜ್‌ನಲ್ಲಿ ಸನ್‌ರೂಫ್ ಪಾಪ್ ಅಪ್, ಆ್ಯಂಬಿಯೆಂಟ್ ಮೂಡ್ ಲೈಟಿಂಗ್, ಸನ್‌ಶೈಡ್ಸ್ ಮ್ಯಾಗ್ನೆಟಿಕ್, ಆರ್ಮ್ ರೆಸ್ಟ್ ಮತ್ತು ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ ಸೌಲಭ್ಯವಿದೆ.

ಗ್ರಾಹಕರ ಆಕರ್ಷಣೆಗಾಗಿ ಟಾಟಾ ಪ್ರಮುಖ ಕಾರುಗಳಲ್ಲಿ ಪ್ರೊ ಎಡಿಷನ್ ಪ್ಯಾಕೇಜ್ ಘೋಷಣೆ

ಟಿಯಾಗೋ ಹ್ಯಾಚ್‌ಬ್ಯಾಕ್

ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾದ ಟಿಯಾಗೋದಲ್ಲೂ ಸಹ ಪ್ರೊ ಎಡಿಷನ್ ಪ್ಯಾಕೇಜ್ ಘೋಷಿಸಲಾಗಿದ್ದು, ಪ್ರೀಮಿಯಂ ಫೀಚರ್ಸ್‌ಗಳಾದ ಸನ್‌ರೂಫ್ ಪಾಪ್ ಅಪ್, ಆ್ಯಂಬಿಯೆಂಟ್ ಮೂಡ್ ಲೈಟಿಂಗ್, ಸನ್‌ಶೈಡ್ಸ್ ಮ್ಯಾಗ್ನೆಟಿಕ್, ಆರ್ಮ್ ರೆಸ್ಟ್ ಮತ್ತು ಕ್ಯಾಮೆರಾ ಜೊತೆ ಡಿಸ್‌ಪ್ಲೇ ಆನ್ ಐಆರ್‌ವಿಎಂ ಸೌಲಭ್ಯವಿದೆ.

Most Read Articles

Kannada
English summary
Tata Motors launches Pro Editions of its range of cars. Read in Kannada.
Story first published: Friday, September 20, 2019, 19:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X