ಬಹು ರಾಜ್ಯಗಳಿಗೆ 2,300 ಬಸ್ಸುಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಅನೇಕ ರಾಜ್ಯ ಸಾರಿಗೆ ಸಂಸ್ಥೆಗಳಿಗೆ 2,300ಕ್ಕೂ ಹೆಚ್ಚು ಬಸ್ಸುಗಳನ್ನು ಪೂರೈಸಲಿದೆ. 2020ರ ಫೆಬ್ರವರಿ ತಿಂಗಳ ಒಳಗೆ ಸಾರಿಗೆ ಸಂಸ್ಥೆಗಳು ಬುಕ್ಕಿಂಗ್ ಮಾಡಿದ ಬಸ್ಸುಗಳನ್ನು ವಿತರಿಸಲಾಗುವುದೆಂದು ಟಾಟಾ ಮೋಟಾರ್ಸ್ ಹೇಳಿದೆ.

ಇದರಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳಾದ ರಾಜಸ್ಥಾನದ ಆರ್‍ಎಸ್ಆರ್‍ಟಿಸಿ, ಕರ್ನಾಟಕದ ಕೆಎಸ್ಆರ್‍ಟಿಸಿ/ಬಿಎಂಟಿಸಿ/ ಎನ್‍ಡಬ್ಲ್ಯುಕೆಆರ್‍ಟಿಸಿ, ಉತ್ತರ ಪ್ರದೇಶದ ಯುಪಿಎಸ್‍ಆರ್‍ಟಿಸಿ, ತಮಿಳುನಾಡಿನ ಐಆರ್‍ಟಿ ಮತ್ತು ಆಂಧ್ರಪ್ರದೇಶದ ಎಪಿಎಸ್ಆರ್‍ಟಿಸಿ ಸೇರಿವೆ.

ಟಾಟಾ ಮೋಟಾರ್ಸ್ ತನ್ನ ಬಸ್ಸುಗಳನ್ನು ಸಂಸ್ಥೆಗಳ ಬೇಡಿಕೆಗಳ ಅನುಗುಣವಾಗಿ ತಯಾರಿಸಲಿದೆ. ರಾಜ್ಯ ಸಾರಿಗೆ ಸಂಸ್ಥೆಗಳು (ಇಂಟರ್ ಸಿಟಿ) ಅಂತರ್ ನಗರ ಮತ್ತು (ಇಂಟ್ರ ಸಿಟಿ) ಒಳ-ನಗರ ಬಳಕೆಗಾಗಿ ಬಸ್ಸುಗಳನ್ನು ಹೊಂದಿವೆ.

ಈ ಬಸ್ಸುಗಳನ್ನು ಆನೇಕ ಪ್ರದೇಶಗಳ ಕಠಿಣವಾದ ರಸ್ತೆಗಳಲ್ಲಿ ಸಾಕಷ್ಟು ಟೆಸ್ಟ್ ಗಳನ್ನು ನಡೆಸಿ ಬಸ್ಸುಗಳನ್ನು ನಿರ್ಮಿಸಲಾಗಿದೆ. ಟಾಟಾ ಮೋಟಾರ್ಸ್ ಬಸ್‍ಗಳ ಪ್ರೊಡಕ್ಟ್ ಲೈನ್ ಹೆಡ್, ರೋಹಿತ್ ಶೀವಾಸ್ತವ ಅವರು ಮಾತನಾಡಿ, ಸಾರ್ವಜನಿಕ ಸಾರಿಗೆಯು ಸ್ಮಾರ್ಟ್, ಸುರಕ್ಷಿತ ಮತ್ತು ಅನುಕೂಲಕರವಾದ ಬಸ್ಸುಗಳನ್ನು ನೀಡಲು ಸರ್ಕಾರದ ನಿರಂತರ ಒತ್ತಡದಿಂದ ಟಾಟಾ ಮೋಟಾರ್ಸ್ ವಿವಿಧ ಎಸ್‍ಟಿಯುಗಳ ಪೂರ್ವಭಾವಿ ವಿಧಾನವನ್ನು ಒಪ್ಪಿಕೊಂಡಿದೆ.

ಟಾಟಾ ಮೋಟಾರ್ಸ್ ಈ ಟೆಂಡರ್ ದೊರೆತ್ತಿರುವುದಕ್ಕೆ ಹೆಮ್ಮೆಪಡುತ್ತದೆ ಮತ್ತು ಅತ್ಯುತ್ತಮವಾದ ಅವಕಾಶವನ್ನು ನೀಡಿರುವುದಕ್ಕೆ ಧನ್ಯವಾದಗಳು ಎಂದು ಹೇಳಿದರು. ಮಾರುಕಟ್ಟೆಯಲ್ಲಿ ಹಲವು ಕಂಪನಿಗಳು ಬಸ್ ಉತ್ಪಾದನೆಯನ್ನು ಮಾಡುತಿದ್ದರೂ ಈ ಟೆಂಡರ್ ಅನ್ನು ಟಾಟಾ ಮೋಟಾರ್ಸ್‍ಗೆ ನೀಡಲಾಗಿದೆ ಎಂದರು.

ಟಾಟಾ ಮೋಟಾರ್ಸ್ ಪ್ರಸ್ತುತ ಪುಣೆ, ಧಾರವಾಡ, ಪಂತ್‍ನಗರ ಮತ್ತು ಲಕ್ನೋದಲ್ಲಿ ಬಸ್ ಉತ್ಪಾದನಾ ಘಟಕವನ್ನು ಹೊಂದಿದೆ. ಬಸ್ ಬಾಡಿಗಳನ್ನು ತಯಾರಿಸಲು ಕಂಪನಿಯು ಗೋವಾ ಮೂಲದ (ಎಜಿಸಿಎಲ್) ಆಟೋಮೊಬೈಲ್ ಕಾರ್ಪೋರೇಷನ್ ಆಫ್ ಗೋವಾ ಲಿಮಿಟೆಡ್ ಜೊತೆ ಸಹಭಾಗಿತ್ವವನ್ನು ಹೊಂದಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇದಲ್ಲದೆ ಕಂಪನಿಯು (ಎಫ್‍ಬಿವಿ) ಸಂಪೂರ್ಣ ನಿರ್ಮಿತ ವಾಹನಗಳಿಗಾಗಿ ಬ್ರೆಜಿಲ್ ಮೂಲದ ಮಾರ್ಕೋಪೊಲೊ ಎಸ್.ಎ ಕಂಪನಿಯ ಜೊತೆ ಸಹಭಾಗಿತ್ವ ಹೊಂದಿದೆ. ಎಫ್‍ಬಿವಿ ಉತ್ಪಾದನಾ ಸಾಮಥ್ಯಗಳು ಸುರಕ್ಷತೆ ಮತ್ತು ಇಂಧನ ದಕ್ಷತೆಗಾಗಿ ಸರ್ಕಾರದ ಮಾನದಂಡಗಳನ್ನು ಅನುಸರಿಸಿ ಬಸ್ ಅನ್ನು ಅಭಿವೃದ್ದಿಪಡಿಸುತ್ತಿವೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಪ್ರಯಾಣಿಕರ ವಾಹನಗಳ ವಿಭಾಗದ ವಾಹನಗಳ ಮಾರಾಟವು ಕುಸಿತವಾಗಿರುವುದರಿಂದ 2,300 ವಾಹನಗಳನ್ನು ವಿತರಣೆ ಸುಲಭವಾಗಬಹುದು. ಬಹು ರಾಜ್ಯ ಸಾರಿಗೆ ಸಂಸ್ಥೆಗಳ ಟೆಂಡರ್ ಅನ್ನು ಪಡೆಯುವಲ್ಲಿ ಟಾಟಾ ಮೋಟಾರ್ಸ್ ಯಶ್ವಸಿಯಾಗಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಸ್ ಉತ್ಪಾದಸಲು ಅನೇಕ ಕಂಪನಿಗಳಿವೆ. ಅವುಗಳ ನಡುವೆ ಇಷ್ಟು ದೊಡ್ಡ ಟೆಂಡರ್ ಅನ್ನು ಪಡೆಯುವುದು ಸುಲಭ ಮಾತಲ್ಲ. ಟಾಟಾ ಮೋಟಾರ್ಸ್ ತನ್ನ ವಾಹನಗಳಲ್ಲಿ ಹೆಚ್ಚಿನ ಸೌಲಭ್ಯಗಳು ಮತ್ತು ಹೆಚ್ಚಿನ ಸುರಕ್ಷತೆಗೆ ಪ್ರಾಮುಖ್ಯತೆಯನ್ನು ನೀಡುವುದರಿಂದ ಬಹು ರಾಜ್ಯಗಳ ಸಾರಿಗೆ ಸಂಸ್ಥೆಗಳ ವಿಶ್ವಾಸಗಳಿಸಿದೆ.


Click it and Unblock the Notifications








