500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಪ್ರಯಾಣಿಕರು, ಸಾಮೂಹಿಕ ಸಾಗಣೆ ಹಾಗೂ ಸರಕು ಸಾಗಣಿಕೆ ಸೆಗ್‍‍ಮೆಂಟ್‍‍ಗಳಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಒದಗಿಸಲು ಲಿಥಿಯಂ ಅರ್ಬನ್ ಟೆಕ್ನಾಲಜೀಸ್‌ನೊಂದಿಗೆ ದೀರ್ಘಾವಧಿಯ ಸಹಭಾಗಿತ್ವವನ್ನು ಮಾಡಿಕೊಂಡಿರುವುದಾಗಿ ಘೋಷಿಸಿದೆ.

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಒಟ್ಟು 500 ಟಿಗೋರ್ ಎಲೆಕ್ಟ್ರಿಕ್ ವಾಹನಗಳನ್ನು ಲಿಥಿಯಂ ಅರ್ಬನ್ ಟೆಕ್ನಾಲಜೀಸ್‍‍ಗೆ ನೀಡಲಿದೆ. ಈ ಹೊಸ ಒಪ್ಪಂದದ ಭಾಗವಾಗಿ, ಲಿಥಿಯಂ ಅರ್ಬನ್ ಟೆಕ್ನಾಲಜೀಸ್ ತನ್ನ ಸೇವೆಗಾಗಿ 400 ಟಿಗೋರ್ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿಕೊಳ್ಳಲಿದೆ.

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

2019-2020ರ ಆರ್ಥಿಕ ವರ್ಷದ ಕೊನೆಗೆ ದೇಶಾದ್ಯಂತ ಈ ವಾಹನಗಳನ್ನು ತಲುಪಿಸಲಾಗುತ್ತದೆ. ಲಿಥಿಯಂ ಅರ್ಬನ್ ಟೆಕ್ನಾಲಜೀಸ್ ಟಾಟಾ ಕಂಪನಿಯು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲಿರುವ ನೆಕ್ಸಾನ್‍‍ನಂತಹ ಎಲೆಕ್ಟ್ರಿಕ್ ವಾಹನಗಳನ್ನು ಒಳಗೊಂಡಿರುವ ಇತರ 100 ಎಲೆಕ್ಟ್ರಿಕ್ ವಾಹನಗಳನ್ನು ಕಾರ್ಪೊರೇಟ್ ನಾಯಕತ್ವ ಸಾರಿಗೆ ಸೇವೆಗಳಿಗಾಗಿ ಬಳಸಲಿದೆ.

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಮೊಬಿಲಿಟಿ ಬ್ಯುಸಿನೆಸ್ ಹಾಗೂ ಕಾರ್ಪೊರೇಟ್ ಸ್ಟ್ರಾಟಜಿ ಅಧ್ಯಕ್ಷರಾದ ಶೈಲೇಶ್ ಚಂದ್ರರವರು ಮಾತನಾಡಿ, ಇದು ಟಾಟಾ ಮೋಟಾರ್ಸ್‌ನ ಇ-ಮೊಬಿಲಿಟಿ ಬಿಸಿನೆಸ್‌ಗೆ ಅತ್ಯಂತ ಮಹತ್ವದ ಮೈಲಿಗಲ್ಲು ಮಾತ್ರವಲ್ಲ, ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೂ ಒಂದು ದೊಡ್ಡ ತಿರುವು.

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ವಾಹನಗಳು ಹಿಂದೆಂದಿಗಿಂತಲೂ ವೇಗವಾಗಿ ಎಲೆಕ್ಟ್ರಿಕರಣಗೊಳ್ಳುತ್ತಿರುವುದನ್ನು ಕಾಣಬಹುದು ಎಂದು ಹೇಳಿದರು. ತಮ್ಮ ಶೂನ್ಯ ಹೊರಸೂಸುವಿಕೆ ಸಾರಿಗೆ ಸೇವೆಯನ್ನು ವೇಗವಾಗಿ ವಿಸ್ತರಿಸುವ ಪ್ರಾಯೋಗಿಕ ಪ್ರಯಾಣದಲ್ಲಿರುವ ಲಿಥಿಯಂನೊಂದಿಗೆ ಪಾಲುದಾರಿಕೆಯನ್ನು ಹೊಂದಲು ನಾವು ಸಂತೋಷಪಡುತ್ತೇವೆ.

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ನಮ್ಮ ಗ್ರಾಹಕರ ವಿಕಸನಗೊಳ್ಳುತ್ತಿರುವ ಮೊಬಿಲಿಟಿ ಅಗತ್ಯಗಳನ್ನು ವಿವಿಧ ವ್ಯವಹಾರ ಮಾದರಿಗಳ ಮೂಲಕ ನಾವು ಪರಿಹರಿಸುವುದರಿಂದ ಈ ಮೌಲ್ಯಯುತ ಪಾಲುದಾರಿಕೆಗೆ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಲಿಥಿಯಂ ಅರ್ಬನ್ ಟೆಕ್ನಾಲಜೀಸ್ ಸಂಸ್ಥಾಪಕರಾದ ಸಂಜಯ್ ಕೃಷ್ಣನ್‍‍ರವರು ಮಾತನಾಡಿ, ಟಾಟಾ ಮೋಟಾರ್ಸ್‌ನೊಂದಿಗಿನ ಈ ಸಹಭಾಗಿತ್ವವು ಹೊಸ ರೂಪದ ಅಂಶಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ. ಜೊತೆಗೆ ಪ್ರಯಾಣಿಕರು, ಸಾಮೂಹಿಕ ಸಾಗಣೆ ಮತ್ತು ಸರಕುಗಳಾದ್ಯಂತ ಹೊಸ ಮಾರುಕಟ್ಟೆ ವಿಭಾಗಗಳ ಕಾರ್ಯಸಾಧ್ಯತೆಯನ್ನು ಶಕ್ತಗೊಳಿಸುತ್ತದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಲಿಥಿಯಂ ಅರ್ಬನ್ ಟೆಕ್ನಾಲಜೀಸ್ ಭಾರತೀಯ ಟೆಕ್ ದೈತ್ಯ ವಿಪ್ರೊ ಜೊತೆಗೂ ಸಹ ಪಾಲುದಾರಿಕೆಯನ್ನು ಹೊಂದಿದೆ. ವಿಪ್ರೊ ಭಾರತದ್ಯಾಂತವಿರುವ ತನ್ನ ಕಚೇರಿಗಳ ನೌಕರರಿಗೆ ಸೇವೆಯನ್ನು ನೀಡುತ್ತದೆ. ಟಾಟಾ ಮೋಟಾರ್ಸ್ ವಿತರಿಸಿದ ವಾಹನಗಳನ್ನು ವಿಪ್ರೋ ಬಳಸಿಕೊಳ್ಳಲಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಟಾಟಾದ ಟಿಗೋರ್ ಎಲೆಕ್ಟ್ರಿಕ್ ವಾಹನವು 72 ವಿ 3-ಫೇಸ್ ಎಸಿ ಇಂಡಕ್ಷನ್ ಮೋಟರ್ ಅನ್ನು ಹೊಂದಿದೆ. ಈ ಮೋಟರ್ 21.5 ಕಿ.ವ್ಯಾ ಬ್ಯಾಟರಿ ಪ್ಯಾಕ್‍‍ನಿಂದ ನಿಯಂತ್ರಿಸಲ್ಪಡುತ್ತದೆ. ಈ ಮೋಟರ್ 4500 ಆರ್‌ಪಿಎಂನಲ್ಲಿ 30 ಕಿ.ವ್ಯಾ ಪವರ್ ಅಂದರೆ 40.2 ಬಿಹೆಚ್‌ಪಿ ಪವರ್ ಹಾಗೂ 2500 ಆರ್‌ಪಿಎಂನಲ್ಲಿ 105 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಚಾರ್ಜಿಂಗ್‍‍ಗಳಿಗಾಗಿ ಸ್ಟ್ಯಾಂಡರ್ಡ್ ಎಸಿ ಚಾರ್ಜರ್‍‍ಗಳನ್ನು ನೀಡಲಾಗಿದೆ. ಈ ಚಾರ್ಜರ್ ಸುಮಾರು ಹನ್ನೊಂದುವರೆ ಗಂಟೆಗಳಲ್ಲಿ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ. ಫಾಸ್ಟ್ ಡಿ‍‍ಸಿ ಚಾರ್ಜರ್ ಎರಡು ಗಂಟೆಗಳಲ್ಲಿ 80%ನಷ್ಟು ಚಾರ್ಜ್ ಮಾಡುತ್ತದೆ.

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಟಿಗೋರ್ ಕಾರಿನ ಟಾಪ್ ಸ್ಪೀಡ್ ಗಂಟೆಗೆ 80 ಕಿ.ಮೀಗಳಾಗಿದೆ. ಇತ್ತೀಚೆಗೆ ಬಿಡುಗಡೆಯಾದ ದೀರ್ಘ ಶ್ರೇಣಿಯ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ 213 ಕಿ.ಮೀ ದೂರ ಚಲಿಸುತ್ತದೆ.

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಈ ಕಾರ್ ಅನ್ನು ಟ್ಯಾಕ್ಸಿ ಸೇವೆಗಳಿಗಾಗಿ ಹಾಗೂ ಖಾಸಗಿಯವರಿಗಾಗಿ ಮಾರಾಟ ಮಾಡಲಾಗುತ್ತಿದೆ. ದೀರ್ಘ ಸರಣಿಯ ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು - ಎಕ್ಸ್‌ಇ ಪ್ಲಸ್, ಎಕ್ಸ್‌ಎಂ ಪ್ಲಸ್ ಹಾಗೂ ಎಕ್ಸ್‌ಟಿ ಪ್ಲಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

500 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಈ ಕಾರ್ ಅನ್ನು ದೇಶಾದ್ಯಂತ 30 ನಗರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.9.44 ಲಕ್ಷಗಳಾಗಿದೆ.

Most Read Articles

Kannada
English summary
Tata Motors Bags Order For 500 Electric Vehicles From Lithium Urban Technologies - Read in Kannada
Story first published: Tuesday, November 19, 2019, 12:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X