ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್‌ಎಸ್) ಯ ಬಗ್ಗೆ ಗಮನ ಹರಿಸುತ್ತಿದೆ ಎಂದು ವರದಿಯಾಗಿದೆ. ಈ ಯೋಜನೆಯನ್ನು ಆಟೋ ಉದ್ಯಮದಲ್ಲಿನ ನಿಧಾನಗತಿಯ ಕುಸಿತದಿಂದಾಗಿ ಉಂಟಾದ ನಷ್ಟವನ್ನು ಭರಿಸಲು ನೀಡಲಾಗುತ್ತಿದೆ.

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಈ ಯೋಜನೆಯನ್ನು ಟಾಟಾ ಮೋಟಾರ್ಸ್‍‍ನ ವಿವಿಧ ಇಲಾಖೆಗಳಲ್ಲಿರುವ ಪ್ರಯಾಣಿಕ ಹಾಗೂ ಕಮರ್ಷಿಯಲ್ ವಾಹನ ಸೆಗ್‍‍ಮೆಂಟಿನಲ್ಲಿರುವ ಉದ್ಯೋಗಿಗಳಿಗೆ ನೀಡಲಾಗುತ್ತದೆಂದು ಲೈವ್‌ಮಿಂಟ್ ವರದಿ ಮಾಡಿದೆ. ಟಾಟಾ ಮೋಟಾರ್ಸ್‍ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ.

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್‍ ಈಗಾಗಲೇ ಕಳೆದ ಕೆಲವು ತಿಂಗಳುಗಳಿಂದ ಜಾಗ್ವಾರ್- ಲ್ಯಾಂಡ್ ರೋವರ್‌ನಲ್ಲಿದ್ದ ಹೆಚ್ಚುವರಿ ಸಿಬ್ಬಂದಿಯನ್ನು ತೆಗೆದು ಹಾಕಲು ನಿರ್ಧರಿಸಿದೆ. ಈಗ ದೇಶಾದ್ಯಂತವಿರುವ 1,600ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಘೋಷಿಸಿದೆ.

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್‍ ನೌಕರರ ವೆಚ್ಚವು ಜುಲೈನಿಂದ ಸೆಪ್ಟೆಂಬರ್‍‍ವರೆಗಿನ ಅವಧಿಯಲ್ಲಿ 5.9%ನಿಂದ 10.7%ಗಳಿಗೆ ಏರಿದೆ. ಕಂಪನಿಯ ನಿವ್ವಳ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 44%ನಷ್ಟು ಕುಸಿದಿದೆ. ಕಳೆದ ವರ್ಷ ರೂ.109.14 ಕೋಟಿಗಳ ಲಾಭಗಳಿಸಿದ್ದ ಕಂಪನಿಯು ಈ ವರ್ಷ ರೂ.1,281.97 ಕೋಟಿ ನಷ್ಟ ಅನುಭವಿಸಿದೆ.

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಕಮರ್ಷಿಯಲ್ ವಾಹನಗಳ ಮಾರಾಟವು 59%ನಷ್ಟು ಕುಸಿದಿದೆ. ಕಮರ್ಷಿಯಲ್ ವಾಹನಗಳ ವಿಭಾಗಗಳಲ್ಲಿ ಒಟ್ಟಾರೆ ಮಾರಾಟವು 41.2%ನಷ್ಟು ಕುಸಿದಿದೆ. ಬಿಎಸ್ 6 ಎಂಜಿನ್‍ ವಾಹನಗಳ ಬಿಡುಗಡೆಯೊಂದಿಗೆ ಟಾಟಾ ಕಂಪನಿಯು ಮುಂದಿನ ಹಣಕಾಸು ವರ್ಷದಲ್ಲಿ ಮತ್ತಷ್ಟು ಕುಸಿತವನ್ನು ಕಾಣಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕೆಲವು ವರ್ಷಗಳಿಂದ ನೌಕರರ ವೆಚ್ಚವನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ. 2017ರಲ್ಲಿ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಸಹ ನೀಡಿತ್ತು. ಆದರೆ, ಖಾಯಂ ನೌಕರರು ಈ ಯೋಜನೆಯಿಂದ ದೂರವಿರಲು ನಿರ್ಧರಿಸಿದರು. ಜೊತೆಗೆ ಯಾವುದೇ ಪ್ಯಾಕೇಜ್‌ಗಳನ್ನು ಸ್ವೀಕರಿಸಲಿಲ್ಲ.

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಆದರೆ ಟಾಟಾ ಮೋಟಾರ್ಸ್ ಈಗ ಅನೇಕ ಇಲಾಖೆಗಳಲ್ಲಿ ವಿ‍ಆರ್‍ಎಸ್ ನೀಡುತ್ತದೆ. ಕಂಪನಿಯ ಗಮನವು ಇಂಜಿನಿಯರಿಂಗ್ ವಿಭಾಗದಲ್ಲಿರುವ ಜನರನ್ನು ಕಡಿಮೆ ಮಾಡುವುದಾಗಿದೆ. ಸಲಹೆಗಾರರಾಗಿ ಉಳಿಸಿಕೊಂಡಿರುವ ನಿವೃತ್ತ ಹಿರಿಯ ಉದ್ಯೋಗಿಗಳಿಗೆ ಸಹ ಪ್ಯಾಕೇಜ್ ನೀಡಲಾಗುವುದು ಎಂದು ಕಂಪನಿಯು ಹೇಳಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಮುಂದಿನ ವರ್ಷದಲ್ಲಿ ವಾಹನಗಳ ಬೇಡಿಕೆಯು ಹೆಚ್ಚಾಗುವುದರಿಂದ ಹೆಚ್ಚಿನ ಪ್ರಮಾಣದ ವೆಚ್ಚವನ್ನು ಉದ್ಯೋಗಿಗಳ ಮೇಲೆ ಮಾಡುವುದು ಸರಿಯಾದ ಕ್ರಮವಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಉತ್ಪಾದನೆಗಳಿಗೆ ಸಂಬಂಧಪಟ್ಟ ಹೈ ಲೆವೆಲ್‍ ಆಟೊಮೇಷನ್ ಬಿಡುಗಡೆಯು ಹತ್ತಿರದಲ್ಲಿದ್ದು, ವಿ‍ಆರ್‍ಎಸ್ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂಬುದು ಅವರ ಅಭಿಪ್ರಾಯವಾಗಿದೆ. 2023ರ ಅಂತ್ಯದವರೆಗೆ ಭಾರತದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಇದು ವಾಹನಗಳನ್ನು ಹೆಚ್ಚು ಹತ್ತಿರವಾಗಿಸುತ್ತದೆ. ಬೇಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ವರ್ಷದ ಏಪ್ರಿಲ್‌ನಿಂದ ವಾಹನಗಳಿಗೆ ಹೊಸ ಸುರಕ್ಷತಾ ಮಾನದಂಡಗಳನ್ನು ಜಾರಿಗೊಳಿಸಲಾಗಿದೆ. ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಹೊಸ ಮಾಲಿನ್ಯ ನಿಯಮಗಳು ಜಾರಿಗೆ ಬರಲಿವೆ.

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

2022ರ ವೇಳೆಗೆ ಸರಾಸರಿ ಫ್ಯೂಯಲ್ ಎಫಿಶಿಯನ್ಸಿ ಕಾನೂನುಗಳನ್ನು ಜಾರಿಗೊಳಿಸಲಾಗುವುದು. 2023ರ ವೇಳೆಗೆ ರಿಯಲ್ ಟೈಮ್ ಡ್ರೈವಿಂಗ್ ಎಮಿಷನ್ ಟೆಸ್ಟ್ ಗಳನ್ನು ಜಾರಿಗೊಳಿಸಲಾಗುವುದು. ಇದರ ಪರಿಣಾಮವಾಗಿ, ವಾಹನಗಳು ದುಬಾರಿಯಾಗಲಿದ್ದು, ಹೊಸ ವಾಹನಗಳಿಗೆ ಬೇಡಿಕೆಯು ಕಡಿಮೆಯಾಗಲಿದೆ.

ವಿ‍ಆರ್‍ಎಸ್ ಯೋಜನೆ ಘೋಷಿಸಿದ ಟಾಟಾ ಮೋಟಾರ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಉದ್ಯಮದಲ್ಲಿನ ಕುಸಿತದಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಸರಿಯಾದ ಕ್ರಮವಲ್ಲ. ಆದರೆ ಟಾಟಾ ಮೋಟಾರ್ಸ್ ವಿ‍ಆರ್‍ಎಸ್ ನೀಡಿ ಉದ್ಯೋಗಿಗಳನ್ನು ಸರಿಯಾದ ಮಾರ್ಗದಲ್ಲಿ ಬೀಳ್ಕೊಡುತ್ತಿರುವುದು ಶ್ಲಾಘನೀಯ.

Most Read Articles

Kannada
English summary
Tata motors to launch voluntary retirement scheme for 1600 employees - Read in Kannada
Story first published: Saturday, November 30, 2019, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X