ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ವ್ಯಯಕ್ತಿಕ ಬಳಕೆಗೆ ಮಾತ್ರವಲ್ಲದೇ ಟ್ಯಾಕ್ಸಿ ಸೇವೆಗಳಿಗೂ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಟಾಟಾ ಮೋಟಾರ್ಸ್ ನಿರ್ಮಾಣದ ಟಿಗೋರ್ ಎಲೆಕ್ಟ್ರಿಕ್ ಸೆಡಾನ್ ಕಾರು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ಹೌದು, ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಸದ್ಯ ಟ್ಯಾಕ್ಸಿ ಸೇವೆಗಳಿಗಾಗಿ ಮಾತ್ರವಲ್ಲದೇ ವ್ಯಯಕ್ತಿಕ ಬಳಕೆಗೂ ಖರೀದಿಸುವ ಅವಕಾಶ ನೀಡಲಾಗಿದ್ದು, ಗ್ರಾಹಕರು ನಿಧಾನವಾಗಿ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳಿಂದ ಎಲೆಕ್ಟ್ರಿಕ್ ಕಾರುಗಳ ಬಳಕೆಯತ್ತ ಮುಖಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೃಹತ್ ಯೋಜನೆಯೊಂದನ್ನು ರೂಪಿಸಿರುವ ದೆಹಲಿ ಮೂಲದ ಪ್ರಕೃತಿ ಇ-ಮೊಬಿಲಿಟಿ ಟ್ಯಾಕ್ಸಿ ಸರ್ವಿಸ್ ಸಂಸ್ಥೆಯು ಬಾಡಿಗೆ ಕಾರುಗಳಿಗಾಗಿ ಟಿಗೋರ್ ಎಲೆಕ್ಟ್ರಿಕ್ ಸೆಡಾನ್ ಕಾರನ್ನು ಆಯ್ಕೆ ಮಾಡಿದೆ.

ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ದೆಹಲಿ-ಎನ್‌ಸಿಆರ್ ವಲಯದಲ್ಲಿ ಎವೆರಾ ಆ್ಯಪ್ ಮೂಲಕ ಟ್ಯಾಕ್ಸಿ ಸರ್ವಿಸ್ ನೀಡುವ ಪ್ರಕೃತಿ ಇ-ಮೊಬಿಲಿಟಿ ಸಂಸ್ಥೆಯು ಡೀಸೆಲ್ ಕಾರುಗಳಿಂತ ಹೆಚ್ಚು ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಮುಂದಾಗಿದ್ದು, 500 ಯುನಿಟ್ ಟಿಗೋರ್ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಸಲ್ಲಿಸಿದೆ.

ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ಪ್ರಕೃತಿ ಇ-ಮೊಬಿಲಿಟಿ ಸಂಸ್ಥೆಯ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ಟಾಟಾ ಸಂಸ್ಥೆಯು 2020ರ ಜನವರಿ ಮಧ್ಯಂತರದಲ್ಲಿ ಮೊದಲ ಹಂತವಾಗಿ 160 ಟಿಗೋರ್ ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದು, ಇನ್ನುಳಿದ ಕಾರನ್ನು ಮಾರ್ಚ್ ಅಂತ್ಯದೊಳಗೆ ಪೂರೈಕೆ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ಜೊತೆಗೆ ಪ್ರಕೃತಿ ಇ-ಮೊಬಿಲಿಟಿ ಸಂಸ್ಥೆಯ ಖರೀದಿ ಮಾಡಲಾಗಿರುವ ಎಲೆಕ್ಟ್ರಿಕ್ ಕಾರುಗಳಿಗೆ ಅನುಕೂಲವಾಗುವಂತೆ ಅಗತ್ಯ ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯುವುದಾಗಿ ಒಪ್ಪಿಗೆ ಸೂಚಿಸಿರುವ ಟಾಟಾ ಸಂಸ್ಥೆಯು ಹೊಸ ಕಾರು ಖರೀದಿ ಮೇಲೆ ಹಲವಾರು ವಿನಾಯ್ತಿಗಳನ್ನು ಘೋಷಣೆ ಮಾಡಿದೆ.

ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ಟಿಗೋರ್ ಎಲೆಕ್ಟ್ರಿಕ್ ಕಾರು ಗ್ರಾಹಕರ ಬೇಡಿಕೆಯೆಂತೆ ಕೈಗೆಟುಕುವ ಬೆಲೆಯಲ್ಲಿ ಹಲವಾರು ವಿಶೇಷತೆಗಳೊಂದಿಗೆ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಟಾಪ್ ಎಂಡ್ ಮಾದರಿಯಾದ ಎಕ್ಸ್ ಟಿ ಪ್ಲಸ್ ಮಾದರಿಯು ರೂ. 10.75 ಲಕ್ಷಕ್ಕೆ, ಎಕ್ಸ್ ಇ ಪ್ಲಸ್ ಮಾದರಿಯು ರೂ.10.44 ಲಕ್ಷ ಮತ್ತು ಎಕ್ಸ್ ಎಂ ಪ್ಲಸ್ ಮಾದರಿಯು ರೂ.10.61 ಲಕ್ಷ ಬೆಲೆ ಹೊಂದಿದೆ. ಹೊಸ ಕಾರಿನಲ್ಲಿ 21.5 kWh ಬ್ಯಾಟರಿ ಪ್ಯಾಕ್ ಜೋಡಿಸಲಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 213 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ಟಿಗೋರ್ ಇವಿ ಕಾರಿನಲ್ಲಿ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 80 ಕಿ.ಮೀಗಳಿಗೆ ಮಿತಿಗೊಳಿಸಲಾಗಿದ್ದು, ಪ್ರತಿ ದಿನ 150 ಕಿ.ಮೀ ವ್ಯಾಪ್ತಿಯೊಳಗೆ ಚಾಲನೆಗೆ ಈ ಕಾರು ಅತ್ಯುತ್ತಮ ಆಯ್ಕೆಯಾಗಿದೆ.

MOST READ: ಮಾರುತಿ ಸುಜುಕಿ ಬ್ರೆಝಾ ಕಾರಿಗೆ ಪೈಪೋಟಿ ನೀಡಲಿದೆ ರೆನಾಲ್ಟ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ಇನ್ನು ದೇಶಾದ್ಯಂತ ಸದ್ಯ ಎಲೆಕ್ಟ್ರಿಕ್ ವಾಹನ ಮಾರಾಟವು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದರೂ ಸಹ ಚಾರ್ಜಿಂಗ್ ಸ್ಟೆಷನ್‌ಗಳ ಕೊರತೆಯಿಂದಾಗಿ ಬಹುತೇಕ ಎಲೆಕ್ಟ್ರಿಕ್ ವಾಹನ ಖರೀದಿದಾರರು ಹಿಂದೇಟು ಹಾಕುತ್ತಿದ್ದಾರೆ.

MOST READ: ಕೂಲಿ ಕೆಲಸ ಮಾಡುತ್ತಿದ್ದವನು ಇಂದು ಐಷಾರಾಮಿ ಕಾರುಗಳ ಮಾಲೀಕ..!

ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ಈ ವಿಚಾರವಾಗಿ ಮಹತ್ವದ ನಿರ್ಣಯ ಕೈಗೊಂಡಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ನೆಕ್ಸಾನ್ ಎಲೆಕ್ಟ್ರಿಕ್ ಬಿಡುಗಡೆ ಮುನ್ನ ದೇಶದ ಪ್ರಮುಖ ನಗರಗಳಲ್ಲಿ 300ಕ್ಕೂ ಹೆಚ್ಚು ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳಿಗೆ ಚಾಲನೆ ನೀಡಿದ ನಂತರವೇ ಹೊಸ ನೆಕ್ಸಾನ್ ಇವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ.

MOST READ: ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್

ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್ ವಾಹನಗಳು ಖರೀದಿಗೆ ಲಭ್ಯವಿದ್ದರೂ ಸಹ ಅವಶ್ಯಕತೆಗೆ ಅನುಗುಣವಾಗಿ ಚಾರ್ಜಿಂಗ್ ಸ್ಟೆಷನ್‌ಗಳು ಇಲ್ಲದಿರುವುದು ಇವಿ ವಾಹನ ಮಾರಾಟದಲ್ಲಿ ತೀವ್ರಗತಿಯ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತಿಲ್ಲ.

ಟ್ಯಾಕ್ಸಿ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಸೆಡಾನ್

ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನ ಮೇಲಿನ ಖರೀದಿಗೆ ಮಾತ್ರವಲ್ಲದೇ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣದ ಮೇಲೂ ಆಕರ್ಷಕ ಸಬ್ಸಡಿ ನೀಡುತ್ತಿದ್ದು, ಇದೀಗ ಟಾಟಾ ಸೇರಿದಂತೆ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳು ಫೇಮ್-2 ಯೋಜನೆ ಅಡಿ ಚಾರ್ಜಿಂಗ್ ಸ್ಟೆಷನ್ ನಿರ್ಮಾಣಕ್ಕೆ ಮುಂದಾಗಿವೆ.

Most Read Articles

Kannada
English summary
Tata Motors will use 500 Tigor EV for taxi service in Delhi. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X