TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ರತನ್ ಟಾಟಾ ಕನಸಿನ ಕೂಸು ನ್ಯಾನೋ ಇನ್ಮುಂದೆ ನೆನಪು ಮಾತ್ರ..!
ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಜನಪ್ರಿಯತೆಯೊಂದಿಗೆ ಮುನ್ನುಗ್ಗುತ್ತಿರುವ ಕೆಲವು ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಕಾಯ್ದೆಗಳಿಂದಾಗಿ ಭಾರೀ ಹೊಡೆತ ನೀಡುತ್ತಿದ್ದು, ಇಷ್ಟುದಿನಗಳ ಕಾಲ ಮಾರುಕಟ್ಟೆಯಲ್ಲಿ ಹಾಟ್ ಚಿಪ್ಸ್‌ನಂತೆ ಮಾರಾಟವಾಗುತ್ತಿದ್ದ ಕೆಲವು ಕಾರುಗಳಿಗೆ ಸಂಕಷ್ಟ ಎದುರಾಗಿದೆ.
ಹೌದು, ದೇಶದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ವಾಹನ ಗುಣಮಟ್ಟದಲ್ಲಿ ಬದಲಾವಣೆ ತರುವ ಸಂಬಂಧ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಕೇಂದ್ರದ ಸರ್ಕಾರದ ಹೊಸ ಕಾಯ್ದೆಗೆ ಅನುಗುಣವಾಗಿ ಬದಲಾವಣೆಗೊಳ್ಳಲು ಸಾಧ್ಯವಿರುವ ಸುಮಾರು 10ಕ್ಕೂ ಹೆಚ್ಚು ಜನಪ್ರಿಯ ಕಾರುಗಳು ಸದ್ಯದಲ್ಲೇ ಮಾರುಕಟ್ಟೆಯಿಂದ ಸ್ಥಗಿತಗೊಳ್ಳುವುದು ಖಚಿತವಾಗಿದೆ.
2020ರಿಂದ ಪ್ರತಿ ಕಾರು ಮಾದರಿಯಲ್ಲೂ ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದರೇ ಮಾತ್ರವೇ ಕಾರು ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಟಾಟಾ ಮೋಟಾರ್ಸ್ ಮತ್ತು ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ ಈಗಾಗಲೇ ತಳಮಳ ಶುರುವಾಗಿದೆ.
ಇದರಲ್ಲಿ ಅಗ್ಗದ ಕಾರು ಎಂದೇ ಹೆಸರುಗಳಿಸಿದ್ದ ನ್ಯಾನೋ ಕಾರು ಸದ್ಯ ಮಾರುಕಟ್ಟೆಯಿಂದ ಮರೆಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದ್ದು, ಸುರಕ್ಷತೆಯಿಲ್ಲದ ನ್ಯಾನೋ ಮಾರಾಟದಲ್ಲಿ ದೀರ್ಘ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದಿದೆ.
ಅಗ್ಗದ ಬೆಲೆಯೊಂದಿಗೆ ಲಕ್ಷಾಂತರ ಮಧ್ಯಮ ವರ್ಗದ ಗ್ರಾಹಕರ ಕಾರು ಖರೀದಿಯ ಕನಸನ್ನು ನನಸು ಮಾಡಿದ್ದ ನ್ಯಾನೋ ಅಷ್ಟೇ ಪ್ರಮಾಣದಲ್ಲಿ ಆತಂಕಕಾರಿಯಾಗಿ ಪರಿಣಮಿಸುತ್ತಿದೆ. ಹೀಗಾಗಿ ನ್ಯಾನೋ ಕಾರುನ್ನು ಸ್ಥಗಿತಗೊಳಿಸುತ್ತಿರುವ ಟಾಟಾ ಸಂಸ್ಥೆಯು ಉತ್ತಮ ಸುರಕ್ಷೆತೆವುಳ್ಳ ಹೊಸ ಕಾರುಗಳ ಉತ್ಪಾದನೆ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.
2008ರ ಆಟೋ ಎಕ್ಸ್-ಪೋನಲ್ಲಿ ಮೊದಲ ಬಾರಿಗೆ ನ್ಯಾನೋ ಕಾರು ಕಾಣಿಸಿಕೊಂಡು 2009ರಲ್ಲಿ ವಿಶ್ವದ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ರತನ್ ಟಾಟಾರವರು ಭಾರತೀಯರಿಗೆ ಕೊಟ್ಟಿದ್ದ ಮಾತಿನಂತೆ 1 ಲಕ್ಷ ರೂಪಾಯಿಗೆ ನ್ಯಾನೋ ಕಾರನ್ನು ಗ್ರಾಹಕರಿಗೆ ನೀಡಿತ್ತು. ನ್ಯಾನೋ ಕಾರು ವಿಶ್ವದಲ್ಲಿಯೇ ಅಗ್ಗದ ಕಾರು ಎಂಬ ಹೆಸರು ಸಹ ಪಡೆದುಕೊಂಡಿತ್ತು.
ಟಾಟಾ ಸನ್ಸ್ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಕೂಡಾ ಈ ಹಿಂದೆ ಟಾಟಾ ನ್ಯಾನೋ ಉತ್ಪಾದನೆಯಿಂದ ಸಂಸ್ಥೆಗೆ 1 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು, ನ್ಯಾನೋ ಕಾರು ಉತ್ಪಾದನೆಯಿಂದ ಸಂಸ್ಥೆಗೆ ಯಾವುದೇ ರೀತಿಯ ಲಾಭ ಸಹ ಗಳಿಸಿಲ್ಲ ಎಂದು ಆರೋಪಿಸಿದ್ದರು.
ಹೀಗಿದ್ದರೂ ರತನ್ ಟಾಟಾರವರ ಕನಸಿನ ಕೂಸಾಗಿದ್ದರಿಂದ ನ್ಯಾನೋ ಕಾರನ್ನು ಭಾವನಾತ್ಮಕ ಕಾರಣಗಳಿಂದಾಗಿ ಇನ್ನೂ ಉತ್ಪಾದನೆ ಮುಂದುವರಿಸಿದ್ದ ಟಾಟಾ ಸಂಸ್ಥೆಯು ಇದೀಗ ಮಹತ್ವದ ನಿರ್ಣಯಕ್ಕೆ ಬಂದಿದ್ದು, 2020ರ ಏಪ್ರಿಲ್ 1ರಿಂದ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ.
ಕಳೆದ ಕೆಲ ತಿಂಗಳಿನಿಂದ ಅತ್ಯಂತ ಕಡಿಮೆ ಉತ್ಪಾದನೆಯಾಗುವ ಕಾರುಗಳ ಪೈಕಿ ನ್ಯಾನೊ ಕೂಡಾ ಒಂದಾಗಿದ್ದು, ಗುಜರಾತ್ ನ ಸನದ್ ಘಟಕದಲ್ಲಿ ದಿನಕ್ಕೆ ಕೇವಲ ಒಂದೋ ಅಥವಾ ಎರಡು ನ್ಯಾನೊ ಕಾರುಗಳಷ್ಟೆ ನಿರ್ಮಾಣ ಮಾಡಲಾಗುತ್ತಿರುವುದು ಟಾಟಾ ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿದೆ.
MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!
ಅದರಲ್ಲೂ ಕಳೆದ 6 ತಿಂಗಳಲ್ಲಿನಲ್ಲಿ ಕೇವಲ 5 ನ್ಯಾನೊ ಕಾರುಗಳು ಮಾರಾಟವಾಗಿದ್ದು, ನ್ಯಾನೊ ಕಾರಿನ ಕುರಿತು ಯಾವೊಬ್ಬ ಗ್ರಾಹಕನು ಕೂಡಾ ವಿಚಾರಣೆ ಮಾಡುತ್ತಿಲ್ಲ ಎನ್ನುವುದು ವಾಸ್ತವಾಂಶ. ಹೀಗಾಗಿಯೇ ಮಹತ್ವದ ನಿರ್ಧಾರಕ್ಕೆ ಬಂದಿರುವ ಟಾಟಾ ಸಂಸ್ಥೆಯು ನ್ಯಾನೋ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತಿದೆ.
ಇದರಿಂದ ನ್ಯಾನೋ ಸ್ಥಗಿತಗೊಳಿಸುವ ತನಕ ನ್ಯಾನೋ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಮುಂಗಡ ಪಾವತಿ ನಂತರಷ್ಟೇ ನ್ಯಾನೋ ಕಾರುಗಳನ್ನು ಸಿದ್ದಗೊಳಿಸಲು ನಿರ್ಧರಿಸಿದ್ದು, ನ್ಯಾನೋ ಕಾರುಗಳನ್ನು ಸ್ಟಾಕ್ ಮಾಡದಿರಲು ತೀರ್ಮಾನಿಸಲಾಗಿದೆ.
MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?
ಇನ್ನು ಈ ಹಿಂದೆ ಕೇಂದ್ರ ಸರ್ಕಾರವು 2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದೇಶಾದ್ಯಂತ ಬಿಎಸ್-3 (ಭಾರತ್ ಸ್ಟೇಜ್) ಸೌಲಭ್ಯಗಳನ್ನು ಒಳಗೊಂಡ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಮೇಲೆ ನಿಷೇಧ ನಿಷೇಧ ಹೇರಿದ್ದಲ್ಲದೆ ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನ ಮಾದರಿಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಿತ್ತು.
ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಡುತ್ತಿರುವ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸೂಚನೆಯೆಂತೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ನಿಷೇಧ ಹೇರುವುದು ಖಚಿತವಾಗಿದ್ದು, ಬಿಎಸ್-6 ವಾಹನಗಳು ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವಾಹನ ಮಾದರಿಗಳಿಗೆ ಮಾತ್ರವೇ ಅವಕಾಶ ನೀಡಲಿದೆ.
ಹೀಗಾಗಿ ಬರಲಿರುವ ಬಿಎಸ್-6 ಕಾಯ್ದೆಯಿಂದಾಗಿ ವಾಹನ ಉತ್ಪಾದನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಲಿದ್ದು, ಹೆಚ್ಚಿನ ಮಟ್ಟದ ಸುರಕ್ಷತೆ, ಮಾಲಿನ್ಯ ತಡೆಯಲು ಸುಧಾರಿತ ಮಾದರಿಯ ಎಂಜಿನ್ ಸೌಲಭ್ಯ ಹೊಂದಲು ಸಾಧ್ಯವಿರದ ನ್ಯಾನೋ ಕಾರು ಮಾರುಕಟ್ಟೆಯಿಂದ ನಿರ್ಗಮಿಸುವ ಅನಿರ್ವಾಯ ಎದುರಾಗಿದೆ.