ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಯಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ನೆಕ್ಸಾನ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಮುಂಬರುವ 2020ರ ಮಾರ್ಚ್ ಅಂತ್ಯಕ್ಕೆ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡುವ ಸುಳಿವು ನೀಡಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆಯ ಅಂತಿಮ ಹಂತದ ತಯಾರಿ ನಡೆಸುತ್ತಿರುವ ಟಾಟಾ ಸಂಸ್ಥೆಯು ಹಿಮಾಲಯದ ಕಡಿದಾದ ಹಾದಿಗಳಲ್ಲಿ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಟೆಸ್ಟ್ ಡ್ರೈವ್ ಕೈಗೊಂಡಿದ್ದು, ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಲಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿ ಲಭ್ಯವಾಗಲಿರುವ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಉತ್ತಮ ಬ್ಯಾಟರಿ ವೈಶಿಷ್ಟ್ಯತೆಯೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸ್ಪೆಷಲ್ ಟೆಸ್ಟ್ ಡ್ರೈವ್‌ಗಾಗಿ ಬಾಲಿವುಡ್ ಫಿಟ್‌ನೆಸ್ ಐಕಾನ್ ಮಿಲಿಂದ್ ಸೋಮನ್ ಜೊಡಿ ಕೂಡಾ ಭಾಗಿಯಾಗಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಎಕ್ಸ್‌ಪೋದಲ್ಲಿ ನೆಕ್ಸಾನ್ ಇವಿ ಸೇರಿ ವಿವಿಧ ಮಾದರಿಯ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪ್ರದರ್ಶನಗೊಳಿಸಲು ಉದ್ದೇಶಸಿಲಾಗಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ಟಿಗೋರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, 2020ರ ಮಾರ್ಚ್ ಅಂತ್ಯಕ್ಕೆ ನೆಕ್ಸಾನ್ ಎಲೆಕ್ಟ್ರಿಕ್ ಮತ್ತು ಆಲ್‌ಟ್ರೋಜ್ ಎಲೆಕ್ಟ್ರಿಕ್ ಕಾರನ್ನು ರಸ್ತೆಗಿಳಿಸಲಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ಕುರಿತಂತೆ ಈಗಾಗಲೇ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಟಾಟಾ ಸಂಸ್ಥೆಯು 2018-19ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ(2019ರ ಜನವರಿಯಿಂದ ಮಾರ್ಚ್) ಬಿಡುಗಡೆ ಪಕ್ಕಾ ಎಂದಿದೆ. ಇದರ ಜೊತೆಯಲ್ಲಿ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಮಾಹಿತಿಯನ್ನು ಸಹ ಹಂಚಿಕೊಂಡಿರುವ ಟಾಟಾ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿ,ಸುವ ತವಕದಲ್ಲಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಪ್ರತಿ ಚಾರ್ಜ್‌ಗೆ 300ಕಿ.ಮೀ ಮೈಲೇಜ್

ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ನೆಕ್ಸಾನ್ ಇವಿ ಕಾರು ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಪ್ರತಿ ಚಾರ್ಜ್‌ಗೆ 300ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಹ್ಯಾರಿಯರ್ ಕಾರಿನಲ್ಲಿರುವ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳು ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿವೆ ಎನ್ನಲಾಗಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಕಾರಿನ ಬೆಲೆ(ಅಂದಾಜು ದರ)

ನೆಕ್ಸಾನ್ ಇವಿ ಬಿಡುಗಡೆ ಮಾಹಿತಿಯನ್ನು ಹಂಚಿಕೊಳ್ಳುವಾಗ ಹೊಸ ಕಾರಿನ ಬೆಲೆ ಮಾಹಿತಿ ಬಗ್ಗೆಯು ಅಂದಾಜು ದರಗಳನ್ನು ಪ್ರಕಟಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ಕಾರಿನ ಬೆಲೆಯು ರೂ.15 ಲಕ್ಷದಿಂದ ರೂ.17 ಲಕ್ಷ ಬೆಲೆ ಅಂತರ ಮಾರುಕಟ್ಟೆಗೆ ಬರಲಿದೆ ಎಂದಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಇನ್ನು ಟಾಟಾ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಕೆ ಮಾಡಲು ಉದ್ದೇಶಿಸಿರುವ ಜಿಪ್‌ಟ್ರಾನ್ ತಂತ್ರಜ್ಞಾನವು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಎಲೆಕ್ಟ್ರಿಕ್ ಕಾರುಗಳನ್ನು ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯಗೊಳಿಸುವಲ್ಲಿ ಈ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗಲಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಎಂಜಿನಿಯರ್ ತಂಡದೊಂದಿಗೆ ಜಿಪ್‌ಟ್ರಾನ್ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿರುವ ಟಾಟಾ ಸಂಸ್ಥೆಯು, ಭವಿಷ್ಯದ ಎಲೆಕ್ಟ್ರಿಕ್ ಕಾರುಗಳಿಗೆ ಜಿಪ್‌ಟ್ರಾನ್ ತಂತ್ರಜ್ಞಾನವು ಹೃದಯವಿದ್ದಂತೆ ಎಂದು ಬಣ್ಣಿಸಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನವು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳನ್ನು ಈ ಪವರ್‌ಟ್ರೈನ್‌ನಲ್ಲಿ ಅಳವಡಿಸಲಾಗಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

ಜೊತೆಗೆ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ ಹಿನ್ನಲೆಯಲ್ಲಿ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿಪಡೆಯಬಹುದಾಗಿದ್ದು, ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲ ಬಾಳಿಕೆಗೆ ಸಹಕರಿಸಲಿದೆ.

ಅಧಿಕ ಮೈಲೇಜ್ ಅಷ್ಟೇ ಅಲ್ಲ ಪ್ರೀಮಿಯಂ ಫೀಚರ್ಸ್ ಪಡೆಲಿದೆ ನೆಕ್ಸಾನ್ ಎಲೆಕ್ಟ್ರಿಕ್

8 ವರ್ಷಗಳ ವಾರಂಟಿ..!

ಇದು ನಿಮಗೆ ಅಚ್ಚರಿಯಾದರೂ ನಿಜ. ಟಾಟಾ ಸಂಸ್ಥೆಯು ತನ್ನ ವಿನೂತನ ಜಿಪ್‌ಟ್ರಾನ್ ತಂತ್ರಜ್ಞಾನದ ಮೇಲೆ ಸುಮಾರು 8 ವರ್ಷಗಳ ವಾರಂಟಿ ನೀಡವುದಾಗಿ ಘೋಷಿಸಿದ್ದು, ಹೊಸ ಪವರ್‌ಟ್ರೈನ್‌ನಲ್ಲಿ ಮ್ಯಾಗ್ನೆಟ್ ಎಸಿ ಮೋಟಾರ್ ಜೋಡಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.

Article Published On: Wednesday, October 9, 2019, 20:00 [IST]
English summary
Tata Motors has revealed a few details of the Nexon electric SUV car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+