ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ

ಟಾಟಾ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ನೆಕ್ಸಾನ್ ಇವಿ ಅನಾವರಣಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದ್ದು, 19ಕ್ಕೆ ಅನಾವರಣಗೊಳ್ಳಲಿರುವ ಹೊಸ ಕಾರಿನ ಟೀಸರ್ ಬಿಡುಗಡೆ ಮಾಡಲಾಗಿದೆ.

ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ

ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆಗಾಗಿ ಅಂತಿಮ ಹಂತದ ತಯಾರಿ ನಡೆಸುತ್ತಿರುವ ಟಾಟಾ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಕಾರು ಹಲವು ವಿಶೇಷತೆಗಳಿಂದ ಕೂಡಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿ ಲಭ್ಯವಾಗಲಿರುವ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಉತ್ತಮ ಬ್ಯಾಟರಿ ವೈಶಿಷ್ಟ್ಯತೆಯೊಂದಿಗೆ ಸಾಮಾನ್ಯ ನೆಕ್ಸಾನ್ ಫೇಸ್‌ಲಿಫ್ಟ್ ಮಾದರಿಯಲ್ಲೇ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ.

ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ

19ರಂದು ಅನಾವರಣಗೊಳ್ಳಲಿರುವ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು 2020ರ ಆರಂಭದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ನೆಕ್ಸಾನ್ ಎಲೆಕ್ಟ್ರಿಕ್ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅತ್ಯುತ್ತಮ ಎಂಜಿನ್ ದಕ್ಷತೆ ಹೊಂದಿದೆ.

ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ

ಟಾಟಾ ನೆಕ್ಸಾನ್ ಇವಿ ಕಾರು ಪ್ರತಿ ಚಾರ್ಜ್‌ಗೆ 300ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಹ್ಯಾರಿಯರ್ ಕಾರಿನಲ್ಲಿರುವ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳು ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿವೆ ಎನ್ನಲಾಗಿದೆ.

ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.15 ಲಕ್ಷದಿಂದ ರೂ.17 ಲಕ್ಷ ಬೆಲೆ ಅಂತರ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದ್ದು, ಟಾಟಾ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಕೆ ಮಾಡಲು ಉದ್ದೇಶಿಸಿರುವ ಜಿಪ್‌ಟ್ರಾನ್ ತಂತ್ರಜ್ಞಾನವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದು ಎಲೆಕ್ಟ್ರಿಕ್ ಕಾರುಗಳನ್ನು ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯಗೊಳಿಸುವಲ್ಲಿ ಈ ತಂತ್ರಜ್ಞಾನವು ಸಾಕಷ್ಟು ಸಹಕಾರಿಯಾಗಲಿದೆ.

ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ

ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನವು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳನ್ನು ಈ ಪವರ್‌ಟ್ರೈನ್‌ನಲ್ಲಿ ಅಳವಡಿಸಲಾಗಿದೆ.

ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ

ಜೊತೆಗೆ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ ಹಿನ್ನಲೆಯಲ್ಲಿ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿಪಡೆಯಬಹುದಾಗಿದ್ದು, ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲ ಬಾಳಿಕೆಗೆ ಸಹಕರಿಸಲಿದೆ.

MOST READ: ಪಾರ್ಕಿಂಗ್ ವೇಳೆ ಸಿಬ್ಬಂದಿ ಎಡವಟ್ಟು- ಮೊದಲ ಮಹಡಿಯಿಂದ ಜಿಗಿದ ಕಿಯಾ ಸೆಲ್ಟೊಸ್

ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ

ಟಾಟಾ ಸಂಸ್ಥೆಯು ತನ್ನ ವಿನೂತನ ಜಿಪ್‌ಟ್ರಾನ್ ತಂತ್ರಜ್ಞಾನದ ಮೇಲೆ ಸುಮಾರು 8 ವರ್ಷಗಳ ವಾರಂಟಿ ನೀಡವುದಾಗಿ ಘೋಷಿಸಿದ್ದು, ಹೊಸ ಪವರ್‌ಟ್ರೈನ್‌ನಲ್ಲಿ ಮ್ಯಾಗ್ನೆಟ್ ಎಸಿ ಮೋಟಾರ್ ಜೋಡಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.

MOST READ: ಕಲ್ಯಾಣ್ ಜ್ಯುವೆಲ್ಲರ್ಸ್ ಮಾಲೀಕನ ಬಳಿಯಿರುವ ಐಷಾರಾಮಿ ಕಾರು ಕಲೆಕ್ಷನ್ ಹೇಗಿದೆ ಗೊತ್ತಾ?

ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ

ಇದರೊಂದಿಗೆ ನೆಕ್ಸಾನ್ ಫೇಸ್‌ಲಿಫ್ಟ್ ಮಾದರಿಯು ಕೂಡಾ ಬಿಡುಗಡೆಯ ಸನಿಹದಲ್ಲಿದ್ದು, 2020ರ ಮಾರ್ಚ್ ವೇಳೆಗೆ ಬಿಡುಗಡೆಯಾಗಲಿರುವ ಹೊಸ ಕಾರು ಬಿಎಸ್-6 ಎಂಜಿನ್‌ನೊಂದಿಗೆ ರಸ್ತೆಗಿಳಿಯಲಿದೆ. 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ನೆಕ್ಸಾನ್ ಫೇಸ್‌ಲಿಫ್ಟ್ ಕಾರು ಆವೃತ್ತಿಯು ಸ್ತುತ ಮಾರುಕಟ್ಟೆಗಿಂತ ರೂ.30 ಸಾವಿರದಿಂದ ರೂ.1.20 ಲಕ್ಷದ ತನಕ ದುಬಾರಿ ಬೆಲೆ ಪಡೆಯಲಿದೆ.

Source: Cardekho

More from DriveSpark

Article Published On: Thursday, December 12, 2019, 14:25 [IST]
English summary
Tata Nexon EV Teaser image. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+