ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಕ್ರೇಜ್

ಟಾಟಾ ಸಂಸ್ಥೆಯ ನೆಕ್ಸಾನ್ ಕ್ರೇಜ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಟಾಟಾ ನೆಕ್ಸಾನ್ ಕ್ರಾಸ್ ಲಿಮಿಟೆಡ್ ಎಡಿಷನ್ ಇದೀಗ ಕ್ರೇಜ್ ಮತ್ತು ಕ್ರೇಜ್+ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಭಾರತದ ಎಕ್ಸ್ ಶೋ ರೂಂ ಪ್ರಕಾರ ಪ್ರರಾಂಭಿಕ ಬೆಲೆ ರೂ. 7.57 ಲಕ್ಷ, ಇನ್ನೂ ಉನ್ನತ ಮಟ್ಟದ ಕ್ರೇಜ್+ ಕಾರಿಗೆ 8.17 ಲಕ್ಷ ದರ ಹೊಂದಿದೆ.

ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಕ್ರೇಜ್

ಭಾರತದ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಮಿನಿ ಎಸ್‌ಯುವಿಗಳಿಗೆ ವಿಭಾಗದಲ್ಲಿ ಕಠಿಣ ಸ್ಪರ್ಧೆಯೂ ಇದೆ. ಹೊಸ ನೆಕ್ಸಾನ್ ಕ್ರೇಜ್ ಟಾಟಾ ಮೋಟಾರ್ಸ್ ವತಿಯಿಂದ ಎರಡನೇ ಲಿಮಿಟೆಡ್ ಎಡಿಷನ್ ಆಗಿದೆ. ಕಂಪನಿಯು ಕಳೆದ ವರ್ಷ ಮೊದಲ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದರು. ಇದು ದೇಶಿಯ ಮಾರುಕಟ್ಟೆಯಲ್ಲಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಕ್ರೇಜ್

ಈಗಾಗಲೇ ಹೊಸ ಹೊಸ ಮಾಡೆಲ್‌ಗ‌ಳನ್ನು ಮತ್ತು ರೂಪಾಂತರವನ್ನು ಪರಿಚಯಿಸಿರುವ ಬಹುತೇಕ ಕಂಪನಿಗಳು ಬೇಡಿಕೆ ದುಪ್ಪಟ್ಟು ಮಾಡಿಕೊಳ್ಳುವ ಪ್ರಯತ್ನದಲ್ಲಿವೆ. ಅದಕ್ಕಾಗಿಯೇ ಆಗಾಗ ಒಂದೊಂದು ಶಿಷ್ಟವೆನ್ನುವ ಪ್ರಯತ್ನವನ್ನೂ ಮಾಡುತ್ತಿವೆ. ಸಾಮಾನ್ಯವಾಗಿ, ಮೈಲಿಗಲ್ಲು ತಲುಪಿದ ಸಂಭ್ರಮದ ವೇಳೆ ಇಂಥ ಕೆಲವೊಂದು ಪ್ರಯೋಗಗಳನ್ನು ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ದೇಶಿಯ ಮಾರುಕಟ್ಟೆಯಲ್ಲಿ 1 ಮಿಲಿಯನ್ ಮಾರಾಟದ ಹೊಸ ಮೈಲಿಗಲ್ಲನ್ನು ಸಾಧಿಸಿದರಿಂದ ಹೊಸ ಟಾಟಾ ನೆಕ್ಸಾನ್ ಕ್ರೇಜ್ ಆವೃತ್ತಿಯನ್ನು ಪರಿಚಯಿಸಿದೆ. ನೆಕ್ಸಾನ್ ಎಸ್‍‍ಯುವಿಗೆ ಪ್ರೀಮಿಯಂ ಮತ್ತು ಸ್ಪುರ್ಟಿ ಲುಕ್ ನೀಡಲು ಇಂಟಿರಿಯರ್ ಮತ್ತು ಎಕ್ಸ್ಟಿರಿಯರ್ ಅಲ್ಲಿ ಕಾಸ್ಮೆಟಿಕ್ ಅಪ್‍‍ಡೇಟ್‍ ಅನ್ನು ಮಾಡಿದ್ದಾರೆ.

ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಕ್ರೇಜ್

ಟಾಟಾ ನೆಕ್ಸಾನ್ ಕ್ರೇಜ್‍‍ನಲ್ಲಿ ಎಕ್ಸ್‌ಟೀರಿಯರ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು, ಸ್ವಿಲರ್ ರೂಫ್, ಹೊಂದಿದೆ. ಒಆರ್‍‍‍ವಿ‍ಎಂ‍ಎಸ್, ಫ್ರಂಟ್ ಗ್ರಿಲ್, ಟೈಲ್ ಗೇಟ್ ಅನ್ನು ಅಳವಡಿಸಿದೆ.ಇದರಿಂದ ಕಾರಿನ ಔಟ್ ಲುಕ್ ಇನ್ನಷ್ಟು ಸೂಗಸಾಗಿ ಕಾಣುತ್ತಿದೆ.

ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಕ್ರೇಜ್

ಲಿಮಿಟೆಡ್‌ ಎಡಿಷನ್‌ ಆಗಿದ್ದರಿಂದ ಆಧುನಿಕ ಉಪಕರಣಗಳನ್ನೇ ಬಳಸಿಕೊಳ್ಳಲಾಗಿದ್ದು, ತನ್ನ ಹಳೆಯ ವರ್ಷನ್‌ಗಳಿಗಿಂತ ಸ್ವಲ್ಪ ಮಟ್ಟಿಗಿನ ಬದಲಾವಣೆ ಮಾಡಲಾಗಿದೆ. ಆದರೆ ಇಂಟಿರಿಯರ್ ಟ್ಯಾಂಗರಿನ್ ಆರೆಂಜ್ ಬಣ್ಣದಿಂದ ಮುಂದುವರಿದಿದೆ, ಸೀಟ್ ಫಾಭ್ಯೀಕ್, ಸೆಂಟ್ರಲ್ ಕನ್ಸೋಲ್, ಡೋರ್ ಮತ್ತು ಸ್ಟೀರಿಂಗ್ ಪಿಯಾನೋ ಬ್ಲ್ಯಾಕ್ ಫಿನಿಶ್‍ ಅನ್ನು ಹೊಂದಿದೆ.

ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಕ್ರೇಜ್

ಟಾಟಾ ಮೋಟಾರ್ಸ್‍‍ನ ಪ್ಯಾಸೆಂಜರ್ ವೆಹಿಕಲ್ಸ್ ಬಿಸಿನೆಸ್ ಯುನಿಟ್, ಮಾರ್ಕೆಟ್ ಹೆಡ್ ವಿವೇಕ್ ಶ್ರೀವತ್ಸಾ ಮಾತನಾಡಿ, ನಾವು ಯಾವಗಲೂ ನೆಕ್ಸಾನ್ ಬಗ್ಗೆ ಬಹಳ ಹೆಮ್ಮೆ ಪಡುತ್ತೇವೆ. ಈ ಕಾರು ಪ್ರರಾಂಭದಿಂದಲೂ ಗ್ರಾಹಕರು ಮತ್ತು ಮಾಧ್ಯಮಗಳು ಮೆಚ್ಚಿಕೊಂಡಿದೆ. ಹೆಚ್ಚಿನ ಕಾರುಗಳನ್ನು ಹೊರತಂದಿಕ್ಕೆ ನಮಗೆ ಸಂತೋಷವಾಗಿದೆ, 100,000 ಕ್ಕಿಂತಲೂ ಹೆಚ್ಚು ನೆಕ್ಸಾನ್‍‍ಗಳು ಇಂದು ಗ್ರಾಹಕರನ್ನು ಕೈ ಸೇರಿದ್ದು, ಭಾರತೀಯ ರಸ್ತೆಗಳಲಿ ಪಾರುಪತ್ಯ ಮೆರೆದ ಕಾರುಗಳಲ್ಲಿ ಒಂದಾಗಿದೆ.

ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಕ್ರೇಜ್

ಕಳೆದ ವರ್ಷ ಸೀಮಿತ ಆವೃತ್ತಿ ನೆಕ್ಸಾನ್ ಕ್ರೇಜ್ ನಮ್ಮ ಅಪೇಕ್ಷಣೀಯ ಉತ್ಪನ್ನಗಳಲ್ಲಿ ಒಂದಾಗಿದೆ. ಈ ವರ್ಷ ನಾವು ಈ ಕಾರುಗಳನ್ನು ಬಿಡುಗಡೆ ಮಾಡಲು ಸಂತೋಷ ಪಡುತ್ತೇವೆ. ಸ್ಪೋರ್ಟಿಯರ್ ಮತ್ತು ಟ್ರೆಂಡಿಯರ್ ಈ ಎರಡು ಆವೃತ್ತಿಯೊಂದಿಗೆ ಅದು ಹಿಂದುರುಗಿದೆ. ಹೊಸ ಕ್ರೇಜ್ ಈ ವರ್ಷದ ಹಬ್ಬದ ಸಮಯದಲ್ಲಿ ಸಾಕಷ್ಟು ಯುವ ಗ್ರಾಹಕರನ್ನು ಆಕರ್ಷಿಸುತ್ತೇವೆ ಎಂಬ ನಂಬಿಕೆಯನ್ನು ಹೊಂದಿದೆ ಎಂದು ಹೇಳಿದರು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಕ್ರೇಜ್

ಹೊಸ ಟಾಟಾ ನೆಕ್ಸಾನ್ ಕ್ರೇಜ್ ಎರಡು ಪವರ್‍‍ಫುಲ್ ಎಂಜಿನ್ ಆಯ್ಕೆ‍ಗಳೊಂದಿಗೆ ಮಾರುಕಟ್ಟೆ ಎಂಟ್ರಿ ಕೊಟ್ಟಿದೆ. 1.2 ಪೆಟ್ರೋಲ್ ಮತ್ತು 1.5 ರಿವೊ ಟಾರ್ಕ್ ಡಿಸೇಲ್ ಯುನಿಟ್ ಹೊಂದಿದೆ. ಎರಡು ಎಂಜಿನ್‍‍ಗೆ ಸ್ಟ್ಯಾಂಡರ್ಡ್ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಜೋಡಿಸಿದ್ದು, ಅಲ್ಲದೇ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ನೀಡಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಕ್ರೇಜ್

ಟಾಟಾ ನೆಕ್ಸಾನ್ ಕ್ರೇಜ್ ಸ್ಪೇಷಲ್ ಎಡಿಷನ್ ಅನ್ನು ಈಗಗಾಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. 1 ಮಿಲಿಯನ್ ನೆಕ್ಸಾನ್ ಕಾಪೆಕ್ಟ್ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಿರುವವ ಸಂದರ್ಭದಲ್ಲಿ, ಇನ್ನಷ್ಟು ಗ್ರಾಹಕರನ್ನು ಸೆಳೆಯಲು ಲಿಮಿಟೆಡ್ ಎಡಿಷನ್ ಟಾಟಾ ನೆಕ್ಸಾನ್ ಕ್ರೇಜ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಟಾಟಾ ನೆಕ್ಸಾನ್ ಹ್ಯುಂಡೈ ವೆನ್ಯೂ, ಫೋರ್ಡ್ ಇಕೋ ಸ್ಪೋರ್ಟ್, ಮಾರುತಿ ಸುಜುಕಿ ಬ್ರೆಝಾ ಕಾರಿಗೆ ಪೈಪೋಟಿ ನೀಡಲಿದೆ.

Article Published On: Tuesday, September 10, 2019, 15:32 [IST]
English summary
Tata Nexon Kraz Launched In India: Priced At Rs 7.57 Lakh - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+