ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿವೆ 2020ರ ಟಾಟಾ ನೆಕ್ಸಾನ್ ಮತ್ತು ಟಿಯಾಗೋ

ಟಾಟಾ ಸಂಸ್ಥೆಯು ಸದ್ಯ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಹೊಚ್ಚ ಹೊಸ ಕಾರು ಮಾದರಿಗಳಾದ ಆಲ್‌ಟ್ರೊಜ್, ಕ್ಯಾಸಿನಿ ಜೊತೆಗೆ ಬಿಎಸ್-6 ಕಾರುಗಳಾದ ಹ್ಯಾರಿಯರ್, ನೆಕ್ಸಾನ್, ಟಿಗೋರ್, ಟಿಯಾಗೋ ಮತ್ತು ಹೆಕ್ಸಾ ಕಾರುಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳಿಂತಲೂ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗೊಳಿಸುತ್ತಿದೆ.

ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿವೆ 2020ರ ಟಾಟಾ ನೆಕ್ಸಾನ್ ಮತ್ತು ಟಿಯಾಗೋ

ಹೊಸ ಕಾರುಗಳ ಉತ್ಪಾದನೆಗಾಗಿ ಸದ್ಯ ಟಾಟಾ ಸಂಸ್ಥೆಯು ಒಮೆಗಾ ಮತ್ತು ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಈ ಹಿಂದಿಗಿಂತಲೂ ಕಾರು ಉತ್ಪಾದನಾ ತಂತ್ರಜ್ಞಾನ ಬಳಕೆ ಮತ್ತು ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆಯಾಗುವ ಮೂಲಕ ಗ್ರಾಹಕರನ್ನು ಆಕರ್ಷಣೆಯಾಗುವಂತೆ ಮಾಡಿವೆ. ಈ ಹಿನ್ನಲೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಉತ್ಪಾದನೆಗಾಗಿ ಒಮೆಗಾ ಮತ್ತು ಅಲ್ಫಾ ಪ್ಲ್ಯಾಟ್‌ಫಾರ್ಮ್‌ ಬಳಕೆ ಮಾಡಲಾಗುತ್ತಿದ್ದು, 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಹೊಸ ಮತ್ತು ಫೇಸ್‌ಲಿಫ್ಟ್ ಕಾರುಗಳು ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ರಸ್ತೆಗಿಳಿಯಲಿವೆ.

ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿವೆ 2020ರ ಟಾಟಾ ನೆಕ್ಸಾನ್ ಮತ್ತು ಟಿಯಾಗೋ

ಬಿಡುಗಡೆಗಾಗಿ ಹೊಸ ಕಾರುಗಳು ಸದ್ಯ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ಕಾರುಗಳ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ಉನ್ನತೀಕರಿಸಲಾಗಿದೆ.

ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿವೆ 2020ರ ಟಾಟಾ ನೆಕ್ಸಾನ್ ಮತ್ತು ಟಿಯಾಗೋ

ಟಾಟಾ ಸಂಸ್ಥೆಯು ಮುಂಬರುವ ಫೆಬ್ರುವರಿ ಅಂತ್ಯದ ತನಕವೂ ಬಿಎಸ್-4 ಕಾರುಗಳನ್ನು ಮಾರಾಟ ಮಾಡಲಿದ್ದು, ತದನಂತರವಷ್ಟೇ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿ ಹೊಂದಿರುವ ಹ್ಯಾರಿಯರ್, ನೆಕ್ಸಾನ್, ಹೆಕ್ಸಾ, ಟಿಗೋರ್ ಮತ್ತು ಟಿಯಾಗೋ ಕಾರುಗಳ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಲಿದೆ.

ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿವೆ 2020ರ ಟಾಟಾ ನೆಕ್ಸಾನ್ ಮತ್ತು ಟಿಯಾಗೋ

ಅದಕ್ಕೂ ಮುನ್ನ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರನ್ನು ಇದೇ ವರ್ಷ ಡಿಸೆಂಬರ್ ಅಂತ್ಯದಲ್ಲಿ ಅನಾವರಣಗೊಳಿಸಿ 2020ರ ಆರಂಭದಲ್ಲಿ ಬಿಡುಗಡೆ ನಿರ್ಧರಿಸಿರುವ ಟಾಟಾ ಸಂಸ್ಥೆಯ 7 ಸೀಟರ್ ಎಸ್‌ಯುವಿ ಮಾದರಿಯಾದ ಕ್ಯಾಸಿನಿ ಕಾರನ್ನು ಕೂಡಾ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿ ಮೇ ಅಥವಾ ಜೂನ್ ಅವಧಿಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.

ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿವೆ 2020ರ ಟಾಟಾ ನೆಕ್ಸಾನ್ ಮತ್ತು ಟಿಯಾಗೋ

ಹೀಗಾಗಿ ಮೊದಲ ಹಂತವಾಗಿ 2020ರ ಜನವರಿಯಲ್ಲಿ ಆಲ್‌ಟ್ರೋಜ್ ಕಾರು ಬಿಡುಗಡೆಯಾಗಲಿದ್ದರೆ ಫೆಬ್ರುವರಿ ಅಥವಾ ಮಾರ್ಚ್ ಅಂತ್ಯಕ್ಕೆ ಬಿಎಸ್-6 ಕಾರುಗಳು ಮತ್ತು ತದನಂತರವಷ್ಟೇ ಜೂನ್ ಆರಂಭದಲ್ಲಿ 7 ಸೀಟರ್ ಕ್ಯಾಸಿನಿ ಎಸ್‌ಯುವಿ ಕಾರು ಖರೀದಿಗೆ ಲಭ್ಯವಾಗಲಿದೆ.

ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿವೆ 2020ರ ಟಾಟಾ ನೆಕ್ಸಾನ್ ಮತ್ತು ಟಿಯಾಗೋ

ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ನೆಕ್ಸಾನ್ ಕಾರು ಫೇಸ್‌ಲಿಫ್ಟ್ ಆವೃತ್ತಿಯಲ್ಲೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಜಿನ್ ಆಯ್ಕೆಗಳನ್ನೇ ಉನ್ನತೀಕರಿಸಲಾಗಿದೆ.

MOST READ: ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿವೆ 2020ರ ಟಾಟಾ ನೆಕ್ಸಾನ್ ಮತ್ತು ಟಿಯಾಗೋ

ಅದರ ಹೊರತಾಗಿ ಹೊಸ ನೆಕ್ಸಾನ್ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬ್ಯಾನೆಟ್, ಬಂಪರ್ ಡಿಸೈನ್, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ತಂತ್ರಜ್ಞಾನ ಪ್ರೇರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೇರಿದಂತೆ ಕ್ಯಾಬಿನ್ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಪಡೆದುಕೊಂಡಿದ್ದು, ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಹೊಸ ಕಾರಿನ ಬೆಲೆಯಲ್ಲಿ ಪ್ರಸ್ತುತ ಮಾರುಕಟ್ಟೆಗಿಂತ ರೂ.30 ಸಾವಿರದಿಂದ ರೂ.1.20 ಲಕ್ಷದ ತನಕ ದುಬಾರಿ ಬೆಲೆ ಪಡೆಯಲಿದೆ.

MOST READ: ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಇನ್ನು ಟಾಟಾ ಸಂಸ್ಥೆಯು ನೆಕ್ಸಾನ್ ಫೇಸ್‌ಲಿಫ್ಟ್ ಜೊತೆಗೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಸಹ ಅಭಿವೃದ್ದಿಗೊಳಿಸಿ ಬಿಡುಗಡೆಗಾಗಿ ಸಿದ್ದಪಡಿಸಿದ್ದು, ಹೊಸ ಕಾರು ಅತ್ಯುತ್ತಮ ಬ್ಯಾಟರಿ ಸೌಲಭ್ಯದೊಂದಿಗೆ 300ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿದೆ.

MOST READ: ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಎಂಜಿ ಮೋಟಾರ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿವೆ 2020ರ ಟಾಟಾ ನೆಕ್ಸಾನ್ ಮತ್ತು ಟಿಯಾಗೋ

ಮಾಹಿತಿ ಪ್ರಕಾರ ನೆಕ್ಸಾನ್ ಎಲೆಕ್ಟ್ರಿಕ್ ಕೂಡಾ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಕೆಲವು ತಿಂಗಳುಗಳ ಬಳಿಕ ಬಿಡುಗಡೆಯಾಗಲಿದ್ದು, ಕಾರಿನ ಬೆಲೆಯು ರೂ.15 ಲಕ್ಷದಿಂದ ರೂ.17 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Tata Nexon & Tiago Facelift Versions Spotted Testing Ahead Of Debut At Auto Expo 2020. Read in Kannada.
Story first published: Thursday, October 31, 2019, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X