ಸ್ಥಗಿತಗೊಳ್ಳಲಿದೆ ಟಾಟಾ ಸಫಾರಿ ಸ್ಟಾರ್ಮ್

ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಸಫಾರಿ ಸ್ಟಾರ್ಮ್ ಎಸ್‌ಯುವಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಟಾಟಾ ಸಫಾರಿ ಸ್ಟಾರ್ಮ್‍ನ ನಿರ್ಮಾಣವನ್ನು ನಿಲ್ಲಿಸಲಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆಯಿಂದ ಮರೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸ್ಥಗಿತಗೊಳ್ಳಲಿದೆ ಟಾಟಾ ಸಫಾರಿ ಸ್ಟಾರ್ಮ್

ಟೀಂ ಬಿ‍‍ಹೆಚ್‍‍ಪಿ ವರದಿಗಳ ಪ್ರಕಾರ ಟಾಟಾ ಸಫಾರಿ ಸ್ಟಾರ್ಮ್ ಅನ್ನು ಭಾರತದ ಕಂಪನಿಯ ಸರಣಿಯಿಂದ ನಿಲ್ಲಿಸಲಾಗುವುದು. ಯಾವುದೇ ಹೊಸ ಬುಕಿಂಗ್‌ಗಳನ್ನು ಸ್ವೀಕರಿಸದಂತೆ ಹಾಗೂ ಉಳಿದಿರುವ ಕಾರುಗಳನ್ನು ಮಾರಾಟ ಮಾಡುವಂತೆ ಡೀಲರ್‍‍ಗಳಿಗೆ ಸೂಚಿಸಲಾಗಿದೆ.

ಸ್ಥಗಿತಗೊಳ್ಳಲಿದೆ ಟಾಟಾ ಸಫಾರಿ ಸ್ಟಾರ್ಮ್

ಕೆಲವು ಡೀಲರ್‍‍ಗಳು ಸಫಾರಿ ಸ್ಟಾರ್ಮ್‌ನ ಟೆಸ್ಟ್ ಡ್ರೈವ್‌ ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಟಾಟಾ ಸಫಾರಿ ಸ್ಟಾರ್ಮ್ ಅನ್ನು ಭಾರತದಲ್ಲಿ 2012ರಲ್ಲಿ ಬಿಡುಗಡೆಗೊಳಿಸಲಾಯಿತು. ಆರಂಭದಲ್ಲಿ ಈ ಎಸ್‌ಯುವಿಯು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಯಿತು.

ಸ್ಥಗಿತಗೊಳ್ಳಲಿದೆ ಟಾಟಾ ಸಫಾರಿ ಸ್ಟಾರ್ಮ್

ಆದರೆ, ನಂತರದ ದಿನಗಳಲ್ಲಿ ಮಾರಾಟ ಪ್ರಮಾಣವು ಕಡಿಮೆಯಾಯಿತು. 2019ರ ವೇಳೆಗೆ ಟಾಟಾ ಸಫಾರಿ ಸ್ಟಾರ್ಮ್ ಎಸ್‍‍ಯುವಿಗಳು ಪ್ರತಿ ತಿಂಗಳು ಸರಾಸರಿ 100 ಯೂನಿಟ್‌ಗಳ ಮಾರಾಟವನ್ನು ದಾಖಲಿಸುತ್ತಿವೆ.

ಸ್ಥಗಿತಗೊಳ್ಳಲಿದೆ ಟಾಟಾ ಸಫಾರಿ ಸ್ಟಾರ್ಮ್

2019ರ ಅಕ್ಟೋಬರ್‍ ತಿಂಗಳಿನಲ್ಲಿ ಈ ಎಸ್‍‍ಯುವಿಯ 165 ಯುನಿಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ 74.3%ನಷ್ಟು ಕುಸಿತವಾಗಿದೆ. ಟಾಟಾ ಸಫಾರಿ ಸ್ಟಾರ್ಮ್ ಎಸ್‍ಯುವಿಯಲ್ಲಿ 2.2 ಲೀಟರಿನ ನಾಲ್ಕು ಸಿಲಿಂಡರ್ ಡಿಒಹೆಚ್‌ಸಿ ಡೀಸೆಲ್ ಎಂಜಿನ್‌ ಅನ್ನು ಎರಡು ವಿಧದಲ್ಲಿ ಅಳವಡಿಸಲಾಗಿದೆ.

ಸ್ಥಗಿತಗೊಳ್ಳಲಿದೆ ಟಾಟಾ ಸಫಾರಿ ಸ್ಟಾರ್ಮ್

ಲೋವರ್ ಎಂಡ್ ಮಾದರಿಯ ಎಂಜಿನ್ 148 ಬಿ‍‍ಹೆಚ್‍‍ಪಿ ಪವರ್ ಹಾಗೂ 320 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್‌ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಹೈ ಎಂಡ್ ಮಾದರಿಯ ಎಂಜಿನ್ 154 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಥಗಿತಗೊಳ್ಳಲಿದೆ ಟಾಟಾ ಸಫಾರಿ ಸ್ಟಾರ್ಮ್

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಎರಡೂ ಎಂಜಿನ್ಗಳು 4X4 ಡ್ರೈವ್ ಸಿಸ್ಟಂನಲ್ಲಿ ಎಲ್ಲಾ ನಾಲ್ಕು ವ್ಹೀಲ್‍‍ಗಳಿವೆ ಪವರ್ ನೀಡುತ್ತವೆ. ಟಾಟಾ ಕಂಪನಿಯು ಸದ್ಯಕ್ಕೆ ತನ್ನ ಪ್ರಮುಖ ಎಸ್‍‍ಯುವಿಯಾದ ಟಾಟಾ ಗ್ರಾವಿಟಾಸ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಸ್ಥಗಿತಗೊಳ್ಳಲಿದೆ ಟಾಟಾ ಸಫಾರಿ ಸ್ಟಾರ್ಮ್

ಈ ಹೊಸ ಮಾದರಿಯು ಟಾಟಾ ಹ್ಯಾರಿಯರ್ ಎಸ್‍‍ಯುವಿಯ 7 ಸೀಟರಿನ ಆವೃತ್ತಿಯಾಗಿದೆ. ಈ ಎಸ್‍‍ಯುವಿಯನ್ನು 2020ರ ಫೆಬ್ರವರಿಯಲ್ಲಿ ಬಿಡುಗಡೆಗೊಳಿಸಲಾಗುವುದು. ಇದರ ಜೊತೆಗೆ ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಗಾಗಿ ತನ್ನ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರ್ ಆದ ಟಾಟಾ ಆಲ್ಟ್ರೋಜ್ ಕಾರ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಸ್ಥಗಿತಗೊಳ್ಳಲಿದೆ ಟಾಟಾ ಸಫಾರಿ ಸ್ಟಾರ್ಮ್

ಟಾಟಾ ಕಂಪನಿಯು ಟಾಟಾ ಆಲ್ಟ್ರೋಜ್ ಕಾರ್ ಅನ್ನು 2020ರ ಜನವರಿಯಲ್ಲಿ ಬಿಡುಗಡೆಗೊಳಿಸಲಿದೆ. ಆಲ್ಟ್ರೋಜ್ ಹ್ಯಾಚ್‍‍ಬ್ಯಾಕ್ ಕಾರಿನ ಉತ್ಪಾದನೆಯನ್ನು ಆರಂಭಿಸಲಾಗಿದ್ದು, ಬುಕ್ಕಿಂಗ್‍‍ಗಳನ್ನು ಮುಂದಿನ ತಿಂಗಳಿನಿಂದ ಶುರುಮಾಡುವ ಸಾಧ್ಯತೆಗಳಿವೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಥಗಿತಗೊಳ್ಳಲಿದೆ ಟಾಟಾ ಸಫಾರಿ ಸ್ಟಾರ್ಮ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಸಫಾರಿ ಸ್ಟಾರ್ಮ್ ಎಸ್‍‍ಯುವಿಯನ್ನು ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಹೆಚ್ಚಿದ ಸ್ಪರ್ಧೆ ಹಾಗೂ ಬೇರೆ ಕಂಪನಿಗಳ ಸುಧಾರಿತ ಟೆಕ್ನಾಲಜಿಯಿಂದಾಗಿ ಸಫಾರಿ ಸ್ಟಾರ್ಮ್ ದೇಶಿಯ ಮಾರುಕಟ್ಟೆಗೆ ಹಳೆಯದಾಯಿತು. ಈಗ ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

Most Read Articles

Kannada
English summary
Tata Safari Storme Production Comes To An End: Set To Be Discontinued Very Soon - Read in Kannada
Story first published: Thursday, November 28, 2019, 13:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X