ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ದೇಶಾದ್ಯಂತ ಸದ್ಯ ಬಿಎಸ್-4 ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ತಾಂತ್ರಿಕ ಗುಣವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದ್ದು, ಇದು ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ನಿಷೇಧವಾಗುವುದು ಖಚಿತವಾಗಿದೆ.

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಈ ಹಿಂದೆ ಕೇಂದ್ರ ಸರ್ಕಾರವು 2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದೇಶಾದ್ಯಂತ ಬಿಎಸ್-3 (ಭಾರತ್ ಸ್ಟೇಜ್) ಸೌಲಭ್ಯಗಳನ್ನು ಒಳಗೊಂಡ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಮೇಲೆ ನಿಷೇಧ ನಿಷೇಧ ಹೇರಿದ್ದಲ್ಲದೆ ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನ ಮಾದರಿಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಿತ್ತು.

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಡುತ್ತಿರುವ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸೂಚನೆಯೆಂತೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ನಿಷೇಧ ಹೇರುವುದು ಖಚಿತವಾಗಿದ್ದು, ಬಿಎಸ್-6 ವಾಹನಗಳು ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವಾಹನ ಮಾದರಿಗಳಿಗೆ ಮಾತ್ರವೇ ಅವಕಾಶ ನೀಡಲಿದೆ.

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಹೀಗಾಗಿ ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಬಿಎಸ್ 6 ವೈಶಿಷ್ಟ್ಯತೆಯುಳ್ಳ ಎಂಜಿನ್ ಪ್ರೇರಿತ ಕಾರು ಮಾದರಿಗಳನ್ನು ಬಿಡುಗಡೆ ಮಾಡಬೇಕಿರುವ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಪಾಲಿಸಲು ಸಾಧ್ಯವಾಗದ ಕೆಲವು ಕಾರು ಮಾದರಿಗಳಿಗೆ ಗುಡ್‌ಬೈ ಹೇಳಬೇಕಾದ ಅನಿವಾರ್ಯತೆ ಎದುರಾಗಿದೆ.

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಇದರಿಂದ ಟಾಟಾ ನಿರ್ಮಾಣದ ಸುಮೊ ಗೋಲ್ಡ್, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಜೊತೆಗೆ ಟಿಗೋರ್ ಮತ್ತು ಟಿಯಾಗೋ ಕಾರಿನ 1.2-ಲೀಟರ್ ಡೀಸೆಲ್ ವರ್ಷನ್‌ಗಳನ್ನು ಕೈಬಿಡಲು ನಿರ್ಧರಿಸಲಾಗಿದ್ದು, ಬಿಎಸ್ 6 ನಿಯಮಾವಳಿಗಳನ್ನು ಪಾಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲವು ಹಳೆಯ ಕಾರು ಆವೃತ್ತಿಗಳನ್ನು ಸ್ಥಗಿತಗೊಳಿಸುವುದು ಬಹುತೇಕ ಖಚಿತವಾಗಿದೆ.

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಒಂದು ವೇಳೆ ಸ್ಥಗಿತಗೊಳಿಸಲಾಗುತ್ತಿರುವ ಕಾರುಗಳ ಎಂಜಿನ್ ಗುಣಮಟ್ಟವನ್ನು ಹೆಚ್ಚಿಸಿದರೂ ಕೂಡಾ ಮಾರುಕಟ್ಟೆಯಲ್ಲಿ ಗರಿಷ್ಠ ಬೇಡಿಕೆ ಪಡೆಯುವ ಸಾಧ್ಯತೆಗಳು ಕಡಿಮೆ ಇದ್ದು, ಇದರಿಂದ ಎಂಜಿನ್ ಗುಣಮಟ್ಟ ಮತ್ತು ಸುರಕ್ಷತೆಯಿಲ್ಲದ ಕಾರುಗಳ ಉತ್ಪಾದನೆ ಬಿಟ್ಟು ಹೊಸ ಕಾರುಗಳ ಉತ್ಪಾದನೆ ಹೆಚ್ಚಿನ ಒತ್ತು ನೀಡಲು ಟಾಟಾ ಮಹತ್ವದ ಯೋಜನೆ ರೂಪಿಸಿದೆ.

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಇನ್ನು ವಿಶ್ವಾದ್ಯಂತ ಈಗಾಗಲೇ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಬ್ರೇಕ್ ಹಾಕಲು ಯುರೋಪ್‌ನಲ್ಲಿ ಯುರೋ-6, ಇತರೆ ಖಂಡಗಳಲ್ಲಿ ವಿವಿಧ ಮಾದರಿಯ ಗುಣಮಟ್ಟದ ವಾಹನಗಳಿಗೆ ಮಾತ್ರವೇ ಅವಕಾಶವಿದ್ದು, ಇದರ ಭಾಗವಾಗಿ ಭಾರತದಲ್ಲಿ ಬಿಎಸ್-6 ವಾಹನಗಳು ರಸ್ತೆಗಿಳಿಯಲಿವೆ.

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಯುರೋಪ್‌ನಲ್ಲಿ ಈ ಹಿಂದೆ 2017ರಿಂದಲೇ ಯುರೋ-6 ತಾಂತ್ರಿಕ ಅಂಶಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದ್ದು, ಇದು ಬಿಎಸ್-6 ವೈಶಿಷ್ಟ್ಯತೆಗೆ ಸರಿಸಮನಾಗಿದೆ.

MOST READ: ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಹೊಸ ನಿಯಮ ಜಾರಿಯಿಂದಾಗಿ ವಾಹನ ಎಂಜಿನ್ ಮಾದರಿಗಳಲ್ಲಿ ಭಾರೀ ಬದಲಾವಣೆಯಾಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್ ಮಾದರಿಗಿಂತಲೂ ಬಿಎಸ್-6 ಹೆಚ್ಚಿನ ಗುಣಮಟ್ಟದೊಂದಿಗೆ ಹೊಗೆ ಉಗುಳುವ ಪ್ರಮಾಣದಲ್ಲಿ ಪರಿಣಾಮಕಾರಿ ತಗ್ಗಿಸಲಿದೆ.

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಹೀಗಿರುವಾಗ ಮಾಲಿನ್ಯದಲ್ಲಿ ಬಹುದೊಡ್ಡ ಕೊಡುಗೆ ಹೊಂದಿರುವ ಭಾರತದಲ್ಲಿ ಬಿಎಸ್-6 ವೈಶಿಷ್ಟ್ಯತೆಯ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತಡಗಳಿದ್ದು, ಇದೀಗ ಸುಪ್ರೀಂಕೋರ್ಟ ಕೂಡಾ ಈ ಕುರಿತಂತೆ ಮಹತ್ವದ ಆದೇಶವನ್ನು ಹೊರಡಿಸಿರುವುದು ಕೇಂದ್ರ ಸರ್ಕಾರವು ಪಾಲನೆ ಮಾಡಲೇಬೇಕಾದ ಅನಿವಾರ್ಯತೆಯಲ್ಲಿದೆ.

MOST READ: ಮುಕೇಶ್ ಅಂಬಾನಿ ಕಾರ್ ಕಲೆಕ್ಷನ್‌ ಕಂಡ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಅಚ್ಚರಿ..!

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ತೀರ್ಪಿನ ಪ್ರಕಾರ, ಮುಂಬರುವ ದಿನಗಳಲ್ಲಿ ಮಾಲಿನ್ಯ ತಡೆಯಲು ಬಿಎಸ್-6 ತಾಂತ್ರಿಕ ಅಂಶಗಳ ಅಳವಡಿಕೆ ಅವಶ್ಯವಿದ್ದು, 2020ರ ಏಪ್ರಿಲ್ 1ರಿಂದಲೇ ಹೊಸ ನಿಯಮ ಜಾರಿಗೆ ಸಿದ್ದತೆ ಮಾಡಿಕೊಳ್ಳುವಂತೆ ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದೆ.

ಬಿಎಸ್ 6 ಎಫೆಕ್ಟ್- ಸುಮೊ, ಬೊಲ್ಟ್ ಮತ್ತು ಜೆಸ್ಟ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ಟಾಟಾ

ಬೆಲೆ ಏರಿಕೆಯ ಬಿಸಿ..!

ಹೌದು, ಬಿಎಸ್ 4 ವಾಹನಗಳಿಂತಲೂ ಬಿಎಸ್ 6 ಎಂಜಿನ್ ಪ್ರೇರಿತ ವಾಹನಗಳ ಎಂಜಿನ್ ಮಾದರಿಯು ಹೆಚ್ಚಿನ ಗುಣಮಟ್ಟ ಪಡೆದುಕೊಂಡಿರಲಿದ್ದು, ಇದರಿಂದ ಸಹಜವಾಗಿಯೇ ಸದ್ಯ ರೂ.5 ಲಕ್ಷಕ್ಕೆ ದೊರೆಯುತ್ತಿರುವ ಕಾರುಗಳು ಮುಂಬರುವ ದಿನಗಳಲ್ಲಿ ರೂ. 6.50 ಲಕ್ಷದಿಂದ ರೂ. 7 ಲಕ್ಷಕ್ಕೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.

Article Published On: Thursday, April 11, 2019, 10:50 [IST]
English summary
Tata Motors Discontinues Production Of The Sumo & Bolt — Tata Zest To Soon Follow. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+