ಮುಕೇಶ್ ಅಂಬಾನಿ ಕಾರ್ ಕಲೆಕ್ಷನ್ ಕಂಡ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಅಚ್ಚರಿ..!
ಉದ್ಯಮಿ ಮುಕೇಶ್ ಅಂಬಾನಿ ಬಳಿ ವಿಶ್ವದ ದುಬಾರಿ ಐಷಾರಾಮಿ ಕಾರುಗಳ ಸಂಗ್ರಹವೇ ಇದೆ. ಕೇವಲ ಭದ್ರತೆಗಾಗಿಯೇ ಪ್ರತಿ ತಿಂಗಳು ಕೋಟಿ ಕೋಟಿ ರೂಪಾಯಿ ಖರ್ಚು ಮಾಡುವ ಮುಕೇಶ್ ಅಂಬಾನಿಯವರ ಕಾರು ಕಲೆಕ್ಷನ್ ನೋಡುವುದೇ ಒಂದು ಅಚ್ಚರಿ ಅಂದ್ರೆ ತಪ್ಪಾಗುವುದಿಲ್ಲ.

ಹೌದು, ಮೊನ್ನೆಯಷ್ಟೇ ಮುಕೇಶ್ ಅಂಬಾನಿ ಅಧಿಕೃತ ನಿವಾಸ ಆ್ಯಂಟಿಲಿಯಾದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ವಿಶೇಷ ಔತಣಕೂಟವನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಟಗಾರರು ಮುಕೇಶ್ ಅಂಬಾನಿಯವರ ದುಬಾರಿ ಕಾರುಗಳ ಕಲೆಕ್ಷನ್ ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಸಾಲು ಸಾಲಾಗಿ ನಿಂತಿದ್ದ ಲಂಬೋರ್ಗಿನಿ, ಪೋರ್ಷೆ, ಮರ್ಸಿಡಿಸ್ ಬೆಂಝ್, ರೋಲ್ಸ್ ರಾಯ್ಸ್, ಬೆಂಟ್ಲಿ, ರೇಂಜ್ ರೋವರ್, ಲ್ಯಾಂಡ್ ರೋವರ್, ಆಡಿ, ಬಿಎಂಡಬ್ಲ್ಯು ನಿರ್ಮಾಣದ 150ಕ್ಕೂ ಹೆಚ್ಚು ವಿವಿಧ ಮಾದರಿಯ ಕಾರುಗಳ ಸಂಗ್ರಹ ನೋಡಿ ಮುಂಬೈ ಇಂಡಿಯನ್ಸ್ ಆಟಗಾರರು ದಂಗಾಗಿದ್ದಾರೆ.

ವಿಶ್ವದ ಬಹುತೇಕ ಹೈ ಎಂಡ್ ಕಾರುಗಳನ್ನು ತಮ್ಮದಾಗಿಸಿಕೊಂಡಿರುವ ಮುಕೇಶ್ ಅಂಬಾನಿಯವರು ತಮ್ಮ ಗ್ಯಾರೇಜ್‌ನಲ್ಲಿ ವಿಂಟೇಜ್ ಕಾರುಗಳಿಗೂ ವಿಶೇಷ ಸ್ಥಾನ ನೀಡಲಾಗಿದ್ದು, ಕಳೆದ ಕೆಲ ತಿಂಗಳ ಹಿಂದಷ್ಟೇ ಖರೀದಿ ಮಾಡಲಾಗಿರುವ ಮರ್ಸಿಡಿಸ್ ಬೆಂಝ್ ನಿರ್ಮಾಣದ ಡಬ್ಲ್ಯು221 ಎಸ್ ಗಾರ್ಡ್ ಸದ್ಯ ಪ್ರಮುಖ ಆಕರ್ಷಣೆಯಾಗಿದೆ.

ಕೇವಲ ಸೆಕ್ಯೂರಿಟಿ ಗಾರ್ಡ್‌ಗಳು ಬಳಕೆ ಮಾಡಲೆಂದೇ ಹತ್ತಾರು ಲ್ಯಾಂಡ್ ರೋವರ್ & ರೇಂಜ್ ರೋವರ್ ಕಾರುಗಳನ್ನು ನೀಡಿರುವ ಮುಕೇಶ್ ಅಂಬಾನಿಯವರು ಸ್ವಂತಕ್ಕೆ ಓಡಾಡುವ ಕಾರು ಹೇಗಿರಬಹುದು ಎಂದು ನೀವು ಉಹಿಸಲು ಕಷ್ಟ ಸಾಧ್ಯ. ಭದ್ರತೆಗಾಗಿ ಜೆಡ್ ಪ್ಲಸ್ ಸುರಕ್ಷತೆಯಿದ್ದು, ಬೆಂಗಾವಲು ಪಡೆಯ ನಿರ್ವಹಣೆಗಾಗಿಯೇ ಅವರು ಪ್ರತಿ ವರ್ಷ ಬರೋಬ್ಬರಿ 30 ಕೋಟಿ ಖರ್ಚು ಮಾಡುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು.

ವಿಶ್ವದರ್ಜೆ ಸುರಕ್ಷೆ ಹೊಂದಿರುವ ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವ ಮುಕೇಶ್ ಅಂಬಾನಿಯವರು ಸಂದರ್ಭಕ್ಕೆ ತಕ್ಕಂತೆ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯವುಳ್ಳ ಕಾರುಗಳನ್ನು ಬಳಕೆ ಮಾಡುತ್ತಿದ್ದು, ವಿಶ್ವದ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಮರ್ಸಿಡಿಸ್ ಬೆಂಝ್ ಡಬ್ಲ್ಯು221 ಎಸ್ ಗಾರ್ಡ್ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಜರ್ಮನ್ ಬ್ರಾಂಡ್ ಮರ್ಸಿಡಿಸ್ ಬೆಂಝ್ ಸಂಸ್ಥೆಯು ವಿಶೇಷವಾಗಿ ವಿವಿಐಪಿ ವ್ಯಕ್ತಿಗಳಿಗಾಗಿಯೇ ಅತಿಹೆಚ್ಚು ಸುರಕ್ಷಾ ಸೌಲಭ್ಯಗಳನ್ನು ಒದಗಿಸಿ ಡಬ್ಲ್ಯು221 ಎಸ್ ಗಾರ್ಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಬಾಂಬ್ ದಾಳಿ, ಅಗ್ನಿಅವಘಡಗಳಿಂದ ಸಂಪೂರ್ಣ ಸುರಕ್ಷತೆಯನ್ನು ಪಡೆದಿರುತ್ತೆ.

2017ರಲ್ಲೇ ಡಬ್ಲ್ಯು221 ಎಸ್ ಗಾರ್ಡ್ ಕಾರಿಗೆ ಬುಕ್ಕಿಂಗ್ ಮಾಡಿದ್ದ ಮುಕೇಶ್ ಅಂಬಾನಿಯವರಿಗೆ ಇದೀಗ ಹೊಸ ಕಾರನ್ನು ಒದಗಿಸಲಾಗಿದ್ದು, ಬುಕ್ಕಿಂಗ್ ಮಾಡಿದ ಒಂದೂವರೆ ವರ್ಷದ ನಂತರ ನೀಡಲಾಗಿದೆ. ಕಾರಣ, ಬುಕ್ಕಿಂಗ್ ನಂತರವೇ ಕಾರು ಉತ್ಪಾದನೆಯನ್ನು ಆರಂಭಿಸುವ ಮರ್ಸಿಡಿಸ್ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಕಾರಿನ ಡಿಸೈನ್ ಮತ್ತು ಒಳಭಾಗದ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿ ಮಾರಾಟ ಮಾಡುತ್ತೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಹೀಗಾಗಿ ಅಂಬಾನಿ ಗ್ಯಾರೇಜ್ ಸೇರಿರುವ ಹೊಸ ಡಬ್ಲ್ಯು221 ಎಸ್ ಗಾರ್ಡ್ ಕಾರು ಕೂಡಾ ವಿಶ್ವದರ್ಜೆಯ ಹಲವಾರು ಸುರಕ್ಷಾ ಮಾದರಿಗಳನ್ನು ಅಳವಡಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಈ ಕಾರು ಚಕ್ರಗಳಲ್ಲಿ ಏರ್ ಇಲ್ಲದ್ದಿದ್ದರೂ ಪ್ರತಿ ಗಂಟೆಗೆ 80 ಕಿ.ಮಿ ವೇಗದಲ್ಲಿ ಚಲಿಸುವ ಗುಣವೈಶಿಷ್ಟ್ಯತೆಯನ್ನು ಪಡೆದುಕೊಂಡಿವೆ.

ಇದರೊಂದಿಗೆ ಕಾರಿನ ಬೆಲೆಯು ಕೂಡಾ ತುಸು ದುಬಾರಿ ಎನ್ನಿಸಲಿದ್ದು, ಸಾಮಾನ್ಯ ಮಾದರಿಯ ಡಬ್ಲ್ಯು221 ಎಸ್ ಗಾರ್ಡ್ ಕಾರಿನ ಬೆಲೆಯೇ ರೂ. 8 ಕೋಟಿಯಿಂದ 9 ಕೋಟಿಯಾಗುತ್ತೆ. ಹೀಗಿರುವಾಗ ಮುಕೇಶ್ ಅಂಬಾನಿಯವರು ಕಾರನ್ನು ವಿಶೇಷ ಸುರಕ್ಷಾ ಸೌಲಭ್ಯಗಳಿಂದ ಮಾಡಿಫೈ ಮಾಡಿಸಲಾಗಿದ್ದು, ಹೆಚ್ಚುವರಿ ಎರಡೂವರೆಯಿಂದ ಮೂರು ಕೋಟಿ ರೂಪಾಯಿ ಬೆಲೆ ಪಡೆದಿರುತ್ತೆ.
MOST READ: ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?
ಹೀಗಾಗಿರುವಾಗ ಇಂತಹ ವೈಭವ ಪೂರಿತ ಕಾರುಗಳ ಸಂಗ್ರಹವನ್ನು ನೋಡುವುದು ಅಂದ್ರೆ ಎಂತವರಿಗಾದ್ರು ಅಚ್ಚರಿ ಉಂಟಾಗದೇ ಇರದು. ಮುಂಬೈ ಇಂಡಿಯನ್ಸ್ ಆಟಗಾರರು ಸಹ ಸಾವಿರಾರು ಕೋಟಿ ಮೌಲ್ಯದ ನೂರಾರು ಐಷಾರಾಮಿ ಕಾರುಗಳ ಸಂಗ್ರಹವನ್ನು ನೋಡಿ ಆನಂದಿಸಿದ್ದಾರೆ.


Click it and Unblock the Notifications








