ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಲೈಫ್ ಸ್ಟೈಲ್ ಬಗೆಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅಂಬಾನಿ ಮನೆ, ಕಾರು, ಬಳಸೋ ವಸ್ತುಗಳನ್ನು ಹಲವು ವಿಶೇಷತೆಯಿಂದ ಕೂಡಿರಲಿದ್ದು, ತಮ್ಮ ಖಾಸಗಿ ಭದ್ರಾತ ಪಡೆಗಾಗಿಯೇ ವಾರ್ಷಿಕವಾಗಿ ನೂರಾರು ಕೋಟಿ ಖರ್ಚು ಮಾಡುತ್ತಿದ್ದಾರೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಉದ್ಯಮಿ ಮುಕೇಶ್ ಅಂಬಾನಿಯವರ ಬೆಂಗಾವಲು ಪಡೆಗಾಗಿಯೇ ವಿಶ್ವಾದ್ಯಂತ ಜನಪ್ರಿಯವಾಗಿರುವ ಹಲವಾರು ಶ್ರೇಷ್ಠ ಕಾರು ಮಾದರಿಗಳನ್ನು ಖರೀದಿಸಿದ್ದು, ಭದ್ರತಾ ಪಡೆಯಲ್ಲಿನ ಕಾರುಗಳ ನಿರ್ವಹಣೆಗಾಗಿ ತಮ್ಮ ಬಹುಕೋಟಿ ವೆಚ್ಚದ ಆ್ಯಂಟಿಲಿಯಾದಲ್ಲಿ ಪ್ರತ್ಯೇಕ ಗ್ಯಾರೇಜ್ ಹೊಂದಿದ್ದಾರೆ. ವ್ಯಯಕ್ತಿಕ ಬಳಕೆಗಾಗಿ ಮಾತ್ರವಲ್ಲ ಭದ್ರತಾ ಸಿಬ್ಬಂದಿಯ ವಾಹನಗಳು ಕೂಡಾ ಐಷಾರಾಮಿ ಕಾರು ಮಾದರಿಗಳಾಗಿವೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಅಂಬಾನಿ ಭದ್ರತಾ ಪಡೆಯಲ್ಲಿ ಕಳೆದ ತಿಂಗಳ ಹಿಂದಷ್ಟೇ ಸುಮಾರು ರೂ. 5 ಕೋಟಿ ಮೌಲ್ಯದ ಮೂರು ಮರ್ಸಿಡಿಸ್ ಜಿ ಕ್ಲಾಸ್ ಕಾರುಗಳನ್ನು ಸೇರ್ಪಡೆಗೊಂಡಿದ್ದು, ಇದೀಗ ಎಂಜಿ ಮೋಟಾರ್ ನಿರ್ಮಾಣದ ಹೊಸ ಗ್ಲೊಸ್ಟರ್ ಎಸ್‌ಯುವಿ ಮಾದರಿಯನ್ನು ಭದ್ರತಾ ಪಡೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಮನೆಯಿಂದ ಕಚೇರಿಗೆ ತೆರಳುವಾಗ ತಮ್ಮ ಖಾಸಗಿ ಭದ್ರತಾ ಪಡೆಯನ್ನು ಬಳಸಿಕೊಳ್ಳುವ ಉದ್ಯಮಿ ಮುಕೇಶ್ ಅಂಬಾನಿಯವರು ಈಗಾಗಲೇ ಐಷಾರಾಮಿ ಕಾರುಗಳನ್ನು ಹೊಂದಿದ್ದು, ಭದ್ರತಾ ಪಡೆಗಾಗಿಯೇ ಸುಮಾರು ರೂ. 30 ಕೋಟಿಗೂ ಅಧಿಕ ವೆಚ್ಚದ ಕಾರುಗಳನ್ನು ಖರೀದಿಸಲಾಗಿದೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಭದ್ರತಾ ಪಡೆಯಲ್ಲಿನ ಕಾರುಗಳನ್ನು ಹೊರತುಪಡಿಸಿ ವ್ಯಯಕ್ತಿಕ ಬಳಕೆಯ ಕಾರುಗಳ ಸಂಗ್ರಹವು ಇನ್ನು ದೊಡ್ಡ ಪ್ರಮಾಣದಲ್ಲಿದ್ದು, ವ್ಯಯಕ್ತಿಕ ಬಳಕೆಯ ಕಾರುಗಳನ್ನು ಸಂದರ್ಭಗಳಿಗೆ ಅನುಸಾರವಾಗಿ ಬಳಕೆ ಮಾಡಲಾಗುತ್ತದೆ. ಜೊತೆಗೆ ಅಂಬಾನಿ ಕುಟುಂಬ ಇತರೆ ಸದಸ್ಯರಿಗೂ ವಿವಿಧ ಕಾರು ಮಾದರಿಗಳ ಸಂಗ್ರಹ ಹೊಂದಿದ್ದು, ಎಂಜಿ ಮೋಟಾರ್ ನಿರ್ಮಾಣದ ಗ್ಲೊಸ್ಟರ್ ಕಾರು ಇದೀಗ ಅಂಬಾನಿ ಭದ್ರತಾ ಪಡೆಯಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಅಂಬಾನಿ ಭದ್ರತಾ ಪಡೆಯಲ್ಲಿನ ಕಾರುಗಳ ಆಯ್ಕೆಗೆ ಹಲವಾರು ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗುತ್ತಿದ್ದು, ಗರಿಷ್ಠ ಭದ್ರತೆಯನ್ನು ಖಾತ್ರಿಪಡಿಸುವ ವಾಹನಗಳನ್ನು ಮಾತ್ರವೇ ಆಯ್ಕೆ ಮಾಡಲಾಗುತ್ತದೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಎಂಜಿ ಗ್ಲೊಸ್ಟರ್ ಎಸ್‌ಯುವಿ ಇತ್ತೀಚೆಗೆ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಟೊಯೊಟಾ ಫಾರ್ಚೂನರ್ ಮಾದರಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಗ್ಲೊಸ್ಟರ್ ಕಾರು ಉತ್ತಮ ಸುರಕ್ಷಾ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಹೊಸ ಗ್ಲೊಸ್ಟರ್ ಎಸ್‌ಯುವಿಯಲ್ಲಿ ಲೆವಲ್ 1 ಅಟೊನಮಸ್ ಟೆಕ್ನಾಲಜಿ ಬಳಕೆ ಮಾಡಿದ್ದು, ಇದರಲ್ಲಿ ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್ (ಎಪಿಎ), ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ಫಾರ್ವರ್ಡ್ ಕೂಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಲೇನ್ ಎಕ್ಸಿಟ್ ವಾರ್ನಿಂಗ್ ಸೌಲಭ್ಯ ಹೊಂದಿದೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎನ್ನುವ ನಾಲ್ಕು ವೆರಿಯೆಂಟ್ ಹೊಂದಿರುವ ಗ್ಲೊಸ್ಟರ್ ಕಾರು ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಎಸ್‌ಯುವಿ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ವೀಲ್ಹ್ ಬೆಸ್ ಹೊಂದಿದೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಹೊಸ ಗ್ಲೊಸ್ಟರ್ ಎಸ್‌ಯುವಿ ಕಾರು 4,985-ಎಂ ಉದ್ದ, 1,926-ಎಂಎಂ ಅಗಲ, 1,867-ಎಂಎಂ ಎತ್ತರ ಹಾಗೂ 2,950-ಎಂಎಂ ವ್ಹೀಲ್ ಬೇಸ್ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 29.98 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.35.58 ಲಕ್ಷ ಬೆಲೆ ಪಡೆದುಕೊಂಡಿದೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಅಂಬಾನಿ ಭದ್ರತಾ ಪಡೆಯಲ್ಲಿನ ಗ್ಲೊಸ್ಟರ್ ಮಾದರಿಯು ಸಾಮಾನ್ಯ ಮಾದರಿಗಿಂತಲೂ ಇನ್ನು ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ಗಳನ್ನು ಪಡೆದುಕೊಂಡಿರಲಿದ್ದು, ಭದ್ರತಾ ಕಾರಣಕ್ಕಾಗಿ ಹೆಚ್ಚುವರಿ ಫೀಚರ್ಸ್‌ಗಳನ್ನು ಜೋಡಣೆ ಮಾಡಲಾಗಿರುತ್ತದೆ.

ಅಂಬಾನಿ ಖಾಸಗಿ ಭದ್ರತಾ ಪಡೆಯಲ್ಲಿ ಮಿಂಚುತ್ತಿದೆ ಎಂಜಿ ಗ್ಲೊಸ್ಟರ್ ಎಸ್‌ಯುವಿ

ಹೊಸ ಕಾರಿನಲ್ಲಿ 2.0-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 160-ಬಿಹೆಚ್‌ಪಿ, 375-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದರೆ, ಟಾಪ್-ಎಂಡ್ ಮಾದರಿಯಲ್ಲಿರುವ 2.0-ಲೀಟರ್ ಟ್ವಿನ್-ಟರ್ಬೊ ಎಂಜಿನ್ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 216-ಬಿಹೆಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
MG Gloster Luxury SUV Is Now A Part Of Ambani Security Convoy. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X