Just In
- 21 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 12 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 12 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ
Don't Miss!
- News
ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಥಗಿತಗೊಂಡ ಟಾಟಾ ಸುಮೋ ಉತ್ಪಾದನೆ
ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಸುಮೋ ಮಾರಾಟವನ್ನು ಸ್ಥಗಿತಗೊಳಿಸಿದೆ. ದೇಶಾದ್ಯಂತ ಟಾಟಾ ಸುಮೋ ಎಸ್‍ಯುವಿಯು ಯಾವುದೇ ಡೀಲರ್‍ಗಳ ಬಳಿ ಲಭ್ಯವಿಲ್ಲದ ಕಾರಣ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ಟಾಟಾ ಸುಮೋ ಮೊದಲ ಬಾರಿಗೆ 1994ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಕಳೆದ 25 ವರ್ಷಗಳಿಂದ ಉತ್ಪಾದನೆಯಲ್ಲಿರುವ ಟಾಟಾ ಸುಮೋ ದೇಶದ ಸುರಕ್ಷತಾ ಮಾನದಂಡಗಳನ್ನು ಪೂರೈಸಲು ಎಸ್‍ಯುವಿ ವಿಫಲವಾದ ಕಾರಣ ಕಂಪನಿಯು ಅಂತಿಮವಾಗಿ ಟಾಟಾ ಸುಮೋ ಉತ್ಪಾದನೆಗೆ ಇತಿಶ್ರೀ ಹಾಡಿದೆ.

ಟಾಟಾ ಮೋಟಾರ್ಸ್ ಭವಿಷ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸುಮೋ ಎಸ್‍ಯುವಿ ನವೀಕರಿಸುವ ಯಾವುದೇ ಯೋಜನೆಯನ್ನು ಹೊಂದಿರಲಿಲ್ಲ. ಟಾಟಾ ಸುಮೋ ಭಾರತದ ಎಐಎಸ್ 145 ಸುರಕ್ಷತಾ ಮಾನದಂಡಗಳು ಮತ್ತು ಬಿಎನ್‍ವಿಎಪಿ(ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸೆಸ್ಮೆಂಟ್ ಪ್ರೋಗ್ರಾಂ) ಈ ಎರಡು ನಿಯಮಗಳನ್ನು ಅನುಸರಿಸಲು ವಿಫಲವಾಗಿದೆ.

ಟಾಟಾ ಸುಮೋ ದೇಶಿಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‍ನಿಂದ ಅತ್ಯಂತ ಜನಪ್ರಿಯ ಮಾದರಿಯಾಗಿದೆ. ಟಾಟಾ ಸುಮೋ ಕಂಪನಿಯ ಎಂಪಿವಿ ಮತ್ತು ಎಸ್‍ಯುವಿ ವಿಭಾಗದಲ್ಲಿ ಹೆಚ್ಚು ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ. ಟಾಟಾ ಸುಮೋ ದೇಶಿಯ ಮಾರುಕಟ್ಟೆಯಲ್ಲಿ ಕೊನೆಯ ರೂಪಾಂತರವಾಗಿ ಟಾಟಾ ಸುಮೋ ಗೋಲ್ಡ್ ಅನ್ನು ಬಿಡುಗಡೆಗೊಳಿಸಿದ್ದರು.

ಟಾಟಾ ಸುಮೋ ಒಂದು ಕಾಲದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಎಸ್‍ಯುವಿ ವಿಭಾಗದಲ್ಲಿ ಪಾರುಪತ್ಯ ಮೆರೆದ ವಾಹನವಾಗಿದೆ. ಆದರೆ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಇರದ ಕಾರಣ ಮತ್ತು ಬಿಎಸ್-4 ಎಂಜಿನ್ ಹೊಂದಿರುವ ಟಾಟಾ ಸುಮೋ ಮುಂದಿನ ವರ್ಷ ಬಿಎಸ್-6 ಪ್ರೇರಿತ ಎಂಜಿನ್ ನಿಯಮ ಬರುವುದರಿಂದ ಅದಕ್ಕೆ ತಕ್ಕಂತೆ ನವೀಕರಿಸಲು ವಿಫಲವಾದ ಕಾರಣ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ಟಾಟಾ ಸುಮೋ ಗೋಲ್ಡ್ ರೂ. 7.39 ಲಕ್ಷದಿಂದ ರೂ. 8.11 ದರ ಹೊಂದಿದೆ. ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ಟಾಟಾ ಸುಮೋ ಕಾರಿನಲ್ಲಿ ಯಾವುದೇ ಹೊಸ ವೈಶಿಷ್ಟ್ಯಗಳು, ತಂತ್ರಜ್ಞಾನ ಅಥವಾ ಸುರಕ್ಷತಾ ಸಾಧನಗಳನ್ನು ನೀಡಿರಲಿಲ್ಲ.

ಟಾಟಾ ಸುಮೋ ಗೋಲ್ಡ್ ಕಾರಿನಲ್ಲಿ 3.0 ಲೀಟರ್ ಡೀಸೆಲ್ ಬಿಎಸ್-4 ಎಂಜಿನ್ ಹೊಂದಿದ್ದು, ಈ ಎಂಜಿನ್ 85 ಬಿಎಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 5-ಸ್ಪೀಡ್ ಸ್ಟ್ಯಾಂಡರ್ಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಜೋಡಿಸಲಾಗಿದೆ. 7 ಸೀಟ್ ಅನ್ನು ಹೊಂದಿರುವ ಈ ಕಾರು ಫ್ಯಾಮಿಲಿಗೆ ಹಾಗೂ ಟ್ಯಾಕ್ಸಿ ವಿಭಾಗದಲ್ಲಿ ಜನರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಟಾಟಾ ಸುಮೊಗೆ ಯಾವುದೇ ರೀತಿಯ ನವೀಕರಣವನ್ನು ತರುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ, ನವೀಕರಿಸದೇ ಇರಲು ಕಾರಣ ಇದನ್ನು ಸ್ಥಗಿತಮಾಡುವ ಮುನ್ಸೂಚನೆಯಾಗಿದೆ. ಆದರೆ ಕಂಪನಿಯು ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ.

ಟಾಟಾ ಸುಮೋ ದೇಶಿಯ ಮಾರುಕಟ್ಟೆಯಲ್ಲಿ ಕಳೆದ 25 ವರ್ಷಗಳಿಂದ ಮಾರಾಟವಾಗುತಿತ್ತು. ಎಂಪಿವಿ ಮತ್ತು ಎಸ್‍ಯುವಿ ವಿಭಾಗದಲ್ಲಿ ಹೆಚ್ಚು ಮಾರಾಟವನ್ನು ಕಂಡಿದೆ. ಸುರಕ್ಷತಾ ನಿಯಮಕ್ಕೆ ತಕ್ಕಂತೆ ಟಾಟಾ ಸುಮೋ ಕಾರು ಹೊಂದಿರಲಿಲ್ಲ. ಈ ಕಠಿಣ ನಿಯಮಕ್ಕೆ ತಕ್ಕಂತೆ ನವೀಕರಿಸುವುದಕ್ಕೆ ವಿಫಲವಾಗಿ ಅದನ್ನು ಸ್ಥಗಿತಗೊಳಿಸುದಕ್ಕೆ ನಿರ್ಧರಿಸಿದೆ. ಇತ್ತಿಚೇಗೆ ಮಾರುತಿ ಸುಜುಕಿಯು ಇದೇ ಕಾರಣಕ್ಕಾಗಿ ಜಿಪ್ಸಿಯನ್ನು ಮತ್ತು ಓಮ್ನಿಯನ್ನು ಸ್ಥಗಿತಗೊಳಿಸಿದೆ.