ಸ್ಪಾಟ್ ಟೆಸ್ಟ್‌ನಲ್ಲಿ ಕಂಡುಬಂದ 2020ರ ಟಾಟಾ ಟಿಯಾಗೋ ಫೇಸ್‍ಲಿಫ್ಟ್
ಟಾಟಾ ಮೋಟಾರ್ಸ್ ತನ್ನ ಟಿಯಾಗೋ ಫೇಸ್‍ಲಿಫ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮುನ್ನ ಸ್ಪಾಟ್ ಟೆಸ್ಟ್ ಮಾಡಿದೆ. ಗಾಡಿವಾಡಿ ಬಹಿರಂಗಪಡಿಸಿರುವ ಸ್ಪೈ ಚಿತ್ರಗಳಲ್ಲಿ ಟಿಯಾಗೋ ಕಾರಿನಲ್ಲಿ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿರುವುದು ಕಂಡು ಬಂದಿದೆ. ಟಿಯಾಗೊ ಫೇಸ್‍ಲಿಫ್ಟ್ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿದೆ.

ಸ್ಪೈ ಚಿತ್ರಗಳಲ್ಲಿ ಹೊಸ ಟಾಟಾ ಟಿಯಾಗೋ ಫೇಸ್‍ಲಿಫ್ಟ್ ಕಾರಿನಲ್ಲಿ ಹಲವು ಬದಲಾವಣೆಗಳನ್ನು ಮಾಡಿರುವುದನ್ನು ಕಾಣ ಬಹುದು. ಸ್ಪೈ ಚಿತ್ರದಲ್ಲಿರುವಂತೆ ಹೊಸ ಟಿಯಾಗೋದ ಮುಂಭಾಗದಲ್ಲಿ ದೊಡ್ಡದಾದ ಗ್ರಿಲ್, ಸ್ಲೀಕರ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್‍ಗಳು, ಹೊಸ ಫಾಗ್ ಲ್ಯಾಂಪ್ ಹೌಸಿಂಗ್ ಮತ್ತು ವೈಡರ್ ಸೆಂಟ್ರಲ್ ಏರ್‍ಡ್ಯಾಮ್‍ಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಟಿಯಾಗೋ ಕಾರಿನಲ್ಲಿ ಎಲ್‍ಇಡಿ ಡೇ ಟೈಮ್ ರನ್ನಿಂಗ್ ಲೈಟ್‍ಗಳನ್ನು ಕಂಡು ಬಂದಿಲ್ಲ. ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದಿರುವುದು ಪ್ರೊಡಕ್ಷನ್ ಮಾದರಿಯಾಗಿರುವ ಸಾಧ್ಯತೆಗಳಿವೆ. ಇದರೊಂದಿಗೆ ಕಾರಿನ ಹಿಂಭಾಗವು ಪ್ರಸ್ತುತ ಮಾದರಿ ರೀತಿಯಲ್ಲಿ ಇದೆ. ಹೊಸ ಟಿಯಾಗೋ ಫೇಸ್‍ಲಿಫ್ಟ್ ಟಾಟಾದ ಇಂಪ್ಯಾಕ್ಟ್ ಸೈನ್ 2.0 ವಿನ್ಯಾಸವನ್ನು ಹೊಂದಿದೆ.

ಹೊಸ ಟಾಟಾ ಟಿಯಾಗೋ ಫೇಸ್‍ಲಿಫ್ಟ್ ಇಂಟಿರಿಯರ್‍ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್‍ಗಳಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರಿನಲ್ಲಿರುವ ಫೀಚರ್ಸ್‍ಗಿಂತಲೂ ಹೆಚ್ಚು ಫೀಚರ್ಸ್ ಒಳಗೊಂಡಿರಬಹುದು.

ಮಾರುಕಟ್ಟೆಯಲ್ಲಿರುವ ಟಾಟಾ ಟಿಯಾಗೋ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸಬಹುದು.

ಹೊಸ ಟಾಟಾ ಟಿಯಾಗೋ 1.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸುವ ಸಾಧ್ಯತೆಗಳಿವೆ. ಪ್ರಸ್ತುತ ಜನರೇಷನ್ ಟಾಟಾ ಟಿಯಾಗೋ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ. 4.40 ಲಕ್ಷದಿಂದ ರೂ.6.77 ಲಕ್ಷಗಳಾಗಿದೆ. ಟಾಟಾ ಟಿಯಾಗೋವನ್ನು ಮೊದಲ ಬಾರಿಗೆ 2016ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಹ್ಯಾಚ್‍ಬ್ಯಾಕ್ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನೆಸೆಳೆಯುವಲ್ಲಿ ಯಶ್ವಸಿಯಾಗಿದೆ. ಟಾಟಾ ಟಿಯಾಗೋ ಕಾರು ಕಂಪನಿಯ ಇಂಪ್ಯಾಕ್ಟ್ ಡಿಸೈನ್ 2.0 ವಿನ್ಯಾಸವನ್ನು ಹೊಂದಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಟಾಟಾ ಮೋಟಾರ್ಸ್ ಕಂಪನಿಯು ತನ್ನ ನೆಕ್ಸಾನ್ ಫೇಸ್‍ಲಿಫ್ಟ್ ಮತ್ತು ಟಿಗೋರ್ ಫೇಸ್‍ಲಿಫ್ಟ್ ಜೊತೆಗೆ ಟಿಯಾಗೋ ಪೇಸ್‍ಲಿಫ್ಟ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಈ ಎಲ್ಲಾ ಹೊಸ ಕಾರುಗಳನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‍ನ ಮಾದರಿವಾರು ಮಾರಾಟದ ವರದಿಯಲ್ಲಿ ಟಾಟಾ ಟಿಯಾಗೊ ಮೊದಲ ಸ್ಥಾನವನ್ನು ಪಡೆದಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಟಾಟಾ ಟಿಯಾಗೋ ಮಾದರಿಯ 5,460 ಯುನಿಟ್‍ಗಳು ಮಾರಾಟವಾಗಿವೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸ್ಪಾಟ್ ಟೆಸ್ಟ್ ಸ್ಪೈ ಚಿತ್ರಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗಗೊಂಡಿಲ್ಲ. ಆದರೆ ಹೊಸ ಕಾರಿನಲ್ಲಿ ಕಾಸ್ಮೆಟಿಕ್ ಬದಲಾವಣೆಯನ್ನು ಮಾಡಿರುವುದು ಕಂಡು ಬರುತ್ತದೆ. ಕಂಪನಿಯು ಹೊಸ ಟಾಟಾ ಟಿಯಾಗೋ ಫೇಸ್‍ಲಿಫ್ಟ್ ಇಂಟಿರಿಯರ್‍ನಲ್ಲಿ ಪ್ರಸ್ತುತ ಮಾದರಿಗಿಂತ ಹೆಚ್ಚು ಪ್ರೀಮಿಯಂ ಫೀಚರ್ಸ್‍ಗಳನ್ನು ಅಳವಡಿಸುವ ನಿರೀಕ್ಷೆಗಳಿವೆ.
Source: Gaadiwaadi


Click it and Unblock the Notifications