Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ಟಾಟಾ ಟಿಯಾಗೋ ಫೇಸ್‌ಲಿಫ್ಟ್
ಟಾಟಾ ಮೋಟಾರ್ಸ್ ಸಂಸ್ಥೆಯು ಈಗಾಗಲೇ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಭಾರೀ ಬದಲಾವಣೆ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಸದ್ಯ ಮಾರಾಟಕ್ಕಿರುವ ಟಿಗೋರ್, ಟಿಯಾಗೋ ಮತ್ತು ನೆಕ್ಸಾನ್ ಕಾರುಗಳನ್ನು ಸಹ ಹೊಸ ತಂತ್ರಜ್ಞಾನ ಪ್ರೇರಿತ ಅಲ್ಫಾ ಪ್ಲ್ಯಾಟ್‌ಫಾರ್ಮ್ ಡಿಸೈನ್‌ನಡಿಯಲ್ಲಿ ಅಭಿವೃದ್ಧಿಗೊಳಿಸುವ ಬಗ್ಗೆ ಟಾಟಾ ಸುಳಿವು ನೀಡಿದೆ.

ಹೌದು, ಟಾಟಾ ಸಂಸ್ಥೆಯು ಸದ್ಯ ಹೊಸ ಕಾರು ಅಭಿವೃದ್ಧಿಗಾಗಿ ಕಳೆದ ಎರಡು ವರ್ಷಗಳಿಂದ ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್) ಸಂಸ್ಥೆಯೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದ್ದು, ಕಾರುಗಳ ಡಿಸೈನ್ ಮತ್ತು ಎಂಜಿನ್ ದಕ್ಷತೆಯನ್ನು ಹೆಚ್ಚಿಸುವ ಸಂಬಂಧ ಸುಧಾರಿತ ತಂತ್ರಜ್ಞಾನ ಪ್ರೇರಿತ ಅಲ್ಫಾ(ALFA) ಮತ್ತು ಒಮೇಗಾ(OMEGA) ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿರುವುದು ಕಾರುಗಳ ವಿನ್ಯಾಸಕ್ಕೆ ಹೊಸ ಮೆರಗು ತಂದಿದೆ.

ಕಳೆದ ಜನವರಿಯಲ್ಲಿ ಬಿಡುಗಡೆಯಾದ ಹ್ಯಾರಿಯರ್ ಕೂಡಾ ಒಮೇಗಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದಗೊಂಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಆಲ್‌ಟ್ರೊಜ್, ಬಝರ್ಡ್ ಮತ್ತು ಹಾರ್ನ್‌ಬಿಲ್ ಕಾರುಗಳು ಅಲ್ಫಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

ಹೀಗಾಗಿಯೇ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಟಿಗೋರ್, ಟಿಯಾಗೋ ಮತ್ತು ನೆಕ್ಸಾನ್ ಕಾರುಗಳನ್ನು ಕೂಡಾ ಹೊಸ ತಂತ್ರಜ್ಞಾನ ಪ್ರೇರಿತ ಅಲ್ಫಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಮರುಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೇ ವರ್ಷದ ಮಧ್ಯಂತರದಲ್ಲಿ ಮೂರು ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಒಂದು ವೇಳೆ ಅಲ್ಫಾ ತಂತ್ರಜ್ಞಾನದಡಿ ಟಿಗೋರ್, ಟಿಯಾಗೋ ಮತ್ತು ನೆಕ್ಸಾನ್ ಮರು ಅಭಿವೃದ್ಧಿಗೊಂಡಲ್ಲಿ ಕಾರುಗಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗೊಳ್ಳಲಿದ್ದು, ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಾರುಗಳ ಮಾರಾಟಕ್ಕೆ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ವಿಶ್ವಾದ್ಯಂತ ಈಗಾಗಲೇ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಬ್ರೇಕ್ ಹಾಕಲು ಯುರೋಪ್‌ನಲ್ಲಿ ಯುರೋ-6 ಹಾಗೆಯೇ ಇತರೆ ಖಂಡಗಳಲ್ಲಿ ವಿವಿಧ ಮಾದರಿಯ ಗುಣಮಟ್ಟದ ವಾಹನಗಳಿಗೆ ಮಾತ್ರವೇ ಅವಕಾಶವಿದ್ದು, ಇದರ ಭಾಗವಾಗಿ ಭಾರತದಲ್ಲಿ 2020ಕ್ಕೆ ಬಿಎಸ್-6 ವಾಹನಗಳು ರಸ್ತೆಗಿಳಿಯುತ್ತಿವೆ.

ಹೀಗಿರುವಾಗ ಮಾಲಿನ್ಯದಲ್ಲಿ ಬಹುದೊಡ್ಡ ಕೊಡುಗೆ ಹೊಂದಿರುವ ಭಾರತದಲ್ಲಿ ಬಿಎಸ್-6 ವೈಶಿಷ್ಟ್ಯತೆಯ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತಡಗಳಿದ್ದು, ಇದೀಗ ಸುಪ್ರೀಂಕೋರ್ಟ ಕೂಡಾ ಈ ಕುರಿತಂತೆ ಮಹತ್ವದ ಆದೇಶವನ್ನು ಹೊರಡಿಸಿರುವುದು ಕೇಂದ್ರ ಸರ್ಕಾರವು ಪಾಲನೆ ಮಾಡಲೇಬೇಕಾದ ಅನಿವಾರ್ಯತೆಯಲ್ಲಿದೆ.

ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ತೀರ್ಪಿನ ಪ್ರಕಾರ, ಮುಂಬರುವ ದಿನಗಳಲ್ಲಿ ಮಾಲಿನ್ಯ ತಡೆಯಲು ಬಿಎಸ್-6 ತಾಂತ್ರಿಕ ಅಂಶಗಳ ಅಳವಡಿಕೆ ಅವಶ್ಯವಿದ್ದು, 2020ರ ಏಪ್ರಿಲ್ 1ರಿಂದಲೇ ಹೊಸ ನಿಯಮ ಜಾರಿಗೆ ಸಿದ್ದತೆ ಮಾಡಿಕೊಳ್ಳುವಂತೆ ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದೆ. ಹೀಗಾಗಿ ಟಾಟಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕಾರು ಉತ್ಪಾದನೆಯಲ್ಲಿ ಬದಲಾವಣೆ ತರುತ್ತಿವೆ.
MOST READ: ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ತೀರ್ಪಿನ ಪ್ರಕಾರ, ಮುಂಬರುವ ದಿನಗಳಲ್ಲಿ ಮಾಲಿನ್ಯ ತಡೆಯಲು ಬಿಎಸ್-6 ತಾಂತ್ರಿಕ ಅಂಶಗಳ ಅಳವಡಿಕೆ ಅವಶ್ಯವಿದ್ದು, 2020ರ ಏಪ್ರಿಲ್ 1ರಿಂದಲೇ ಹೊಸ ನಿಯಮ ಜಾರಿಗೆ ಸಿದ್ದತೆ ಮಾಡಿಕೊಳ್ಳುವಂತೆ ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದೆ. ಹೀಗಾಗಿ ಟಾಟಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕಾರು ಉತ್ಪಾದನೆಯಲ್ಲಿ ಬದಲಾವಣೆ ತರುತ್ತಿವೆ.
Source: Carwale