ಬಿಡುಗಡೆಯಾಯ್ತು ಟಾಟಾ ಟಿಯಾಗೋ ವಿಜ್

ಟಾಟಾ ಮೋಟಾರ್ಸ್, ದೇಶಿಯ ಮಾರುಕಟ್ಟೆಯಲ್ಲಿ ಹೊಸ ಟಿಯಾಗೋ ಎಡಿಷನ್ ಹ್ಯಾಚ್‍‍ಬ್ಯಾಕ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಟಾಟಾ ಟಿಯಾಗೋ ವಿಜ್ ಎಡಿಷನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.40ಲಕ್ಷಗಳಾಗಿದೆ. ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆಗಿಂತ ರೂ.10,000 ಅಧಿಕವಾಗಿದೆ.

ಬಿಡುಗಡೆಯಾಯ್ತು ಟಾಟಾ ಟಿಯಾಗೋ ವಿಜ್

ಟಾಟಾ ಟಿಯಾಗೋ ವಿಜ್ ಎಡಿಷನ್ ಮಿಡ್-ಸ್ಪೇಕ್ ಎಕ್ಸ್ ಝಡ್ ಮಾದರಿಯ ಹ್ಯಾಚ್‍‍ಬ್ಯಾಕ್ ಆಗಿದೆ. ಹಬ್ಬದ ವೇಳೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟವನ್ನು ಹೆಚ್ಚಿಸಲು ಹೊಸ ಲಿಮಿಡೆಡ್ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ. ಟಾಟಾ ಟಿಯಾಗೋ ವಿಜ್ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಯನ್ನು ಕಾಸ್ಮೇಟಿಕ್ ಅಪ್‍‍‍ಡೇ‍ಟ್ ಮಾಡಿ ಬಿಡುಗಡೆಗೊಳಿಸಲಾಗಿದೆ. ಈ ಹ್ಯಾಚ್‍‍ಬ್ಯಾಕ್ ಹೆಚ್ಚು ಸ್ಪೋರ್ಟಿ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿರುವ ಆವೃತ್ತಿಯಾಗಿದೆ.

ಬಿಡುಗಡೆಯಾಯ್ತು ಟಾಟಾ ಟಿಯಾಗೋ ವಿಜ್

ಟಾಟಾ ಟಿಯಾಗೊ ವಿಜ್ ಹ್ಯಾಚ್‍‍ಬ್ಯಾಕ್ ಟೈಟಾನಿಯಂ ಗ್ರೇ ಬಣ್ಣವನ್ನು ಹೊಂದಿದೆ. ಕಾರಿನ ಮುಂಭಾಗದ ಗ್ರಿಲ್ ಮತ್ತು ವ್ಹೀಲ್ ಕವರ್‍‍ಗಳು ಆರೆಂಜ್ ಬಣ್ಣವನ್ನು ಹೊಂದಿವೆ. ಜೊತೆಗೆ ಆರೆಂಜ್ ಬಣ್ಣದ ಒಆರ್‍‍ವಿಎಂ ಕವರ್ ಅನ್ನು ಸಹ ಒಳಗೊಂಡಿದೆ. ಹೊಸ ಟಿಯಾಗೋ ವಿಜ್ ಕಾರು ಟೈಟಾನಿಯಂ ಗ್ರೇ ಬಣ್ಣವನ್ನು ಹೊಂದಿದೆ. ಜೊತೆಗೆ ಬ್ಲ್ಯಾಕ್ ಬಣ್ಣದ ರೂಫ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಟಾಟಾ ಟಿಯಾಗೋ ವಿಜ್

ಹೊಸ ಟಿಯಾಗೋ ಇಂಟಿರಿಯರ್‍ ಸಹ ಆರೆಂಜ್ ಬಣ್ಣವನ್ನು ಹೊಂದಿರುವ ಸಾಧ್ಯತೆಗಳಿವೆ. ಟಾಟಾ ಟಿಯಾಗೊ ಗ್ರೇ ಬಣ್ಣದ ಗೇರ್‍‍ಬಾಕ್ಸ್, ಬ್ಲ್ಯಾಕ್ ಬಣ್ಣದ ಡೋರ್ ಹ್ಯಾಂಡಲ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಟಾಟಾ ಟಿಯಾಗೋ ವಿಜ್

ವಿಜ್ ಕಾರು ಹಲವಾರು ವೈಶಿಷ್ಟ್ಯಗಳಿಂದ ಕೂಡಿದ್ದು, ಈ ಕಾರು ಸ್ಟ್ಯಾಂಡರ್ಡ್ ಎಕ್ಸ್ ಝಡ್ ಮಾದರಿಗಿಂತಲೂ ಉತ್ತಮವಾಗಿದೆ. ಈ ಕಾರು 2-ಡಿ‍ಐ‍ಎನ್ ಆಡಿ‍‍ಯೋ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ರೇರ್ ಪಾರ್ಸೆಲ್ ಶೆಲ್ಫ್, ಪವರ್ ಹೊಂದಾಣಿಕೆ ಮಾಡಬಹುದಾದ ಒಆರ್‍‍ವಿಎಂ, ರಿಮೋಟ್ ಸೆಂಟ್ರಲ್ ಲಾಕಿಂಗ್, ಯು‍ಎಸ್‍‍ಬಿ ಮತ್ತು ಬ್ಲೂಟೂತ್ ಜೊತೆಯಲ್ಲಿ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಟಾಟಾ ಟಿಯಾಗೋ ವಿಜ್

ಟಾಟಾ ಟಿಯಾಗೊ ವಿಜ್ ಆವೃತ್ತಿಯು ಸ್ಟ್ಯಾಂಡರ್ಡ್ ಆವೃತ್ತಿಯಂತಹ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಕಾರಿನಲ್ಲಿರುವ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ 85 ಬಿ‍ಎಚ್‍‍ಪಿ ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದು ಸ್ಟ್ಯಾಂಡರ್ಡ್ ಮತ್ತು ಮಲ್ಟಿಪಲ್ ಡ್ರೈವಿಂಗ್ ಮೋಡ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಟಾಟಾ ಟಿಯಾಗೋ ವಿಜ್

ಟಾಟಾ ಟಿಯಾಗೊ ವಿಜ್ ಆವೃತ್ತಿಯ ಬಿಡುಗಡೆ ಹೊರತಾಗಿ, ಕಂಪನಿಯು ಇತ್ತೀಚೆಗೆ ನೆಕ್ಸಾನ್ ಇವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ಮುಂದಿನ ವರ್ಷದಲ್ಲಿ ನೆಕ್ಸಾನ್ ಇವಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಟಾಟಾ ಮೋಟಾರ್ಸ್ ಖಚಿತಪಡಿಸಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಿಡುಗಡೆಯಾಯ್ತು ಟಾಟಾ ಟಿಯಾಗೋ ವಿಜ್

ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಟಾಟಾ ಸಂಸ್ಥೆಯು ಟಿಯಾಗೋ ವಿಜ್ ಆವೃತ್ತಿಯನ್ನು ಹಬ್ಬದ ವೇಳೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ. ಟಾಟಾ ಟಿಯಾಗೋ ಕಾರಿನಲ್ಲಿ ಹಲವಾರು ಕಾಸ್ಮೇಟಿಕ್ ಅಪ್‍‍ಡೇಟ್‍‍ಗಳನ್ನು ಮಾಡಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಈ ಕಾರಿನಲ್ಲಿ ಕಾಸ್ಮೆಟಿಕ್ ಅಪ್‍‍ಡೇ‍‍ಟ್ ಮಾಡಿರುವುದರಿಂದ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಕಾರು ಬಿಡುಗಡೆಯಾದ ಬಳಿಕ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೋ ವಿಜ್ ಕಾರು, ಸುಜುಕಿ ಸ್ವಿಫ್ಟ್, ಫೋರ್ಡ್ ಫಿಗೊ ಮತ್ತು ಹ್ಯುಂಡೈ ಸ್ಯಾಂಟ್ರೊ ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Friday, October 4, 2019, 17:13 [IST]
English summary
Tata Tiago Wizz Edition Launched In India: Priced At Rs 5.40 Lakh - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+