ಮುಂದಿನ ವಾರ ಬಿಡುಗಡೆಯಾಗಲಿದೆ ಟಾಟಾ ಟಿಗೋರ್ ಇವಿ ಕಾರು

ಟಾಟಾ ಮೋಟಾರ್ಸ್ ಸಂಸ್ಥೆಯ ಟಾಟಾ ಟಿಗೋರ್ ಇವಿ ಲಾಂಗ್-ರೇಂಜ್ ರೂಪಾಂತರವನ್ನು ಮುಂದಿನ ವಾರ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಟಿಗೋರ್ ಇವಿ ಲಾಂಗ್-ರೇಂಜ್ ರೂಪಾಂತರವು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಟಾಟಾ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಖಾಸಗಿ ಖರೀದಾರರಿಗೂ ಲಭ್ಯವಾಗುವಂತೆ ಮಾಡುವ ಪ್ರಯತ್ನದ ಒಂದು ಭಾಗವಾಗಿದೆ.

ಮುಂದಿನ ವಾರ ಬಿಡುಗಡೆಯಾಗಲಿದೆ ಟಾಟಾ ಟಿಗೋರ್ ಇವಿ ಕಾರು

ಎಲೆಕ್ಟ್ರಿಕ್ ವಾಹನಗಳಿಗೆ ಕೇಂದ್ರ ಸರ್ಕಾರವು ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ ಮತ್ತು ಎಲೆಕ್ಟ್ರಿಕ್ ವಾಹನ ಉದ್ಯಮವು ವೇಗವಾಗಿ ಬೆಳೆಯುತ್ತಿದೆ. ಜನರು ಕೂಡ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಿನ ಒಲವು ಹೊಂದಿದ್ದು, ಇದ್ದರಿಂದ ವಿಶ್ವದ ಹಲವು ವಾಹನ ಉತ್ಪಾದಕರು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಪೈಪೋಟಿ ಹೆಚ್ಚಾಗಿದೆ. ಭಾರತದಲ್ಲೂ ಎಲೆಕ್ಟ್ರಿಕ್ ಕಾರುಗಳ ದರ್ಬಾರ್ ಪ್ರಾರಂಭವಾಗಿದೆ, ದೇಶಿಯ ಮಾರುಕಟ್ಟೆಯ ಉತ್ಪಾದಕರು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಹೆಚ್ಚಿಸಿದ್ದಾರೆ.

ಮುಂದಿನ ವಾರ ಬಿಡುಗಡೆಯಾಗಲಿದೆ ಟಾಟಾ ಟಿಗೋರ್ ಇವಿ ಕಾರು

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎರಡು ಕಂಪನಿಗಳ ಪೈಕಿ ಟಾಟಾ ಮೋಟಾರ್ಸ್ ಕೂಡ ಒಂದಾಗಿದೆ. ಸದ್ಯಕ್ಕೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಎರಡು ಕಂಪನಿಗಳೆಂದರೆ ಮಹೀಂದ್ರಾ ಎಲೆಕ್ಟ್ರಿಕ್ ಮತ್ತು ಟಾಟಾ ಮೋಟಾರ್ಸ್.

ಮುಂದಿನ ವಾರ ಬಿಡುಗಡೆಯಾಗಲಿದೆ ಟಾಟಾ ಟಿಗೋರ್ ಇವಿ ಕಾರು

ಮಹೀಂದ್ರಾ ಎಲೆಕ್ಟ್ರಿಕ್ ಇವೆರಿಟೊ, ಇಸುಪ್ರೊ ಕಾರುಗಳು ಮತ್ತು ಟಾಟಾ ಮೋಟಾರ್ಸ್ ಟಿಗೋರ್ ಎಲೆಕ್ಟ್ರಿಕ್ ವಾಹನವನ್ನು ಪ್ಲೀಟ್ ಅಪ್‍‍ರೇಟ್‍‍ಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡುತ್ತಾರೆ. ಆದರೆ ಮಹೀಂದ್ರಾ ಎಲೆಕ್ಟ್ರಿಕ್ ಖಾಸಗಿ ಖರೀದಾರರಿಗೆ ಇ 2 ಒ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿದ್ದರೆ, ಟಾಟಾ ಮೋಟಾರ್ಸ್ ಯಾವುದೇ ಖಾಸಗಿ ಖರೀದಿದಾರರಿಗೆ ಮಾರಾಟ ಮಾಡುತ್ತಿರಲಿಲ್ಲ.

ಮುಂದಿನ ವಾರ ಬಿಡುಗಡೆಯಾಗಲಿದೆ ಟಾಟಾ ಟಿಗೋರ್ ಇವಿ ಕಾರು

ಇದೇ ಕಾರಣದಿಂದ ಖಾಸಗಿ ಖರೀದಿದಾರರನ್ನು ಗುರಿಯಾಗಿಸಿಕೊಂಡು ಟಾಟಾ ಮೋಟಾರ್ಸ್ ಹೊಸ ಟಾಟಾ ಟಿಗೋರ್ ಲಾಂಗ್ ರೇಂಜ್ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡುತ್ತಿದ್ದಾರೆ. ಪ್ರಸ್ತುತ ಮಾರಾಟದಲ್ಲಿರುವ ಟಾಟಾ ಟಿಗೋರ್ ಇ‍‍ವಿ 16.2 ಕಿಲೋವ್ಯಾಟ್ ಬ್ಯಾಟರಿಯಿಂದ ನಿಯಂತ್ರಿಸಲ್ಫಡುತ್ತದೆ ಮತ್ತು 72 ವೋಲ್ಟ್ ಎಸಿ ಇಂಡಕ್ಷನ್ ಮೋಟರ್‍ ಅನ್ನು ಹೊಂದಿದೆ.

ಮುಂದಿನ ವಾರ ಬಿಡುಗಡೆಯಾಗಲಿದೆ ಟಾಟಾ ಟಿಗೋರ್ ಇವಿ ಕಾರು

ಈ ಕಾರು ಗರಿಷ್ಠ 40.23 ಬಿಹೆಚ್‍‍ಪಿ ಪವರ್ ಮತ್ತು 105 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಒಂದು ಪೂರ್ಣ ಪ್ರಮಾಣದ ಸಿಂಗಲ್ ಜಾರ್ಜ್‍‍ನಲ್ಲಿ 142 ಕಿ.ಮೀ ವರೆಗೂ ಚಲಿಸುತ್ತದೆ. 15 ಕಿಲೋ ವ್ಯಾಟ್ ಡಿಸಿ ಫಾಸ್ಟ್ -ಚಾರ್ಜರ್ ಅನ್ನು ಬಳಸಿದರೆ, ಬ್ಯಾಟರಿಯ 80 ರಿಂದ 90 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು. ಟಾಟಾ ಮೋಟಾರ್ಸ್ ಖಾಸಗಿ ಖರೀದಿದಾರರಿಗಾಗಿ ಮತ್ತಷ್ಟು ಸುಧಾರಣೆಯನ್ನು ತರಲು ಬಯಸಿದೆ.

ಮುಂದಿನ ವಾರ ಬಿಡುಗಡೆಯಾಗಲಿದೆ ಟಾಟಾ ಟಿಗೋರ್ ಇವಿ ಕಾರು

ಕಾರ್ ಅಂಡ್ ಬೈಕ್ ಸುದ್ದಿ ಮೂಲದ ಪ್ರಕಾರ, ಟಿಗೋರ್ ಇವಿ ಕಾರು ಹೊಸ ಲಾಂಗ್-ರೇಂಜ್ ರೂಪಾಂತರವನ್ನು ಮುಂದಿನ ವಾರ ಬಿಡುಗಡೆ ಮಾಡಲಾಗುವುದು. ಹೊಸ ರೂಪಾಂತರವು ಒಂದು ಭಾರೀ ಪೂರ್ಣ ಪ್ರಮಾಣದ ಜಾರ್ಚ್ ಮಾಡಿದರೆ ಆ ಒಂದು ಸಿಂಗಲ್ ಜಾರ್ಜ್ ಸುಮಾರು 200 ಕಿ.ಮೀ ವರೆಗೂ ಚಲಿಸಬಹುದು. ಇದು ಟಾಪ್ ಸ್ಪೀಡ್ ಹೊಂದುವ ನಿರೀಕ್ಷೆಯಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮುಂದಿನ ವಾರ ಬಿಡುಗಡೆಯಾಗಲಿದೆ ಟಾಟಾ ಟಿಗೋರ್ ಇವಿ ಕಾರು

ಪ್ರಸ್ತುತ ಟಾಟಾ ಟಿಗೋರ್ ಇವಿ ಕಾರು ವಾಣಿಜ್ಯ ಬಳಕೆಗೆ ಸಿಮೀತವಾಗಿರುವುದರಿಂದ ಪ್ರತಿ ಗಂಟೆಗೆ 80 ಕಿ.ಮೀ ವೇಗದ ಮಿತಿ ಹೊಂದಿದೆ. ಆದರೆ ಹೊಸ ಎಲೆಕ್ಟ್ರಿಕ್ ಕಾರು ಸ್ಪೀಡ್ ನಿರ್ಬಂಧವನ್ನು ಹೊಂದಿರುವುದಿಲ್ಲ ಆದರೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ. ಹೊಸ ಇ‍‍ವಿ ಕಾರು ಹೆಚ್ಚು ತೂಕವಿರುತ್ತದೆ ಎಂದು ನಿರೀಕ್ಷಿಸುತ್ತೇವೆ, ಏಕೆಂದರೆ ಸ್ಪೀಡ್ ಮತ್ತು ಹೆಚ್ಚಿನ ಶ್ರೇಣಿಯ ಅವಶ್ಯಕತೆಗಳನ್ನು ಎದುರಿಸಲು ಹೆಚ್ಚುವರಿ ಬ್ಯಾಟರಿಗಳು ಬೇಕಾಗುತ್ತದೆ. ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ಟಾಟಾ ಟಿಗೋರ್ ಇವಿ ಪ್ರಸ್ತುತ 11.58 ಲಕ್ಷದಿಂದ 11.92 ಲಕ್ಷದ ಬೆಲೆಯಲ್ಲಿ ಮಾರಾಟವಾಗುತ್ತಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮುಂದಿನ ವಾರ ಬಿಡುಗಡೆಯಾಗಲಿದೆ ಟಾಟಾ ಟಿಗೋರ್ ಇವಿ ಕಾರು

ಟಾಟಾ ಟಿಗೋರ್ ಇ‍‍ವಿ ಕಾರು ಸಾಕಷ್ಟು ಭರವಸೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಟಾಟಾ ಕಂಪನಿ ತನ್ನ ಎಲೆಕ್ಟ್ರಿಕ್ ವಾಹನ ಉತ್ಪಾದನೆಗಾಗಿ ದೊಡ್ಡ ಪ್ರಮಾಣದ ಯೋಜನೆಯನ್ನು ಹೊಂದಿದೆ. ಟಾಟಾ ಮೋಟಾರ್ಸ್ ತನ್ನ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ವಾಹನಗಳಿಗೆ ಶಕ್ತಿ ತುಂಬುವ ಜಿಪ್ಟ್ರಾನ್ ಇವಿ ತಂತ್ರಜ್ಞಾನವನ್ನು ಘೋಷಿಸಿದೆ. ಹೊಸ ಇವಿ ವಾಹನಗಳು ಫಾಸ್ಟ್ ಜಾರ್ಜಿಂಗ್ ಮತ್ತು ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುತ್ತವೆ.

Most Read Articles

Kannada
English summary
Tata Tigor EV Extended Range Variant To be Launched Next Week - Read in Kannada
Story first published: Friday, September 20, 2019, 11:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X