2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

2020ರ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಹೊಸ ವರ್ಷದ ಆರಂಭದಲ್ಲಿ ಜನಪ್ರಿಯ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಬಹುನೀರಿಕ್ಷಿತ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಭರ್ಜರಿ ಸಿದ್ದತೆ ನಡೆಸಿವೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತೀಯ ಆಟೋ ಮೊಬೈಲ್ ಉದ್ಯಮವು ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಇದೀಗ ಬಿಎಸ್-6 ಜಾರಿಗೆ ಬರುತ್ತಿರುವ ಹಿನ್ನಲೆ ಮತ್ತಷ್ಟು ಹೊಸ ಬದಲಾವಣೆಯೊಂದಿಗೆ ಭವಿಷ್ಯದ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟಕ್ಕೆ ಸಿದ್ದತೆ ನಡೆಸುತ್ತಿವೆ. ಬಿಡುಗಡೆಯಾಗಲಿರುವ ಕಾರುಗಳ ಪಟ್ಟಿಯಲ್ಲಿ ಸಾಮಾನ್ಯ ಇಂಧನ ಮಾದರಿಯ ಕಾರುಗಳಷ್ಟೇ ಅಲ್ಲದೇ ಎಲೆಕ್ಟ್ರಿಕ್ ಕಾರುಗಳು ಸೇರಿದ್ದು, ಹೊಸ ಕಾರುಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಟಾಟಾ ಆಲ್‌ಟ್ರೊಜ್

ಪ್ರೀಮಿಯಂ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಟಾಟಾ ಆಲ್‌ಟ್ರೊಜ್ ಕಳೆದ ವಾರವಷ್ಟೇ ಅನಾವರಣಗೊಂಡಿದ್ದು, ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

2020ರ ಜನವರಿ 22ರಂದು ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಕಾರು ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.5.50 ಲಕ್ಷದಿಂದ ರೂ.8 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಮಾರುತಿ ಬ್ರೆಝಾ ಪೆಟ್ರೋಲ್

2020ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮದಿಂದಾಗಿ ಮಾರುತಿ ಸುಜುಕಿ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.3-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಡುತ್ತಿದ್ದು, ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಮಾರಾವನ್ನು ಹೆಚ್ಚಿಸುತ್ತಿದೆ. ಈ ಹಿನ್ನಲೆಯಲ್ಲಿ ವಿಟಾರಾ ಬ್ರೆಝಾ ಕಾರಿನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಪರಿಚಯಿಸುತ್ತಿರುವ ಮಾರುತಿ ಸುಜುಕಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಮಾಹಿತಿಗಳ ಪ್ರಕಾರ, 1.3-ಲೀಟರ್ ಎಂಜಿನ್ ಸ್ಥಗಿತಗೊಳಿಸುತ್ತಿರುವ ಮಾರುತಿಯು ಹೊಸದಾಗಿ ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಅಭಿವೃದ್ದಿಗೊಳಿಸಿದ್ದು, ಬ್ರೆಝಾ, ಎಸ್-ಕ್ರಾಸ್ ಕಾರುಗಳು ಡೀಸೆಲ್ ಜೊತೆಗೆ ಇದೇ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಜೊತೆಗೆ ಮಾರ್ಚ್ ಪ್ರಾರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್

ಜೆಡ್ಎಸ್ ಎಲೆಕ್ಟ್ರಿಕ್ ಕಾರು ಆಕರ್ಷಕ ಬೆಲೆಯೊಂದಿಗೆ ಉತ್ತಮ ಮೈಲೇಜ್, ವಿಶ್ವದರ್ಜೆಯ ಫೀಚರ್ಸ್‌ಗಳು, ಬ್ಯಾಟರಿ ಮೇಲೆ ಗರಿಷ್ಠ ಮಟ್ಟದ ವಾರಂಟಿಯೊಂದಿಗೆ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಭರ್ಜರಿ ಪೈಪೋಟಿ ನೀಡಲಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ 44.5kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಸದ್ಯ ಅನಾವರಣಗೊಳಿಸಲಾಗಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು 2020ರ ಜನವರಿ ಮಧ್ಯಂತರದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿರುವ ರೂ.19 ಲಕ್ಷದಿಂದ ರೂ.22 ಲಕ್ಷ ಬೆಲೆ ಅಂದಾಜಿಸಲಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಕಿಯಾ ಕಾರ್ನಿವಾಲ್

ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಯಶಸ್ವಿ ನಂತರ ಕಿಯಾ ಮೋಟಾರ್ಸ್ ಸಂಸ್ಥೆಯ ಎರಡನೇ ಕಾರು ಮಾದರಿಯಾಗಿ ಕಾರ್ನಿವಾಲ್ ಎಂಪಿವಿ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, 2020ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಖರೀದಿಗಾಗಿ ಈಗಾಗಲೇ ಆಯ್ದು ಕಿಯಾ ಡೀಲರ್ಸ್‌ಗಳಲ್ಲಿ ಬುಕ್ಕಿಂಗ್ ಸ್ವಿಕರಿಸಲಾಗುತ್ತಿದೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

5, 115-ಎಂಎಂ ಉದ್ದ, 1,985-ಎಂಎಂ ಅಗಲ ಮತ್ತು 1,755 ಎತ್ತರವನ್ನು ಹೊಂದಿರುವ ಕಾರ್ನಿವಾಲ್ ಕಾರು ಪ್ರತಿಸ್ಪರ್ಧಿ ಇನೋವಾ ಕ್ರಿಸ್ಟಾ ಕಾರಿಗಿಂತಲೂ 375-ಎಂಎಂ ಹೆಚ್ಚು ಉದ್ದ,155-ಎಂಎಂ ಹೆಚ್ಚು ಅಗಲ ಮತ್ತು 40-ಎಂಎಂ ನಷ್ಟು ಕಡಿಮೆ ಎತ್ತರವನ್ನು ಪಡೆದುಕೊಂಡಿದ್ದು, ಬಿಎಸ್-6 ವೈಶಿಷ್ಟ್ಯತೆಯ 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.6-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆಯಲಿದೆ. ಹೊಸ ಕಾರು ಜನವರಿ ಕೊನೆಯಲ್ಲಿ ಖರೀದಿಗೆ ಲಭ್ಯವಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.16 ಲಕ್ಷದಿಂದ ರೂ.22 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಪಾರ್ಕಿಂಗ್ ವೇಳೆ ಸಿಬ್ಬಂದಿ ಎಡವಟ್ಟು- ಮೊದಲ ಮಹಡಿಯಿಂದ ಜಿಗಿದ ಕಿಯಾ ಸೆಲ್ಟೊಸ್

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಚಾಲನೆ ನೀಡಿರುವ ಟಾಟಾ ಸಂಸ್ಥೆಯು ಮೊದಲ ಹಂತವಾಗಿ ನೆಕ್ಸಾನ್ ಎಲೆಕ್ಟ್ರಿಕ್ ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದು, ಹೊಸ ಕಾರು ಇದೇ ತಿಂಗಳು 19ಕ್ಕೆ ಮುಂಬೈನಲ್ಲಿ ಅನಾವರಣಗೊಳ್ಳಲಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಅನಾವರಣಗೊಂಡ ನಂತರ 2020ರ ಫೆಬ್ರುವರಿಯಲ್ಲಿ ಮಾರಾಟಕ್ಕೆ ಲಭ್ಯವಾಗಲಿರುವ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಪ್ರತಿ ಚಾರ್ಜ್‌ಗೆ 300ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಅತ್ಯುತ್ತಮ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಈ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.15 ಲಕ್ಷದಿಂದ ರೂ.17 ಲಕ್ಷ ಬೆಲೆ ಅಂತರದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ರೆನಾಲ್ಟ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಡಸ್ಟರ್ ಕಾರಿಗಿಂತಲೂ ಕೆಳದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿರುವ ರೆನಾಲ್ಟ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಪೈಪೋಟಿ ನೀಡಲಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಸದ್ಯ ಹೆಚ್‌ಬಿಸಿ ಹೆಸರಿನೊಂದಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವ ರೆನಾಲ್ಟ್ ಸಂಸ್ಥೆಯು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಲಿದೆ. ಹೊಸ ಕಾರು ರೂ.5.50 ಲಕ್ಷದಿಂದ ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಟ್ರೈಬರ್ ಮಾದರಿಯಲ್ಲಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಸ್ಕೋಡಾ ಕಾಮಿಕ್

ಹೊಸ ಕಾರುಗಳ ಉತ್ಪಾದನೆದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಮುಂಬರುವ ಎರಡು ವರ್ಷದ ಅವಧಿಯಲ್ಲಿ ವಿವಿಧ ಮಾದರಿಯ ಆರು ಹೊಸ ಕಾರು ಮಾದರಿಗಳನ್ನು ಪರಿಚಯಿಸುವ ಯೋಜನೆಯಲ್ಲಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಇದರಲ್ಲಿ ಮುಂಬರುವ ಜನವರಿ ಅಂತ್ಯಕ್ಕೆ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯಾಗಲಿದ್ದು, ರೂ.12 ಲಕ್ಷದಿಂದ ರೂ.16 ಲಕ್ಷ ಬೆಲೆ ಅಂತರದಲ್ಲಿ ಮಾರುಕಟ್ಟೆ ಪ್ರವೇಶಿಲಿದೆ. ಹೊಸ ಕಾರಿನಲ್ಲಿ 1.5-ಲೀಟರ್ ಡೀಸೆಲ್ ಮತ್ತು 1.6-ಲೀಟರ್ ಪೆಟ್ರೋಲ್ ಎಂಜಿನ್ ನೀಡುವ ಸಾಧ್ಯತೆಗಳಿದ್ದು, ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಸಿಟ್ರನ್ ಏರ್‌ಕ್ರಾಸ್

ಫೋಕ್ಸ್‌ವ್ಯಾಗನ್ ನಂತರ ಯುರೋಪ್ ಮಾರುಕಟ್ಟೆಯ 2ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಪಿಎಸ್‌ಎ ಗ್ರೂಪ್‌ನ ಸಿಟ್ರನ್ ಬ್ರಾಂಡ್ ಭಾರತದಲ್ಲಿ ಹೊಸ ಕಾರು ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿದ್ದು, 2020ರ ಮಾರ್ಚ್ ಅಂತ್ಯಕ್ಕೆ ಮೊದಲ ಕಾರು ಮಾದರಿಯಾಗಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯು ಮಾರಾಟಗೊಳ್ಳಲಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಸಿ5 ಏರ್‌ಕ್ರಾಸ್ ಕಾರು ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ಸ್ಕೋಡಾ ಕರೋಕ್ ಎಸ್‌ಯುವಿಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.16 ಲಕ್ಷದಿಂದ ರೂ.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಟಾಟಾ ಗ್ರಾವಿಟಾಸ್ ಎಸ್‌ಯುವಿ

ಟಾಟಾ ಮೋಟಾರ್ಸ್ ನಿರ್ಮಾಣದ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ ಕಾರು ಗ್ರಾವಿಟಾಸ್ ಹೆಸರಿನೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಭರ್ಜರಿ ಸಿದ್ದತೆ ನಡೆಸಿದ್ದು, ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ. 2020ರ ಫೆಬ್ರುವರಿ 5ರಿಂದ ನಡೆಯಲಿರುವ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಮಾರುಕಟ್ಟೆಗೆ ಪ್ರವೇಶಿಸಲಿರುವ ಹೊಸ ಕಾರು ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಟೊಯೊಟಾ ಫಾರ್ಚೂನರ್‌ ಕಾರಿಗೂ ಪ್ರಬಲ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಗ್ರಾವಿಟಾಸ್ ಕಾರು ಸದ್ಯಕ್ಕೆ ಬಿಎಸ್6 ಆಧಾರಿತ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಬಿಡುಗಡೆಯಾಗಲಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.21 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.23 ಲಕ್ಷ ಬೆಲೆ ಹೊಂದಿರಬಹುದು ಎಂದು ನೀರಿಕ್ಷಿಸಲಾಗಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಟೊಯೊಟಾ ವೆಲ್‌ಫೈರ್

ಟೊಯೊಟಾ ಬಹುನೀರಿಕ್ಷಿತ ವೆಲ್‌ಫೈರ್ ಐಷಾರಾಮಿ ಎಂಪಿವಿ ಕಾರು ಮಾದರಿಯು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳ ಆರಂಭಕ್ಕೂ ಮುನ್ನವೇ ಬಿಡುಗಡೆಯ ಸುಳಿವು ನೀಡಿದ್ದು, ಆಸಕ್ತ ಗ್ರಾಹಕರಿಂದ ಈಗಾಗಲೇ ಬುಕ್ಕಿಂಗ್ ಕೂಡಾ ಸ್ವಿಕರಿಸಲಾಗುತ್ತಿದೆ.

2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?

ಐಷಾರಾಮಿ ಮಲ್ಟಿ ಪ್ಯಾಸೆಂಜರ್ ವೆಹಿಕಲ್ ಮಾದರಿಯಾಗಿರುವ ವೆಲ್‌ಫೈರ್ ಕಾರು 4,935 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,935 ಎಂಎಂ ಎತ್ತರವಿದ್ದು, ಹೊಸ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್‌ನೊಂದಿಗೆ ಮಾತ್ರವೇ ಬಿಡುಗಡೆಯಾಗಲಿದೆ. ಹಲವಾರು ವರ್ಲ್ಡ್ ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.80 ಲಕ್ಷ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Top 10 Upcoming Cars in 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X